ದಲಿತ ಮಹಿಳೆ ಅಂಗನವಾಡಿ ಸಹಾಯಕಿ; 3 ತಿಂಗಳ ನಿರಂತರ ಮನವೊಲಿಕೆ ಬಳಿಕ ಕೇಂದ್ರಕ್ಕೆ ಬಂದ ಮಕ್ಕಳು

Date:

ಅಂಗನವಾಡಿ ಕೇಂದ್ರ ಸಹಾಯಕಿ ಮತ್ತು ಅಡುಗೆ ಸಿಬ್ಬಂದಿ ಹುದ್ದೆಗೆ ದಲಿತ ಮಹಿಳೆಯನ್ನು ನೇಮಿಸಿದ್ದಕ್ಕಾಗಿ ಕಳೆದ ಮೂರು ತಿಂಗಳುಗಳಿಂದ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದನ್ನೇ ನಿಲ್ಲಿಸಿದ್ದರು. ಗ್ರಾಮಸ್ಥರೊಂದಿಗಿನ ನಿರಂತರ ಸಭೆ, ಮಾತುಕತೆ, ಮನವೊಲಿಕೆಯ ಪರಿಣಾಮ, ಸೋಮವಾರ 15 ಮಕ್ಕಳು ಅಂಗನವಾಡಿಗೆ ಬಂದಿದ್ದಾರೆ. ದಲಿತ ಮಹಿಳೆ ಸರ್ಮಿಷ್ಠಾ ಸೇಥಿ ತಯಾರಿಸಿದ ಆಹಾರ ಸೇವಿಸಿದ್ದಾರೆ.

- Advertisement -

ಒಡಿಶಾದ ಕೇಂದ್ರಪಾಡಾ ಜಿಲ್ಲೆಯ ರಾಜನಗರ ಬ್ಲಾಕ್‌ನ ನುವಗಾಂವ್ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆಯು ಭಾರತದಲ್ಲಿನ ಜಾತಿ ತಾರತಮ್ಯ ಬೇರುಗಳು ಇನ್ನೂ ಗಟ್ಟಿಯಾಗಿರುವುದನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

2025ರ ನವೆಂಬರ್‌ನಲ್ಲಿ ಅಂಗನವಾಡಿ ಸಹಾಯಕಿ ಮತ್ತು ಅಡುಗೆ ಸಿಬ್ಬಂದಿ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ನವಗಾಂವ್ ಗ್ರಾಮದವರೇ ಆದ ಸರ್ಮಿಷ್ಠಾ ಸೇಥಿ, ಆ ಗ್ರಾಮದಲ್ಲಿ ಪದವಿ ಪಡೆದ ಮೊದಲಿಗರಲ್ಲಿ ಒಬ್ಬರು. ಅವರು ಅಂಗನವಾಡಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಅವರನ್ನು ಅಂಗನವಾಡಿ ಸಹಾಯಕಿಯಾಗಿ ನವೆಂಬರ್ 21ರಂದು ನಿಯೋಜನೆ ಮಾಡಲಾಗಿತ್ತು. ಅವರನ್ನು ಹುದ್ದೆಗೆ ನೇಮಿಸಿದ್ದನ್ನು ಗ್ರಾಮದ ಪ್ರಬಲ ಜಾತಿಯ ಜಾತಿವಾದಿಗಳು ವಿರೋಧಿಸಿದ್ದರು. ಅಲ್ಲದೆ, ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳಿಸುವುದನ್ನೇ ನಿಲ್ಲಿಸಿದ್ದರು.

ನುವಗಾಂವ್ ಅಂಗನವಾಡಿಗೆ ಕಳೆದ ಆರು ತಿಂಗಳಲ್ಲಿ 42 ಮಕ್ಕಳು ದಾಖಲಿಸಿದ್ದರು. ಆದರೆ, ಯಾರೊಬ್ಬರೂ ಅಂಗನವಾಡಿಗೆ ಬರುತ್ತಿರಲಿಲ್ಲ. ಇನ್ನು, ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು ಕೂಡ ಪಡಿತರ ಪಡೆಯಲು ಬರುವುದನ್ನು ನಿಲ್ಲಿಸಿದ್ದರು. ಸರ್ಮಿಷ್ಠಾ ಸೇಥಿ ಅವರು ಪ್ರತಿದಿನ ಸೈಕಲ್ ಮೇಲೆ ಬಂದು ಕೇಂದ್ರವನ್ನು ಸ್ವಚ್ಛಗೊಳಿಸಿ, ಮ್ಯಾಟ್‌ಗಳನ್ನು ಹಾಕಿ, ಆಹಾರ ತಯಾರಿಸಿ ಕಾಯುತ್ತಿದ್ದರು. ಆದರೆ, ಯಾವೊಬ್ಬ ಮಗುವೂ ಬರುತ್ತಿರಲಿಲ್ಲ. ಬದಲಾಗಿ, ಅವರ ಪೋಷಕರು ಬಂದು ಪಡಿತರವನ್ನು ಪಡೆದುಕೊಂಡು ಹೋಗುತ್ತಿದ್ದರು. ಇದು ಸುಮಾರು 86 ದಿನಗಳ ಕಾಲ ಹೀಗೆಯೇ ಮುಂದುವರೆದಿತ್ತು.

“ಸರ್ಮಿಷ್ಠಾ ಅವರ ನೇಮಕವನ್ನು ಗ್ರಾಮದ ಅನೇಕರು ವಿರೋಧಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಅಂಗನವಾಡಿಗೆ 42 ಮಕ್ಕಳು ದಾಖಲಾಗಿದ್ದಾರೆ. ಆದರೆ, ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ. ಬದಲಾಗಿ, ಮಕ್ಕಳಿಗೆ ನೀಡಲಾಗುವ ಆಹಾರವನ್ನು ನಮ್ಮಿಂದ ಪಡೆದುಕೊಂಡು ಮನೆಗೆ ಕೊಂಡೊಯ್ಯುತ್ತಿದ್ದಾರೆ” ಎಂದು ಅಂಗನವಾಡಿ ಕಾರ್ಯಕರ್ತೆ ಲಿಜರಾಣಿ ಪಾಂಡವ್ ತಿಳಿಸಿದ್ದಾರೆ.

ಅಂತಿಮವಾಗಿ, ಇತ್ತೀಚೆಗೆ, ನುವಗಾಂವ್ ಗ್ರಾಮದಲ್ಲಿ ಜಾತಿ ಆಧಾರಿತ ಧೋರಣೆಯು ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಗ್ರಾಮಕ್ಕೆ ಬಂದ ಅಧಿಕಾರಿಗಳು ನಿರಂತರ ಸಭೆ/ಸಮಾಲೋಚನೆಗಳನ್ನು ನಡೆಸಿ ಪೋಷಕರ ಮನವೊಲಿಸಲು ಪ್ರಯತ್ನಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಕಳೆದ ವಾರ, ಜಿಲ್ಲಾಧಿಕಾರಿ ರಘುರಾಮ್ ಅಯ್ಯರ್ ಅವರು ನೇತೃತ್ವದ ತಂಡವು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು.

ಈ ಲೇಖನ ಓದಿದ್ದೀರಾ?: ಆಂಧ್ರ ಚುನಾವಣೆಯಲ್ಲಿ ಮಹಾಮೋಸದ ಸಾಧ್ಯತೆ!- ಪರಕಾಲ ಪ್ರಭಾಕರ್ ಆಸ್ಫೋಟಕ ವಿಶ್ಲೇಷಣೆ

ಇದೀಗ, ಸೋಮವಾರ (ಫೆಬ್ರವರಿ 16) ಸುಮಾರು 15 ಮಕ್ಕಳು ಅಂಗನವಾಡಿಗೆ ಬಂದಿದ್ದು, ದಲಿತ ಸಹಾಯಕಿ ತಯಾರಿಸಿದ ಆಹಾರವನ್ನು ಸೇವಿಸಿದ್ದಾರೆ. ಮಕ್ಕಳು ಅಂಗನವಾಡಿಗೆ ಬಂದಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿರುವ ಸರ್ಮಿಷ್ಠಾ ಸೇಥಿ, “ಮಕ್ಕಳು ಮರಳಿ ಬಂದಿದ್ದಕ್ಕಾಗಿ ಮತ್ತು ಅವರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡಿದ್ದಕ್ಕಾಗಿ ಸಂತೋಷವಾಗಿದೆ. ಮಕ್ಕಳಿಗೆ ಆರಂಭಿಕ ಶಿಕ್ಷಣ ಮತ್ತು ಪೌಷ್ಟಿಕಾಹಾರ ಅತ್ಯಗತ್ಯ” ಎಂದು ಹೇಳಿದ್ದಾರೆ.

ಇಂತಹ ಪ್ರಕರಣ ಇದೊಂದು ಮಾತ್ರವಲ್ಲ, ದೇಶಾದ್ಯಂತ ದಲಿತ ಶಿಕ್ಷಕರಿರುವ ಕಾರಣಕ್ಕಾಗಿ ಮಕ್ಕಳನ್ನು ಶಾಲೆಗೆ ಕಳಿಸದೇ ಇರುವುದು, ದಲಿತ ಅಡುಗೆಯವರು ಇರುವ ಕಾರಣಕ್ಕಾಗಿ ಮಕ್ಕಳಿಗೆ ಶಾಲೆಯಲ್ಲಿ ಊಟ ಮಾಡದಂತೆ ತಡೆಯುವ ಘಟನೆಗಳು ಆಗ್ಗಾಗ್ಗೆ ವರದಿಯಾಗುತ್ತಲೇ ಇವೆ. ಜಾತಿಗ್ರಸ್ತ ಸಮಾಜದಲ್ಲಿ ರಾಜಕಾರಣಿಗಳೂ ಮತಕ್ಕಾಗಿ ಜಾತಿ ಓಲೈಕೆಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ, ಸರ್ಮಿಷ್ಠಾ ಅವರಂತಹ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವುದು ಸ್ಪೂರ್ತಿದಾಯಕ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್ ಪ್ರಶಸ್ತಿ ವಿಜೇತ ಸಂಶೋಧನೆ‌

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ...

CEC ಗ್ಯಾನೇಶ್‌ ಕುಮಾರ್‌ ವಿರುದ್ಧ ಭುಗಿಲೆದ್ದ ಆಕ್ರೋಶ; ತೀವ್ರಗೊಂಡ ಮೋಶಾ ದಮನ ಕ್ರಮಗಳು

ಚುನಾವಣಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್‌...

ಸಿಇಸಿ ಗ್ಯಾನೇಶ್ ವಿರುದ್ಧ ಅರ್ಜಿ: ಕೇಂದ್ರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಇತರ ಚುನಾವಣಾ...

ಶನಿವಾರ ದೆಹಲಿಯಲ್ಲಿ ಸಿಜೆಪಿ 2ನೇ ಬೃಹತ್ ಪ್ರತಿಭಟನೆ

ಎಸ್‌ಐಆರ್‌ ಮತ್ತು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್‌ ಕುಮಾರ್‌ ವಿರುದ್ಧ...