ರಾಜಕೀಯದಲ್ಲಿ ಮುಸ್ಲಿಮರು ಸ್ವಂತ ಪ್ರಾತಿನಿಧ್ಯದತ್ತ ಗಮನಹರಿಸಲಿ, ಯಾರದ್ದೋ ಹಿಂಬಾಲಕರಾಗದಿರಿ: ಪ್ರಶಾಂತ್ ಕಿಶೋರ್ ಕರೆ

Date:

ಬಿಹಾರದ ಮುಸ್ಲಿಮರು ರಾಜಕೀಯದಲ್ಲಿ ತಮ್ಮ ಸಮುದಾಯದ ಸೂಕ್ತ ಪ್ರಾತಿನಿಧ್ಯ ಮತ್ತು ಹಕ್ಕುಗಳಿಗಾಗಿ ಸ್ವತಃ ಹೋರಾಡಬೇಕೇ ಹೊರತು, ಯಾವುದೇ ರಾಜಕೀಯ ಪಕ್ಷದ ‘ಹಿಂಬಾಲಕರು’ ಅಥವಾ ಪಟಾಲಂ ಆಗಿ ಉಳಿಯಬಾರದು ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಹಾಗೂ ಬಾಂಕಿಪುರ ಶಾಸಕ ಪ್ರಶಾಂತ್ ಕಿಶೋರ್ ಕರೆ ನೀಡಿದ್ದಾರೆ.

- Advertisement -

ರಾಜಧಾನಿ ಪಟಾನದ ಮುಸ್ಲಿಂ ಬಾಹುಳ್ಯದ ಸಬ್ಜಿಬಾಗ್ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಅಲ್ಪಸಂಖ್ಯಾತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರಿಗೆ ನ್ಯಾಯಯುತವಾದ ಸ್ಥಾನಮಾನ ಸಿಗಬೇಕಾಗಿದೆ ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಇದನ್ನೂ ಓದಿ: ಬಾಂಕಿಪುರ ಉಪಚುನಾವಣೆ: ಕಮಲದ ಕೋಟೆ ಛಿದ್ರವಾಗಲಿದೆಯೇ; ಪ್ರಶಾಂತ್ ಕಿಶೋರ್‌ಗೆ ಭಾರಿ ಮುನ್ನಡೆ

ಇತ್ತೀಚೆಗೆ ನಡೆದ ಬಾಂಕಿಪುರ ಉಪಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಅಲ್ಪಸಂಖ್ಯಾತ ಸಮುದಾಯಕ್ಕೆ ಧನ್ಯವಾದ ತಿಳಿಸಿದ ಪ್ರಶಾಂತ್ ಕಿಶೋರ್, “ಈವರೆಗೆ ಸಾಂಪ್ರದಾಯಿಕವಾಗಿ ಆರ್‌ಜೆಡಿಗೆ ಬೆಂಬಲ ನೀಡುತ್ತಿದ್ದ ಮುಸ್ಲಿಂ ಸಮುದಾಯದವರು ಈ ಬಾರಿ ಬದಲಾವಣೆ ಬಯಸಿ ನಮಗೆ ಬೆಂಬಲ ನೀಡಿದ್ದಾರೆ” ಎಂದು ಹೇಳಿದ್ದಾರೆ.

ಹಾಗೆಯೇ “ನಿಮ್ಮ ಹಿತೈಷಿಗಳು ಎಂದು ಹೇಳಿಕೊಳ್ಳುವ ನಾಯಕರ ಮಾತುಗಳನ್ನು ನಂಬಿ ಮರುಳಾಗಬೇಡಿ. ಪ್ರತಿಯೊಂದು ಸಾಮಾಜಿಕ ವರ್ಗವೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕು. ಅಲ್ಪಸಂಖ್ಯಾತರು ಇತರ ಪಕ್ಷಗಳ ಹಿಂದೆ ಹೋಗುವ ಬದಲು ರಾಜಕೀಯದಲ್ಲಿ ತಮಗೆ ಸಿಗಬೇಕಾದ ಸೂಕ್ತ ಪಾಲು ಹಾಗೂ ಪ್ರಾತಿನಿಧ್ಯಕ್ಕಾಗಿ ಸ್ವತಃ ಹೋರಾಟ ನಡೆಸಬೇಕು” ಎಂದು ಪ್ರಶಾಂತ್ ಕಿಶೋರ್ ಕಿವಿಮಾತು ಹೇಳಿದ್ದಾರೆ.

ಮುಂಬರುವ ಬಿಹಾರ ವಿಧಾನ ಪರಿಷತ್‌ನ 8 ಸ್ಥಾನಗಳ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ ಕಿಶೋರ್, “ಅಭ್ಯರ್ಥಿಗಳ ಪಟ್ಟಿ ಪಕ್ಷದ ನಿಷ್ಠಾವಂತ ನಾಯಕರ ಪಟ್ಯಂತೆ ಕಾಣುತ್ತಿಲ್ಲ, ಹಣ ಕೊಟ್ಟವರಿಗೆ ಮತ್ತು ಪಕ್ಷಾಂತರ್ಯ ಮಾಡಿದವರಿಗಷ್ಟೇ ಟಿಕೆಟ್ ನೀಡಲಾಗಿದೆ” ಎಂದು ಆರೋಪಿಸಿದ್ದಾರೆ.

ಈ ಹಿಂದೆ ಜನತಾ ದಳ ಯುನೆಟೆಡ್ (ಜೆಡಿಯು) ನಾಯಕರಾಗಿದ್ದಾಗಲೂ ಸಿಎಎ ಕಾಯ್ದೆ ವಿರುದ್ಧ ಧ್ವನಿ ಎತ್ತಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದ ಪ್ರಶಾಂತ್ ಕಿಶೋರ್, ಇದೀಗ ಜನ್ ಸುರಾಜ್ ಪಕ್ಷದ ಮೂಲಕ ಮುಸ್ಲಿಮರು, ಮಹಿಳೆಯರು ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ (ಇಬಿಸಿ) ಸೂಕ್ತ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ರಾಜಕೀಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​’ಮೊಬೈಲ್ ಒಡೆದು ಹಾಕಿ’: ‘ಡಿಜಿಟಲ್ ಅರೆಸ್ಟ್’ ಬಲೆಗೆ ಬೀಳುತ್ತಿರುವ ಸುಶಿಕ್ಷಿತರ ಬಗ್ಗೆ ಸುಪ್ರೀಂ ಬೇಸರ

ದೇಶಾದ್ಯಂತ ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' (Digital Arrest) ಪ್ರಕರಣಗಳ ಕುರಿತು ತೀವ್ರ...

2027ನೇ ಸಾಲಿನ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2027ನೇ ಸಾಲಿನ...

ಬೀದರ್‌ | ಶಿಕ್ಷಕರು ಬದುಕಿನ ಭವಿಷ್ಯ ರೂಪಿಸಿದ ಶಿಲ್ಪಿಗಳು: ಪತ್ರಕರ್ತ ಗೌರೀಶ ಅಕ್ಕಿ

ಶಿಕ್ಷಕರು ನಮಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡಿ, ಬದುಕಿನ ಭವಿಷ್ಯವನ್ನು ರೂಪಿಸಿದ...