ಉಮರ್ ಖಾಲಿದ್ ಪುಸ್ತಕದ ಚರ್ಚೆಗೆ ಜೆಎನ್‌ಯು ಸಭಾಂಗಣ ನಿರಾಕರಣೆ; ಅಭಿವ್ಯಕ್ತಿ ಹಕ್ಕಿನ ಮೇಲಿನ ಪ್ರಹಾರವಲ್ಲವೇ?

Date:

ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಹಾಗೂ ಪ್ರಸ್ತುತ ದೆಹಲಿ ಗಲಭೆ ಸಂಚಿನ ಪ್ರಕರಣದಲ್ಲಿ ಜೈಲಿನಲ್ಲಿರುವ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಅವರ ನೂತನ ಪುಸ್ತಕದ ಕುರಿತ ಚರ್ಚಾಗೋಷ್ಠಿಗೆ ಕಾಯ್ದಿರಿಸಲಾಗಿದ್ದ ವಿಶ್ವವಿದ್ಯಾಲಯದ ಸಭಾಂಗಣದ ಅನುಮತಿಯನ್ನು ಜೆಎನ್‌ಯು ಆಡಳಿತ ಮಂಡಳಿ ಕೊನೆ ಕ್ಷಣದಲ್ಲಿ ರದ್ದುಗೊಳಿಸಿದೆ. ಈ ಕ್ರಮವು ವಿಶ್ವವಿದ್ಯಾಲಯದ ಶೈಕ್ಷಣಿಕ ವಲಯ, ಸಾಮಾಜಿಕ ಜಾಲತಾಣಗಳು ಹಾಗೂ ವಿಪಕ್ಷಗಳ ನಾಯಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಅಭಿವ್ಯಕ್ತಿ ಹಕ್ಕಿನ ಮೇಲಿನ ಪ್ರಹಾರವಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

- Advertisement -

ಆಗಸ್ಟ್ 10ರಂದು ‘ವಿಶ್ವ ಆದಿವಾಸಿ ದಿನಾಚರಣೆ’ಯ (International Day of the World’s Indigenous Peoples) ಅಂಗವಾಗಿ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ (JNUSU) ವಿಶ್ವವಿದ್ಯಾಲಯದ ‘ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರ’ದ ಸಭಾಂಗಣದಲ್ಲಿ ಉಮರ್ ಖಾಲಿದ್ ಅವರು ಬರೆದಿರುವ ‘ಫ್ರ್ಯಾಕ್ಚರ್ಡ್ ಕಮ್ಯುನಿಟೀಸ್: ಆದಿವಾಸಿ ಹಿಸ್ಟರೀಸ್ ಅಂಡ್ ದಿ ಪಾಲಿಟಿಕ್ಸ್ ಆಫ್ ಪವರ್’ (Fractured Communities: Adivasi Histories and the Politics of Power) ಪುಸ್ತಕದ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿತ್ತು. ಈ ಕೃತಿಯು ಉಮರ್ ಖಾಲಿದ್ ಅವರು 2018ರಲ್ಲಿ ಜೆಎನ್‌ಯುನಲ್ಲಿ ಸಲ್ಲಿಸಿದ್ದ ಡಾಕ್ಟರೇಟ್ (PhD) ಪ್ರಬಂಧವನ್ನು ಆಧರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಇದನ್ನೂ ಓದಿ: ಉಮರ್ ಖಾಲಿದ್ ಪ್ರಕರಣ: ಕತ್ತಲ ಸುರಂಗದಲ್ಲಿ ಬೆಳಕಿನ ಕಿರಣವೊಂದು ಸೂಸುವುದೇ?

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ.ಪ್ರಭು ಮಹಾಪಾತ್ರ ಮತ್ತು ಪ್ರೊ.ಉಮಾ ಚಕ್ರವರ್ತಿ, ಬರಹಗಾರ ಶುದ್ಧಬ್ರತ ಸೇನ್‌ಗುಪ್ತ, ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದರ್ ಮತ್ತು ಖಾಲಿದ್‌ನ ಸಂಗಾತಿ ಬನೋಜ್ಯೋತ್ಸ್ನಾ ಲಹಿರಿ ಭಾಗವಹಿಸಲಿದ್ದರು.

ಆದರೆ, ಆಗಸ್ಟ್ 9ರಂದು ಅಧಿಕೃತ ಪ್ರಕಟಣೆ ಹೊರಡಿಸಿದ ಜೆಎನ್‌ಯು ಆಡಳಿತ ಮಂಡಳಿಯು, “ಕಾರ್ಯಕ್ರಮದ ಸಂಪೂರ್ಣ ವಿವರ ಹಾಗೂ ಸತ್ಯಾಂಶಗಳನ್ನು ಆಯೋಜಕರು ಮುಚ್ಚಿಟ್ಟು ಸಭಾಂಗಣ ಬುಕ್ ಮಾಡಿದ್ದರು” ಎಂದು ಕಾರಣ ನೀಡಿ ಅನುಮತಿಯನ್ನು ರದ್ದುಗೊಳಿಸಿದೆ.

ವಿವಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಜೆಎನ್‌ಯು ಆಡಳಿತ ಮಂಡಳಿಯ ಈ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಆಡಳಿತ ಮಂಡಳಿಯ ಈ ತೀರ್ಮಾನವನ್ನು ವಿದ್ಯಾರ್ಥಿಗಳು ಮತ್ತು ನೆಟ್ಟಿಗರು ಖಂಡಿಸಿದ್ದಾರೆ.

“ವಿಶ್ವವಿದ್ಯಾಲಯ ಎಂದರೆ ಮುಕ್ತ ಆಲೋಚನೆ ಮತ್ತು ಶೈಕ್ಷಣಿಕ ಸಂವಾದಗಳ ತಾಣವಾಗಿರಬೇಕು. ಪುಸ್ತಕದ ಮೇಲಿನ ಶೈಕ್ಷಣಿಕ ಚರ್ಚೆಯನ್ನು ನಿಷೇಧಿಸುವುದು ಆಡಳಿತದ ಸೌಹಾರ್ದಯುತ ನೀತಿಗೆ ವಿರುದ್ಧವಾದದ್ದು” ಎಂದು ನೆಟ್ಟಿಗರು ಟೀಕಿಸಿದ್ದಾರೆ.

ಇತ್ತೀಚೆಗೆ ಇತರ ಸಂಘಟನೆಗಳ ಕಾರ್ಯಕ್ರಮಗಳಿಗೆ ಸುಲಭವಾಗಿ ಜಾಗ ನೀಡಿದ್ದ ಆಡಳಿತ ಮಂಡಳಿ, ಶೈಕ್ಷಣಿಕ ವಿಷಯದ ಚರ್ಚೆಗೆ ‘ತಾರತಮ್ಯ’ ಮತ್ತು ಸೆನ್ಸಾರ್‌ಶಿಪ್ ನೀತಿ ಅನುಸರಿಸುತ್ತಿದೆ ಎಂದು ಅನೇಕರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ನೀವು ಎದ್ದು ನಿಲ್ಲುವಿರಿ’: ಉಮರ್ ಖಾಲಿದ್‌ಗಾಗಿ ಕವಿತೆ ಬರೆದ ಸಂಸದೆ ಮಹುವಾ ಮೊಯಿತ್ರಾ

ಆಡಳಿತ ಮಂಡಳಿ ನಡೆಯನ್ನು ಖಂಡಿಸಿರುವ ಜೆಎನ್‌ಯುಎಸ್‌ಯು, “ಯಾವುದೇ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪುಸ್ತಕದ ಬಗ್ಗೆ ಚರ್ಚಿಸುವುದು ಶೈಕ್ಷಣಿಕ ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ತೊಡಗಿಸಿಕೊಳ್ಳುವಿಕೆಯ ಮೂಲಭೂತ ಭಾಗ. ಈ ಕಾರ್ಯಕ್ರಮದ ಸ್ಥಳವನ್ನು ರದ್ದುಗೊಳಿಸುವ ಮೂಲಕ, ಜೆಎನ್‌ಯು ಆಡಳಿತವು ಮತ್ತೊಮ್ಮೆ ತನ್ನ ವಿದ್ಯಾರ್ಥಿ ವಿರೋಧಿ ಮತ್ತು ಬೌದ್ಧಿಕ ವಿರೋಧಿ ಕಾರ್ಯಸೂಚಿಯನ್ನು ಬಹಿರಂಗಪಡಿಸಿದೆ. ವಿಶ್ವವಿದ್ಯಾನಿಲಯವು ವಿಮರ್ಶಾತ್ಮಕ ಚಿಂತನೆಯನ್ನು ನಿಗ್ರಹಿಸಲು ಮತ್ತು ಭಿನ್ನಾಭಿಪ್ರಾಯದ ಧ್ವನಿಗಳನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ. ಇದು ಆದಿವಾಸಿ ವಿರೋಧಿ ನಿರ್ಧಾರ” ಎಂದು ಟೀಕಿಸಿದೆ.

ರದ್ದತಿಯನ್ನು ಖಂಡಿಸಿದ ಜೆಎನ್‌ಯು ಶಿಕ್ಷಕರ ಸಂಘವು, ಕ್ಯಾಂಪಸ್‌ನಲ್ಲಿ ಕಾನೂನುಬದ್ಧ ಶೈಕ್ಷಣಿಕ ಚರ್ಚೆಗಳನ್ನು ನಿಯಂತ್ರಿಸಲು “ಆಡಳಿತವನ್ನು ಸಾಧನವಾಗಿ ಬಳಸಲಾಗುತ್ತಿದೆ” ಎಂದು ದೂರಿದೆ ಮತ್ತು ತಕ್ಷಣವೇ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ.

ಈ ಚರ್ಚಾಗೋಷ್ಠಿಯ ಮುಖ್ಯ ವಕ್ತಾರರಲ್ಲಿ ಒಬ್ಬರಾಗಿದ್ದ ಹರ್ಷ ಮಂದರ್, “ಪುಸ್ತಕದ ಚರ್ಚೆಗೆ ತಡೆಯೊಡ್ಡುವುದು ಆಡಳಿತ ಯಂತ್ರದ ಶೈಕ್ಷಣಿಕ ಭಯವನ್ನು ತೋರಿಸುತ್ತದೆ” ಎಂದಿದ್ದಾರೆ.

ಇನ್ನು ವಿದ್ಯಾರ್ಥಿ ಹೋರಾಟಗಾರ, ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ 2020ರ ದೆಹಲಿ ಗಲಭೆಗಳ ಪಿತೂರಿ ಪ್ರಕರಣದಲ್ಲಿ ಸುಮಾರು ಐದು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಯಾವುದೇ ವಿಚಾರಣೆ ನಡೆಸದೆಯೇ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಜೈಲಿನಲ್ಲಿಡಲಾಗಿದೆ. ಹಲವು ಬಾರಿ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ. ಈಗಾಗಲೇ ಈ ಬಂಧನವನ್ನು ಅಕ್ರಮ ಮತ್ತು ಅಸಮರ್ಥನೀಯ ಎಂದು ವಿಶ್ವಸಂಸ್ಥೆಯ ತಜ್ಞರ ಸಮಿತಿ ಹೇಳಿದೆ. ಉಮರ್ ಖಾಲಿದ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ವಿಶ್ವಸಂಸ್ಥೆ ಆಗ್ರಹಿಸಿದೆ. ಆದರೆ ಮೋದಿ ಸರ್ಕಾರ ತಮ್ಮ ವಿರೋಧಿ ಧ್ವನಿಗಳನ್ನು ಹತ್ತಿಕ್ಕಲು ಯುಎಪಿಎ ಬಳಸುವುದನ್ನು ಮುಂದುವರೆಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...