ಪೂಜೆಗೂ ನಿಲ್ಲದ ಸರಣಿ ಸಾವು: ಒಂದೇ ಗ್ರಾಮದ 8 ಮಂದಿಯ ಸಾವಿನ ಹಿಂದಿತ್ತು ಅಸಲಿ ದೆವ್ವದ ರೋಚಕ ಕತೆ!

Date:

ಛತ್ತೀಸ್‌ಗಢದ ಬಲೋದಾ ಬಜಾರ್ ಜಿಲ್ಲೆಯ ‘ಖಾರ್ವೆ’ ಎಂಬ ಪುಟ್ಟ ಗ್ರಾಮವದು. ಕೇವಲ 1,000 ಜನರಿರುವ ಈ ಊರಿನಲ್ಲಿ ಕಳೆದ 5 ತಿಂಗಳಿಂದ ಒಂದರ ಹಿಂದೊಂದರಂತೆ ವಿಚಿತ್ರ ಸಾವುಗಳು ಸಂಭವಿಸುತ್ತಿದ್ದವು. ಅರಳಿ ಮರದ ಕೆಳಗೆ ಸೇರುತ್ತಿದ್ದ ಜನ, “ದೇವರಿಗೆ ನಮ್ಮ ಮೇಲೆ ಕೋಪ ಬಂದಿದೆ, ಏನೋ ಕೆಟ್ಟ ಶಕುನ ಶುರುವಾಗಿದೆ” ಎಂದುಕೊಂಡು ಪೂಜೆ-ಪುನಸ್ಕಾರಗಳನ್ನೂ ಮಾಡಿಸುತ್ತಿದ್ದರು. ಆದರೆ, ಆ ಸಾವುಗಳ ಹಿಂದಿದ್ದ ಅಸಲಿ ಸತ್ಯ ತಿಳಿದಾಗ ಇಡೀ ಗ್ರಾಮಕ್ಕೆ ಆಘಾತ ಕಾದಿತ್ತು!

- Advertisement -

ʼದ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ವರದಿ ಮಾಡಿರುವಂತೆ, ಈ ಭಯಾನಕ ಸರಣಿಯ ಮೊದಲ ಬಲಿಪಶು 58 ವರ್ಷದ ಬದ್ರಿ ಪಟೇಲ್. ಫೆಬ್ರವರಿಯಲ್ಲಿ ಬದ್ರಿ, ಮನೆಯ ಅಂಗಳದಲ್ಲಿ ಇದ್ದಕ್ಕಿದ್ದಂತೆ ಸತ್ತುಬಿದ್ದಿದ್ದರು. ನಂತರದ ವಾರಗಳಲ್ಲಿ ಬುಥಲು ಸಾಹು, ಚತುರಮ್ ಸಾಹು ಮತ್ತು ಬುಧರಾಮ್ ಜೈಸ್ವಾಲ್ ಎಂಬುವವರು ಒಬ್ಬೊಬ್ಬರಾಗಿ ಪ್ರಾಣ ಬಿಟ್ಟರು. ಸತ್ತವರೆಲ್ಲರೂ ಆರೋಗ್ಯವಂತರಾಗಿದ್ದವರು ಜೊತೆಗೆ ಮದ್ಯಪಾನದ ಅಭ್ಯಾಸವಿದ್ದವರು. ಮಾರ್ಚ್ ಅಂತ್ಯದಲ್ಲಿ 38 ವರ್ಷದ ವಿನೋದ್ ಸಾಹು ಎಂಬುವವರು ಸತ್ತಾಗ, ಗ್ರಾಮಸ್ಥರ ಅನುಮಾನ ಹೆಚ್ಚಾಯಿತು. ಮೇ 14ರಂದು ಮಹೇತ್ರು ಎಂಬುವವರು ಮೃತಪಟ್ಟಾಗ ಇಡೀ ಗ್ರಾಮ ಬೆಚ್ಚಿಬಿದ್ದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿರಾಟ್ ಕೊಹ್ಲಿ: ದಂತಕಥೆಯ ಪಯಣದ ಮತ್ತೊಂದು ಸುವರ್ಣ ಅಧ್ಯಾಯ

ಕ್ರಿಕೆಟ್ ಕೇವಲ ಒಂದು ಆಟವಲ್ಲ, ಅದೊಂದು ಜೀವಂತ ಭಾವನೆ ಎಂದು ನಂಬಿರುವ ಕೋಟ್ಯಂತರ ಭಾರತೀಯರಿಗೆ ವಿರಾಟ್ ಕೊಹ್ಲಿ ಕೇವಲ ಒಬ್ಬ ಆಟಗಾರನಲ್ಲ; ಬದಲಾಗಿ ಅದ್ಭುತ ಕಾವ್ಯದಂತಿರುವ ಒಂದು ಸುವರ್ಣ ಶಕೆ. ನವೆಂಬರ್ 5,...

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ...

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM G) ಯೋಜನೆ, ಅನುಷ್ಠಾನದ ಎಡವಟ್ಟುಗಳಿಂದಾಗಿ ಗೊಂದಲದ ಗೂಡಾಗಿದೆ. ಕೆಲಸ ಮಾಡಿದರೂ ತಿಂಗಳುಗಟ್ಟಲೆ ಕೂಲಿ ಸಿಗದೆ ಬಡ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ...

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು ಇವತ್ತು ನಿಶ್ಶಬ್ದವಾಗಿ ನಿಂತಿವೆ. ಪ್ರಕೃತಿಯ ಮಡಿಲಲ್ಲಿ ಕಟ್ಟಿಕೊಂಡಿದ್ದ ಬದುಕು ನಿಧಾನವಾಗಿ ಕರಗಿ ಹೋಗುತ್ತಿದೆ. ಊರು ತೊರೆದು ಪಟ್ಟಣ ಸೇರವುದು ಅನಿವಾರ್ಯವ...

ಅಷ್ಟಕ್ಕೂ ಈ ಎಲ್ಲಾ ಸಾವುಗಳಿಗೆ ಕಾರಣವೇನು ಎಂಬುದನ್ನು ಬೇಧಿಸಿದ್ದೇ ಒಂದು ರೋಚಕ ಸಂಗತಿ. ಎಲ್ಲರೂ ಸಾಯುವ ಮುನ್ನ ರಾಮ್‌ಸಹಾಯ್ ಜೈಸ್ವಾಲ್ ಎಂಬ ವ್ಯಕ್ತಿಯ ಜೊತೆ ಮದ್ಯ ಸೇವಿಸಿದ್ದರು. ಗ್ರಾಮದ ಕಿರಾಣಿ ಅಂಗಡಿ ಮಾಲೀಕನಾಗಿದ್ದ ಈತ, ನೋಡಲು ತುಂಬಾ ಸಭ್ಯ, ದೇವರ ಭಕ್ತನಂತೆ ಕಾಣುತ್ತಿದ್ದ. ಪೊಲೀಸರು ತನಿಖೆ ನಡೆಸಿದಾಗ ಅಸಲಿ ಸತ್ಯ ಹೊರಬಿತ್ತು. ರಾಮ್‌ಸಹಾಯ್ ತನಗೆ ಇಷ್ಟವಿಲ್ಲದ ಅಥವಾ ತನ್ನ ಜೊತೆ ವೈಮನಸ್ಸಿದ್ದವರನ್ನು ಕೊಲ್ಲಲು, ಸ್ಥಳೀಯ ಮದ್ಯಕ್ಕೆ ‘ಸುಹಾಗಾ’ ಎಂಬ ಇಲಿ ಪಾಷಾಣ ಬೆರೆಸುತ್ತಿದ್ದ. ಇದನ್ನು ಕುಡಿದ 15 ನಿಮಿಷಗಳಲ್ಲಿ ವ್ಯಕ್ತಿ ಪ್ರಾಣ ಬಿಡುತ್ತಿದ್ದ. ಆತ ಇಷ್ಟು ದೊಡ್ಡ ಮಟ್ಟದ ಅಪರಾಧ ಮಾಡಲು ಕಾರಣವಾಗಿದ್ದು ಸಣ್ಣಪುಟ್ಟ ಜಗಳಗಳು, ಆಸ್ತಿ ವಿವಾದಗಳು ಮತ್ತು ತನಗೆ ಗ್ರಾಮದಲ್ಲಿ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬ ಹತಾಶೆ!

ಕಾರ್ತಿಕ್ ಕುಮಾರ್ ಎಂಬುವವನು ಅಕಸ್ಮಾತಾಗಿ ರಾಮ್‌ಸಹಾಯ್ ಕೊಟ್ಟ ಮದ್ಯ ಕುಡಿದು ಅಸ್ವಸ್ಥನಾಗಿ ಬದುಕುಳಿದಾಗ, ಕೊನೆಗೂ ಅಸಲಿ ವಿಷಯ ಬಯಲಿಗೆ ಬಂತು. ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದರು. ಜೂನ್ 22ರಂದು ರಾಮ್‌ಸಹಾಯ್‌ನನ್ನು ಬಂಧಿಸಲಾಯಿತು. ಇದೀಗ ಪೊಲೀಸರು ಮೃತಪಟ್ಟವರ ದೇಹಗಳನ್ನು ಹೊರತೆಗೆದು (exhumation) ಫೋರೆನ್ಸಿಕ್ ತಪಾಸಣೆ ನಡೆಸುತ್ತಿದ್ದಾರೆ.

ಒಂದು ಕಾಲದಲ್ಲಿ ನೆಮ್ಮದಿಯಾಗಿದ್ದ ಆ ಗ್ರಾಮದಲ್ಲಿ ಈಗ ಮೌನ ಮತ್ತು ಆತಂಕ ಮನೆ ಮಾಡಿದೆ. ಆರೋಪಿಯ ಕುಟುಂಬ ಗ್ರಾಮ ತೊರೆದಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಗಳ ಕಣ್ಣೀರು ಮತ್ತು ನಂಬಿದವನೇ ಇಷ್ಟು ದೊಡ್ಡ ದ್ರೋಹ ಎಸಗಿದನಲ್ಲ ಎಂಬ ನೋವು ಇಡೀ ಗ್ರಾಮವನ್ನ ಕಾಡುತ್ತಿದೆ.

ಯಾರು ಈ ರಾಮ್‌ಸಹಾಯ್?

ರಾಮ್‌ಸಹಾಯ್‌ 49 ವರ್ಷದ ಛತ್ತೀಸ್‌ಗಢದ ಖಾರ್ವೆ ಗ್ರಾಮದ ಮೊದಲ ಕಿರಾಣಿ ಅಂಗಡಿಯ ಮಾಲೀಕ. ಆತ ಏಳು ಮಂದಿ ಒಡಹುಟ್ಟಿದವರಲ್ಲಿ ಅತಿ ಕಿರಿಯವ. ಉತ್ತಮ ಹಿನ್ನೆಲೆಯುಳ್ಳ ಗೌರವಾನ್ವಿತ ಕುಟುಂಬಕ್ಕೆ ಸೇರಿದವ. ಓದಿದ್ದು ಕೇವಲ 7ನೇ ತರಗತಿ, ಆತನಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಪದವೀಧರನಾಗಿ ಬೇರೆ ಅಂಗಡಿ ನಡೆಸುತ್ತಿದ್ದಾನೆ, ಇನ್ನೊಬ್ಬ ಇನ್ನೂ ಓದುತ್ತಿದ್ದಾನೆ.

ಇದನ್ನೂ ಓದಿ: ಬತ್ತಿದ ಕಬಿನಿ, ಕಾವೇರಿ: ಕುಡಿಯುವ ನೀರಿನ ಅಗ್ನಿಪರೀಕ್ಷೆಯಲ್ಲಿ ಕರ್ನಾಟಕ!

ರಾಮ್‌ಸಹಾಯ್‌ನನ್ನು ಬಲ್ಲವರೆಲ್ಲರೂ ಆತನನ್ನು ಬಹಳ ಒಳ್ಳೆಯವನು, ಎಲ್ಲರೊಂದಿಗೆ ಸುಲಭವಾಗಿ ಬೆರೆಯುವವನು, ದೇವರ ಭಕ್ತಿ ಉಳ್ಳವನು ಮತ್ತು ಸ್ನೇಹಪರ ವ್ಯಕ್ತಿ ಎನ್ನುತ್ತಾರೆ. ಆತ ಗ್ರಾಮದಲ್ಲಿ ಎರಡು ಸಣ್ಣ ದೇವಸ್ಥಾನಗಳನ್ನು ನಿರ್ಮಿಸಿದ್ದನು. ಆತನ ಸಹೋದರ ಶಿವಚರಣ್ ಪ್ರಕಾರ, ರಾಮ್‌ಸಹಾಯ್ ಯಾವಾಗಲೂ ಇತರರಿಗೆ ಸಹಾಯ ಮಾಡುವ ಗುಣ ಹೊಂದಿದ್ದ. ಅಲ್ಲದೆ, ಸಂಜೆ ಹೊತ್ತು ನೆರೆಹೊರೆಯವರೊಂದಿಗೆ ಹರಟೆ ಹೊಡೆಯುತ್ತಾ ಅಥವಾ ಮದ್ಯ ಸೇವಿಸುತ್ತಾ ಆತ ಕಾಲ ಕಳೆಯುತ್ತಿದ್ದ.

ಯಾರೊಂದಿಗಾದರೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾದರೆ, ಆತ ತಕ್ಷಣವೇ ಅವರೊಂದಿಗಿನ ಮಾತು ಬಿಡುತ್ತಿದ್ದ. ಉದಾಹರಣೆಗೆ, ಮಾಜಿ ಸರಪಂಚ್ ದಿಲ್ಹರಾನ್ ಅವರ ಪ್ರಕಾರ, ತಾನು ರಾಮ್‌ಸಹಾಯ್‌ನ ಅಂಗಡಿಯ ಪಕ್ಕದಲ್ಲೇ ಸ್ವಂತ ಕಿರಾಣಿ ಅಂಗಡಿಯನ್ನು ತೆರೆದಾಗಿನಿಂದ, ರಾಮ್‌ಸಹಾಯ್ ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದನಂತೆ.

ರಾಮ್‌ಸಹಾಯ್ ಮೇಲೆ ಕೇಳಿಬಂದಿರುವ ಈ ಗಂಭೀರ ಆರೋಪಗಳನ್ನು ಕೇಳಿ ಆತನ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. “ನಾವು ಅವನಿಗೆ ಪದೇ ಪದೆ ಸತ್ಯ ಹೇಳುವಂತೆ ಕೇಳುತ್ತಿದ್ದೇವೆ, ಆದರೆ ಅವನು ತಾನು ನಿರ್ದೋಷಿ ಎನ್ನುತ್ತಿದ್ದಾನೆ” ಎನ್ನುತ್ತಾರೆ ಆತನ ಸಹೋದರ ಶಿವಚರಣ್.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮೆರಿಕದಲ್ಲಿ ಡೀಸೆಲ್ ರಫ್ತು ನಿಷೇಧದ ಚರ್ಚೆ; ಭಾರತದ ಮೇಲಾಗುವ ಪರಿಣಾಮವೇನು?

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ರಷ್ಯಾ-ಉಕ್ರೇನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ...

4 ವರ್ಷದಲ್ಲಿ BJP, NPFಗೆ ಹಾರಿದ 111 ಜನಪ್ರತಿನಿಧಿಗಳು; ಎಡಿಆರ್‌ ವರದಿ

2022ರಿಂದ 2026ರ ಅವಧಿಯಲ್ಲಿ ಚುನಾವಣೆ ಗೆದ್ದ ಬಳಿಕ ಒಟ್ಟು 111 ಹಾಲಿ...

ನಕಲಿ ಔಷಧ ಜಾಲ ಭೇದಿಸಿದ ಎಸ್‌ಐಟಿ: ಅಜರ್‌ಬೈಜಾನ್‌ಗೆ ಪರಾರಿಯಾಗಿದ್ದ ಕಿಂಗ್‌ಪಿನ್‌ ಪ್ರಶಾಂತ್‌ ಸೆರೆ

ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧ...

ಉದ್ಯೋಗ ಮಾಹಿತಿ | ರೈಲ್ವೆಯಲ್ಲಿ 590 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಖಾಲಿ ಇರುವ ಪ್ಯಾರಾಮೆಡಿಕಲ್ ವಿಭಾಗದ...