ಜನರ ದನಿ ಅಡಗಿಸಲು ಪ್ರಧಾನಿಯ ಆಕ್ರೋಶ; ವಿಪಕ್ಷಗಳ ಧಿಕ್ಕಾರದ ನಡುವೆಯೇ ಮೋದಿಯ ದ್ವೇಷದ ಭಾಷಣ

Date:

ದೇಶದ ಜ್ವಲಂತ ಸಮಸ್ಯೆಗಳಿಗೆ ಉತ್ತರಿಸಬೇಕಾದ ಹೊಣೆಗಾರಿಕೆಯನ್ನು ಮರೆತ ಪ್ರಧಾನಿ ನರೇಂದ್ರ ಮೋದಿ, ಗುರುವಾರ ರಾಜ್ಯಸಭೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ಹಳೆಯ ದ್ವೇಷವನ್ನೇ ಉಗುಳಿದ್ದಾರೆ. ವಿರೋಧ ಪಕ್ಷಗಳು ಸದನದಲ್ಲಿ ಜನರ ಪರವಾಗಿ ದನಿ ಎತ್ತಿ ಘೋಷಣೆಗಳನ್ನು ಕೂಗುತ್ತಿದ್ದರೂ, ಅದಕ್ಕೆ ಕ್ಯಾರೆ ಅನ್ನದ ಪ್ರಧಾನಿ, ತಮ್ಮ ಆಡಳಿತದ ವೈಫಲ್ಯಗಳನ್ನು ಮುಚ್ಚಿಹಾಕಲು ವಿಪಕ್ಷಗಳನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.

- Advertisement -

ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುವಾಗ, ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ವೇಳೆ ಪ್ರಧಾನಿ ಮೋದಿ, “ನೀವು ಎಷ್ಟೇ ಕೂಗಾಟ ನಡೆಸಿದರೂ ನನ್ನ ದನಿ ಅಡಗಿಸಲು ಸಾಧ್ಯವಿಲ್ಲ,” ಎಂದು ಹೇಳುವ ಮೂಲಕ, ವಿಪಕ್ಷಗಳ ಪ್ರಜಾಪ್ರಭುತ್ವಯುತ ಪ್ರತಿಭಟನೆಯನ್ನು ಅಣಕಿಸಿದರು. ಮಣಿಪುರ ಹಿಂಸಾಚಾರವಾಗಲಿ, ನಿರುದ್ಯೋಗವಾಗಲಿ ಅಥವಾ ಅದಾನಿ ವಿಚಾರವಾಗಲಿ— ಯಾವುದಕ್ಕೂ ಸ್ಪಷ್ಟ ಉತ್ತರ ನೀಡದ ಮೋದಿ, ಕೇವಲ ಭಾವನಾತ್ಮಕ ಮಾತುಗಳಲ್ಲಿ ಕಾಲಹರಣ ಮಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಮೈತ್ರಿಕೂಟದ ರಾಜಕೀಯದ ಬಗ್ಗೆ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಧಾನಿ ಕೀಳುಮಟ್ಟದ ಟೀಕೆಗಿಳಿದರು. “ಕಾಂಗ್ರೆಸ್ಸಿಗರು ಒಳಸಂಚುಕೋರರು, ಅವರು ದಲಿತರು ಮತ್ತು ಹಿಂದುಳಿದವರನ್ನು ಎತ್ತಿಕಟ್ಟುತ್ತಿದ್ದಾರೆ,” ಎಂದು ಆರೋಪಿಸಿದ ಮೋದಿ, ದೇಶವನ್ನು ಒಡೆಯುವ ಕೆಲಸವನ್ನು ವಾಸ್ತವದಲ್ಲಿ ಯಾರು ಮಾಡುತ್ತಿದ್ದಾರೆ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಲಿಲ್ಲ. ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರ ವಿರುದ್ಧವೂ ಪ್ರಧಾನಿ ವ್ಯಂಗ್ಯವಾಡಿದರು. “ಖರ್ಗೆ ಜೀ, ನೀವು ದೀರ್ಘಕಾಲದವರೆಗೆ ಬದುಕಿರಬೇಕು, ಆದರೆ ಅಲ್ಲಿಯವರೆಗೂ ನಮ್ಮ ಸರ್ಕಾರವೇ ಇರುತ್ತದೆ,” ಎಂದು ಹೇಳುವ ಮೂಲಕ ವಿಪಕ್ಷ ನಾಯಕರನ್ನು ಹೀಯಾಳಿಸಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಬೈಲ್ ಮೃತ್ಯು ಮೋಡಿಯಿಂದ ಮಕ್ಕಳನ್ನು ರಕ್ಷಿಸುವವರಾರು?

ಇದೇ ವೇಳೆ, ರವನೀತ್ ಸಿಂಗ್ ಬಿಟ್ಟು ಅವರು ಸಿಖ್ಖರನ್ನು ದೇಶದ್ರೋಹಿಗಳೆಂದು ಕರೆದಿದ್ದನ್ನು ರಾಹುಲ್ ಗಾಂಧಿ ಪ್ರಶ್ನಿಸಿದ ವಿಚಾರವನ್ನು ತಿರುಚಿದ ಪ್ರಧಾನಿ ಮೋದಿ, “ಸಿಖ್ಖರನ್ನು ದೇಶದ್ರೋಹಿಗಳೆಂದು ಕರೆದರೆ ದೇಶ ಸಹಿಸುವುದಿಲ್ಲ,” ಎಂದು ಬೊಬ್ಬಿರಿದರು. ಆದರೆ ವಾಸ್ತವದಲ್ಲಿ ಆಡಳಿತ ಪಕ್ಷದ ನಾಯಕರೇ ಅಲ್ಪಸಂಖ್ಯಾತರನ್ನು ಗುರಿಯಾಗಿಸುತ್ತಿರುವಾಗ, ಪ್ರಧಾನಿ ಅದನ್ನೇ ವಿಪಕ್ಷಗಳ ಮೇಲೆ ಹೊರಿಸಿ ನುಣುಚಿಕೊಳ್ಳಲು ಯತ್ನಿಸಿದರು.

ಪ್ರಧಾನಿಯವರ ಭಾಷಣದುದ್ದಕ್ಕೂ ವಿಪಕ್ಷಗಳು ಸುಮ್ಮನೆ ಕೂರಲಿಲ್ಲ. ಸರ್ಕಾರದ ಸುಳ್ಳುಗಳನ್ನು ಪ್ರತಿಭಟಿಸುತ್ತಾ, ‘ಸಂವಿಧಾನ ಉಳಿಸಿ’, ‘ಪ್ರಜಾಪ್ರಭುತ್ವ ಉಳಿಸಿ’ ಎಂಬ ಘೋಷಣೆಗಳನ್ನು ಮೊಳಗಿಸಿದರು. ಪ್ರಧಾನಿ ಎಷ್ಟೇ ಅಬ್ಬರಿಸಿದರೂ, ವಿಪಕ್ಷಗಳು ಜಗ್ಗದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವ ಮೂಲಕ, ಸಂಸತ್ತಿನಲ್ಲಿ ವಿರೋಧ ಪಕ್ಷದ ದನಿ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದವು. ಕೊನೆಗೆ ಪ್ರಧಾನಿಯ ಭಾಷಣದ ಏಕಪಕ್ಷೀಯ ಧೋರಣೆಯನ್ನು ಖಂಡಿಸಿ ವಿಪಕ್ಷಗಳು ಸಭಾತ್ಯಾಗ ಮಾಡಿದವು.

ಸ್ಪೀಕರ್‌ ಹಿಂದೆ ಅಡಗಿ ಕುಳಿತ ಪ್ರಧಾನಿ: ಪ್ರಿಯಾಂಕಾ ಗಾಂಧಿ

ಸಂಸತ್ತಿನ ಹೊರಗೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, “ಪ್ರಧಾನಿ ಮೋದಿಯವರಿಗೆ ಲೋಕಸಭೆಗೆ ಬಂದು ಸತ್ಯವನ್ನು ಎದುರಿಸುವ ಧೈರ್ಯವಿಲ್ಲ. ಕೇವಲ ಮೂವರು ಮಹಿಳಾ ಸಂಸದರು ಪ್ರತಿಭಟನೆಗೆ ನಿಂತಿದ್ದನ್ನು ಕಂಡು ಅವರು ಹೆದರಿದ್ದಾರೆ. ಈಗ ‘ಭದ್ರತಾ ಬೆದರಿಕೆ’ ಎಂಬ ಹಸಿ ಸುಳ್ಳನ್ನು ಹೇಳುವ ಮೂಲಕ ಸ್ಪೀಕರ್ ಓಂ ಬಿರ್ಲಾ ಅವರ ಹಿಂದೆ ಅವಿತು ಕುಳಿತಿದ್ದಾರೆ” ಎಂದು ಹೇಳಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ಸಮಸ್ಯೆಗಳ ಕುರಿತು ಗ್ರಾಮ ಸಭೆಯಲ್ಲಿ ಧ್ವನಿ ಎತ್ತಿದ ವಿದ್ಯಾರ್ಥಿಗಳು; ಅಧಿಕಾರಿಗಳ ಮೆಚ್ಚುಗೆ-ಭರವಸೆ

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ‘ವಿಶೇಷ ಗ್ರಾಮ ಸಭೆ’ಗಳಲ್ಲಿ ಪಾಲ್ಗೊಂಡು, ಪಂಚಾಯತ್ ಪ್ರತಿನಿಧಿಗಳು...

ಉತ್ತರಾಖಂಡ SIR ಅಂತಿಮ ಮತದಾರರ ಪಟ್ಟಿ ಪ್ರಕಟ: ಆದರೆ ಮುಗಿದಿಲ್ಲ ನೋಂದಣಿ ಪ್ರಕ್ರಿಯೆ

ಉತ್ತರಾಖಂಡ ರಾಜ್ಯದಲ್ಲಿ ನಡೆದ 'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್)...

ವಾಹನ ದಟ್ಟಣೆಯ ಸುಳಿಯಲ್ಲಿ ಮನಾಲಿ; ಪ್ರವಾಸೋದ್ಯಮದ ಒತ್ತಡಕ್ಕೆ ನಲುಗುತ್ತಿವೆಯೇ ಬೆಟ್ಟಗಳು?

ಮುಂಗಾರು ಮಳೆ ಕಡಿಮೆಯಾಗುತ್ತಿದ್ದಂತೆ ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಆಗಮನ...