ಸಾರ್ವಜನಿಕ ಭಾಷಣದ ಘನತೆ ಕಡಿಮೆ ಮಾಡಿದ ಮೊದಲ ಪ್ರಧಾನಿ ಮೋದಿ: ಮನ್‌ಮೋಹನ್‌ ಸಿಂಗ್

Date:

ದ್ವೇಷ ಹಾಗೂ ಅಸಂಸದೀಯ ಪದಗಳನ್ನು ಬಳಸಿ ನಿರ್ದಿಷ್ಟ ಸಮುದಾಯ ಹಾಗೂ ವಿಪಕ್ಷಗಳನ್ನು ಗುರಿ ಮಾಡಿರುವ ಹಾಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಪ್ರಧಾನಿ ಡಾ. ಮನ್‌ಮೋಹನ್‌ ಸಿಂಗ್‌ ಅವರು ವಾಗ್ದಾಳಿ ನಡೆಸಿದ್ದಾರೆ.

ಜೂನ್‌ 1ರಂದು ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಂಜಾಬ್‌ ಜನತೆಗೆ ಪತ್ರ ಬರೆದಿರುವ ಮನ್‌ಮೋಹನ್‌ ಸಿಂಗ್‌ ಅವರು, ಪ್ರಧಾನಿಯ ಅತ್ಯಂತ ಕೆಟ್ಟ ರೀತಿಯಿಂದ ಕೂಡಿದ ದ್ವೇಷ ಭಾಷಣಗಳು ಸಂಪೂರ್ಣವಾಗಿ ದೇಶವನ್ನು ವಿಭಜಿಸುತ್ತವೆ. ಸಾರ್ವಜನಿಕ ಭಾಷಣದ ಘನತೆ ಕಡಿಮೆ ಮಾಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ರಾಜಸ್ಥಾನದ ರ್ಯಾಲಿಯಲ್ಲಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ವಿತರಿಸುತ್ತಾರೆ ಎಂದಿದ್ದರು. ಅದಲ್ಲದೆ ಮನ್‌ಮೋಹನ್‌ ಸಿಂಗ್‌ ಇದೇ ರೀತಿ ಮಾತನಾಡಿದ್ದರು ಎಂದು ದ್ವೇಷಪೂರಿತವಾಗಿ ಹೇಳಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯವನ್ನು 2022ರಲ್ಲಿ ದ್ವಿಗುಣ ಮಾಡುವುದಾಗಿ ಹೇಳಿದ್ದರು. ಆದರೆ ಕಳೆದ 10 ವರ್ಷಗಳಲ್ಲಿ ರೈತರ ಆದಾಯ ಕುಗ್ಗಿದೆ. ರಾಷ್ಟ್ರೀಯ ಸರಾಸರಿಯಂತೆ ರೈತರ ಆದಾಯ ದಿನಕ್ಕೆ 27 ರೂ. ಇದೆ. ಪ್ರತಿ ರೈತರ ಸಾಲವು 27 ಸಾವಿರ ರೂ.ಇದೆ. ಇಂಧನ, ರಸಗೊಬ್ಬರ, ಕೃಷಿ ಸಂಬಂಧಿತ ಕನಿಷ್ಠ 35 ಸಲಕರಣಗಳಿಗೆ ಜಿಎಸ್‌ಟಿ ಹಾಗೂ ಕೃಷಿ ಆಮದು ರಫ್ತುವಿನಲ್ಲಿ ಜಾರಿಗೊಳಿಸಿರುವ ವಿಚಿತ್ರ ನಿರ್ಧಾರಗಳು ರೈತರ ವೆಚ್ಚವನ್ನು ದ್ವಿಗುಣಗೊಳಿಸಿದ್ದು, ರೈತ ಕುಟುಂಬಗಳ ಉಳಿತಾಯವನ್ನು ಹಾಳು ಮಾಡಿದೆ. ಇವುಗಳಿಂದ ನಾವು ಅವರನ್ನು ಸಮಾಜದ ಅಂಚಿನಲ್ಲಿ ತಳ್ಳಿದ್ದೇವೆ” ಎಂದು ಮನ್‌ಮೋಹನ್‌ ಸಿಂಗ್‌ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೋರಾಟಗಳನ್ನು ಹತ್ತಿಕ್ಕಿದ ಗೌಡರ ಹಾಸನದಲ್ಲಿ ಮತ್ತೆ ಮೊಳಗಿದ ಹೋರಾಟದ ಕೂಗು

“ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆ ಊಹಿಸಲಾಗದ ಪ್ರಕ್ಷುಬ್ದತೆಗೆ ಸಾಕ್ಷಿಯಾಗಿದೆ. ನೋಟು ಅಮಾನ್ಯೀಕರಣದ ದುರಂತ, ಜಿಎಸ್‌ಟಿ ಜಾರಿಗೊಳಿಸಿರುವಿಕೆ ಹಾಗೂ ಕೋವಿಡ್‌ 19 ಸಾಂಕ್ರಾಮಿಕ ಸಂದರ್ಭದಲ್ಲಿ ಅಸಮರ್ಪಕ ಆಡಳಿತದಿಂದ ಉಂಟಾದ ಶೋಚನೀಯ ಪರಿಸ್ಥಿತಿಯು ದೇಶವನ್ನು ಹಾಳುಗೆಡುವಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ರೈತರು ದೆಹಲಿ ಗಡಿಗಳಲ್ಲಿ ಹಲವು ತಿಂಗಳು ಒಟ್ಟಾಗಿ ನಡೆಸಿದ ಪ್ರತಿಭಟನೆಗಳಲ್ಲಿ 750ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದು, ಅದರಲ್ಲಿ ಬಹುತೇಕರು ಪಂಜಾಬ್‌ನವರೆ ಆಗಿದ್ದಾರೆ. ಪ್ರಧಾನಿಯವರು ಲಾಠಿ, ರಬ್ಬರ್‌ ಬುಲೆಟ್‌ನಿಂದ ರೈತರ ಮೇಲೆ ದಾಳಿ ನಡೆಸುವುದರ ಜೊತೆಗೆ ಸಂಸತ್ತಿನಲ್ಲಿ ಅನ್ನದಾತರ ವಿರುದ್ಧ ತೀರ ಕೆಳಮಟ್ಟದ ಭಾಷೆ ಪ್ರಯೋಗಿಸಿ ಅವರಿಗೆ ನೋವುಂಟು ಮಾಡಿದರು” ಎಂದು ಮನ್‌ಮೋಹನ್‌ ಸಿಂಗ್‌ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಿರಂಕುಶ ಆಡಳಿತದ ಪುನರಾವರ್ತಿತ ದಾಳಿಗಳಿಂದ ನಮ್ಮ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸಲು ಕೊನೆಯ ಅವಕಾಶ ಇದಾಗಿದ್ದು ಬಿಜೆಪಿ ವಿರುದ್ಧ ಮತ ಚಲಾಯಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

91 ವರ್ಷದ ಡಾ. ಮನ್‌ ಮೋಹನ್‌ ಸಿಂಗ್‌ ಅವರು ನರೇಂದ್ರ ಮೋದಿ ಪ್ರಧಾನಿಯಾಗುವ 2014ರ ಹಿಂದಿನ 10 ವರ್ಷದ ಅವಧಿಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದಲ್ಲಿ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿದ್ದರು. ಇದಕ್ಕೂ ಮೊದಲು ಕೇಂದ್ರ ಹಣಕಾಸು ಸಚಿವ, ವಿಪಕ್ಷ ನಾಯಕ ಹಾಗೂ ಆರ್‌ಬಿಐ ಗವರ್ನರ್‌ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಷೇರು ಮಾರುಕಟ್ಟೆಯ ಅಕ್ರಮದ ತನಿಖೆಗಾಗಿ ಟಿಎಂಸಿ ನಿಯೋಗದಿಂದ ಸೆಬಿ ಅಧಿಕಾರಿಗಳ ಭೇಟಿ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರ ನಿಯೋಗ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ(ಸೆಬಿ)...

ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ: ಬಕ್ರೀದ್ ಸಂಭ್ರಮಾಚರಣೆ ಮರೆತು ಪ್ರಯಾಣಿಕರ ರಕ್ಷಣೆಗಿಳಿದ ಮುಸ್ಲಿಮರು

ಪಶ್ಚಿಮ ಬಂಗಾಳದ ಐಕಾನಿಕ್ ಗಿರಿಧಾಮ ಡಾರ್ಜಿಲಿಂಗ್ ಬಳಿ ನಡೆದ ಕಾಂಚನಜುಂಗಾ ಎಕ್ಸ್‌ಪ್ರೆಸ್...

ಪಿಎಂ ಕಿಸಾನ್ | ರೈತರಿಗೆ ನೀಡುವ ‘ಪ್ರಸಾದ’ವಲ್ಲ ಕಾನೂನುಬದ್ಧ ಹಕ್ಕು: ಕಾಂಗ್ರೆಸ್

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ (ಪಿಎಂ ಕಿಸಾನ್) 17ನೇ ಕಂತಿನ...

ಫಲಿತಾಂಶದ ನಂತರ ಸರ್ಕಾರ ಉಳಿಸಲು ಹೆಣಗಾಡುತ್ತಿರುವ ಮೋದಿ : ರಾಹುಲ್ ಗಾಂಧಿ

ಲೋಕಸಭೆ ಚುನಾವಣೆಯ ನಂತರ ನರೇಂದ್ರ ಮೋದಿ 3.0 ಸರ್ಕಾರ ಬಹುಮತ ಪಡೆಯಲು...