ಅತ್ಯಾಚಾರ ಹಾಸ್ಯವೇ? – ಪ್ರಣೀತ್ ಬಳಿಕ ಮಧುರ್ ವಿರ್ಲಿ ‘ರೇಪ್ ಜೋಕ್’ ವಿರುದ್ಧ ತೀವ್ರ ಆಕ್ರೋಶ

Date:

ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣೀತ್ ಮೋರ್ ಕಾಮೆಡಿ ಶೋನಲ್ಲಿ ನಡೆದ ‘370 ರೂ. ಬಿರಿಯಾನಿ’ ಎಂಬ ಹೇಳಿಕೆಯು ಸದ್ಯ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಮಧುರ್ ವಿರ್ಲಿ ಎಂಬ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ನ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಮಧುರ್ ವಿರ್ಲಿ ‘ರೇಪ್ ಜೋಕ್’ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅತ್ಯಾಚಾರ ಹಾಸ್ಯವೇ? ಎಂದು ನೆಟ್ಟಿಗರು ವಿರ್ಲಿಯನ್ನು ಪ್ರಶ್ನಿಸಿದ್ದಾರೆ. ಸದ್ಯ ವಿರ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನೇ ನಿಷ್ಕ್ರಿಯಗೊಳಿಸಿದ್ದಾರೆ.

- Advertisement -

ಮನರಂಜನೆ ಹೆಸರಲ್ಲಿ ವಿಕೃತ ಹಾಸ್ಯ ಮಾಡುವುದು ಸದ್ಯ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳ ಚಾಳಿಯಾಗಿದೆ. ಇಂತಹ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳು ತಮ್ಮೊಳಗಿರುವ ಸ್ತ್ರೀದ್ವೇಷ, ಪಿತ್ರಪ್ರಭುತ್ವ ಮನಸ್ಥಿತಿ, ಅಸೂಕ್ಷ್ಮತೆಯನ್ನು ತಮ್ಮ ಕೀಳುಮಟ್ಟದ ಜೋಕ್‌ಗಳಿಂದ ಬಹಿರಂಗಪಡಿಸುತ್ತಿದ್ದಾರೆ. ಇದಕ್ಕೆ ಪ್ರಣೀತ್ ಮೋರ್, ಮಧುರ್ ವಿರ್ಲಿ ಉದಾಹರಣೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಇದನ್ನು ಓದಿದ್ದೀರಾ? 370 ರೂ. ಬಿರಿಯಾನಿ ಬದಲು ಏನೋ ಬಯಸಿದ್ದೆ: ಪ್ರಣೀತ್‌ಗೆ ಮಹಿಳಾ ಆಯೋಗದ ನೋಟಿಸ್‌

ಮಧುರ್ ವಿರ್ಲಿ ಹಳೆಯ ವಿಡಿಯೋವೊಂದರಲ್ಲಿ ಮಾಡಿರುವ ‘ರೇಪ್‌ ಜೋಕ್’ ಈಗ ವೈರಲ್ ಆಗುತ್ತಿದೆ. ಹಾಸ್ಯಕ್ಕೂ ಮಿತಿಗಳಿವೆ ಎಂದು ನೆಟ್ಟಿಗರು ತೀಕ್ಷ್ಣವಾಗಿ ಹೇಳಿದ್ದಾರೆ. ಸದ್ಯ ಈ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ಗಳ ಕೆಟ್ಟ ಜೋಕ್‌ಗಳು ಮತ್ತು ಆ ಅಸೂಕ್ಷ್ಮತೆಯ ವಿಚಾರಗಳನ್ನೂ ಹಾಸ್ಯವಾಗಿ ಪರಿಗಣಿಸಿ ನಗುವ ಪ್ರೇಕ್ಷಕರ ಮನಸ್ಥಿತಿ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

ವಿರ್ಲಿಯ ಹೆಸರು ಚರ್ಚೆಗೆ ಬರುವ ಮುನ್ನ ದೇಶಾದ್ಯಂತ ಹಲವು ಮಂದಿಯ ಆಕ್ರೋಶವನ್ನು ಎದುರಿಸಿದ್ದು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣೀತ್ ಮೋರ್ ಮತ್ತು ಗುರುಗ್ರಾಮದ 23 ವರ್ಷದ ವೆಬ್ ಡೆವಲಪರ್ ಹಿಮಾಂಶು ಜಾಂಗ್ರಾ. ಗುರುಗ್ರಾಮದಲ್ಲಿ ನಡೆದ ಪ್ರಣೀತ್ ಮೋರ್‌ನ ಲೈವ್ ಶೋನಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಹಿಮಾಂಶು ಜಾಂಗ್ರಾ ತನ್ನ ಡೇಟಿಂಗ್ ಕತೆಯನ್ನು ಹಂಚಿಕೊಂಡಿದ್ದ. ಈ ವೇಳೆ ಯುವತಿಗೆ ತಾನು ಬಿರಿಯಾನಿ ಕೊಡಿಸಿದ್ದರಿಂದ ಅದನ್ನು ಆಕೆಯೊಂದಿಗೆ ಲೈಂಗಿಕ ಸುಖ ಪಡೆದು ವಸೂಲಿ ಮಾಡಬೇಕು ಎಂಬಂತೆ ಮಾತನಾಡಿದ್ದ.

“ಡೇಟಿಂಗ್ ಹೋದಾಗ ಯುವತಿಯೊಬ್ಬಳಿಗೆ ಚಿಕನ್ ಬಿರಿಯಾನಿ ಕೊಡಿಸಲು ನಾನು 370 ರೂಪಾಯಿ ಖರ್ಚು ಮಾಡಿದ್ದೆ. ಆಕೆ ಊಟದ ಬಳಿಕ ತನ್ನನ್ನು ಮನೆಗೆ ಬಿಡಲು ಹೇಳಿದಾಗ ‘ನಾನು 370 ರೂ. ಖರ್ಚು ಮಾಡಿದ್ದೇನೆ, ಆ ಹಣವನ್ನು ಹೇಗಾದರೂ ವಸೂಲಿ ಮಾಡಬೇಕಲ್ಲವೇ’ ಎಂದು ಅಂದುಕೊಂಡೆ” ಎಂದು ಹಿಮಾಂಶು ಹೇಳಿದ್ದ. ಅಂದರೆ 370 ರೂಪಾಯಿ ಬಿರಿಯಾನಿ ಕೊಡಿಸಿದ್ದಕ್ಕೆ ಆಕೆ ದೈಹಿಕವಾಗಿ ಸಹಕರಿಸಬಹುದು ಎಂದು ಹೇಳಿದ್ದ.

ಅಷ್ಟು ಮಾತ್ರವಲ್ಲದೆ ಆತ ಯುವತಿಯ ಒಪ್ಪಿಗೆಯಿಲ್ಲದೆ ಬಲವಂತವಾಗಿ ಚುಂಬಿಸಿದಾಗಿಯೂ ಹೇಳಿದ್ದ. ಈ ವೇಳೆ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಮತ್ತು ಕಾಮಿಡಿಯನ್ ಪ್ರಣೀತ್ ಮೋರ್ ಆತನ ಈ ಕೃತ್ಯವನ್ನು ವಿರೋಧಿಸುವ ಬದಲು ಜೋರಾಗಿ ನಕ್ಕು, ಚಪ್ಪಾಳೆ ತಟ್ಟಿದ್ದರು. ಬಳಿಕ ಈ ವಿಡಿಯೋ ಕ್ಲಿಪ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜಾಂಗ್ರಾ ಮತ್ತು ಮೋರ್ ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅವರ ವಿರುದ್ಧ ಎಫ್ಐಆರ್‌ ಕೂಡ ದಾಖಲಾಗಿದೆ.

ಹಳೆಯ ಸ್ಟ್ಯಾಂಡ್-ಅಪ್ ಕ್ಲಿಪ್ ಮತ್ತೆ ವೈರಲ್

ಈ ಘಟನೆ ನಡುವೆ ಮಧುರ್ ವಿರ್ಲಿಯ ಹಳೆಯ ‘ರೇಪ್ ಜೋಕ್’ ವಿಡಿಯೋ ಈಗ ವೈರಲ್ ಆಗಿದೆ. ಅತ್ಯಾಚಾರ ಮತ್ತು ಕೊಲೆಯಂತಹ ಸೂಕ್ಷ್ಮ ಹಾಗೂ ಗಂಭೀರ ವಿಷಯವನ್ನು ವಿರ್ಲಿ ಹಾಸ್ಯವೆಂಬಂತೆ ಬಿಂಬಿಸಿದ್ದಾರೆ. ವಿರ್ಲಿಯ ರೇಪ್‌ ಜೋಕ್‌ಗೆ ಅಲ್ಲಿದ್ದ ಪ್ರೇಕ್ಷಕರು ನಗುತ್ತಾ ಚಪ್ಪಾಳೆ ತಟ್ಟಿರುವುದು ಆಶ್ಚರ್ಯ!

ಕ್ರೂರ ಅಪರಾಧ ಮತ್ತು ಮಹಿಳೆಯರಿಗೆ ಉಂಟಾಗುವ ಮಾನಸಿಕ ಆಘಾತವನ್ನು ತಮಾಷೆಯಾಗಿ ಬಳಸಿಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. “ಇದು ಕಾಮಿಡಿ ಅಲ್ಲ, ವಿಕೃತಿ” ಎಂದು ಹಲವರು ಕಿಡಿಕಾರಿದ್ದಾರೆ.

“ಮಧುರ್ ವಿರ್ಲಿಯನ್ನು ಭೇಟಿ ಮಾಡಿ: ಅತ್ಯಾಚಾರ ಯಾವಾಗಿನಿಂದ ಜೋಕ್‌ ಆದವು? ಒಬ್ಬ ವ್ಯಕ್ತಿಗೆ ಉಂಟಾಗುವ ಮಾನಸಿಕ ಆಘಾತದ ಬಗ್ಗೆ ತಮಾಷೆ ಮಾಡದ ಹೊರತಾಗಿ ಇತರೆ ಜೋಕ್‌ಗಳಿಂದ ನೀವು ಜನರನ್ನು ನಗಿಸಲು ಸಾಧ್ಯವಾಗದಿದ್ದರೆ, ನೀವು ಹಾಸ್ಯಗಾರನೇ ಅಲ್ಲ. ನೋವು ಮತ್ತು ಸಂಕಟವನ್ನು ಅಗ್ಗದ ಹಾಸ್ಯಕ್ಕೆ ಬಳಸುವ ಬದಲು ಪ್ರಾಮಾಣಿಕ ಕೆಲಸವನ್ನು ಹುಡುಕಿ. ಇನ್ನೂ ಅಸಹ್ಯಕರ ಸಂಗತಿಯೆಂದರೆ, ಅಲ್ಲಿ ಕುಳಿತಿರುವ ಪ್ರೇಕ್ಷಕರೂ ಇದಕ್ಕೆ ನಗುತ್ತಿದ್ದಾರೆ. ಅದರಲ್ಲಿ ಕೆಲವು ಹುಡುಗಿಯರೂ ಇರಬಹುದು!” ಎಂದು ನೆಟ್ಟಿಗರೊಬ್ಬರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

“ಮಧುರ್ ವಿರ್ಲಿ ನಿಮಗೆ ನಾಚಿಕೆಯಾಗಬೇಕು! ಅತ್ಯಾಚಾರದ ಬಗ್ಗೆ ತಮಾಷೆ ಮಾಡುತ್ತೀರಾ? ಅಸಹ್ಯಕರವೆಂದರೆ ಪ್ರೇಕ್ಷಕರು ಚಪ್ಪಾಳೆ ತಟ್ಟುವುದು. ಮನುಷ್ಯರು ದಿನದಿಂದ ದಿನಕ್ಕೆ ತಾವು ಕೆಟ್ಟವರು ಎಂದು ಸಾಬೀತುಪಡಿಸುತ್ತಿದ್ದಾರೆ” ಎಂದು ಮತ್ತೋರ್ವ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ SIR:​’ಹಳೆಯ’ ಮತದಾರರಿಗೆ ‘ಹೊಸ’ ಫಾರ್ಮ್ ಏಕೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ತರಾಟೆ

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಹಿಂದಿನ ಮತದಾರರ...

ಡಯಾಜಿಯೊ ಇಂಡಿಯಾದ ನೂತನ ಜನರಲ್ ಕೌನ್ಸೆಲ್ ಆಗಿ ಸಮೀರ್ ಚುಘ್ ನೇಮಕ

ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಯಾಜಿಯೊ ಇಂಡಿಯಾ (Diageo India) ಸಂಸ್ಥೆಯ...

ಬೀದರ್‌ | ಶೈಕ್ಷಣಿಕ ಜ್ಞಾನದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ : ಜ್ಯೋತಿರ್ಮಯಾನಂದ ಸ್ವಾಮೀಜಿ

ವಿದ್ಯಾರ್ಥಿಗಳು ಶಿಸ್ತು, ಸಂಯಮ, ಪರಿಶ್ರಮ ಹಾಗೂ ಉತ್ತಮ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ...

ಈ ದಿನ ಸಂಪಾದಕೀಯ | ಎಸ್‌ಐಆರ್‌ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!

ಎಸ್‌ಐಆರ್‌ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ...