ವಾರದ ಕವಿತೆ – ವಾಣಿ ಸತೀಶ್ | ಮೈ ನೆರೆದ ಆ ದಿನ

Date:

ಜಾವ ಐದರ ಗಳಿಗೆ ಸವಿಗನಸ ನಿದ್ದೆ
ಗೆಳತಿಯರ ಕೂಡಾಟ ನಿದ್ದೆಯಲೂ
ಕೇಕೆ ಕನವರಿಕೆ

- Advertisement -

ಇದ್ದಕ್ಕಿದ್ದಂತೆ ಸೊಂಟ ಹೊಟ್ಟೆಗಳಲ್ಲಿ
ಚುಳ್ಳನೇ ಚಳುಕೆದ್ದು
ನಿದ್ದೆಯಲೇ ನರಳಿದಳು
ಹದಿಮೂರರ ಪೋರಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಅವ್ವನ ಎದೆ ಮೇಲೆ ಏರಿದ್ದ
ಕಾಲ ಸಂದುಗಳಿಂದ
ತಣ್ಣನೆಯ ಹರಿವು
ಬೆಚ್ಚಿ ಕಣ್ಣು ತೆರೆದಳು ಬಾಲೆ
ಒದ್ದೊದ್ದೆ ಉಡುಪು ಒಳಗೆಲ್ಲ

ಓಡಿದಳು ಬಚ್ಚಲಿಗೆ
ಒಳಗೆಲ್ಲ ಕೆಂಪಾಗಿ
ಕಸಿವಿಸಿಯ ಎದೆ ಹೊತ್ತು
ಬಂದು ನಿಂತಳು ಹೆತ್ತವ್ವನೆದುರು

ತನ್ನ ಒಂಟಿ ಬದುಕಿನ ಸುತ್ತ
ಹರಿದಾಡೊ ಕಾಮುಕ ಕಣ್ಣುಗಳ
ಮೆಟ್ಟಿ ನಿಲ್ಲುವುದರಲ್ಲೇ
ಹೈರಾಣವಾಗಿದ್ದ ಅವ್ವ
ನಿದ್ದೆ ಮೆತ್ತಿದ ಕಣ್ಣ ತೆರೆದು
ದಿಂಬಿಗೆ ಮೊಗ ಒತ್ತಿ ಬಿಕ್ಕಿದಳು

ಧರ್ಮಶಾಸ್ತ್ರಕ್ಕೆ ಕೊರಳೊಡ್ಡಿ
ಕಟ್ಟಿಕೊಂಡವನು
ತನ್ನ ಒಳ-ಹೊರಗುಗಳ
ಹಕ್ಕಿನಲೇ ದೋಚಿ
ಎದೆಗೂಡ ಕನಸಿಗೆ ಕೆಂಡದ ಮಳೆ
ಸುರಿದು ಮಕರಂದವರಸಿ
ಹಾರಿಹೋದುದ ನೆನೆದು ಬಿಕ್ಕಿದಳು

ಕೊಟ್ಟವಳು ಕುಲಕೊರಗು
ಎಂದು ಹೊರಗಿಟ್ಟ
ಮನೆ ತುಂಬಿ ತುಳುಕುವ
ಅಣ್ಣ ತಮ್ಮರ ನೆನೆದು
ಬಿಕ್ಕಿದಳು

ಆಳಿಗೊಂದು ಕಲ್ಲೆಸೆದು
ಮೋಜಾಟ ಆಡುವ
ಕಾರುಣ್ಯ ಸತ್ತ ಸಮುದಾಯ
ನೆನೆದು ಬಿಕ್ಕಿದಳು

ಬಿಕ್ಕಿದಳು ಬಿಕ್ಕಿಯೇ ಬಿಕ್ಕಿದಳು
ಘಳಿಗೆಗೊಂದೊಂದು ನಿಟ್ಟುಸಿರ ಬಿಟ್ಟು

ಎಷ್ಟೋ ಸಮಯದ ಬಳಿಕ
ಅವ್ವ ಮೇಲೆದ್ದಳು
ಯುದ್ದಕ್ಕೆ ಸಜ್ಜಾದ ಯೋಧಳಂತೆ

ಬಿಟ್ಟ ನಿಟ್ಟುಸಿರನ್ನೆಲ್ಲ
ನಗುವಾಗಿ ಅರಳಿಸಿ
ಮೈ ದಡವಿ ಹೇಳಿದಳು
‘ನೀನು ದೊಡ್ಡವಳಾದೆ…’
ಹಾಲನ್ನ ನೀಡಿ ಹೂ ಮುತ್ತನಿಟ್ಟಳು

ಮನೆಯ ತುಂಬಿತ್ತು
ಋತುಮತಿಯ ಆರೈಕೆ, ಸಂಭ್ರಮ
ಕಾಸಿಗೆ ಕಾಸು ಜೋಡಿಸಿ
ತುಪ್ಪ, ಕೊಬ್ಬರಿ, ಚಿಗಳಿ, ಬೆಲ್ಲವ ತಂದು
ಹಾಲ್ಗಡಲಲ್ಲಿ ಮುಳುಗಿಸಿ
ಮೇಲೆತ್ತಿದಳು

ಮೊಗ್ಗ ಹೂವಾಗಿಸಿ
ಕಾದೇ ಕಾದಳು ಅವ್ವ
ಹೂತಿಟ್ಟ ನಿಧಿಯ
ಸರ್ಪ ಕಾದಂತೆ…

ಪೋಸ್ಟ್ ಹಂಚಿಕೊಳ್ಳಿ:

ವಾಣಿ ಸತೀಶ್
ವಾಣಿ ಸತೀಶ್
ತುಮಕೂರು ಜಿಲ್ಲೆಯ ತಿಪಟೂರಿನವರು. ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ನೀನಾಸಂನಿಂದ ರಂಗ ಶಿಕ್ಷಣ. ಸದ್ಯ ತಿಪಟೂರಿನ 'ಭೂಮಿ ಥಿಯೇಟರ್' ಮತ್ತು 'ಶ್ರೀ ನಟರಾಜ ನೃತ್ಯಶಾಲೆ'ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್ ಆಪ್ ಸರ್ಕಾರ ಉರುಳಿಸಲು ಮೋದಿ ಮಹಾಸಂಚು?

ಈ ಸಂಪೂರ್ಣ ರಾಜಕೀಯ ಬಿಕ್ಕಟ್ಟಿಗೆ ಕೇವಲ ಆಪ್‌ನ ಆಂತರಿಕ ದೌರ್ಬಲ್ಯಗಳಷ್ಟೇ ಕಾರಣವಲ್ಲ;...

ಟ್ರಂಪ್ ಆಡಳಿತದಿಂದ ಅಮೆರಿಕ ಬಿಡಲು ಮುಂದಾದ ಶೇ. 40ರಷ್ಟು ಭಾರತೀಯರು; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಟ್ರಂಪ್ ಆಡಳಿತದ 'ಅಮೆರಿಕನ್ನರಿಗೆ ಮಾತ್ರ ಅಮೆರಿಕ' ಎಂಬ ಉಗ್ರ ರಾಷ್ಟ್ರೀಯವಾದಿ ನಿಲುವು...

ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ; ಕರ್ನಾಟಕಕ್ಕೂ ಇದಕ್ಕೂ ಏನು ನಂಟು?

ಇಂದಿನ ಯುವಕರು ವಿರಾಟ್ ಕೊಹ್ಲಿ ಅವರ ಕೇವಲ ಅಭಿಮಾನಿಗಳಾಗುವುದಲ್ಲ. ಅವರು ಹೇಗೆ...

ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ

ರಸ್ತೆಗಳಲ್ಲಿ ಆಟೋ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಚಾಲಕರ ನಡುವೆ ಪದೇ...