ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಅಪ್ರಾಪ್ತನ ಬಂಧನ; ಜಾಮೀನು ದೊರೆತರೂ ಸಿಗದ ಬಿಡುಗಡೆ

Date:

ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದ ಕಾರ್ಮಿಕ ಪ್ರತಿಭಟನೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿ ಎರಡು ತಿಂಗಳಾಗಿವೆ. ಆ ಪ್ರತಿಭಟನೆಗೂ ಬಾಲಕನಿಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದರೂ, ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇತ್ತೀಚೆಗೆ, ಆತನಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆದರೆ, ಜಾಮೀನಿನ ಮೊತ್ತವನ್ನೂ ಪಾವತಿಸಲಾಗದ ಬಡ ಕುಟುಂಬ ಆತನದ್ದಾಗಿದ್ದು, ಆತ ಇಂದಿಗೂ ಜೈಲಿನಲ್ಲಿಯೇ ಇರುವಂತಾಗಿದೆ. – ಇದು ಉತ್ತರ ಪ್ರದೇಶದ ಷಹಜಹಾನ್‌ಪುರ ಜಿಲ್ಲೆಯ ನೌಸೇನಾ ಮಡೈಯಾ ಗ್ರಾಮದ 16 ವರ್ಷದ ಬಾಲಕ ನಿತಿನ್ (ಹೆಸರು ಬದಲಾಯಿಸಲಾಗಿದೆ) ಹೃದಯವಿದ್ರಾವಕ ಪರಿಸ್ಥಿತಿ.

- Advertisement -

ನೋಯ್ಡಾದ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಿತಿನ್ ಅತ್ಯಂತ ಬಡ ಕುಟುಂಬಕ್ಕೆ ಸೇರಿದವರು. ಆತನ ತಂದೆ 2024 ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದು, ಪ್ರಸ್ತುತ ಆತನ ತಾಯಿ ಮತ್ತು ಅಣ್ಣ ದಿನೇಶ್ – ಇಬ್ಬರೂ ಪಂಜಾಬ್‌ನ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಉತ್ತರ ಕನ್ನಡ: ನಡುಮುರಿದ ಕಾಂಗ್ರೆಸ್ ಕಟ್ಟಬಲ್ಲರೆ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ...

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ...

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ ನಡುವೆ ತನ್ನದೇ ಆದ ಛಾಪು ಮೂಡಿಸಿದ ಮಹಿಳಾ ನಾಯಕಿಯರ ಪೈಕಿ ಕೆ.ಎಸ್. ನಾಗರತ್ನಮ್ಮ ಅವರ ಹೆಸರು ವಿಶಿಷ್ಟವಾಗಿ ಕಾಣಿಸುತ್ತದೆ. ಶಾಸಕಿಯಾಗಿ,...

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟಿರ್ಕಿ...

ನೋಯ್ಡಾದಲ್ಲಿ, ಏಪ್ರಿಲ್‌ನಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಾರ್ಮಿಕರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಆ ಸಮಯದಲ್ಲಿ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಿತಿನ್‌ನನ್ನು ಏಪ್ರಿಲ್ 14ರಂದು ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕಾನೂನುಬಾಹಿರವಾಗಿ ಗುಂಪು ಸೇರುವುದು, ದಂಗೆ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಆತ ಪ್ರತಿಭಟನೆಯಲ್ಲಿ ಭಾಗವಹಿಸಿಯೇ ಇರಲಿಲ್ಲ ಎಂದು ಕುಟುಂಬ ಮತ್ತು ವಕೀಲರು ಪ್ರತಿಪಾದಿಸಿದ್ದಾರೆ.

ನಿತಿನ್ ಅಪ್ರಾಪ್ತನಾಗಿದ್ದರೂ ಆತನನ್ನು ಗ್ರೇಟರ್ ನೋಯ್ಡಾದ ಕಸ್ನಾ ಜೈಲಿನಲ್ಲಿ ವಯಸ್ಕ ಕೈದಿಯಂತೆ ನಡೆಸಿಕೊಳ್ಳಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವೈದ್ಯಕೀಯ ತಪಾಸಣೆಯಲ್ಲಿ ಬಾಲಕ ಅಪ್ರಾಪ್ತನೆಂದು ದೃಢಪಟ್ಟ ಬಳಿಕ, ಮೇ 29 ರಂದು ನ್ಯಾಯಾಲಯವು ಆತನಿಗೆ ಜಾಮೀನು ನೀಡಿತು. ಆದರೂ, 45,000 ರೂಪಾಯಿಗಳ ಜಾಮೀನು ಮೊತ್ತವನ್ನು ಪಾವತಿಸಲು ಕುಟುಂಬಕ್ಕೆ ಸಾಧ್ಯವಾಗದ ಕಾರಣ ಆತ ಇಂದಿಗೂ ಜೈಲಿನಿಂದ ಬಿಡುಗಡೆಯಾಗಿಲ್ಲ.

ನಿತಿನ್ ಪರ ವಕೀಲ ಮಾಣಿಕ್ ಗುಪ್ತಾ ಅವರ ಪ್ರಕಾರ, ಏಪ್ರಿಲ್ 14 ರಂದು ನಿತಿನ್‌ಗೆ ಪಾರ್ಸೆಲ್ ಬಂದಿದೆ ಎಂದು ಕರೆ ಮಾಡಿ ಹೊರಗೆ ಕರೆಯಿಸಿ, ಪೊಲೀಸರು ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದಾರೆ. ವಯಸ್ಕರ ಜೈಲಿನಲ್ಲಿ ಸುಮಾರು ಎರಡು ತಿಂಗಳು ಅತನನ್ನು ಇರಿಸಿದ್ದಾರೆ. ಮಾತ್ರವಲ್ಲ, ಪೊಲೀಸರು ಆತನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಕೆಲವು ದಾಖಲೆಗಳನ್ನು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ. ವಯಸ್ಸನ್ನು ನಿರ್ಧರಿಸುವ ಪರೀಕ್ಷೆಯಲ್ಲಿ ನಿತಿನ್ ಅಪ್ರಾಪ್ತ ಎಂದು ದೃಢಪಡಿಸಿದರೂ, ನ್ಯಾಯಾಲಯವು ಜಾಮೀನು ನೀಡಿದರೂ, ಆತನನ್ನು ವಯಸ್ಕರ ಜೈಲಿನಲ್ಲೇ ಇರಿಸಲಾಗಿತ್ತು. ಇತ್ತೀಚೆಗೆ, ಜೂನ್ 12 ರಂದು ಆತನನ್ನು ಬಾಲಾಪರಾಧಿಗಳ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ” ಎಂದು ಆರೋಪಿಸಿದ್ದಾರೆ.

ನಿತಿನ್‌ನ ಆಧಾರ್ ಕಾರ್ಡ್‌ನಲ್ಲಿ ದಾಖಲಾಗಿರುವ ವಿವರಗಳ ಪ್ರಕಾರ, ಆತನಿಗೆ 16 ವರ್ಷ ವಯಸ್ಸು. ಆದರೆ ಪೊಲೀಸರು ಆತನ ಬಂಧನದ ದಾಖಲೆಗಳಲ್ಲಿ ವಯಸ್ಸನ್ನು 25 ವರ್ಷ ಎಂದು ನಮೂದಿಸಿದ್ದರು. ಈ ಗಂಭೀರ ತಪ್ಪಿನಿಂದಾಗಿಯೇ ಆತನನ್ನು ವಯಸ್ಕರ ಜೈಲಿಗೆ ಕಳುಹಿಸಲಾಗಿತ್ತು. ಬಂಧನದ ನಂತರ ಆತನ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅತನಿಗೂ ಕಾನೂನು ನೆರವು ಪಡೆಯಲು ಬಿಟ್ಟಿರಲಿಲ್ಲ. ಸುಮಾರು ಒಂದು ತಿಂಗಳ ನಂತರ ಮೇ 15 ರಂದು ವಕೀಲರು ಆತನನ್ನು ಭೇಟಿಯಾದರು. ನಿತಿನ್‌ನನ್ನು ಕೈಕೋಳ ಮತ್ತು ಸರಪಳಿಗಳಿಂದ ಕಟ್ಟಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು ಎಂದು ವಕೀಲರು ಖಚಿತಪಡಿಸಿದ್ದಾರೆ. ಇದು, ಬಾಲಾಪರಾಧಿಗಳಿಗೆ ಸಂಬಂಧಿಸಿದ ಬಾಲನ್ಯಾಯ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಾಲಯದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಕೀಲರು ಆರೋಪಿಸಿದ್ದಾರೆ.

image 148 1

ನಿತಿನ್ ವಿರುದ್ಧದ ಪ್ರಕರಣವನ್ನು ಆಲಿಸಿರುವ ಗೌತಮ್ ಬುದ್ಧ ನಗರದ ಸೆಷನ್ಸ್ ನ್ಯಾಯಾಲಯವು, ಎಫ್‌ಐಆರ್‌ನಲ್ಲಿ ಆತನ ಹೆಸರಿಲ್ಲ. ಘಟನೆಯಲ್ಲಿ ಆತನ ಪಾತ್ರವನ್ನು ಸಾಬೀತುಪಡಿಸಲು ಯಾವುದೇ ಸಿಸಿಟಿವಿ ಅಥವಾ ವಿಡಿಯೋ ಪುರಾವೆಗಳಿಲ್ಲ ಎಂಬುದನ್ನು ಗಮನಿಸಿದೆ. ಆದರೆ, ಜಾಮೀನು ದೊರೆತ ನಂತರ ವಕೀಲರು ಬಾಲನ್ಯಾಯ ಮಂಡಳಿಯನ್ನು ಸಂಪರ್ಕಿಸಿದಾಗ, ಆತನ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿರುವುದು ಬೆಳಕಿಗೆ ಬಂದಿದೆ.

ಈ ಲೇಖನ ಓದಿದ್ದೀರಾ?: SIR ಪೆಡಂಭೂತ | ಕೇರಳ ಮಾದರಿ ಅನುಸರಿಸಿದರೆ ನಮ್ಮ ಮತಗಳು ಸೇಫ್!

ಆ ಬಡ ಕುಟುಂಬಕ್ಕೆ 45,000 ರೂಪಾಯಿಗಳ ಬಾಂಡ್ ಮತ್ತು ಇಬ್ಬರು ಶ್ಯೂರಿಟಿಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಮೊದಲು 50,000 ರೂಪಾಯಿ ಇದ್ದ ಜಾಮೀನು ಮೊತ್ತವನ್ನು ವಕೀಲರ ಮನವಿಯ ಮೇರೆಗೆ ಕೇವಲ 5,000 ರೂಪಾಯಿ ಕಡಿತಗೊಳಿಸಲಾಯಿತು. ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಮಗುವನ್ನು ಜೈಲಿನಲ್ಲಿಡುವುದು ನ್ಯಾಯದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಕೀಲರು ಹೇಳಿದ್ದಾರೆ.

ಗಮನಾರ್ಹವಾಗಿ, ಸುಪ್ರೀಂ ಕೋರ್ಟ್‌ ತೀರ್ಪು ಹೇಳುವಂತೆ; ಜಾಮೀನು ಪರಿಸ್ಥಿತಿಗಳು ಆರೋಪಿಯ ಆರ್ಥಿಕ ವಾಸ್ತವತೆಯನ್ನು ಆಧರಿಸಿರಬೇಕು. ಹಣದ ಕೊರತೆಯ ಕಾರಣಕ್ಕಾಗಿ ಯಾರೂ ಜೈಲಿನಲ್ಲಿ ಕೊಳೆಯಬಾರದು. ಆದರೆ, ಇಲ್ಲಿ ಜಾಮೀನು ಹಣ ಪಾವತಿಸಲಾದ ಕಾರಣಕ್ಕಾಗಿಯೇ ಒಬ್ಬ ಅಪ್ರಾಪ್ತ ಬಾಲಕ ಇಂದಿಗೂ ಕಸ್ಟಡಿಯಲ್ಲೇ ಉಳಿದಿರುವುದು ದುರದೃಷ್ಟಕರ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಸೂದ್ ಅಜರ್ ತಲೆಗೆ 70 ಲಕ್ಷ ಬಹುಮಾನ ಘೋಷಿಸಿದ ಪಾಕ್: ‘ಕಣ್ಣೊರೆಸುವ ನಾಟಕ’ ಎಂದ ಭಾರತ

ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಹಿಡಿದುಕೊಟ್ಟವರಿಗೆ ನೀಡುವ...

ಪೊಲೀಸ್ ಕ್ರೌರ್ಯ: ಗರ್ಭಿಣಿ ಹೊಟ್ಟೆಗೆ ಒದ್ದ ಪೊಲೀಸರು; ತಾಯಿ ಸಾವು

ಕಳ್ಳತನದ ಆರೋಪದಲ್ಲಿ ಆರೋಪಿಯನ್ನು ಬಂಧಿಸಲು ಬಂದ ಪೊಲೀಸರು, ಆತನ ಪತ್ನಿ ಗರ್ಭಿಣಿಯ...