ವಿಚಿತ್ರ ಸಂಗತಿ | ತಪ್ಪಾದ ಅಕ್ಷರ ಬರೆದಿದ್ದಕ್ಕೆ ಶಿಕ್ಷಕನ ಅಮಾನತು: ಆದೇಶ ಪ್ರತಿಯಲ್ಲೂ ತಪ್ಪು ಅಕ್ಷರ ಬರೆದ ಅಧಿಕಾರಿಗಳು!

Date:

ಬ್ಯಾಂಕ್ ಚೆಕ್ ಪ್ರತಿಯನ್ನು ಬರೆಯುವಾಗ ಕಾಗುಣಿತ ತಪ್ಪಾಗಿ ಬರೆದ ಕಾರಣಕ್ಕೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ರೊನ್ಹತ್‌ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ. ಆದರೆ ಈ ಅಮಾನತು ಆದೇಶ ಪ್ರತಿಯಲ್ಲೂ ಹಲವು ತಪ್ಪು ಅಕ್ಕರಗಳಿದ್ದು ಸದ್ಯ ಈ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

- Advertisement -

ಶಿಕ್ಷಕರೊಬ್ಬರು 7,616 ರೂ.ಗಳ ಚೆಕ್ ಬರೆಯುವಾಗ ಇಂಗ್ಲೀಷ್‌ನಲ್ಲಿ ತಪ್ಪಾಗಿ ಬರೆದಿದ್ದಾರೆ. seven thousand six hundred sixteen ಎಂದು ಬರೆಯುವ ಬದಲಾಗಿ Saven Thursday Six Harendra Sixty ಎಂದು ಬರೆದಿದ್ದಾರೆ. ಸೆಪ್ಟೆಂಬರ್ 25ರ ಈ ತಪ್ಪು ಅಕ್ಷರಗಳಿಂದ ಕೂಡಿದ ಚೆಕ್‌ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇದನ್ನು ಓದಿದ್ದೀರಾ? ಮಾಯಾವತಿ ವಿಚಿತ್ರ ನಿರ್ಧಾರಗಳು: ಆಕಾಶ್ ಪದಚ್ಯುತಿ, ಅಧೋಗತಿಯತ್ತ ಬಿಎಸ್‌ಪಿ

ಅದಾದ ಬಳಿಕ ಶಿಕ್ಷಕರನ್ನು ಅಮಾನತುಗೊಳಿಸಲಾಗಿದ್ದು ಅಕ್ಟೋಬರ್ 4ರಂದು ಅಮಾನತು ಆದೇಶ ಪ್ರತಿಯನ್ನು ನೀಡಲಾಗಿದೆ. ಅಮಾನತು ಆದೇಶವನ್ನು ಹೊರಡಿಸಿದ ಶಾಲಾ ಶಿಕ್ಷಣ (ಪ್ರಾಥಮಿಕ) ಉಪನಿರ್ದೇಶಕ ರಾಜೀವ್ ಠಾಕೂರ್ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿದ್ದು, “ಕಾಗುಣಿತ ದೋಷಗಳನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ, ಎಚ್ಚರಿಕೆ ನೀಡಲಾಗುತ್ತದೆ. ಆದರೆ ಈ ಬಾರಿ ಪದಗಳನ್ನೇ ಬದಲಾಯಿಸಿರುವುದು ಕಂಡುಬಂದಿದೆ. ಸಾವಿರ(thousand) ಎಂದು ಬರೆಯುವ ಬದಲು ಗುರುವಾರ(Thursday) ಎಂದು ಬರೆಯಲಾಗಿದೆ. ನೂರು(hundred) ಎಂದು ಬರೆಯುವ ಬದಲು ಹರೇಂದ್ರ(Harendra) ಎಂದು ಬರೆಯಲಾಗಿದೆ. ಆದ್ದರಿಂದಾಗಿ ಅಮಾನತು ಕ್ರಮವನ್ನು ಕೈಗೊಂಡಿದ್ದೇವೆ” ಎಂದು ಹೇಳಿದ್ದಾರೆ.

ಆದರೆ ವಿಚಿತ್ರವೆಂದರೆ ಈ ಅಮಾನತು ಪ್ರತಿಯಲ್ಲಿಯೇ ಹಲವು ಕಾಗುಣಿತ ತಪ್ಪುಗಳು ಕಂಡುಬಂದಿದ್ದು, ಟ್ರೋಲಿಗರಿಗೆ ವಿಷಯವಸ್ತುವಾಗಿದೆ. Principal(ಪ್ರಾಂಶುಪಾಲರು) ಎಂದು ಬರೆಯುವ ಬದಲಾಗಿ princpal ಎಂದು ತಪ್ಪಾಗಿ ಬರೆಯಲಾಗಿದೆ. Sirmaur(ಸಿರ್ಮೌರ್) ಎಂದು ಬರೆಯುವ ಬದಲಾಗಿ Sirmour ಎಂದು ಉಲ್ಲೇಖಿಸಲಾಗಿದೆ. spellings(ಅಕ್ಷರಗಳು) ಬರೆಯಬೇಕಾದಲ್ಲಿ spelling ಎಂದು ಬರೆಯಲಾಗಿದೆ. education(ಶಿಕ್ಷಣ) ಬರೆಯುವಲ್ಲಿ educatioin ಎಂದು ತಪ್ಪು ಅಕ್ಷರವಿದೆ.

ಈ ಬಗ್ಗೆಯೂ ಮಾಧ್ಯಮಕ್ಕೆ ಅಧಿಕಾರಿ ಠಾಕೂರ್ ಪ್ರತಿಕ್ರಿಯೆ ನೀಡಿದ್ದಾರೆ. “ಸಮಯ ಕಡಿಮೆಯಿತ್ತು, ನಾವು ಆತುರದಿಂದ ನೋಟಿಸ್ ನೀಡಿದ್ದೇವೆ. ತಪ್ಪುಗಳು ಇರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇವು ಕಾಗುಣಿತ ಮತ್ತು ಟೈಪಿಂಗ್ ದೋಷಗಳಾಗಿವೆ. ಈ ತಪ್ಪುಗಳು ಹೇಗಾಯಿತು ಎಂಬುದನ್ನು ನಾನು ಪರಿಶೀಲಿಸುತ್ತೇನೆ” ಎಂದು ಹೇಳಿದ್ದಾರೆ.

ಈ ವರ್ಷದ ಸೆಪ್ಟೆಂಬರ್ 8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನದಂದು ಹಿಮಾಚಲ ಪ್ರದೇಶವನ್ನು ಸಂಪೂರ್ಣ ಸಾಕ್ಷರತಾ ರಾಜ್ಯವೆಂದು ಘೋಷಿಸಲಾಗಿದೆ. ಆದರೆ ಈ ರಾಜ್ಯದ ಶಾಲಾ ಶಿಕ್ಷಕರು ಮತ್ತು ಅಧಿಕಾರಿಗಳೇ ತಪ್ಪಾಗಿ ಬರೆಯುವುದನ್ನು ನೆಟ್ಟಿಗರು ವ್ಯಂಗ್ಯ ಮಾಡುತ್ತಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ದೂರಿದ್ದ ಎಎಪಿ ಶಾಸಕ ಅಮಾನತು

ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಹೆಚ್ಚಿದೆ ಎಂದು ತಮ್ಮದೇ...

ಭಯೋತ್ಪಾದಕ ಸಂಘಟನೆಗಳ ಸದಸ್ಯರೊಂದಿಗೆ ಸಂಪರ್ಕ ಆರೋಪ: ಭಾಲ್ಕಿ ಮೂಲದ ಯುವಕನ ಬಂಧನ

ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್‌ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸದಸ್ಯರು ಮತ್ತು...

ಚುನಾವಣಾ ಆಯೋಗದ ಸಾಫ್ಟ್‌ವೇರ್ ದೋಷ: ಹೈಕೋರ್ಟ್ ಮೆಟ್ಟಿಲೇರಿದ ಗೋವಾದ ನಾಗರಿಕನ ಹೋರಾಟ

ಉತ್ತರ ಗೋವಾದ ಸಾಂತಾಕ್ರೂಜ್ ಕ್ಷೇತ್ರದ ನಿವಾಸಿ, 41 ವರ್ಷದ ಪರೇಶ್ ಸಾಲ್ಗಾಂವ್ಕರ್...

ತಿರುಪತಿ ಬಳಿ ಭೀಕರ ಬಾಯ್ಲರ್ ಸ್ಫೋಟ: ಐವರು ಕಾರ್ಮಿಕರ ಸಾವು, 10 ಮಂದಿಗೆ ಗಂಭೀರ ಗಾಯ

ಟಿಐಎಲ್ ಹೆಲ್ತ್‌‌ಕೇರ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ ಐವರು ಕಾರ್ಮಿಕರು...