ಮಣಿಪುರ | ಕುಕಿ-ಝೋ ಬಿಜೆಪಿ ಶಾಸಕರೊಂದಿಗೆ ಬಿ ಎಲ್‌ ಸಂತೋಷ್‌ ಸಭೆ; BJP ಲೆಕ್ಕಾಚಾರವೇನು?

Date:

ಡಿಸೆಂಬರ್ 14ರಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯು ಮಣಿಪುರದ ರಾಜಕೀಯಕ್ಕೆ ಹೊಸ ಆಯಾಮವನ್ನು ಕೊಡುವ ಪ್ಲಾನ್‌ ಮಾಡಿದಂತಿದೆ. ಈ ಸಭೆಯು ಮೂರು ಸುತ್ತುಗಳಲ್ಲಿ ನಡೆಯಿತು. ಮೊದಲ ಸುತ್ತಿನಲ್ಲಿ ಕುಕಿ-ಝೋ ಶಾಸಕರೊಂದಿಗೆ ಮಾತುಕತೆ ನಡೆಯಿತು, ನಂತರ ಮೈತೇಯಿ ಮತ್ತು ನಾಗಾ ಶಾಸಕರು ಸೇರಿದರು.

- Advertisement -

ಮಣಿಪುರ, ಭಾರತದ ಮಧ್ಯ ಭಾಗದ ಈ ಸಣ್ಣ ರಾಜ್ಯವು ಕಳೆದ ಕೆಲವು ವರ್ಷಗಳಿಂದ ಸಂಘರ್ಷ, ವಿಭಜನೆ ಮತ್ತು ರಾಷ್ಟ್ರಪತಿ ಆಳ್ವಿಕೆಯ ಚಿತ್ರಣಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಡಿಸೆಂಬರ್ 14, ರಂದು ದೆಹಲಿಯಲ್ಲಿ ನಡೆದ ಬಿಜೆಪಿಯ ಒಂದು ಸಭೆಯು ರಾಜಕೀಯದಲ್ಲಿ ಒಂದು ದೊಡ್ಡ ಬದಲಾವಣೆ ತರುವ ಸೂಚನೆಯನ್ನು ಕೊಟ್ಟಿದೆ. ಕಳೆದ ಎರಡು ವರ್ಷಗಳಿಂದ ಮೈತೇಯಿ ಸಮುದಾಯದ ಶಾಸಕರೊಂದಿಗೆ ದೂರವೇ ಇದ್ದ ಕುಕಿ-ಝೋ ಸಮುದಾಯದ ಬಿಜೆಪಿ ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಇಷ್ಟು ವರ್ಷಗಳು ಬಿಜೆಪಿಗೆ ‘ಬೇಡವಾದ’ ಮಣಿಪುರ ಈಗ ಯಾಕೆ ನೆನಪಿಗೆ ಬಂದಿದೆ? ಇಲ್ಲೂ ಬಿಜೆಪಿ ಲೆಕ್ಕಾಚಾರ ಏನಾದ್ರೂ ಇದಿಯಾ ಅನ್ನೋ ಅನುಮಾನ ಮಣಿಪುರ ಜನತಯಲ್ಲಿ ಮೂಡಿರೋದಂತೂ ಸತ್ಯ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಮಣಿಪುರದ ರಾಜಕೀಯ ಇತಿಹಾಸವು ಸಮುದಾಯಗಳ ನಡುವಿನ ಸಂಘರ್ಷಗಳಿಂದ ತುಂಬಿದ್ದು. 2023ರ ಮೇ ತಿಂಗಳಿನಲ್ಲಿ ಮೈತೇಯಿ (ಕಣಿವೆಯ ಜನರು) ಮತ್ತು ಕುಕಿ-ಝೋ (ಪರ್ವತದ ಜನರು) ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು ದೊಡ್ಡ ಸಾಮುದಾಯಿಕ ಸಂಘರ್ಷಕ್ಕೆ ಕಾರಣವಾದವು. ಇದರಿಂದಾಗಿ ಹತ್ಯೆ, ಅತ್ಯಾಚಾರ, ಸಾವಿರಾರು ಜನರು ನಿರ್ಗತಿಕರಾದರು. ಈ ಸಮಯದಲ್ಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ನಾಯಕತ್ವದಲ್ಲಿ ಇದ್ದರೂ, ಸಂಘರ್ಷವು ನಿಯಂತ್ರಣಕ್ಕೆ ಬರಲಿಲ್ಲ. ಅಂತಿಮವಾಗಿ, ಬಿರೇನ್‌ ಸಿಂಗ್‌ ರಾಜೀನಾಮೆ ಕೊಡುವಂತಾಯ್ತು, 2025ರ ಫೆಬ್ರುವರಿಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತು. ರಾಜ್ಯದ ರಾಜಕೀಯವು ಕೇಂದ್ರದ ಕೈ ಸೇರುತ್ತದೆ.

ಮಣಿಪುರ ವಿಧಾನಸಭೆಯಲ್ಲಿ 60 ಸದಸ್ಯರಿದ್ದರೂ, ಅದರಲ್ಲಿ ಬಿಜೆಪಿ 37 ಶಾಸಕರನ್ನು ಹೊಂದಿದೆ. ಆದರೆ, ಈ 37ರಲ್ಲಿ 7 ಮಂದಿ ಕುಕಿ-ಝೋ ಸಮುದಾಯಕ್ಕೆ ಸೇರಿದವರು. ಸಂಘರ್ಷದ ನಂತರ ಈ ಕುಕಿ ಶಾಸಕರು ಇಂಫಾಲ್‌ನಿಂದ ದೂರಾನೇ ಉಳಿದುಕೊಂಡಿದ್ದರು. ಮೈತೇಯಿ ಶಾಸಕರು ಸರ್ಕಾರ ಪುನಃಸ್ಥಾಪನೆಗಾಗಿ ಕೇಂದ್ರದ ಜೊತೆ ಮಾತುಕತೆಯಲ್ಲಿದ್ದರು. ಆದರೆ ಕುಕಿ ಶಾಸಕರು ಈ ವಿಚಾರದಕ್ಕೆ ತಲೆ ಹಾಕಲೇ ಇಲ್ಲ. ಇದು ಮಣಿಪುರದಲ್ಲಿ ಬಿಜೆಪಿಯ ಆಂತರಿಕ ವಿಭಜನೆಯನ್ನು ತೋರಿಸಿತ್ತು.

ಈಗ ಮುಖ್ಯವಾದ ವಿಷಯಕ್ಕೆ ಬರೋಣ. ಡಿಸೆಂಬರ್ 14ರಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯು ಮಣಿಪುರದ ರಾಜಕೀಯಕ್ಕೆ ಹೊಸ ಆಯಾಮವನ್ನ ಕೊಡುವ ಪ್ಲಾನ್‌ ಮಾಡಿದಂತಿದೆ. ಈ ಸಭೆಯು ಮೂರು ಸುತ್ತುಗಳಲ್ಲಿ ನಡೆಯಿತು. ಮೊದಲ ಸುತ್ತಿನಲ್ಲಿ ಕುಕಿ-ಝೋ ಶಾಸಕರೊಂದಿಗೆ ಮಾತುಕತೆ ನಡೆಯಿತು, ನಂತರ ಮೈತೇಯಿ ಮತ್ತು ನಾಗಾ ಶಾಸಕರು ಸೇರಿದರು. ಒಟ್ಟು 7 ಕುಕಿ-ಝೋ ಶಾಸಕರಲ್ಲಿ 4 ಮಂದಿ ಭಾಗವಹಿಸಿದರು. ಇದು 2023ರ ಸಂಘರ್ಷದ ನಂತರ ನಡೆದ ಮೊದಲ ಸಭೆಯಾಗಿದೆ. ಸಭೆಯಲ್ಲಿ 30ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದು, ಇದರಲ್ಲಿ ಮಾಜಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಮತ್ತು ವಿಧಾನಸಭಾ ಸ್ಪೀಕರ್ ಸೇರಿದ್ದರು.

meeting photos

ಕುಕಿ ಶಾಸಕರು ಮೈತೇಯಿ ಶಾಸಕರ ಪಕ್ಕದಲ್ಲಿ ಕುಳಿತರು, ಸಭೆಯ ನಂತರ  ಫೋಟೋಗೂ ಜೊತೆ ನಿಂತರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯ್ತು. ಬಿಜೆಪಿ ನಾಯಕರು ಶಾಸಕರಿಗೆ “ಸಮಾನತೆ ಮತ್ತು ಶಾಂತಿಗಾಗಿ ಕೆಲಸ ಮಾಡಿ” ಎಂದು ಸಲಹೆ ಕೊಟ್ಟರಂತೆ. 

ಈ ಸಭೆಯ ನಂತರ ಮಣಿಪುರದ ರಾಜಕೀಯದಲ್ಲಿ ಏನೆಲ್ಲಾ ಆಗಬಹುದು? 
ಮೊದಲನೆ ಸಾಧ್ಯತೆ : ಸರ್ಕಾರ ಪುನಃಸ್ಥಾಪನೆ ರಾಷ್ಟ್ರಪತಿ ಆಳ್ವಿಕೆಯು 6 ತಿಂಗಳಿಗಿಂತ ಹೆಚ್ಚು ಇದ್ದರೆ, ಕೇಂದ್ರ ಸರ್ಕಾರವು ವಿಧಾನಸಭೆಯನ್ನು ಮರುಗಟ್ಟಿಸಬಹುದು. ಆದರೆ, ಬಿಜೆಪಿಯ 37 ಶಾಸಕರು ಇದ್ದರೂ, ಕುಕಿ-ಝೋ ಶಾಸಕರ ಬೆಂಬಲವಿಲ್ಲದೆ ಸರ್ಕಾರ ರಚಿಸುವುದು ಕಷ್ಟ. ಈ ಸಭೆಯು ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾದಂತೆ ಕಾಣಿಸುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವಲ್ಲಿ ಸೋತು ಸುಣ್ಣವಾಗಿದ್ದ ಬಿರೇನ್ ಸಿಂಗ್ ಮತ್ತೆ ಮುಖ್ಯಮಂತ್ರಿಯಾಗಬಹುದು. 

ಎರಡನೆಯ ಸಾಧ್ಯತೆ: ಶಾಂತಿ ಒಪ್ಪಂದಗಳು- ಸಂಘರ್ಷದಲ್ಲಿ 200ಕ್ಕೂ ಹೆಚ್ಚು ಜನರು ಸತ್ತಿದ್ದಾರೆ, ಸಾವಿರಾರು ಜನರ ಮನೆಗಳು ನಾಶವಾಗಿದೆ. ಈಗಲೂ ಸಾವಿರಾರು ಜನ ನಿರಾಶ್ರಿತರ ಶಿಬಿರಗಳಲ್ಲಿ ಇದ್ದಾರೆ. ಎರಡು ವರ್ಷಗಳಿಂದ ಜನರ ಕಷ್ಟ ಸುಖ ಏನನ್ನೂ ಕೇಳದ ಬಿಜೆಪಿ ಈಗ ತಮ್ಮ ಅಧಿಪತ್ಯ ಸ್ಥಾಪನೆಗೋಸ್ಕರ ಮತ್ತೆ ಜನರನ್ನ ಮರಳು ಮಾಡುವಂತೆ ಈ ಸಭೆ ಕಾಣಿಸುತ್ತಿದೆ. 

ಬಿಜೆಪಿಗೆ ‘ಬೇಡವಾದ’ ಮಣಿಪುರ ಈಗ ಯಾಕೆ ನೆನಪಾಯ್ತು?
ಅಂತರ್‌ದಂಗಲ್‌ ಅನ್ನು ನಿಲ್ಲಿಸೋದು ಅಷ್ಟು ಸರಳವಲ್ಲ. ಬಿಜೆಪಿಯು 2017ರಲ್ಲಿ ಮಣಿಪುರದಲ್ಲಿ ಅಧಿಕಾರಕ್ಕೆ ಬಂದಾಗ, ರಾಜ್ಯವು ಅವರಿಗೆ ‘ಸುಲಭ ಗೆಲುವಿನ’ ಜಾಗವಾಗಿತ್ತು. ಆದರೆ, ಸಂಘರ್ಷದ ನಂತರ ಬಿಜೆಪಿಯು ರಾಜ್ಯವನ್ನು ‘ಸಮಸ್ಯೆಯ ಜಾಗ’ ಎಂದು ತಳ್ಳಿಹಾಕಿತು. ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ, ರಾಜ್ಯದ ಆರ್ಥಿಕತೆಯನ್ನು ನಿರ್ಲಕ್ಷ್ಯ ಮಾಡಿತು. ಆದರೆ, 2025ರ ಕೊನೆಯಲ್ಲಿ ಈ ಸಭೆಗಳನ್ನ ಮಾಡಿದ್ದಾದ್ರೂ ಯಾಕೆ? ಎಂಬ ಪ್ರಶ್ನೆಗೆ ಉತ್ತರ ರಾಜಕೀಯ ಒತ್ತಡ.

ರಾಷ್ಟ್ರೀಯ ರಾಜಕೀಯದ ಒತ್ತಡ
ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ, ಉತ್ತರ ಭಾಗದಲ್ಲಿ ನೆರೆಯ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಬಿಜೆಪಿಯು ಬಲಿಷ್ಠವಾಗಿದೆ. ಆದರೆ, ಮಣಿಪುರದ ಸಂಘರ್ಷವು ರಾಜಕೀಯದಲ್ಲಿ ‘ಮೈನಾರಿಟಿ ಸಮುದಾಯಗಳ ವಿರೋಧ’ ಎಂಬ ಚಿತ್ರಣವನ್ನು ರೂಪಿಸಿದೆ. ಬರೀ ಚಿತ್ರಣ ಮಾತ್ರ ಅಲ್ಲ, ಬಿಜೆಪಿ ಮೈನಾರಿಟಿಗಳ ವಿರುದ್ಧ ಅನ್ನೋದು ಈಗ ಗುಟ್ಟಾಗಿ ಉಳಿದಿಲ್ಲ. ವಿರೋಧ ಪಕ್ಷಗಳು ಇದನ್ನು ಬಳಸಿಕೊಂಡು ದಾಳಿ ಮಾಡುವ ಮೊದಲೇ ಇದನ್ನ ಸರಿಪಡಿಸೋಣ ಅಂತ ಬಿಜೆಪಿ ಪ್ಲಾನ್‌ ಮಾಡಿದಂತೆ ಕಾಣಿಸ್ತಿದೆ. ಆದ್ದರಿಂದ, ಬಿಜೆಪಿ ಕೇಂದ್ರ ನಾಯಕತ್ವವು ಈಗ ‘ಶಾಂತಿ ಮಹಾಭಿಯಾನ’ ಆರಂಭಿಸಿದೆ.

ಅಂತಿಮವಾಗಿ, ಇದು ಬಿಜೆಪಿಯ ಸ್ಟ್ರ್ಯಾಟಜಿ ಆಗಿದೆ. ಕಳೆದ ವರ್ಷಗಳು ‘ನಿರ್ಲಕ್ಷ್ಯದ’ ಕಾಲವಾಗಿದ್ದರೆ, ಈಗ ‘ಪುನಃ ತಮ್ಮ ಸರ್ಕಾರವನ್ನ ಸ್ಥಾಪಿಸುವ ಸಮಯ ಅಂತ ಬಿಜೆಪಿ ನೆನಪು ಮಾಡಿಕೊಂಡಿದೆ. ಆದರೆ, ಇದು ನಿಜವಾದ ಬದಲಾವಣೆಯೇ ಅಥವಾ ಚುನಾವಣೆಗೆ ಚಾಲನೆಯೇ? ಇದಕ್ಕೆ ಉತ್ತರವನ್ನು ಸಮಯವೇ ಕೊಡಬೇಕು. 

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾಗೆ ಹೆದರಿದಿರೇ?

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ...

ಭಾರತದಲ್ಲಿ 23 ವರ್ಷ, ಭಾರತೀಯರ ಹೃದಯದಲ್ಲಿ ಸಾವಿರ ವರ್ಷ ಬದುಕುವ ಭಗತ್ ಸಿಂಗ್

ʼನನ್ನನ್ನು ಕೊಲ್ಲಬಹುದು, ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲʼ ಎಂದು ಕೊನೆಯ...

ಅಶೋಕ್ ಸಿಂಘಲ್: ಕೋಮುವಾದದ ರೂವಾರಿಯ ವೈಭವೀಕರಣ – ಮಾರಿಕೊಂಡ ಮಾಧ್ಯಮಗಳು

ಬೆಂಗಳೂರಿನಿಂದ ದೆಹಲಿಯವರೆಗೆ ನಡೆಯುತ್ತಿರುವ ಅಶೋಕ್ ಸಿಂಘಲ್ ಜನ್ಮಶತಮಾನೋತ್ಸವದ ಆಚರಣೆಗಳು ಭಾರತದ ಪ್ರಜಾಸತ್ತಾತ್ಮಕ...