ಟೀಕೆಗೆ ನ್ಯಾಯಾಂಗ ವಿರೋಧಿಯಲ್ಲ; ಆದರೆ, ತಪ್ಪಾದ ಆರೋಪಗಳು ಶಾಲಾ ಪಠ್ಯಕ್ಕೆ ಬರಬಾರದು: ಸುಪ್ರೀಂ ಕೋರ್ಟ್

Date:

ನ್ಯಾಯಾಂಗವು ಟೀಕೆಯಿಂದ ತಪ್ಪಿಸಿಕೊಳ್ಳುವ ಸಂಸ್ಥೆಯಲ್ಲ. ಹಾಗೆಯೇ, ವಿಮರ್ಶೆಗಳಿಗೆ ವಿರೋಧಿಯಾಗಿಯೂ ಇಲ್ಲ. ಆದರೆ, ನ್ಯಾಯಾಂಗದ ವಿರುದ್ಧದ ಟೀಕೆ ಜವಾಬ್ದಾರಿಯುತ, ಪರಿಶೀಲಿತ ಹಾಗೂ ತಾರ್ಕಿಕವಾಗಿರಬೇಕು; ಪರಿಶೀಲಿಸದ ಆರೋಪಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

- Advertisement -

8ನೇ ತರಗತಿಯ NCERT ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಕುರಿತು ವಿವಾದಾತ್ಮಕ ವಿಷಯಗಳನ್ನು ಸೇರಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಪ್ರಕರಣದ ಸ್ವಯಂಪ್ರೇರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಮುಕ್ತಾಯಗೊಳಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠವು, “ವಿಮರ್ಶೆ ಮತ್ತು ಮೌನದ ನಡುವಿನ ವ್ಯತ್ಯಾಸವೇ ಮುಖ್ಯವಲ್ಲ; ಜವಾಬ್ದಾರಿಯುತ ಸಾರ್ವಜನಿಕ ಚರ್ಚೆ ಮತ್ತು ಆಧಾರರಹಿತ ಆರೋಪಗಳ ನಡುವಿನ ವ್ಯತ್ಯಾಸವೇ ಮುಖ್ಯ” ಎಂದು ಹೇಳಿದೆ.

“ನ್ಯಾಯಾಂಗವು ಒಂದು ಸಂಸ್ಥೆಯಾಗಿ ಟೀಕೆಗೆ ವಿರೋಧಿಯಾಗಿಲ್ಲ. ಹಾಗೆ ಇರಲು ಸಾಧ್ಯವೂ ಇಲ್ಲ. ನ್ಯಾಯಾಂಗದ ಕಾರ್ಯವೈಖರಿಯ ಕುರಿತು ನ್ಯಾಯಸಮ್ಮತ, ಮಾಹಿತಿ ಆಧಾರಿತ ಹಾಗೂ ರಚನಾತ್ಮಕ ಟೀಕೆ ಜೀವಂತ ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ಅಗತ್ಯ ಭಾಗವಾಗಿದೆ. ಇಂತಹ ಟೀಕೆ ಸಂಸ್ಥೆಗಳ ಹೊಣೆಗಾರಿಕೆ, ಜವಾಬ್ದಾರಿ ಹಾಗೂ ಸ್ವಯಂ ತಿದ್ದುಪಡಿಗೆ ಸಹಕಾರಿಯಾಗುತ್ತದೆ” ಎಂದು ಪೀಠ ಹೇಳಿದೆ.

“ಟೀಕೆಗಳು ಸೂಕ್ತ ವೇದಿಕೆಯಲ್ಲಿ, ನ್ಯಾಯಸಮ್ಮತ ಮತ್ತು ತಾರ್ಕಿಕ ವಿಧಾನದಲ್ಲಿ ವ್ಯಕ್ತವಾಗಬೇಕು. ಪರಿಶೀಲನೆಯಿಲ್ಲದ ಆರೋಪಗಳು ಸುಲಭವಾಗಿ ಪ್ರಭಾವಿತರಾಗುವ ಮಕ್ಕಳಿಗಾಗಿ ರೂಪಿಸಲಾದ ಶಾಲಾ ಪಠ್ಯಕ್ರಮವನ್ನು ಪ್ರವೇಶಿಸಬಾರದು” ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

ವಿವಾದಕ್ಕೆ ಕಾರಣವಾಗಿದ್ದ ಅಧ್ಯಾಯವನ್ನು ಕೇಂದ್ರ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈಗಾಗಲೇ ಬದಲಾಯಿಸಲಾಗಿದೆ ಎಂಬುದನ್ನೂ ನ್ಯಾಯಾಲಯ ಗಮನಿಸಿದೆ. ಇದರ ನಂತರ ಪ್ರಕರಣದ ಸ್ವಯಂಪ್ರೇರಿತ ವಿಚಾರಣೆಯನ್ನು ನ್ಯಾಯಾಲಯ ಮುಕ್ತಾಯಗೊಳಿಸಿದೆ.

ಈ ಲೇಖನ ಓದಿದ್ದೀರಾ?: ನೀಟ್‌ ಮುಕ್ತ ವೈದ್ಯಕೀಯ ಶಿಕ್ಷಣ: ರಾಜ್ಯಗಳ ಸ್ವಾಯತ್ತತೆ ಮರುಸ್ಥಾಪನೆಗೆ ಹೋರಾಟ ಅಗತ್ಯ

8ನೇ ತರಗತಿ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಅಧ್ಯಾಯವನ್ನು ಶಿಕ್ಷಣ ತಜ್ಞರಾದ ಪ್ರೊಫೆಸರ್ ಮೈಕೆಲ್ ಡ್ಯಾನಿನೊ, ಸುಪರ್ಣ ದಿವಾಕರ್ ಹಾಗೂ ಅಲೋಕ್ ಪ್ರಸನ್ನ ಕುಮಾರ್ ರಚಿಸಿದ್ದರು ಎಂದು ಹೇಳಲಾಗಿದೆ. ಈ ಅಧ್ಯಾಯದೊಂದಿಗೆ ವಿವಾದ ಸೃಷ್ಟಿಸಿದ್ದಾಗಿ, ಈ ಮೂವರ ವಿರುದ್ಧ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. “ತಜ್ಞರು ಉದ್ದೇಶಪೂರ್ವಕವಾಗಿ ಮತ್ತು ತಿಳಿದಿದ್ದರೂ ಸತ್ಯಾಂಶಗಳನ್ನು ತಪ್ಪಾಗಿ ರೂಪಿಸಿ 8ನೇ ತರಗತಿ ವಿದ್ಯಾರ್ಥಿಗಳ ಮುಂದೆ ಭಾರತೀಯ ನ್ಯಾಯಾಂಗದ ನಕಾರಾತ್ಮಕ ಚಿತ್ರಣ ನಿರ್ಮಿಸಲು ಯತ್ನಿಸಿದ್ದಾರೆ” ಎಂದು ಕಿಡಿಕಾರಿತ್ತು. ಮಾತ್ರವಲ್ಲದೆ, ಈ ಮೂವರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸರ್ಕಾರಿ ಸಂಸ್ಥೆಗಳು ಸಂಬಂಧ ಕಡಿದುಕೊಳ್ಳಬೇಕು ಎಂದು ಮಾರ್ಚ್‌ 11ರ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು. ಆದರೆ, ಬಳಿಕ ಈ ಆದೇಶವನ್ನು ನ್ಯಾಯಾಲಯ ಭಾಗಶಃ ಬದಲಿಸಿತು.

ಮೂವರು ತಜ್ಞರು ನೀಡಿದ ವಿವರಣೆಯನ್ನು ಪರಿಗಣಿಸಿದ್ದ ನ್ಯಾಯಾಲಯ, ಅವರ ಬಗ್ಗೆ ಕೇಂದ್ರ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಅನುದಾನ ಪಡೆಯುವ ಸಂಸ್ಥೆಗಳು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿತ್ತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...

ಬೀದರ್‌ | 125 ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ : ಸಚಿವ ಈಶ್ವರ ಖಂಡ್ರೆ

ಬೀದರ್ ನಗರದ ಸಮೀಪ 125 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ...