ಚುನಾವಣಾ ಬಾಂಡ್ ಹಗರಣ ದಿಕ್ಕು ತಪ್ಪಿಸಲು ಕೇಜ್ರಿವಾಲ್ ಬಂಧನ: ಪಿಣರಾಯಿ ವಿಜಯನ್

Date:

ಚುನಾವಣಾ ಬಾಂಡ್ ಹಗರಣದಿಂದ ಜನರ ಗಮನವನ್ನು ದಿಕ್ಕು ತಪ್ಪಿಸಲು ಅರವಿಂದ್ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ಕಣ್ಣೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ, ಬಿಜೆಪಿ, ಸಂಘ ಪರಿವಾರಕ್ಕೆ ಇದು ದೊಡ್ಡ ಸಮಸ್ಯೆಯಾಗುವುದಾಗಿ ತಿಳಿದಿದೆ. ಹಾಗಾಗಿ ಜನರ ಗಮನವನ್ನು ಬೇರೆಡೆ ಸೆಳೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ದೇಶ ಎತ್ತ ಸಾಗುತ್ತದೆ ಎಂಬುದರ ಸುಳಿವು ಈ ಹಗರಣದಾಗಿದೆ. ನಾವು ಏನು ಬೇಕಾದರೂ ಮಾಡುತ್ತೇವೆ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಮನಸ್ಥಿತಿಯುಳ್ಳ ಸಂಘ ಪರಿವಾರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದು ವಿಜಯನ್ ಹೇಳಿದರು.

“ಈ ಗಂಭಿರ ಪರಿಸ್ಥಿತಿಯ ಬಗ್ಗೆ ನಮ್ಮ ದೇಶದ ಜನರಿಗೆ ತಿಳಿಸಬೇಕಾಗಿದೆ. ಮೊದಲನೆಯದಾಗಿ ಸಿಪಿಐಎಂ ಪಕ್ಷವು ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಎಂದಿಗೂ ತಯಾರಿರಲಿಲ್ಲ. ಇದು ಈಗ ದೇಶ ಕಂಡ ಅತ್ಯಂತ ದೊಡ್ಡ ಭ್ರಷ್ಟಾಚಾರ ಹಗರಣವಾಗಿದೆ” ಎಂದು ಪಿಣರಾಯಿ ವಿಜಯನ್‌ ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅರವಿಂದ್ ಕೇಜ್ರಿವಾಲ್‌ ಬಂಧನದ ಬಗ್ಗೆ ಮಾತನಾಡಿದ ವಿಜಯನ್,ಸಂಘ ಪರಿವಾರದವರು ತಾವು ಕಾನೂನುಗಿಂತ ದೊಡ್ಡವರು ಎಂಬ ಸಂದೇಶವನ್ನು ಎದುರುನೋಡುತ್ತಿದ್ದು, ಅಲ್ಲದೆ ತಮ್ಮ ಕಾರ್ಯಸೂಚಿಯನ್ನು ತಿಳಿಸಲು ತಮ್ಮ ಕಡೆಗೆ ಬಂದ ಕಲ್ಲನ್ನು ವಾಪಸ್‌ ತಿರುಗಿಸುವ ಆದೇಶವನ್ನು ಎಲ್ಲರಿಗೂ ಸಾರುತ್ತಿದ್ದಾರೆ ಎಂದು ಹೇಳಿದರು.

2019ರ ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್ ಪ್ರಚೋದನಕಾರಿ ಭಾಷಣ ಮಾಡಿದ ತರುವಾಯು ದೆಹಲಿಯಲ್ಲಿ ಗಲಭೆಯುಂಟಾಯಿತು. ಸಿಪಿಐಎಂ ಅನುರಾಗ್‌ ಠಾಕೂರ್‌ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಪಿಣರಾಯಿ ವಿಜಯನ್‌ ತಮ್ಮ ಭಾಷಣದಲ್ಲಿ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣೆ – ಐಪಿಎಲ್‌ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ಆಟ

ಸಿಎಎ ವಿರೋಧಿ ಗಲಭೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆಯೂ ವಿಜಯನ್‌ ಪ್ರಶ್ನಿಸಿದರು. ” ಪ್ರತಿಭಟನೆ ನಡೆಯುತ್ತಿರುವ ಸಂದರ್ಭ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶದಲ್ಲಿದ್ದರು. ದೆಹಲಿ ಪೊಲೀಸರಿಂದ ಎಡಪಂಥೀಯ ನಾಯಕರು ಬಂಧನಕ್ಕೊಳಗಾದರು. ಆ ಸಂದರ್ಭದಲ್ಲಿ ಕೇರಳದ ಸಂಸದ ಎ ಎಂ ಆರೀಫ್ ಮಾತ್ರ ಸಿಎಎ ವಿರುದ್ಧ ಧನಿಯತ್ತಿದರು. ಆದರೀಗ ಕಾಂಗ್ರೆಸ್ ನಾಯಕರು ಸಿಎಎ ಕಾಯ್ದೆಯನ್ನು ತಾಂತ್ರಿಕವಾಗಿ ವಿರೋಧಿಸುವುದಾಗಿ ಹೇಳುತ್ತಿದೆ ಎಂದರು.

ವಿವಾದಾತ್ಮಕ ಸಿಎಎ ಕಾಯ್ದೆ ಡಿಸೆಂಬರ್‌ 2019ರಲ್ಲಿ ಅಂಗೀಕಾರವಾಗಿದ್ದು, ಹಲವು ವಿರೋಧ ಪಕ್ಷಗಳು ಇದು ತಾರತಮ್ಯ ಕಾರ್ಯಸೂಚಿ ಹೊಂದಿದೆ ಎಂದು ವಿರೋಧಿಸುತ್ತಿದ್ದಾರೆ.

ಸಿಎಎಯು 2014ರ ಮುಂಚೆ ಪಾಕ್‌, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಬಂದ ಮುಸ್ಲಿಮೇತರ ವಲಸಿಗರಿಗೆ ಯಾವುದೇ ದಾಖಲೆಯಿಲ್ಲದೆ ಭಾರತೀಯ ಪೌರತ್ವ ಒದಗಿಸುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಜ್ರಿವಾಲ್ ಜಾಮೀನು ವಿಸ್ತರಣೆ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿ ವಿಸ್ತರಣೆ ಅರ್ಜಿಯ...

ಅಂತ್ಯಗೊಳ್ಳುತ್ತಿದೆ ಮೋದಿ-ಶಾ ‘ಬ್ರಾಂಡ್’ ರಾಜಕಾರಣ; ಅದಕ್ಕೆ ಮಹಾರಾಷ್ಟ್ರವೇ ಸಾಕ್ಷಿ

ನರೇಂದ್ರ ಮೋದಿ ಮತ್ತು ಅಮಿತ್ ಶಾ – ಇಬ್ಬರಿಗೂ ದಿನನಿತ್ಯ ಒಂದಲ್ಲೊಂದು...

ಅಸ್ಸಾಂ| ಮನೆಯ ಬಾತ್‌ರೂಮ್‌ನಲ್ಲಿತ್ತು 35 ಹಾವುಗಳು; ವಿಡಿಯೋ ವೈರಲ್

ಅಸ್ಸಾಂನಲ್ಲಿ ನಾಗಾಂವ್ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಮನೆಯೊಂದರ ಬಾತ್‌ರೂಮ್‌ನಲ್ಲಿ ಬರೋಬ್ಬರಿ 35...

ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನ ರಜೆ

ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬ್ಯಾಂಕ್ ರಜಾದಿನಗಳ...