ದೇಶದ ರಾಜಧಾನಿ ದೆಹಲಿ, ಎನ್‌ಸಿಆರ್, ನೋಯ್ಡಾ, ಗುರುಗಾಂವ್ ಸೇರಿದಂತೆ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ 10.20ರ ವೇಳಗೆ ಭೂಕಂಪನದ ಅನುಭವವಾಗಿದೆ. ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆ ದಾಖಲಾಗಿದೆ. ಪಾಕಿಸ್ತಾನದ ಲಾಹೋರ್, ಭೂಕಂಪದ ಕೇಂದ್ರಬಿಂದು ಎನ್ನಲಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ದೆಹಲಿ ಸೇರಿದಂತೆ ಪಶ್ಚಿಮ ಉತ್ತರ ಪ್ರದೇಶ, ಹರಿಯಾಣದ ಹಲವು ಪ್ರದೇಶಗಳಲ್ಲಿ ಮತ್ತು ಏಷ್ಯಾ ರಾಷ್ಟ್ರಗಳಾದ ತುರ್ಕಮೆನಿಸ್ತಾನ್, ಕಝಾಕಿಸ್ತಾನ, ಪಾಕಿಸ್ತಾನ, ತಜಕಿಸ್ತಾನ, ಉಜ್ಬೇಕಿಸ್ತಾನ, ಚೀನಾ, ಅಫ್ಘಾನಿಸ್ತಾನ ಹಾಗೂ ಕಿರ್ಗಿಸ್ತಾನ್ ಸೇರಿದಂತೆ ಹಲವು ದೇಶದಲ್ಲಿ ಭೂಕಂಪನ ವರದಿಯಾಗಿದೆ.