ಈ ದಿನ ಸಂಪಾದಕೀಯ | ಮೊಬೈಲ್ ಮೃತ್ಯು ಮೋಡಿಯಿಂದ ಮಕ್ಕಳನ್ನು ರಕ್ಷಿಸುವವರಾರು?

Date:

ಕೈಗೆ ಮೊಬೈಲ್ ಬಂದಾಗ, ಪ್ರಪಂಚವೇ ಬೆರಳತುದಿಯಲ್ಲಿ ಎಂದು ಬೀಗಿದ್ದೆವು. ಸುಲಭವಾಗಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಬದುಕಿನೊಳಕ್ಕೇ ಬಿಟ್ಟುಕೊಂಡಿದ್ದೆವು. ಆದರೆ ಈಗ ಮೊಬೈಲ್ ಆಡಿಸಿದಂತೆ ಆಡುವ ಕೀಲುಗೊಂಬೆಗಳಾಗಿದ್ದೇವೆ. ಮುಂದುವರೆದರೆ, ಗಾಝಿಯಾಬಾದ್‌ನಲ್ಲಾದ ದುರ್ಘಟನೆ ನಮ್ಮ ಮನೆಯಲ್ಲೂ ಘಟಿಸಬಹುದು.

ಉತ್ತರ ಪ್ರದೇಶದ ಗಾಝಿಯಾಬಾದ್‌ನ ಮೂವರು ಅಪ್ರಾಪ್ತ ಸಹೋದರಿಯರು, ಆನ್‌ಲೈನ್ ಗೇಮಿಂಗ್ ಗೀಳಿಗೆ ಬಿದ್ದು, ಅದರಿಂದ ಹೊರಬರಲಾಗದೆ, 9ನೇ ಮಹಡಿ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಸಾರಿ ಪಪ್ಪಾ, ನಾವು ಕೊರಿಯಾ ಬಿಡಲಾಗುವುದಿಲ್ಲ. ಅದು ನಮ್ಮ ಜೀವನ, ನೀವು ಅದರಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ, ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.

- Advertisement -

ಆತ್ಮಹತ್ಯೆಗೆ ಪ್ರಚೋದಿಸುವ ಕೊರಿಯನ್ ಆನ್‌ಲೈನ್ ಗೇಮ್‌ನ ಚಟಕ್ಕೆ ಬಿದ್ದಿದ್ದ ಮೂವರು ಸಹೋದರಿಯರು, ಗೇಮ್‌ನ ಕೊನೆಯ 50ನೇ ಹಂತದ ಆತ್ಮಹತ್ಯೆ ಆಟವನ್ನು ಆಡಿದ್ದರು. ಅದರ ಗುಂಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 10 ವರ್ಷಗಳ ಕೆಳಗೆ ಬ್ಲ್ಯೂವೇಲ್ ಎಂಬ ಇಂಥದ್ದೇ ಆನ್‌ಲೈನ್ ಗೇಮಿಗೆ ನೂರಾರು ಜನ ಬಲಿಯಾಗಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ಇದನ್ನು ಓದಿದ್ದೀರಾ?: ಇಸ್ರೇಲ್ ಸಂಗದಲ್ಲಿ ‘ಶಿಕಾರಿ’- ಪ್ಯಾಲೆಸ್ತೀನ್ ಜೊತೆ ‘ಪರಾರಿ’; ಕಪಟ ನಾಟಕವಲ್ಲವೇ ಮೋದೀಜಿ?

ಯಾವ ಪೋಷಕರಿಗೇ ಆಗಲಿ, ತಾವು ಎತ್ತಿ ಆಡಿಸಿ, ಉಣಿಸಿ, ಬೆಳೆಸಿದ ಮಕ್ಕಳು ತಮ್ಮ ಕಣ್ಣೆದುರೇ ಉಸಿರು ಚೆಲ್ಲುವುದು ಸಹಿಸಲಸಾಧ್ಯವಾದ ಸಂಕಟ ತರುತ್ತದೆ ಮತ್ತು ಬದುಕಿರುವವರೆಗೂ ಕಾಡುತ್ತದೆ. ವಿಪರ್ಯಾಸಕರ ಸಂಗತಿ ಎಂದರೆ, ಆ ಅಪ್ರಾಪ್ತ ಸಹೋದರಿಯರ ಕೈಗೆ ಮೊಬೈಲ್ ಕೊಟ್ಟವರು ಅವರ ಪೋಷಕರೇ ಆಗಿದ್ದಾರೆ. ಆ ಜಾಗದಲ್ಲಿ, ಆ ಅಪರಾಧಿ ಸ್ಥಾನದಲ್ಲಿ ನಾವೂ ಇದ್ದೇವೆ.

ಇಂದು ಸಣ್ಣ ಮಗುವಿಗೆ ಅನ್ನ ತಿನ್ನಿಸುವುದರಿಂದ ಹಿಡಿದು ಲಾಲಿ ಹಾಡಿ ಮಲಗಿಸುವವರೆಗೆ ಮೊಬೈಲ್ ಅನಿವಾರ್ಯವಾಗಿದೆ. ಅಪ್ಪ-ಅಮ್ಮಂದಿರೇ ಮುಂದಾಗಿ ರೀಲ್ಸ್ ಮಾಡುವುದು, ಹಂಚಿಕೊಳ್ಳುವುದು, ಸಂಭ್ರಮಿಸುವುದು ಅತಿಯಾಗಿದೆ. ಆದರೆ, ಮೊಬೈಲ್ ಅಡಿಕ್ಷನ್‌ಗೆ ಬಿದ್ದ ಮಕ್ಕಳನ್ನು ಆ ಗೀಳಿನಿಂದ ಬಿಡಿಸುವುದು, ದೂರ ಇರಿಸುವುದು ಹೇಗೆ ಎಂಬುದು ಈಗ ಬದುಕಿನ ಬಹುದೊಡ್ಡ ಬಿಕ್ಕಟ್ಟಾಗಿದೆ. ಕುಟುಂಬಗಳ ಕಲಹಕ್ಕೆ ಕಾರಣವಾಗಿದೆ. ಶಾಂತಿ-ನೆಮ್ಮದಿ ಕಿತ್ತುಕೊಂಡು ಸಮಸ್ಯೆ ಸೃಷ್ಟಿಸುತ್ತಿದೆ. ಹಾಗೆಯೇ ಇದು, ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಮಾನಸಿಕ ಅಸ್ವಸ್ಥತೆ ಮತ್ತು ಆತ್ಮಹತ್ಯೆಯ ಆಲೋಚನೆಗಳಿಗೆ ಪ್ರಚೋದನೆ ನೀಡುತ್ತಿದೆ ಎಂಬ ತಜ್ಞರ ಆತಂಕವನ್ನು ನಿಜ ಮಾಡಿದೆ.

ಸುಮಾರು 20 ವರ್ಷಗಳ ಹಿಂದೆ, 2007ರಲ್ಲಿ ರಾಜ್ಯ ಸರ್ಕಾರ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ 16 ವರ್ಷದೊಳಗಿನ ಮಕ್ಕಳು ಮೊಬೈಲ್ ಬಳಸುವುದನ್ನು ನಿಷೇಧಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಶಾಲಾ ಆವರಣದಲ್ಲಿ ಮೊಬೈಲ್ ಬಳಸಿದರೆ, ಅದನ್ನು ಕಿತ್ತುಕೊಳ್ಳಲು ಶಿಕ್ಷಕರಿಗೆ ಅಧಿಕಾರ ನೀಡಲಾಗಿತ್ತು. ಆದರೆ, ಮೊಬೈಲ್ ಕಂಪನಿಗಳು ಕೋರ್ಟ್ ಮೆಟ್ಟಿಲು ಹತ್ತಿ, ನಿಷೇಧ ಹಿಂತೆಗೆದುಕೊಳ್ಳುವಂತೆ ನೋಡಿಕೊಂಡಿದ್ದವು.

ಮೊಬೈಲ್ ಕಂಪನಿಗಳ ಅದೃಷ್ಟಕ್ಕೆ ಕೊರೋನ ಅವಕಾಶಗಳ ದಿಡ್ಡಿಬಾಗಿಲನ್ನೇ ತೆರೆಯಿತು. ಆನ್‌ಲೈನ್ ಕ್ಲಾಸ್ ಆರಂಭವಾಗಿ ಅಧಿಕೃತವಾಗಿ ವಿದ್ಯಾರ್ಥಿಗಳಿಗೆ ಮೊಬೈಲ್ ಮುಖ್ಯ ಎಂಬ ಸಂದರ್ಭ ಸೃಷ್ಟಿಯಾಯಿತು. ಶಾಲಾ-ಕಾಲೇಜುಗಳ ಶಿಕ್ಷಕರು-ಅಧ್ಯಾಪಕರೇ ಮುಂದಾಗಿ, ಸಮಯ ಮತ್ತು ಸುರಕ್ಷತೆಯ ನೆಪದಲ್ಲಿ ಮೊಬೈಲ್ ಬೇಕು ಎಂದರು. ಪೋಷಕರು ಅನಿವಾರ್ಯವಾಗಿ ಓದುವ ಮಕ್ಕಳ ಕೈಗೆ ಮೊಬೈಲ್ ಕೊಟ್ಟರು. ಅವರ ಮೇಲೆ ನಿಗಾ ಇಡುವುದನ್ನು ಮರೆತರು.

ಶಾಲಾಮಕ್ಕಳ ಕೈಗೆ ಮೊಬೈಲ್ ಸಿಕ್ಕಾಗ, ಅವರು ಒಬ್ಬಂಟಿಯಾಗಿದ್ದಾಗ, ಉಚಿತ ಸಾಮಾಜಿಕ ವೇದಿಕೆ ಒದಗಿಸುವ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಕಿಕ್, ರೆಡ್ಡಿಟ್, ಸ್ನ್ಯಾಪ್ ಚಾಟ್, ಥ್ರೆಡ್ಸ್, ಎಕ್ಸ್, ಯೂಟ್ಯೂಬ್ ಮತ್ತು ಟ್ವಿಚ್‌ಗಳ ದಾಸರಾದರು. ಸುಲಭಕ್ಕೆ ಸಿಗುವ ಪೋರ್ನ್ ಸೈಟ್‌ಗಳನ್ನು ಜಾಲಾಡುವ, ಅದರ ಗೀಳಿಗೆ ಬೀಳುವ, ಓದಿನಲ್ಲಿ ಹಿಂದೆ ಬೀಳುವ, ಒಂಟಿಯಾಗಿರುವ ಮನಸ್ಥಿತಿಗೆ ಬಂದರು. ಮುಂದುವರೆದು ಆನ್‌ಲೈನ್ ಆಟಗಳಲ್ಲಿ ಮುಳುಗಿಹೋಗುವ, ಬೆಟ್ಟಿಂಗ್ ದಂಧೆಗಳಲ್ಲಿ ಭಾಗಿಯಾಗಿ ಹಣ ಕಳೆದುಕೊಳ್ಳುವ, ಸೋತಾಗ ಮಾನಸಿಕ ಖಿನ್ನತೆಗೆ ಜಾರುವ ಸ್ಥಿತಿ ಕೂಡ ಸಾಮಾನ್ಯವಾಗಿದೆ.   

ಮುಂದುವರೆದು ಈಗ, ಎಲಾನ್ ಮಸ್ಕ್ ಒಡೆತನದ ಎಕ್ಸ್(ಟ್ವಿಟರ್)ನಲ್ಲಿ ಉಚಿತವಾಗಿ ಸಿಗುವ ಕೃತಕ ಬುದ್ಧಿಮತ್ತೆ ಸಾಧನ ‘ಗ್ರೋಕ್’ ಮೂಲಕ ಲೈಂಗಿಕವಾಗಿ ತಿರುಚಲಾದ ಚಿತ್ರಗಳನ್ನು ಸೃಷ್ಟಿಸುವುದು ಕೂಡ ಚಾಲ್ತಿಗೆ ಬಂದಿದೆ. ಅವು ಮುಖ್ಯವಾಗಿ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿವೆ. ಬೆದರಿಸುವುದಕ್ಕೆ, ದುರುಪಯೋಗಕ್ಕೆ ಬಳಕೆಯಾಗುತ್ತಿವೆ. ನಿಯಂತ್ರಣವಿಲ್ಲದ ಡಿಜಿಟಲ್ ಲೋಕದಿಂದಾಗಿ ಇಂದು ನಮ್ಮ ಮಕ್ಕಳು ಒಂಟಿಯಾಗಿ ಎದುರಿಸಲಾಗದಂತಹ ಅಪಾಯಕಾರಿ ಜಾಗಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ವ್ಯಸನ, ನಿಂದನೆ, ಅಶ್ಲೀಲತೆ, ಮಾನಸಿಕ ಖಿನ್ನತೆ ಮತ್ತು ಹಿಂಸೆಯ ತಾಣಗಳಾಗುತ್ತಿವೆ. ಜೊತೆಗೆ ಸಾಮಾಜಿಕ ಜಾಲತಾಣ ಕಂಪನಿಗಳು ಕೇವಲ ಲಾಭಕ್ಕಾಗಿ ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ತಪ್ಪು ಮಾಹಿತಿ ಮತ್ತು ದ್ವೇಷವನ್ನು ಹರಡುವ ವೇದಿಕೆಗಳಾಗಿ ಮಾರ್ಪಟ್ಟಿವೆ.

ಇದೆಲ್ಲ ಅತಿಯಾಯಿತು ಎನಿಸಿದಾಗ, ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ಎಚ್ಚೆತ್ತುಕೊಂಡಿತು. ತಂತ್ರಜ್ಞಾನ ಬಳಕೆ, ಗೌಪ್ಯತೆ, ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿತು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಪ್ರವೇಶವನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತಂದಿತು. ವಿಚಲಿತಗೊಂಡ ವಿಶ್ವದ ಕೆಲವು ದೊಡ್ಡ ತಂತ್ರಜ್ಞಾನ ಕಂಪೆನಿಗಳು ಕೋರ್ಟ್ ಮೆಟ್ಟಿಲು ಹತ್ತಿದವು. ಆದರೆ ಸರ್ಕಾರ ದೃಢ ನಿಲುವು ತಾಳಿತು. ಅದರ ಫಲವಾಗಿ ಆಸ್ಟ್ರೇಲಿಯಾದಲ್ಲಿ ಈಗ ಮಕ್ಕಳಿಗೆ ಸೇರಿದ ಸುಮಾರು 4.7 ಮಿಲಿಯನ್ ಖಾತೆಗಳು ರದ್ದುಗೊಂಡಿವೆ. ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮತ್ತು ಥ್ರೆಡ್‌ಗಳನ್ನು ಹೊಂದಿರುವ ಮೆಟಾ, ನಿಷೇಧ ಜಾರಿಗೆ ಬಂದ ಮರುದಿನವೇ ಸುಮಾರು 5,50,000 ಖಾತೆಗಳನ್ನು ತೆಗೆದುಹಾಕಿದೆ. ಇದೀಗ ಫ್ರಾನ್ಸ್, ಡೆನ್ಮಾರ್ಕ್, ಆಸ್ಟ್ರಿಯಾ ಮತ್ತು ಬ್ರಿಟನ್ ಸರ್ಕಾರಗಳು ಕೂಡ ಇದೇ ರೀತಿಯ ಕಾನೂನು ಜಾರಿಗೆ ತರಲು ಚಿಂತಿಸುತ್ತಿವೆ.

ಮೊನ್ನೆ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ‘ನಮ್ಮ ಮಕ್ಕಳು ಒಬ್ಬಂಟಿಯಾಗಿರುವಾಗ ಹೋಗಬಾರದಂತಹ ವಾತಾವರಣಕ್ಕೆ ಹೋಗುತ್ತಿದ್ದಾರೆ. ನೋಡಬಾರದಂತಹ ಚಿತ್ರಗಳನ್ನು ಸುಲಭವಾಗಿ ನೋಡುತ್ತಿದ್ದಾರೆ. ಇನ್ನು ಮುಂದೆ ಇದನ್ನು ನಾವು ಸಹಿಸುವುದಿಲ್ಲ. ನಮ್ಮ ಸರ್ಕಾರ ಇದರ ಬಗ್ಗೆ ಕಣ್ಣು ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ’ ಎಂದು ಯುವಪೀಳಿಗೆಯನ್ನು ಆನ್‌ಲೈನ್ ಕಂಟೆಂಟ್‌ನ ದುಷ್ಪರಿಣಾಮಗಳಿಂದ ರಕ್ಷಿಸಲು ಮುಂದಾಗಿದೆ.

ಇದನ್ನು ಓದಿದ್ದೀರಾ?: ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!

ಈಗ, ಪ್ರಧಾನಿ ಮೋದಿಯವರು ಕೂಡ ಈ ಬಗ್ಗೆ ಗಂಭೀರ ಚಿಂತನೆಗಿಳಿಯಬೇಕಾಗಿದೆ. ದೇಶದ ಭಾವಿ ಪ್ರಜೆಗಳನ್ನು ಮೊಬೈಲ್ ಮಾಯಾಂಗನೆಯಿಂದ ಬಚಾವು ಮಾಡಬೇಕಿದೆ. ಅದಕ್ಕಾಗಿ ಕಟ್ಟುನಿಟ್ಟಿನ ಕಾಯ್ದೆ-ಕಾನೂನುಗಳನ್ನು ಜಾರಿಗೆ ತರಬೇಕಿದೆ. ಅದಕ್ಕಿಂತಲೂ ಮುಖ್ಯವಾಗಿ, ನಮಗೆ ನಾವೇ ನಿಯಂತ್ರಣ ಹೇರಿಕೊಳ್ಳಬೇಕಾಗಿದೆ. ಇತಿ-ಮಿತಿ ಎನ್ನುವುದನ್ನು ಬದುಕಿನ ಭಾಗವನ್ನಾಗಿ ಮಾಡಿಕೊಳ್ಳಬೇಕಾಗಿದೆ.

ನಮ್ಮ ಕೈಗೆ ಮೊಬೈಲ್ ಬಂದಾಗ, ಇಡೀ ಪ್ರಪಂಚವೇ ನಮ್ಮ ಬೆರಳತುದಿಯಲ್ಲಿ ಎಂದು ಬೀಗಿದ್ದೆವು. ಆದರೆ ಈಗ, ಎಲ್ಲವನ್ನು ಸುಲಭವಾಗಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಬದುಕಿನೊಳಕ್ಕೇ ಬಿಟ್ಟುಕೊಂಡಿದ್ದೇವೆ. ಆ ಮೊಬೈಲ್ ಆಡಿಸಿದಂತೆ ಆಡುವ ಕೀಲುಗೊಂಬೆಗಳಾಗಿದ್ದೇವೆ. ಇದು ಮುಂದುವರೆದರೆ, ಗಾಝಿಯಾಬಾದ್‌ನಲ್ಲಾದ ದುರ್ಘಟನೆ ನಮ್ಮ ಮನೆಯಲ್ಲೂ ಘಟಿಸಬಹುದು. ಅದಾಗದಂತೆ ಎಲ್ಲರೂ ಎಚ್ಚರ ವಹಿಸಬೇಕಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...