ಮಣಿಪುರ | ಆರು ನಾಗಾ ಒತ್ತೆಯಾಳುಗಳ ಹತ್ಯೆ; ಸಮುದಾಯದ ಪಾತ್ರ ಒಪ್ಪಿದ ಕುಕಿ-ಝೋ ಕೌನ್ಸಿಲ್

Date:

ಮಣಿಪುರದಲ್ಲಿ ಆರು ನಾಗಾ ಒತ್ತೆಯಾಳುಗಳ ಹತ್ಯೆಗೆ ಸಮುದಾಯದ ಸದಸ್ಯರು ಕಾರಣ ಎಂದು ಕುಕಿ-ಝೋ ಕೌನ್ಸಿಲ್ (KZC) ಗುರುವಾರ ಒಪ್ಪಿಕೊಂಡಿದೆ. ಈ ಸಂಬಂಧ KZC ಅಧ್ಯಕ್ಷ ಹೆನ್ಲಿಯಾಂಥಾಂಗ್ ಥಾಂಗ್ಲೆಟ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

- Advertisement -

ಈ ಕೃತ್ಯವನ್ನು ಖಂಡಿಸಿದ ಥಾಂಗ್ಲೆಟ್, ಅತಿಯಾಗಿ ಭಾವುಕವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಹೇಳಿದರು. ಹಾಗೆಯೇ “ನಾಗಾ ಸಮುದಾಯಕ್ಕೆ ಸೇರಿದ ಆರು ಮಂದಿಯನ್ನು ಕೊಲ್ಲುವ ಮೂಲಕ ಕುಕಿ-ಝೋಗಳು ದೊಡ್ಡ ತಪ್ಪು ಮಾಡಿದ್ದಾರೆ ಎಂದು ನಾನು ಒಪ್ಪುತ್ತೇನೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನೂ ಓದಿ: ಮಣಿಪುರ | ಕುಕಿ-ಝೋ ಬಿಜೆಪಿ ಶಾಸಕರೊಂದಿಗೆ ಬಿ ಎಲ್‌ ಸಂತೋಷ್‌ ಸಭೆ; BJP ಲೆಕ್ಕಾಚಾರವೇನು?

ಫೆಬ್ರವರಿಯಲ್ಲಿ ನಾಗಾ ಬಹುಸಂಖ್ಯಾತ ಉಖ್ರುಲ್ ಜಿಲ್ಲೆಯ ಲಿಟನ್ ಪ್ರದೇಶದಲ್ಲಿ ನಾಗಾ ಸಮುದಾಯಕ್ಕೆ ಸೇರಿದವರ ಮೇಲೆ ಹಲ್ಲೆ ನಡೆದಿತ್ತು. ಅದಾದ ಬಳಿಕ ಕುಕಿಗಳು ಮತ್ತು ನಾಗಾಗಳ ನಡುವೆ ಸಂಘರ್ಷ ಹೆಚ್ಚಾಗಿದೆ.

ಮೇ 13ರಂದು ಕುಕಿ ಬಹುಸಂಖ್ಯಾತ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಶಂಕಿತ ಉಗ್ರಗಾಮಿಗಳು ಹೊಂಚುದಾಳಿ ನಡೆಸಿ ಥಡೌ ಸಮುದಾಯದ ಮೂವರು ಚರ್ಚ್ ನಾಯಕರನ್ನು ಕೊಂದಿದೆ. ಈ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕುಕಿಗಳು ಮತ್ತು ನಾಗಾಗಳು ಪರಸ್ಪರರ ಮೇಲೆ ಈ ದಾಳಿ ಆರೋಪವನ್ನು ಹೊರಿಸಿದ್ದಾರೆ.

ಅದಾದ ಬಳಿಕ ಅದೇ ದಿನ, ರಾಜ್ಯದ ವಿವಿಧ ಭಾಗಗಳಿಂದ 20 ನಾಗಾ ಮತ್ತು 28 ಕುಕಿ ನಾಗರಿಕರ ಅಪಹರಣವಾಗಿದೆ. ಕಾಂಗ್ಪೋಕ್ಪಿ ಜಿಲ್ಲೆಯ ಲೈಲಾನ್ ವೈಫೇಯ್ ಗ್ರಾಮದಿಂದ ಅಪಹರಿಸಲ್ಪಟ್ಟ ನಾಗಾ ಸಮುದಾಯಕ್ಕೆ ಸೇರಿದ 18 ಮಂದಿಯ ಪೈಕಿ ಆರು ಮಂದಿಯ ಹತ್ಯೆ ನಡೆದಿದೆ.

ಮೇ 15ರಂದು, ಅಪಹರಣಕಾರರು 14 ಕುಕಿ ನಾಗರಿಕರು ಮತ್ತು 14 ನಾಗಾಗಳನ್ನು ಬಿಡುಗಡೆ ಮಾಡಿದ್ದರು. ಅದಾದ ಬಳಿಕ ನಾಗಾ ಸಮುದಾಯದ ಆರು ಮಂದಿಯ ಹತ್ಯೆ ನಡೆದಿರುವುದು ಬಹಿರಂಗವಾಗಿತ್ತು. ಜೂನ್ 12ರಂದು ಭದ್ರತಾ ಪಡೆಗಳು ಶೋಧ ನಡೆಸಿದಾಗ ಮೃತದೇಹ ಸಿಕ್ಕಿತ್ತು.

ಹಿಂಸಾಚಾರದ ನೆಲೆಯಾದ ಮಣಿಪುರ

2023ರ ಮೇ 3ರಿಂದ ಮಣಿಪುರದಲ್ಲಿ ಬಹುಸಂಖ್ಯಾತ ಮೈತೇಯಿ ಮತ್ತು ಬುಡಕಟ್ಟು ಸಮುದಾಯವಾದ ಕುಕಿ-ಝೋ ನಡುವೆ ಸುದೀರ್ಘವಾದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬಿಜೆಪಿ ಸರ್ಕಾರ ಈವರೆಗೂ ಈ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುವಲ್ಲಿ ಸಫಲವಾಗಿಲ್ಲ. ಬದಲಾಗಿ ಬಿಜೆಪಿ ರಾಜಕೀಯದಾಟದಲ್ಲೇ ತೊಡಗಿದೆ. ಇವೆಲ್ಲವುದರ ನಡುವೆ 2026ರಲ್ಲಿ ಮಣಿಪುರದಲ್ಲಿ ಹಿಂಸಾಚಾರ ಮತ್ತೊಂದು ಸಮುದಾಯಕ್ಕೆ ಪಸರಿಸಿದೆ. ಬುಡಕಟ್ಟು ಸಮುದಾಯ ನಾಗಾ ಮತ್ತು ಕುಕಿ ನಡುವೆ ಹಿಂಸಾಚಾರ ಆರಂಭವಾಗಿದೆ.

ಇದನ್ನೂ ಓದಿ: ಉರಿಯುತ್ತಿರುವ ಮಣಿಪುರ | ಕುಕಿ-ಮೇಟಿ ಸಮುದಾಯಗಳ ನಡುವಿನ ಘರ್ಷಣೆಯ ಮೂಲವೇನು?

ಕುಕಿ ಮತ್ತು ನಾಗಾ ಸಮುದಾಯಗಳ ನಡುವೆ ಗಡಿ ಮತ್ತು ವಾಸದ ಹಕ್ಕುಗಳ ವಿಚಾರವಾಗಿ ತೀವ್ರ ಘರ್ಷಣೆಗಳು ನಡೆಯುತ್ತಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮುಖ್ಯಮಂತ್ರಿಗಳ ಬೆಂಗಾವಲು ವಾಹನದ ಮೇಲಿನ ದಾಳಿ ಸೇರಿದಂತೆ ಪ್ರಮುಖ ಹಿಂಸಾಚಾರದ ಪ್ರಕರಣಗಳಲ್ಲಿ ಭಾಗಿಯಾಗಿದ್ದ 10 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸರ್ಕಾರವು ಅರಣ್ಯ ಸಂರಕ್ಷಣೆಯ ಹೆಸರಿನಲ್ಲಿ ಜಾರಿಗೊಳಿಸುತ್ತಿರುವ ನಿಯಮಗಳು ಮತ್ತು ಸ್ಯಾಟಲೈಟ್ ನಕ್ಷೆಗಳ ಮೂಲಕ ಬುಡಕಟ್ಟು ಹಳ್ಳಿಗಳನ್ನು ಅಕ್ರಮ ಒತ್ತುವರಿ ಎಂದು ಘೋಷಿಸುತ್ತಿರುವುದು ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ. ಪರಿಸ್ಥಿತಿ ಇಂದಿಗೂ ಬೂದಿ ಮುಚ್ಚಿದ ಕೆಂಡದಂತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...