ಸಂವಿಧಾನ ತಿದ್ದುಪಡಿ, ಮೀಸಲಾತಿ ರದ್ದತಿಯೇ BJPಯ ಅಂತಿಮ ಗುರಿ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

Date:

ಲೋಕಸಭೆಯಲ್ಲಿ ಮೂರನೇ ಎರಡರಷ್ಟು (2/3) ಬಹುಮತ ಪಡೆಯಲು ಬಿಜೆಪಿ ಹವಣಿಸುತ್ತಿರುವುದು ಸಂವಿಧಾನವನ್ನು ತಿದ್ದುಪಡಿ ಮಾಡಿ ಮೀಸಲಾತಿಯನ್ನು ರದ್ದುಗೊಳಿಸುವ ಅದರ ಅಂತಿಮ ಗುರಿಯ ಭಾಗವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಆರೋಪಿಸಿದ್ದಾರೆ.

- Advertisement -

ಈ ಕುರಿತು PTIಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, BJP ಮೊದಲು ಮಹಿಳಾ ಮೀಸಲಾತಿಯ ನೆಪದಲ್ಲಿ ಕ್ಷೇತ್ರ ವಿಂಗಡಣೆಯನ್ನು (Delimitation) ಜಾರಿಗೆ ತರಲು ಬಯಸಿದೆ. ಆದರೆ ಇದರ ಅಂತಿಮ ಉದ್ದೇಶ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಪಡಿಸುವುದಾಗಿದೆ ಎಂದು ಹರಿಹಾಯ್ದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ...

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97 ಮತದಾರರು ಎಂಬ ಸಂಖ್ಯೆ ಅತಿ ಚಿಕ್ಕದಾಗಿ ಕಾಣಬಹುದು. ಆದರೆ, ಗೋವಾದ ಈ 97 ಮತದಾರರ ಪ್ರಕರಣವು ಚುನಾವಣಾ ಆಯೋಗದ ಕಾರ್ಯವಿಧಾನ,...

ಸರ್ಕಾರಕ್ಕೆ ನಿಜವಾಗಿಯೂ ಮಹಿಳಾ ಮೀಸಲಾತಿಯ ಬಗ್ಗೆ ಕಾಳಜಿ ಇದ್ದರೆ, ಅದು ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು ಪ್ರಸ್ತುತ ಲೋಕಸಭೆಯ ಬಲವಾದ 543 ಸ್ಥಾನಗಳಲ್ಲೇ ಜಾರಿಗೆ ತರಲಿ ಎಂದು ಜೈರಾಮ್ ರಮೇಶ್ ಸವಾಲು ಹಾಕಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು ಟಿಎಂಸಿ (TMC) ಮತ್ತು ಶಿವಸೇನಾ (ಯುಬಿಟಿ) ಪಕ್ಷಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿರುವುದು, ಬಿಜೆಪಿ ತನ್ನ ‘400 ಪಾರ್’ ಅಭಿಯಾನದ ಮೂಲಕ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿಯನ್ನು ಮುಗಿಸಲು ಹೊರಟಿದೆ ಎಂಬ ಕಾಂಗ್ರೆಸ್‌ನ 2024ರ ಆರೋಪವನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಯಾವಾಗಲೂ ಸಂವಿಧಾನದ ವಿಚಾರದಲ್ಲಿ ಅಸಮಾಧಾನ ಹೊಂದಿದೆ ಎಂದು ಆರೋಪಿಸಿದ ರಮೇಶ್, 1949ರ ನವೆಂಬರ್ 26ರಂದು ಸಂವಿಧಾನ ಅಂಗೀಕಾರವಾದಾಗ ‘ಆರ್ಗನೈಸರ್’ ಪತ್ರಿಕೆ ಅದನ್ನು ಟೀಕಿಸಿದ್ದನ್ನು ಮತ್ತು ಅಂಬೇಡ್ಕರ್, ನೆಹರು ಅವರ ಪ್ರತಿಕೃತಿಗಳನ್ನು ಸುಟ್ಟಿದ್ದನ್ನು ನೆನಪಿಸಿದ್ದಾರೆ.

ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯನ್ನು ಗ್ಯಾನೇಶ್ ಕುಮಾರ್ ಅವರಂತಹ ವ್ಯಕ್ತಿಗಳು ನಿರ್ವಹಿಸುತ್ತಾರೆಯೇ ಎಂದು ಪ್ರಶ್ನಿಸಿದ ರಮೇಶ್, ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವಿನ ‘ಜುಗಲ್‌ಬಂದಿ’ಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೋದಿ ಸಂಪುಟದಿಂದ ಹೊರಬಿದ್ದ ಬಿಜೆಪಿಯ ಏಕೈಕ ಕ್ರಿಶ್ಚಿಯನ್ ಸಚಿವ ಜಾರ್ಜ್‌ ಕುರಿಯನ್‌; ಯಾರಿವರು?

ಜಾತಿ ಗಣತಿಯ ನಂತರವೇ ಕ್ಷೇತ್ರ ವಿಂಗಡಣೆ ನಡೆಯಬೇಕು. ಮುಂದಿನ ಲೋಕಸಭಾ ಚುನಾವಣೆಯನ್ನು 543 ಸ್ಥಾನಗಳಲ್ಲೇ ನಡೆಸಬೇಕು ಮತ್ತು ಅದರಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಏಪ್ರಿಲ್ 17ರಂದು ಮಹಿಳಾ ಮೀಸಲಾತಿ ಮತ್ತು ಲೋಕಸಭಾ ಸ್ಥಾನಗಳ ಹೆಚ್ಚಳಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಸೋತಿತ್ತು. ಆ ಸಂದರ್ಭದಲ್ಲಿ 298 ಸದಸ್ಯರು ಬೆಂಬಲಿಸಿದರೂ, ಮೂರನೇ ಎರಡರಷ್ಟು ಬಹುಮತಕ್ಕೆ ಅಗತ್ಯವಿದ್ದ 352 ಮತಗಳು ಸಿಗಲಿಲ್ಲ. ಈ ಘಟನೆಯ ನಂತರ ಸರ್ಕಾರ ಪ್ರತಿಪಕ್ಷಗಳನ್ನು ಒಡೆದು 2/3 ಬಹುಮತ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ...

ಲಗ್ಗೆರೆ | ಜೆಡಿಎಸ್ ನಾಯಕ ಅಂದಾನಪ್ಪ ನಿವಾಸದಲ್ಲಿ ವಾಚ್‌ಮ್ಯಾನ್ ಆತ್ಮಹತ್ಯೆ

ಜೆಡಿಎಸ್ ಮುಖಂಡ ಅಂದಾನಪ್ಪ ಅವರ ಬೆಂಗಳೂರಿನ ಲಗ್ಗೆರೆ ನಿವಾಸದಲ್ಲಿ ವಾಚ್‌ಮ್ಯಾನ್ ಆಗಿ...

7 ದಿನಗಳಲ್ಲಿ 8 ಇ-ಮೇಲ್‌ಗಳು; ಆದರೂ ಮತಪಟ್ಟಿಯಲ್ಲಿ ಉಳಿಯಲಿಲ್ಲ ಗೋವಾದ 97 ಅರ್ಹರ ಹೆಸರು!

90 ಕೋಟಿಗೂ ಹೆಚ್ಚು ಮತದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ 97...

ಮತದಾರರ ಪಟ್ಟಿ: ನಿರ್ಧಾರ ತೆಗೆದುಕೊಳ್ಳುವುದು, ಜಾರಿಗೆ ತರುವುದು ಯಾರು?

ಗೋವಾದ 97 ಮತದಾರರ ಪ್ರಕರಣ ಚುನಾವಣಾ ವ್ಯವಸ್ಥೆಯ ಮುಂದಿರುವ ಒಂದು ಮಹತ್ವದ...