ಬಾಂಬೆ ಐಐಟಿ | ಸಸ್ಯಾಹಾರಿಗಳಿಗೆ ಮೀಸಲಾದ ಟೇಬಲ್‌ಗಳ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗೆ ₹10 ಸಾವಿರ ದಂಡ

Date:

ಸಸ್ಯಾಹಾರಿಗಳಿಗೆ ಟೇಬಲ್‌ಗಳನ್ನು ಮೀಸಲಿಡುವುದನ್ನು ವಿರೋಧಿಸಿದ ವಿದ್ಯಾರ್ಥಿಯೊಬ್ಬನಿಗೆ ಬಾಂಬೆ ಐಐಟಿ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

- Advertisement -

ಜುಲೈನಲ್ಲಿ ಸಸ್ಯಾಹಾರಿಗಳಿಗೆ ಅನಧಿಕೃತವಾಗಿ ಮೀಸಲಿಟ್ಟ ಕೆಲವು ಪ್ರದೇಶಗಳ ಅವ್ಯವಸ್ಥೆಯ ಕುರಿತು ಸಂಸ್ಥೆಯಲ್ಲಿ ವಿವಾದವು ಭುಗಿಲೆದ್ದಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಹಾಸ್ಟೆಲ್ ಮೆಸ್‌ನ ಪ್ರಧಾನ ಕಾರ್ಯದರ್ಶಿ ಜುಲೈನಲ್ಲಿ ಇಮೇಲ್‌ ಮೂಲಕ ಯಾವುದೇ ಪ್ರದೇಶವನ್ನು ಯಾರಿಗೂ ಮೀಸಲಿಡಲಾಗುವುದಿಲ್ಲ ಎಂದು ತಿಳಿಸಿದ್ದರು. ಆದಾಗ್ಯೂ, ಸೆಪ್ಟೆಂಬರ್ 27 ರಂದು ಇನ್ನೊಂದು ಇಮೇಲ್‌ನಲ್ಲಿ “ಮೆಸ್ ಕೌನ್ಸಿಲ್ ವಿದ್ಯಾರ್ಥಿಗಳಿಗೆ, ಪ್ರತಿಯೊಬ್ಬರೂ ಶಾಂತಿಯುತ ವಾತಾವರಣದಲ್ಲಿ ತಮ್ಮ ಊಟವನ್ನು ಆನಂದಿಸಲು ಈ ಉಪಕ್ರಮವನ್ನು ಬೆಂಬಲಿಸಲು ನಾವು ಎಲ್ಲ ವಿದ್ಯಾರ್ಥಿಗಳನ್ನು ವಿನಂತಿಸುತ್ತೇವೆ. ಎಲ್ಲರಿಗೂ ಆರಾಮದಾಯಕ ಊಟ ನೀಡುವುದು ನಮ್ಮ ಮೆಸ್‌ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಊಟದ ಸಮಯದಲ್ಲಿ ಮಾಂಸಾಹಾರ ಸೇವಿಸದ ಕೆಲವರಿದ್ದಾರೆ. ಅವರ ಆರೋಗ್ಯದ ಹಿತದೃಷ್ಟಿಯಿಂದ ಮೆಸ್‌ನಲ್ಲಿ 6 ಟೇಬಲ್‌ಗಳನ್ನು ಗೊತ್ತುಪಡಿಸುವುದು ಅವಶ್ಯಕವಾಗಿದೆ” ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಪೋಸ್ಟರ್‌ ವಿವಾದದ ನಂತರ ಸಸ್ಯಾಹಾರಿಗಳಿಗೆ ಪ್ರತ್ಯೇಕ ಸ್ಥಳ ಮೀಸಲಿಟ್ಟ ಬಾಂಬೆ ಐಐಟಿ: ಮತ್ತೊಂದು ವಿವಾದ

ಈ ಇಮೇಲ್‌ ನೋಟಿಸ್‌ನಿಂದ, ಕ್ಯಾಂಪಸ್‌ನಲ್ಲಿ ಹಲವಾರು ವಿದ್ಯಾರ್ಥಿ ಸಂಘಟನೆಗಳು ಆಹಾರ ತಾರತಮ್ಯದ ವಿಷಯವನ್ನು ಪ್ರಸ್ತಾಪಿಸಿ ಆಡಳಿತ ಮಂಡಳಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದವು.

ಮಂಗಳವಾರ (ಅ.03), ಬಾಂಬೆ ಐಐಟಿ ಹಾಸ್ಟೆಲ್ 12, 13 ಮತ್ತು 14 ರ ಮೆಸ್ ಕೌನ್ಸಿಲ್ ‘ಅಶಿಸ್ತಿನ ನಡವಳಿಕೆ’ ಮತ್ತು ‘ಅವ್ಯವಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಾಸ್ಟೆಲ್ 12ರ ವಿದ್ಯಾರ್ಥಿಯೊಬ್ಬನಿಗೆ 10,000 ರೂ. ದಂಡ ವಿಧಿಸಲು ನಿರ್ಧರಿಸಿದೆ. ವಿದ್ಯಾರ್ಥಿಯು ಇತರ ಇಬ್ಬರೊಂದಿಗೆ ಸಸ್ಯಾಹಾರಕ್ಕಾಗಿ ನಿಗದಿಪಡಿಸಿದ ಜಾಗದಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸಿ ಆಹಾರ ಸೇವಿಸುವ ಸ್ಥಳವನ್ನು ಪ್ರತ್ಯೇಕಿಸುವುದನ್ನು ವಿರೋಧಿಸಿದ್ದಕ್ಕಾಗಿ ಈ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರತಿಭಟನೆ ವ್ಯಕ್ತಪಡಿಸಿದ ಇನ್ನಿಬ್ಬರನ್ನು ಗುರುತಿಸಿದ ನಂತರ ಅವರ ವಿರುದ್ಧವೂ ಶಿಸ್ತುಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮೆಸ್ ಕೌನ್ಸಿಲ್ ತಿಳಿಸಿದೆ.

ಅಕ್ಟೋಬರ್ 2 ರಂದು ದಲಿತ ಹಾಗೂ ಶೋಷಿತ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿ ಸಂಘಟನೆ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್ (ಎಪಿಪಿಎಸ್‌ಸಿ) ಟ್ವಿಟರ್‌ನಲ್ಲಿ ಮೆಸ್ ಕೌನ್ಸಿಲ್ ಸಭೆಯ ನಡಾವಳಿಗಳನ್ನು ಖಂಡಿಸಿದೆ.

“ಈ ಕೃತ್ಯವು ವಿದ್ಯಾರ್ಥಿಗಳ ಸಲಹೆಯನ್ನು ಧಿಕ್ಕರಿಸಿ ಮೆಸ್‌ನ ವ್ಯವಸ್ಥೆಯೊಳಗೆ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರುವ ಪೂರ್ವಯೋಜಿತ ಪ್ರಯತ್ನವಾಗಿದೆ. ಆಧುನಿಕ ಕಾಲದಲ್ಲಿ ಅಸ್ಪೃಶ್ಯತೆಯನ್ನು ಎತ್ತಿಹಿಡಿಯಲು ಖಾಪ್ ಪಂಚಾಯತ್ ಕಾರ್ಯನಿರ್ವಹಿಸುವಂತೆಯೇ ಇದೆ” ಎಂದು ಅದು ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...