‘ವರದಕ್ಷಿಣೆ ಕಿರುಕುಳ, ಬೆಲ್ಟ್‌ನಿಂದ ಹಲ್ಲೆ’: ಮದುವೆಯಾದ 72 ದಿನಗಳಲ್ಲೇ ಯುವತಿ ಸಾವು; ಪತಿ ಬಂಧನ

Date:

ದೆಹಲಿಯ ಲೋಧಿ ಕಾಲೋನಿ ಪ್ರದೇಶದಲ್ಲಿ 28 ವರ್ಷದ ಆಕೃತಿ ಸುತಾರ್ ಎಂಬ ಯುವತಿ ಕಟ್ಟಡದಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮದುವೆಯಾಗಿ ಕೇವಲ 72 ದಿನಗಳಲ್ಲೇ ನಡೆದಿರುವ ಈ ಸಾವಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದು, ಮೃತ ಯುವತಿಯ ಪತಿ ಅರಸ್ತು ಸಿಕ್ಕಾನ ಎಂಬಾತನನ್ನು ಬಂಧಿಸಿದ್ದಾರೆ.

- Advertisement -

ಛತ್ತರಪುರದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಆಕೃತಿ, ತನ್ನ ಬಾಲ್ಯದ ಗೆಳತಿಯ ಸಹೋದರ ಅರಸ್ತು ಸಿಕ್ಕಾನನ್ನು ಕಳೆದ ಏಪ್ರಿಲ್ 24ರಂದು ಪ್ರೀತಿಸಿ ಪೋಷಕರ ಸಮ್ಮತಿಯೊಂದಿಗೆ ಮದುವೆಯಾಗಿದ್ದರು. ಆದರೆ, ಮದುವೆಯಾಗಿ ಮೂರು ತಿಂಗಳು ಕಳೆಯುವ ಮುನ್ನವೇ ಜುಲೈ 4ರಂದು ಅವರು ಕಟ್ಟಡದಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಆಕೃತಿ ಅವರ ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ ಆಕೃತಿ ಅವರ ತಾಯಿ ಅನು ಸಾಯ್ ಸುತಾರ್ ಅವರು ಪೊಲೀಸ್‌ ದೂರು ದಾಖಲಿಸಿದ್ದಾರೆ. ದೂರಿನಲ್ಲಿ; “ನನ್ನ ಮಗಳನ್ನು ಪತಿ ಮತ್ತು ಆತನ ಮನೆಯವರು ಸೇರಿ ಯೋಜಿತವಾಗಿ ಕೊಲೆ ಮಾಡಿದ್ದಾರೆ. ಮದುವೆಗೆ ಮುಂಚಿತವಾಗಿ ನಮಗೆ ಆರ್ಥಿಕ ನೆರವು ನೀಡಲು ಕೆಲಸ ಮುಂದುವರಿಸುವುದಾಗಿ ಹೇಳಿದ್ದರು. ಅದಕ್ಕೆ ಅರಸ್ತು ಮನೆಯವರು ಒಪ್ಪಿದ್ದರು. ಆದರೆ, ಮದುವೆಯಾದ ತಕ್ಷಣ ಪತಿ ಅರಸ್ತು ಮತ್ತು ಆತನ ಸಹೋದರಿ ಆಗಸ್ಟಿಕಾ ಸೇರಿ ಆಕೆಗೆ ಕೆಲಸ ಬಿಡುವಂತೆ ಮತ್ತು ಮಗುವನ್ನು ಹೆರುವಂತೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು” ಎಂದು ಆರೋಪಿಸಿದ್ದಾರೆ.

“ಜೂನ್ 17ರಂದು ಅರಸ್ತು ಫೋನ್ ಮಾಡಿದಾಗ ಸೈಲೆಂಟ್‌ನಲ್ಲಿದ್ದ ಕಾರಣ ಆಕೃತಿ ಕರೆ ಸ್ವೀಕರಿಸಿರಲಿಲ್ಲ. ಇದೇ ನೆಪದಲ್ಲಿ ಆಕೆಗೆ ಬೇರೆ ಸಂಬಂಧವಿದೆ ಎಂದು ಶಂಕಿಸಿ, ಆಕೆಯ ಮೇಲೆ ಅರಸ್ತು ಬೆಲ್ಟ್‌ನಿಂದ ಮನಬಂದಂತೆ ಹೊಡೆದಿದ್ದ. ಜೂನ್ 29ರಂದು ನಮಗೆ ಕರೆ ಮಾಡಿದ್ದ ಆಕೃತಿ, ‘ನನ್ನ ಗಂಡ ನನ್ನನ್ನು ಕೊಂದರೂ ಕೊಲ್ಲಬಹುದು’ ಎಂಬುದಾಗಿ ಆತಂಕ ತೋಡಿಕೊಂಡಿದ್ದರು. ಅಡುಗೆಯನ್ನು ಬಿಸಿ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೂ ಅರಸ್ತು ಆಕೆಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದ” ಎಂದು ತಾಯಿ ಅನು ಸುತಾರ್ ವಿವರಿಸಿದ್ದಾರೆ.

“ಜುಲೈ 3ರಂದು ನಾನು ಅರಸ್ತು ತಂದೆಗೆ ಕರೆ ಮಾಡಿ ಆತನ ದೌರ್ಜನ್ಯದ ಕುರಿತು ತಿಳಿಸಿದ್ದೆ. ಇದರಿಂದ ಸಿಟ್ಟಿಗೆದ್ದ ಅರಸ್ತು, ಆಕೃತಿಗೆ ಬೆದರಿಕೆ ಹಾಕಿದ್ದ. ಅಲ್ಲದೆ, ಆತನ ಸಹೋದರಿ ಆಗಸ್ಟಿಕಾ ಕೂಡ ನಮಗೆ ಕರೆ ಮಾಡಿ, ‘ಆಕೃತಿಯನ್ನು ಮನೆಗೆಲಸ ಮತ್ತು ಅಡುಗೆ ಮಾಡಲು ತರಲಾಗಿದೆಯೇ ಹೊರತು ಕೆಲಸಕ್ಕೆ ಹೋಗಲು ಅಧಿಕೃತ ಒಪ್ಪಂದವಾಗಿಲ್ಲ, ನಮ್ಮ ಕೌಟುಂಬಿಕ ವಿಷಯದಲ್ಲಿ ತಲೆಹಾಕಬೇಡಿ’ ಎಂಬುದಾಗಿ ಎಚ್ಚರಿಕೆ ನೀಡಿದ್ದರು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

“ಆಕೃತಿಯ ಕುಟುಂಬದವರು ಮದುವೆಗೆ 7 ರಿಂದ 8 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದರೆ, ಅರಸ್ತು ಮತ್ತು ಆತನ ಮನೆಯವರು ಹೆಚ್ಚುವರಿಯಾಗಿ 20 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ನಿರಂತರವಾಗಿ ಪೀಡಿಸುತ್ತಿದ್ದರು” ಎಂದು ಆಕೃತಿಯ ಸೋದರಮಾವ ನಂಜಯ್ ಸುತಾರ್ ತಿಳಿಸಿದ್ದಾರೆ.

ಈ ಲೇಖನ ಓದಿದ್ದೀರಾ?: 20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?

ಜುಲೈ 4ರ ಬೆಳಿಗ್ಗೆ ಆಕೃತಿ ತನ್ನ ತಾಯಿಗೆ ಕರೆ ಮಾಡಿ ಕೆಲಸಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಅದಾದ ನಂತರ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ ವೇಳೆ ಅರಸ್ತು ಮತ್ತು ಆತನ ಸಹೋದರಿ ಕರೆ ಮಾಡಿ ‘ಆಕೃತಿ ಬೇರೆಯವರ ಜೊತೆ ಓಡಿಹೋಗಿದ್ದಾಳೆ ಮತ್ತು ಆಕೆಯನ್ನು ನೀವೇ ಬಚ್ಚಿಟ್ಟಿದ್ದೀರಿ’ ಎಂದು ತಾಯಿಯ ಮೇಲೆಯೇ ಕೂಗಾಡಿದ್ದರು. ಆದರೆ, ರಾತ್ರಿ 9-10 ಗಂಟೆಯ ಸುಮಾರಿಗೆ ಆಕೃತಿಯ ತಾಯಿಗೆ ಕರೆ ಮಾಡಿದ್ದ ಪೊಲೀಸರು, ಆಕೆ ಮೃತಪಟ್ಟಿದ್ದಾಳೆಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

“ನನ್ನ ಮಗಳು ತುಂಬಾ ಧೈರ್ಯವಂತೆಯಾಗಿದ್ದಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲ. ಇದು ವ್ಯವಸ್ಥಿತವಾಗಿ ನಡೆದ ಕೊಲೆ” ಎಂದು ತಾಯಿ ಮತ್ತು ಆಕೆಯ ಸಹೋದರ ಅಮೇಯ್ ಸುತಾರ್ ಆಕ್ರೋಶ ಹೊರಹಾಕಿದ್ದಾರೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಗಳು, “ಅರಸ್ತು ಕುಟುಂಬವು ಪುಷ್ಪ್ ವಿಹಾರದಲ್ಲಿ ವಾಸಿಸುತ್ತಿದ್ದು, ಅಲ್ಲಿಂದ 10 ಕಿಲೋಮೀಟರ್ ದೂರವಿರುವ ಲೋಧಿ ಕಾಲೋನಿಯ ವಸತಿ ಸಂಕೀರ್ಣದಲ್ಲಿ ಆಕೃತಿಯ ಶವ ಪತ್ತೆಯಾಗಿದೆ. ಆಕೆಯ ಕೈ ಮತ್ತು ತೊಡೆಯ ಭಾಗದಲ್ಲಿ ತೀವ್ರವಾದ ಗಾಯಗಳಾಗಿವೆ. ಇವು ಕಟ್ಟಡದಿಂದ ಬಿದ್ದಾಗ ಆಗಿರುವ ಗಾಯಗಳೇ ಅಥವಾ ಅದಕ್ಕೂ ಮುನ್ನವೇ ಆಗಿದ್ದವೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತಿಳಿಯಲಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 196ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅ.7ರಂದು ಆಣದೂರ ಆರೋಗ್ಯ ಕೇಂದ್ರದಲ್ಲಿ ಸಾಮೂಹಿಕ ರಕ್ತದಾನ ಶಿಬಿರ

ಬೀದರ್‌ ತಾಲೂಕಿನ ಆಣದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅ.7ರಂದು ಬೆಳಿಗ್ಗೆ...

ಧಾರವಾಡ | ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ...

ಧಾರವಾಡ | ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆಗೆ ಒಗ್ಗೂಡಿದ ಪ್ರಗತಿಪರ ಧ್ವನಿಗಳು

ಸಂವಿಧಾನ, ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸೌಹಾರ್ದತೆಯ ರಕ್ಷಣೆಗಾಗಿ ಧಾರವಾಡದಲ್ಲಿ...

ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಇಬ್ಬರು ಕೇಂದ್ರ ಸಚಿವರಿಗೆ ಕೊಕ್

ಉತ್ತರ ಪ್ರದೇಶದಿಂದ ತೆರವಾಗಲಿರುವ ಎಂಟು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಸೋಮವಾರ (ಅ....