ಬಾಗಲಕೋಟೆ ಜಿಲ್ಲೆಗೆ ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬಹುದೇ?

Date:

ಬೇರೆ ಬೇರೆ ಕಾರಣಗಳಿಂದ ಬಾಗಲಕೋಟೆ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾದರೆ, ಬೇರೆ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿ ಬರಬೇಕಾಗುತ್ತದೆ. ಈ ಹಿಂದೆ ಬೇರೆ ಬೇರೆ ಸರ್ಕಾರದ ಅವಧಿಯಲ್ಲಿ ಬೆಳಗಾವಿ, ಮೈಸೂರು, ಬಳ್ಳಾರಿ ಜಿಲ್ಲೆಯವರನ್ನು ಈ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ಕಂಡಿದೆ. ಈಗ ಜುಲೈನಲ್ಲಿ ವಿಸ್ತರಣೆಯಾಗಲಿರುವ ಡಿಕೆಶಿ ಸಚಿವ ಸಂಪುಟದಲ್ಲಿ ಈ ಜಿಲ್ಲೆಯವರಿಗೆ ಸಚಿವರಾಗುವ ಅವಕಾಶ ಆಕಸ್ಮಿಕವಾಗಿ ಮಿಸ್ ಆಯಿತೆಂದರೆ ಮತ್ತೆ ಬೇರೆ ಜಿಲ್ಲೆಯವರು ಉಸ್ತುವಾರಿ ವಹಿಸಿಕೊಳ್ಳುವ ಇತಿಹಾಸ ಪುನರಾವರ್ತನೆ ಆಗಬಹುದು.

ರಾಜ್ಯದ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸರ್ಕಾರದ ಎರಡನೇ ಕಂತಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಾಗಲಕೋಟೆ ಜಿಲ್ಲೆಗೆ ಸಚಿವ ಸ್ಥಾನ ಸಿಗಬಹುದೇ? ಸಿಕ್ಕರೆ ಯಾರಿಗೆ ಸಿಗಬಹುದು? ಈ ಜಿಲ್ಲೆಯವರಿಗೆ ಸಿಗದಿದ್ದರೆ ಬೇರೆ ಜಿಲ್ಲೆಯವರು ಇಲ್ಲಿಗೆ ಉಸ್ತುವಾರಿ ಸಚಿವರಾಗುವುದು ಅನಿವಾರ್ಯವಾಗಲಿದೆಯೇ? ಎಂಬ ಬಗ್ಗೆ ಇದೀಗ ಜಿಲ್ಲೆಯಲ್ಲಿ ಚರ್ಚೆಗಳು ಜೋರಾಗಿ ನಡೆದಿವೆ.

- Advertisement -

ಕಳೆದ ಮೇ ಮಾಸಾಂತ್ಯದಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆದ ದಿಢೀರ್ ಬೆಳವಣಿಗೆಯಿಂದ ರಾಜ್ಯ ಸರ್ಕಾರದ ನಾಯಕತ್ವದಲ್ಲಿ ಬದಲಾವಣೆಯಾಗಿ ಸಿದ್ದರಾಮಯ್ಯ ಅವರ ಸ್ಥಾನದಲ್ಲಿ ಡಿ ಕೆ ಶಿವಕುಮಾರ್ ಸಿಎಂ ಆದಮೇಲೆ ಬಾಗಲಕೋಟೆ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ . ಜೂನ್ 3ರಂದು ಸಿಎಂ ಆಗಿ ಡಿಕೆಶಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅವರೊಂದಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಈ ಜಿಲ್ಲೆಯ ಶಾಸಕರಿಗೆ ಅವಕಾಶ ಸಿಗಲಿಲ್ಲ. ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕಳೆದ ಮೂರು ವರ್ಷಗಳಿಂದ ಅಬಕಾರಿ ಇಲಾಖೆ ಸಚಿವರಾಗಿದ್ದ ಆರ್ ಬಿ ತಿಮ್ಮಾಪುರ ಈಗ ಮಾಜಿ ಆಗಿದ್ದಾರೆ. ಇದರಿಂದ ಕಳೆದ ಒಂದು ತಿಂಗಳಿನಿಂದ ಬಾಗಲಕೋಟೆ ಜಿಲ್ಲೆ ಸಚಿವರಿಲ್ಲದ ಜಿಲ್ಲೆಯಾಗಿದೆ. ನೆರೆಯ ವಿಜಯಪುರ, ಬೆಳಗಾವಿ ಜಿಲ್ಲೆಗಳಿಗೆ ತಲಾ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕಿದೆ. ಈಗ ಪ್ರಕೃತಿ ವಿಕೋಪ ನಿರ್ವಹಣೆಗೆ ಎಲ್ಲ 13 ಸಚಿವರಿಗೆ ವಿವಿಧ ಜಿಲ್ಲೆಗಳ ಮೇಲುಸ್ತುವಾರಿ ವಹಿಸಿದ್ದು, ಬಾಗಲಕೋಟೆ ಜಿಲ್ಲೆಗೆ ನೆರೆಯ ವಿಜಯಪುರ ಜಿಲ್ಲೆಯವರಾದ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರಿಗೆ ಮೇಲುಸ್ತುವಾರಿ ವಹಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ನೂರು ಡಿ ಕೆ ಶಿವಕುಮಾರ್‌ ಹೆಗ್ಗಡೆಯವರೊಂದಿಗಿದ್ದಾರೆ- ಹಳೆಯ ಹೇಳಿಕೆಗೆ...

ಅಕ್ರಮ ಶವ ಹೂತ ಪ್ರಕರಣದ ಎಸ್‌ಐಟಿ ತನಿಖೆ ನಡೆಯುತ್ತಿದ್ದಾಗ "ಇದು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ" ಎಂದು ಸದನದಲ್ಲಿ ವಿಪಕ್ಷಗಳು ಗದ್ದಲ ಮಾಡುತ್ತಿದ್ದಾಗ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು "ಧರ್ಮಸ್ಥಳದ ವಿರುದ್ಧ ಯಾರೆಲ್ಲ...

ಮುಂದಿನ ವಾರೊಪ್ಪತ್ತಿನಲ್ಲಿ ವಿಸ್ತರಣೆಯಾಗಲಿರುವ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯಲು ಜಿಲ್ಲೆಯ ಹಿರಿಯ ಶಾಸಕರು ತೀವ್ರ ಪ್ರಯತ್ನ ನಡೆಸಿದ್ದಾರೆ. ಮರಳಿ ಯತ್ನವ ಮಾಡು ಎನ್ನುವಂತೆ ಮಾಜಿ ಸಚಿವ ಆರ್ ಬಿ ತಿಮ್ಮಾಪುರ ಮತ್ತೆ ಸಚಿವ ಸಂಪುಟ ಸೇರಲು ಪ್ರಯತ್ನ ನಡೆಸಿದ್ದಾರೆ. ಅವರು ದೇವರ ಮೊರೆ ಹೋಗಿದ್ದು, ಟೆಂಪಲ್ ರನ್ ಮಾಡುತ್ತಿದ್ದಾರೆ. ಬೀಳಗಿ ಶಾಸಕ ಜೆ ಟಿ ಪಾಟೀಲ ಮತ್ತು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಸಂಪುಟ ಸೇರಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲೆಯ ಇನ್ನಿಬ್ಬರು ಯುವ ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ ಮತ್ತು ಉಮೇಶ್ ಮೇಟಿ ಮೊದಲ ಬಾರಿಗೆ ಶಾಸಕರಾಗಿರುವುದರಿಂದ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಗುವುದು ದುರ್ಲಭ ಎಂಬುದು ಗೊತ್ತಾಗಿ ಅವರು ಸಚಿವರಾಗುವ ಪೈಪೋಟಿಯಲ್ಲಿ ಇಲ್ಲ.

ಮುಂದಿನ 23 ತಿಂಗಳುಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗುವುದರಿಂದ ಸಚಿವರಾಗಲು ಇದು ಕೊನೆಯ ಅವಕಾಶ ಎಂದು ಭಾವಿಸಿರುವ ಜಿಲ್ಲೆಯ ಹಿರಿಯ ಶಾಸಕರು ಸಂಪುಟದಲ್ಲಿ ಅವಕಾಶ ಪಡೆಯಲು ಎಲ್ಲ ರೀತಿಯ ಕಸರತ್ತು ಮಾಡುತ್ತಿದ್ದಾರೆ. ಮತ್ತೆ ಸಚಿವ ಸಂಪುಟ ಸೇರಲಿಕ್ಕೆ ತಿಮ್ಮಾಪುರ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದೇ ಕೊನೆಯ ಅವಕಾಶ ಹೇಗಾದರೂ ಮಾಡಿ ಸಚಿವರಾಗಬೇಕೆಂದು ಜೆಟಿ ಮತ್ತು ಈ ಅವಕಾಶ ಮಿಸ್ ಮಾಡಿಕೊಳ್ಳದೆ ಸಚಿವ ಸ್ಥಾನ ಪಡೆಯಲೇಬೇಕೆಂದು ಕಾಶಪ್ಪನವರ ತಮ್ಮ ತಮ್ಮ ಹಂತದಲ್ಲಿ ಪ್ರಯತ್ನಗಳನ್ನು ನಡೆಸಿದ್ದಾರೆ.

ತಿಮ್ಮಾಪುರ ಅವರು ಎಸ್‌ಸಿ ಎಡಗೈ ಪಂಗಡದವರು, ಜೆಟಿ ರೆಡ್ಡಿ ಜನಾಂಗದವರು, ಕಾಶಪ್ಪನವರ ಪಂಚಮಸಾಲಿ ಸಮಾಜದವರು. ಈ ಮೂರು ಜಾತಿಗಳಿಗೆ ಸೇರಿದ ಬೇರೆ ಜಿಲ್ಲೆಗಳ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕರೆ ಈ ಜಿಲ್ಲೆಗೆ ಸಚಿವ ಸ್ಥಾನ ಸಿಗುವುದು ದುಸ್ತರವಾಗಬ‌ಹುದು. ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸಂಪುಟದಲ್ಲಿ ಇನ್ನೊಂದು ಸಚಿವ ಸ್ಥಾನ ಸಿಗುವುದಾದರೆ ಒಬಿಸಿ ಕೋಟಾ ಮತ್ತು ಮಹಿಳಾ ಕೋಟಾದಲ್ಲಿ ತನಗೆ ಅವಕಾಶ ಸಿಗಬಹುದೆಂಬ ಆಶಾಭಾವನೆ ಉಮಾಶ್ರೀ ಅವರಲ್ಲಿ ಚಿಗುರೊಡೆದಿದೆ. ಸದ್ಯದ ರಾಜಕೀಯ ಪರಿಸ್ಥಿತಿ ಭಿನ್ನವಾಗಿದ್ದು, 2023ಕ್ಕೂ ಈಗಿನ 2026ಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಸಿಎಂ ಸ್ಥಾನದಲ್ಲಿ ಈಗ ಸಿದ್ದರಾಮಯ್ಯ ಇಲ್ಲ. ಸಚಿವರಾಗುವ ರೇಸ್‌ನಲ್ಲಿ ಇರಬಹುದಾಗಿದ್ದ ಜಿಲ್ಲೆಯ ಹಿರಿಯ ಶಾಸಕರಾಗಿದ್ದ ಎಚ್ ವೈ ಮೇಟಿ ಅವರಿಲ್ಲ. ಸಿದ್ದರಾಮಯ್ಯ ಅವರಿಗೆ ಅಹಿಂದ ಹೋರಾಟ ಕಾಲದ ಪಕ್ಕಾ ಫಾಲೋವರ್ ಅಥವಾ ಹಿಂದಿನ ಜನತಾ ಪರಿವಾರದ ನಿಕಟ ಸ್ನೇಹಿತರು ಅಂತ ಹೇಳಬಹುದಾದ ಶಾಸಕರು ಈಗ ಜಿಲ್ಲೆಯಲ್ಲಿ ಯಾರೂ ಇಲ್ಲ. ಹಾಗೆಯೇ ಡಿ ಕೆ ಶಿವಕುಮಾರ್ ಅವರಿಗೆ ಮೊದಲಿನಿಂದಲೂ ಕಟ್ಟಾ ಫಾಲೋವರ್ ಆಗಿ ಗುರುತಿಸಿಕೊಂಡ ಶಾಸಕರೂ ಕೂಡ ಜಿಲ್ಲೆಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಇಂತಹ ಶಾಸಕರಿಗೆ ಸಚಿವ ಸ್ಥಾನ ಕೊಡಲೇಬೇಕು ಅಂತ ಡಿಕೆಶಿ ಆಗಲಿ, ಸಿದ್ದರಾಮಯ್ಯ ಆಗಲಿ ಗಟ್ಟಿಯಾಗಿ ಪಟ್ಟುಹಿಡಿದು ಕುಳಿತು ಸಚಿವರನ್ನಾಗಿ ಮಾಡುವ ಸಾಧ್ಯತೆಗಳಂತೂ ಇಲ್ಲ.

ಗಾಡ್ ಫಾದರ್‌ಗಳ ಕೊರತೆಯಿಂದಾಗಿಯೇ ಡಿಕೆಶಿ ಸಚಿವ ಸಂಪುಟದಲ್ಲಿ ಮೊದಲ ಹಂತದಲ್ಲಿ ಈ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬುದು ಸತ್ಯ ಸಂಗತಿ. ಈಗ ಯಾರೇ ಸಚಿವರಾದರೂ ಕಾಂಗ್ರೆಸ್ ಹೈಕಮಾಂಡ್ ಕೃಪಾಕಟಾಕ್ಷದಿಂದಲೇ ಅವಕಾಶ ಪಡೆಯಬೇಕು. ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಮೂವರು ಶಾಸಕರು ಕಟ್ಟಾ ಕಾಂಗ್ರೆಸ್ಸಿಗರು ಪಕ್ಷನಿಷ್ಠೆ ಹೊಂದಿದವರಾಗಿದ್ದಾರೆ. ಚುನಾವಣೆಯಲ್ಲಿ ಸೋತಾಗ ಮತ್ತು ಗೆದ್ದಾಗ ಕಾಂಗ್ರೆಸ್ ಪಕ್ಷ ಹೊರತುಪಡಿಸಿ ಬೇರೆ ಪಕ್ಷದ ಕಡೆ ಅಪ್ಪಿತಪ್ಪಿಯೂ ಕೂಡ ಇವರು ನೋಡಿದವರಲ್ಲ. ಇವರಲ್ಲಿ ಕಾಂಗ್ರೆಸ್ ಹೈಕಮಾಂಡ್ ಆಶೀರ್ವಾದದಿಂದ ಯಾರಿಗೆ ಚಾನ್ಸ್ ಸಿಗಬಹುದು ಎಂದು ನಿಖರವಾಗಿ ಹೇಳುವುದು ಕಷ್ಟ. ಈಗ ಸಚಿವರಾಗುವವರು 2028ರ ವಿಧಾನಸಭೆ ಚುನಾವಣೆವರೆಗೂ ಸಚಿವರಾಗಿರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಅಳೆದು ಸುರಿದು ತೂಗಿ ನೋಡಿ ಅಂತಿಮವಾಗಿ ನಿರ್ಧಾರಕ್ಕೆ ಬರಲಿದೆ. ಈಗ ರಾಜಕೀಯ ಪರಿಸ್ಥಿತಿ ಸಂಕೀರ್ಣವಾಗಿರುವುದರಿಂದ ಸಚಿವರ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಚಿವ ಸಂಪುಟದಲ್ಲಿ ಪ್ರಾದೇಶಿಕ ಸಮತೋಲನದ ಜತೆಗೆ ಜಿಲ್ಲಾವಾರು ಹಾಗೂ ಜಾತಿವಾರು ಪ್ರಾತಿನಿಧ್ಯ ಕೊಡಬೇಕಾಗುತ್ತದೆ. ಸಾಮಾಜಿಕ ನ್ಯಾಯಕ್ಕೂ ಆದ್ಯತೆ ನೀಡಬೇಕಾಗುತ್ತದೆ. ಈ ಮಾನದಂಡದಡಿ ಬಾಗಲಕೋಟೆ ಜಿಲ್ಲೆಯ ಯಾರಿಗೆ ಸಚಿವ ಸ್ಥಾನ ಕೊಡಬೇಕು ಯಾವ ಜಾತಿಯವರಿಗೆ ಕೊಡಬೇಕು ಎಂಬ ಪ್ರಶ್ನೆ ಕಾಂಗ್ರೆಸ್ ಹೈಕಮಾಂಡ್ ಮುಂದೆ ಇದೆ.

ಈ ಐದು ಎಂಎಲ್ಎಗಳು ಮತ್ತು ಒಬ್ಬರು ಎಂಎಲ್‌ಸಿ ಒಟ್ಟಾಗಿ ಹೋಗಿ ನಮ್ಮ ಜಿಲ್ಲೆಗೆ ಒಬ್ಬರಿಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿದರೆ ಖಂಡಿತ ಒಬ್ಬರಿಗೆ ಅವಕಾಶ ಸಿಗುತ್ತದೆ. ಆದರೆ ಅಂತಹ ಸಾಧ್ಯತೆಗಳು ವಿರಳ. ಜಿಲ್ಲೆಯ ಆರು ಮಂದಿ ಶಾಸಕರ ಮತ್ತು ಹಿರಿಯ ಮುಖಂಡರ ನಿಯೋಗ ಕರೆದುಕೊಂಡು ಹೋಗಿ ಒಬ್ಬರದೇ ಹೆಸರನ್ನು ಸಚಿವ ಸ್ಥಾನಕ್ಕೆ ಸೂಚಿಸುವ ಮತ್ತು ಕಾಂಗ್ರೆಸ್ ಹೈಕಮಾಂಡ್ ಮೇಲೆ ಪ್ರಭಾವ ಬೀರುವಂತಹ ಕಾಂಗ್ರೆಸ್ ಲೀಡರ್‌ಗಳು ಜಿಲ್ಲೆಯಲ್ಲಿ ಇಲ್ಲ. ಇನ್ನುಳಿದ ಎರಡು ವರ್ಷಗಳ ಅವಧಿ ಚುನಾವಣೆಪೂರ್ವ ದಿನಗಳಾಗುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಇದು ಯುದ್ಧದ ಸಿದ್ಧತೆಯ ಸಮಯ ಇದ್ದಂತೆ. ಯುದ್ಧಕ್ಕೆ ಈಗಿನಿಂದಲೇ ತಾಲೀಮು ಶುರು ಮಾಡಬೇಕಾದ ಸಂಕ್ರಮಣ ಕಾಲಘಟ್ಟ ಇದು.

ಈ ಜಿಲ್ಲೆಯ ಸಚಿವರಾದವರು ಎಲ್ಲ ಐದು ಶಾಸಕರನ್ನು ಒಗ್ಗಟ್ಟಿನಿಂದ ಒಟ್ಟಿಗೆ ಕರೆದುಕೊಂಡು ಹೋಗುವುದಲ್ಲದೆ ಬೇರೆ ಪಕ್ಷದ ಶಾಸಕರಿರುವ ಜಿಲ್ಲೆಯ ಎರಡು ಕ್ಷೇತ್ರಗಳನ್ನು ಮರಳಿ ಕಾಂಗ್ರೆಸ್ ಮಡಿಲಿಗೆ ತಂದುಕೊಡುವ ಸಂಘಟನಾ ಸಾಮರ್ಥ್ಯ ಹೊಂದಿರಬೇಕು. 2029ರ ಲೋಕಸಭೆ ಚುನಾವಣೆಗೆ ಅವರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬರಬೇಕೆಂಬುದು ಕಾಂಗ್ರೆಸ್ ಹೈಕಮಾಂಡ್‌ನ ಸಹಜ ನಿರೀಕ್ಷೆಯಾಗಿರುತ್ತದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಗ ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ಅಧಿಕಾರ ಕೇಂದ್ರಗಳು ಸೃಷ್ಟಿಯಾಗಿವೆ. ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್. ಈ ಮೂರು ಕೇಂದ್ರಗಳಲ್ಲಿ ಯಾವುದಾದರೂ ಒಂದು ಕಡೆಯಿಂದಲಾದರೂ ಸೂಚಿಸಲ್ಪಡುವ ಹೆಸರು ಈ ಜಿಲ್ಲೆಯಿಂದ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದೆ. ಆ ಅದೃಷ್ಟಶಾಲಿ ಶಾಸಕ ಯಾರಾಗುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಇದನ್ನೂ ಓದಿದ್ದೀರಾ? ನೀಟ್ ಅಕ್ರಮ, ಭ್ರಷ್ಟಾಚಾರದ ಬಗ್ಗೆ ಮಣ್ಣಿನ ಮಗನ ಜಾಣಮೌನ: ಎಚ್‌ಡಿಕೆಗೆ ನೆಟ್ಟಿಗರ ತರಾಟೆ

ಬೇರೆ ಬೇರೆ ಕಾರಣಗಳಿಂದ ಬಾಗಲಕೋಟೆ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾದರೆ, ಬೇರೆ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿ ಬರಬೇಕಾಗುತ್ತದೆ. ಈ ಹಿಂದೆ ಬೇರೆ ಬೇರೆ ಸರ್ಕಾರದ ಅವಧಿಯಲ್ಲಿ ಬೆಳಗಾವಿ, ಮೈಸೂರು, ಬಳ್ಳಾರಿ ಜಿಲ್ಲೆಯವರನ್ನು ಈ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ಕಂಡಿದೆ. ಈಗ ಜುಲೈನಲ್ಲಿ ವಿಸ್ತರಣೆಯಾಗಲಿರುವ ಡಿಕೆಶಿ ಸಚಿವ ಸಂಪುಟದಲ್ಲಿ ಈ ಜಿಲ್ಲೆಯವರಿಗೆ ಸಚಿವರಾಗುವ ಅವಕಾಶ ಆಕಸ್ಮಿಕವಾಗಿ ಮಿಸ್ ಆಯಿತೆಂದರೆ ಮತ್ತೆ ಬೇರೆ ಜಿಲ್ಲೆಯವರು ಉಸ್ತುವಾರಿ ವಹಿಸಿಕೊಳ್ಳುವ ಇತಿಹಾಸ ಪುನರಾವರ್ತನೆ ಆಗಬಹುದು.

IMG 20260325 WA0017
ಮುತ್ತು ನಾಯ್ಕರ
+ posts

ಹಿರಿಯ ಪತ್ರಕರ್ತರು, ಬಾಗಲಕೋಟೆ

ಪೋಸ್ಟ್ ಹಂಚಿಕೊಳ್ಳಿ:

ಮುತ್ತು ನಾಯ್ಕರ
ಮುತ್ತು ನಾಯ್ಕರ
ಹಿರಿಯ ಪತ್ರಕರ್ತರು, ಬಾಗಲಕೋಟೆ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...