ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ತಮ್ಮ ಫೋನ್ ಮತ್ತು ವಾಟ್ಸಾಪ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಭಾನುವಾರ ಬಾರಾಮತಿ ಶಾಸಕಿ ಸುಪ್ರಿಯಾ ಸುಳೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ತನಗೆ ಯಾವುದೆ ಕರೆ ಮಾಡದಂತೆ, ಯಾವುದೇ ಸಂದೇಶ ಕಳುಹಿಸದಂತೆ ವಿನಂತಿಸಿದ್ದಾರೆ.
“ನನ್ನ ಫೋನ್ ಮತ್ತು ವಾಟ್ಸಾಪ್ ಅನ್ನು ಹ್ಯಾಕ್ ಮಾಡಲಾಗಿದೆ. ಯಾರೂ ನನಗೆ ಸಂದೇಶ ಅಥವಾ ಕರೆ ಮಾಡಬೇಡಿ. ಈ ಬಗ್ಗೆ ಪೊಲೀಸ್ ದೂರು ನೀಡುತ್ತಿದ್ದೇನೆ. ದಯವಿಟ್ಟು ಇದನ್ನು ಗಮನಿಸಿ” ಎಂದು ಎಕ್ಸ್‌ನಲ್ಲಿ ಸುಪ್ರಿಯಾ ಸುಳೆ ಪೋಸ್ಟ್ ಮಾಡಿದ್ದಾರೆ.
ಎನ್‌ಸಿಪಿ (ಎಸ್‌ಪಿ) ನಾಯಕರ ಆಪ್ತ ಮೂಲಗಳ ಪ್ರಕಾರ, ಹ್ಯಾಕಿಂಗ್ ಬಗ್ಗೆ ಪೊಲೀಸ್ ದೂರು ಆನ್‌ಲೈನ್‌ನಲ್ಲಿ ದಾಖಲಾಗಿದೆ.
*** अत्यंत महत्वाचे ***
— Supriya Sule (@supriya_sule) August 11, 2024
माझा फोन आणि व्हॉटस्अप हॅक झाले आहे. कोणीही मला मेसेज किंवा फोन करून नये. याबाबत मी पोलीस तक्रार करत आहे. कृपया याची नोंद घ्यावी. – सुप्रिया सुळे