‘ಗಾಜಾ ವಿಷಯದಲ್ಲಿ ಮೋದಿ ಸರ್ಕಾರದ ಮೌನ ಒಪ್ಪಲು ಸಾಧ್ಯವಿಲ್ಲ’: ಸೋನಿಯಾ ಗಾಂಧಿ ವಾಗ್ದಾಳಿ

Date:

ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯ ಕುರಿತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತಳೆದಿರುವ ‘ಮೌನ ಮತ್ತು ನಿಷ್ಕ್ರಿಯತೆ’ಯನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ. ಗಾಜಾ ಮೇಲಿನ ಇಸ್ರೇಲ್‌ ಕ್ರೌರ್ಯದ ವಿಷಯದಲ್ಲಿ ಭಾರತದ ಮೌನವು ದೇಶದ ‘ನೈತಿಕತೆ’ ಮತ್ತು ‘ರಾಷ್ಟ್ರೀಯ ಹಿತಾಸಕ್ತಿ’ಗೆ ವಿರುದ್ಧವಾಗಿದೆ ಎಂದು ಅವರು ವಾದಿಸಿದ್ದಾರೆ.

- Advertisement -

ಇತ್ತೀಚೆಗೆ ಅವರು ಬರೆದಿದ್ದ ಲೇಖನವು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಆ ಲೇಖನದಲ್ಲಿ ಅವರು ಗಾಜಾದಲ್ಲಿ ಇಸ್ರೇಲ್ ನಡೆಸಿರುವ ಭೀಕರ ವಿನಾಶದ ಪ್ರಮಾಣ ಮತ್ತು ಅದರ ಕ್ರಮಗಳ ಹಿಂದಿರುವ ಜನಾಂಗೀಯ ಹತ್ಯೆಯ ಉದ್ದೇಶಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ರಾಜ್ಯದಲ್ಲಿ ಮಹಿಳೆಯರಿಗೇ ಹೆಚ್ಚು ನೋಟಿಸ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತು ಗಂಭೀರ ಆತಂಕಗಳನ್ನು ಹುಟ್ಟುಹಾಕಿದೆ. ರಾಜ್ಯದ 34 ಜಿಲ್ಲಾ ಮತ್ತು ನಗರ ಆಡಳಿತ ಘಟಕಗಳ...

ಮತ ಕಳ್ಳತನ | ಪ್ರಜಾಪ್ರಭುತ್ವದ ಕೊಲೆಗಡುಕರಿಗೆ ‘ಫಾರ್ಮ್-7’ ಮಾರಕ...

ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬನ್ನೇ ಮುರಿಯುವ, ಪ್ರಜೆಗಳ ಪವಿತ್ರವಾದ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ಅತ್ಯಂತ ಭೀಕರ ಮತ್ತು ಆಘಾತಕಾರಿ ಷಡ್ಯಂತ್ರವೊಂದು ದೇಶದಾದ್ಯಂತ ಬಹಿರಂಗವಾಗಿದೆ. ಆಡಳಿತರೂಢ ಬಿಜೆಪಿ ಮತ್ತು ಮೋದಿ-ಶಾ ಜೋಡಿಯ ಸೂತ್ರದ ಬೊಂಬೆ ಗ್ಯಾನೇಶ್‌...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್:...

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ₹5ಕ್ಕೆ ಉಪಹಾರ, ₹10ಕ್ಕೆ ಊಟ ನೀಡುವ ಇಂದಿರಾ ಕ್ಯಾಂಟಿನ್ ಯೋಜನೆ ಜನಸಾಮಾನ್ಯರಿಗೆ ಬಹುದೊಡ್ಡ ಆಸರೆಯಾಗಿದೆ. ಆದರೆ...

“ಗಾಜಾದಲ್ಲಿ ಮಕ್ಕಳು ಸಾವು-ನೋವುಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲಿ, ‘ಮಕ್ಕಳನ್ನು ಗುರಿಯಾಗಿಸುವುದು ಕೇವಲ ಪ್ರಾಸಂಗಿಕವಲ್ಲ, ಬದಲಿಗೆ ಅದೊಂದು ವ್ಯವಸ್ಥಿತ ಕಾರ್ಯತಂತ್ರದ ಕ್ರೌರ್ಯ’. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಹಿರಿಯ ಇಸ್ರೇಲಿ ನಾಯಕರು ಗಾಜಾವನ್ನು ‘ಸಂಪೂರ್ಣವಾಗಿ ನಿರ್ನಾಮ’ ಮಾಡಲು ಕರೆ ನೀಡಿರುವುದು ಜನಾಂಗೀಯ ಹತ್ಯೆಯ ಉದ್ದೇಶವನ್ನು ಬಿಂಬಿಸುತ್ತದೆ” ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ಗಾಜಾ ಮೇಲಿನ ಇಸ್ರೇಲ್ ದಾಳಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಪಾತ್ರವನ್ನು ಟೀಕಿಸಿರುವ ಸೋನಿಯಾ ಗಾಂಧಿ, “ಅಮೆರಿಕದ ಬೆಂಬಲದಿಂದಾಗಿ ಇಸ್ರೇಲ್ ಗಾಜಾದಲ್ಲಿ ತನ್ನ ಕ್ರೂರ ಕಾರ್ಯಾಚರಣೆಯನ್ನು ಮುಂದುವರಿಸಲು ಸಾಧ್ಯವಾಗಿದೆ. ಜಾಗತಿಕವಾಗಿ ಹಲವು ದೇಶಗಳು ಈಗಾಗಲೇ ಪ್ಯಾಲೆಸ್ತೀನ್‌ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಿದ್ದರೂ, ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಇಸ್ರೇಲ್‌ನ ನಿಯಮ ಉಲ್ಲಂಘನೆಗಳನ್ನು ಖಂಡಿಸಿದ್ದರೂ, ಭಾರತ ಮಾತ್ರ ಈ ವಿಷಯದಲ್ಲಿ ಮೌನ ವಹಿಸಿರುವುದು ಆಶ್ಚರ್ಯಕರವಾಗಿದೆ. ಗಾಜಾ ವಿಷಯದ ಕುರಿತಾದ ಜಸ್ಟಿಸ್ ಮುರಳೀಧರ್ ಅವರ ವರದಿಯನ್ನು ನರೇಂದ್ರ ಮೋದಿ ಸರ್ಕಾರವು ಸಂಪೂರ್ಣವಾಗಿ ನಿರ್ಲಕ್ಷಿಸಿದೆ” ಎಂದು ಅವರು ದೂರಿದ್ದಾರೆ.

“ಐತಿಹಾಸಿಕವಾಗಿ ಭಾರತವು ವಸಾಹತುಶಾಹಿ ವಿರೋಧಿ ಒಗ್ಗಟ್ಟು, ರಾಷ್ಟ್ರೀಯ ಸಾರ್ವಭೌಮತ್ವ ಹಾಗೂ ಅಂತರರಾಷ್ಟ್ರೀಯ ಶಾಂತಿಯ ಪರವಾಗಿ ನಿಂತಿತ್ತು. ಆದರೆ, ಈಗ ಪ್ಯಾಲೆಸ್ತೀನಿಯನ್ನರ ಸಂಕಷ್ಟದ ಬಗ್ಗೆ ನಿರಂತರ ಉದಾಸೀನತೆ ತೋರುತ್ತಿದೆ” ಎಂದು ಸೋನಿಯಾ ಗಾಂಧಿ ಕಿಡಿಕಾರಿದ್ದಾರೆ.

ಗಾಜಾ ಯುದ್ಧದ ಸಮಯದಲ್ಲಿ ಜಾಗತಿಕ ಗಮನ ಸೆಳೆದಿದ್ದ ಐದು ವರ್ಷದ ಬಾಲಕಿ ಹಿಂದ್ ರಜಾಬ್ ಸಾವಿನ ಕಥೆಯನ್ನು ಆಧರಿಸಿದ ಸಿನಿಮಾವನ್ನು ಭಾರತದಲ್ಲಿ ಬಿಡುಗಡೆ ಮಾಡಲು ವಿಳಂಬ ಮಾಡಿದ್ದನ್ನು ಟೀಕಿಸಿದ ಅವರು, “ಇಸ್ರೇಲ್‌ನ ಕ್ರೌರ್ಯಕ್ಕೆ ನೀರೆಯುವ ಕಾರಣಕ್ಕಾಗಿ ಸಿನಿಮಾವನ್ನು ತಡೆಯಲಾಗಿತ್ತು. ತೀವ್ರ ಸಾರ್ವಜನಿಕ ಒತ್ತಡದ ನಂತರವಷ್ಟೇ ಅದಕ್ಕೆ ಅನುಮತಿ ನೀಡಲಾಯಿತು” ಎಂದು ನೆನಪಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ವಿದ್ಯುತ್‌ ಖಾಸಗೀಕರಣ: ಉಚಿತ ಯೋಜನೆಗಳ ಅಂತ್ಯಕ್ಕೆ ನಾಂದಿ

“ಜಾಗತಿಕ ಜನಪ್ರಾಯವು ಬದಲಾಗುತ್ತಿರುವ ಈ ಸಮಯದಲ್ಲಿ ಭಾರತವು ಇಸ್ರೇಲ್‌ಗೆ ಹತ್ತಿರವಾಗುತ್ತಿರುವುದರ ಕಾರ್ಯತಂತ್ರದ ಪರಿಣಾಮಗಳು ಏನಾಗಲಿವೆ. ಮೋದಿ ಸರ್ಕಾರದ ಮೌನ ಮತ್ತು ನಿಷ್ಕ್ರಿಯತೆಯು ಕೇವಲ ನೈತಿಕವಾಗಿ ಮಾತ್ರವಲ್ಲದೆ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಕೋನದಿಂದಲೂ ಖಂಡನೀಯ. ಪ್ಯಾಲೆಸ್ತೀನ್, ಇರಾನ್ ಹಾಗೂ ಒಟ್ಟಾರೆ ಮಧ್ಯಪ್ರಾಚ್ಯದಂತಹ ನಮ್ಮ ಐತಿಹಾಸಿಕ ಮಿತ್ರರಾಷ್ಟ್ರಗಳಿಂದ ನಾವು ದೂರವಾಗಿದ್ದೇವೆ. ಈ ಪ್ರದೇಶದಲ್ಲಿ ಭಾರತ ಹೊಂದಿದ್ದ ಐತಿಹಾಸಿಕ ಬಾಂಧವ್ಯದ ಕಾರಣದಿಂದಾಗಿ ಪಡೆಯಬಹುದಾಗಿದ್ದ ರಾಜತಾಂತ್ರಿಕ ಮಧ್ಯಸ್ಥಿಕೆಗಾರನ ಸ್ಥಾನವನ್ನು ಪಾಕಿಸ್ತಾನ ಆಕ್ರಮಿಸಿಕೊಳ್ಳಲು ಮೋದಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ನಮ್ಮ ಕಾರ್ಯತಂತ್ರದ ಹಿತಾಸಕ್ತಿ ಮತ್ತು ನೈತಿಕತೆಯನ್ನು ಬಲಿಕೊಟ್ಟಿರುವುದರ ಹಿಂದೆ ಪ್ರಧಾನಿ ಮೋದಿ ಮತ್ತು ಪ್ರಧಾನಿ ನೆತನ್ಯಾಹು ನಡುವಿನ ವೈಯಕ್ತಿಕ ಸ್ನೇಹದ ಹೊರತಾಗಿ ಬೇರೇನೂ ಇಲ್ಲ” ಎಂದು ಸೋನಿಯಾ ತೀಕ್ಷ್ಣವಾಗಿ ಬರೆದಿದ್ದಾರೆ.

ಸೋನಿಯಾ ಗಾಂಧಿ ಲೇಖನಕ್ಕೆ ಕಾಂಗ್ರೆಸ್ ನಾಯಕರ ಬೆಂಬಲ

ಶನಿವಾರ ಈ ಲೇಖನವನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ ನಾಯಕರು ಸೋನಿಯಾ ಗಾಂಧಿ ಅವರ ನಿಲುವನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ಪ್ಯಾಲೆಸ್ತೀನ್ ಜನರ ಪರವಾಗಿ ಮೋದಿ ಸರ್ಕಾರದ ಮೌನವನ್ನು ಪ್ರಶ್ನಿಸಿರುವ ಈ ಲೇಖನವು, ಪ್ರಸ್ತುತ ವಿದೇಶಾಂಗ ನೀತಿಯು ಮಧ್ಯಪ್ರಾಚ್ಯದ ನಮ್ಮ ಹಳೆಯ ಮಿತ್ರರಾಷ್ಟ್ರಗಳಿಂದ ನಮ್ಮನ್ನು ಹೇಗೆ ದೂರ ಮಾಡಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ” ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು, “ಭಾರತವು ತನ್ನ ಸ್ವತಂತ್ರ ವಿದೇಶಾಂಗ ನೀತಿಯನ್ನು ಮರಳಿ ಪಡೆಯಬೇಕು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಹಾಗೂ ಗಾಜಾ ವಿಷಯದಲ್ಲಿ ನೈತಿಕ ಸ್ಪಷ್ಟತೆಯೊಂದಿಗೆ ಧ್ವನಿ ಎತ್ತಬೇಕು” ಎಂದು ಕರೆ ನೀಡಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು, “ಇಸ್ರೇಲ್ ಸರ್ಕಾರದ ಜನಾಂಗೀಯ ಹತ್ಯೆಯ ಕ್ರಮಗಳ ವಿರುದ್ಧ ಮತ್ತು ಲಕ್ಷಾಂತರ ಪ್ಯಾಲೆಸ್ಟೀನಿಯನ್ ಕುಟುಂಬಗಳ ಸ್ಥಳಾಂತರದ ವಿರುದ್ಧ ಧ್ವನಿ ಎತ್ತುವುದು ಭಾರತದ ನೈತಿಕ ಕರ್ತವ್ಯವಾಗಿದೆ” ಎಂದಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಮತಾ ಬ್ಯಾನರ್ಜಿ ರ‍್ಯಾಲಿಗೆ ತೆರಳುತ್ತಿದ್ದ TMC ಶಾಸಕನ ಕಾರಿಗೆ ಮೊಟ್ಟೆ, ಕಲ್ಲು ತೂರಾಟ

ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸಾರ್ವಜನಿಕ ಸಭೆಯಲ್ಲಿ...

ರಾಜ್ಯದ 17 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದೆ. ಪರಿಣಾಮ, ಕರ್ನಾಟಕದ 17 ಜಿಲ್ಲೆಗಳಲ್ಲಿ ಮುಂದಿನ ನಾಲ್ಕು...

ಗದಗ | ಅನುದಾನ ಬಾರದೆ ಕಿರುಕುಳ ಆರೋಪ: KRDIL ಎಂಜಿನಿಯರ್ ನಾಪತ್ತೆ

ಗದಗ ಜಿಲ್ಲೆಯ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್ ಡಿಐಎಲ್)...