ಪರಿಷತ್ತಿನಲ್ಲಿ ನಟಿ ಉಮಾಶ್ರೀ ನಿಂದಿಸಿದ ಸಭಾಪತಿ ಹೊರಟ್ಟಿ: ಕ್ಷಮೆ ಯಾಚಿಸುವಂತೆ ಮಹಿಳೆಯರ ಆಗ್ರಹ

Date:

ವಿಶೇಷ ವಿಧಾನಮಂಡಲ ಅಧಿವೇಶನದ ಕೊನೆಯ ದಿನ ಬುಧವಾರ ಹಿರಿಯ ಸದಸ್ಯೆ ಉಮಾಶ್ರೀ ಅವರನ್ನು ಸಭಾಪತಿ ಪೀಠದಿಂದ ಬಸವರಾಜ ಹೊರಟ್ಟಿ ಏಕವಚನದಲ್ಲಿ ನಿಂದಿಸಿದ್ದಾರೆ. ಅಷ್ಟೇ ಅಲ್ಲ ಅವರು ಮಾತನಾಡುವಾಗ, “ನೀನು ಸಿನಿಮಾ ಡೈಲಾಗ್‌ ಹೊಡೆಯಬೇಡ” ಎಂದು ಹೇಳಿ ಸಿನಿಮಾ ಕಲಾವಿದರನ್ನು ಅವಮಾನಿಸಿದ್ದಾರೆ.

- Advertisement -

ಸಭಾಪತಿ ಬಸವರಾಜ ಹೊರಟ್ಟಿ ಅವರು ಬುಧವಾರ ವಿಧಾನಪರಿಷತ್‌ನಲ್ಲಿ ನಟಿ, ಮಾಜಿ ಸಚಿವೆ ಉಮಾಶ್ರೀ ಅವರನ್ನು ಏಕವಚನದಲ್ಲಿ, ದರ್ಪದಲ್ಲಿ ಮಾತನಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ನೆಟ್ಟಿಗರು ಹೊರಟ್ಟಿ ಧಾಟಿಯನ್ನು ಟೀಕಿಸಿದ್ದಾರೆ. ಇನ್ನು ಮಹಿಳಾಪರ ಹೋರಾಟಗಾರರು “ಇದು ಸಭಾಪತಿ ಸ್ಥಾನಕ್ಕೆ ಅವಮಾನ. ಇದು ಅವಹೇಳನಕಾರಿ ನಡೆ. ಸಭಾಪತಿಗಳು ಕೂಡಲೇ ಉಮಾಶ್ರೀ ಅವರ ಬಳಿ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇತ್ತೀಚೆಗೆ ವಿಧಾನಪರಿಷತ್‌ನಲ್ಲಿ ಚರ್ಚೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದ ಉಮಾಶ್ರೀ ಅವರಿಗೆ, “ಏಯ್ ಉಮಾಶ್ರೀ, ಕನ್ನಡ ತಿಳೀತದಲ್ಲ ನಿನಗ, ಏಯ್, ಉಮಾಶ್ರೀ, ಸುಮ್ನೆ ಕೂತ್ಕೋ. ಇಲ್ಲಿ ನೀನ್ ಸಿನಿಮಾ ಸ್ಟೈಲಲ್ಲಿ ಯಾಕ್ ಮಾತಾಡ್ತೀ? ಮೆಂಬರಾಗಿ ಮಾತಾಡು, ಸುಮ್ನೇ ಕೂತ್ಕೋ” ಎಂದು ಹೊರಟ್ಟಿ ಗದರಿಸಿದ್ದರು. ಸಭಾಪತಿಗಳ ಈ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ಇದನ್ನು ಓದಿದ್ದೀರಾ? ಶಾಸಕ ಯತ್ನಾಳ್‌ ಅವಹೇಳನಕಾರಿ ಹೇಳಿಕೆ; ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಖಂಡನೆ

ಹಾಗೆಯೇ ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಳಿ ಬಿಜೆಪಿ ನಾಯಕ ಸಿಟಿ ರವಿ ಅಸಭ್ಯವಾಗಿ ಮಾತನಾಡಿದಾಗ ಇದೇ ಬಸವರಾಜ ಹೊರಟ್ಟಿ ಅವರು “ನಾನು ಕೇಳಿಲ್ಲ, ಅದನ್ನು ದಾಖಲಿಸಲ್ಲ” ಎಂದೆಲ್ಲ ಹೇಳಿರುವುದೂ ಮುನ್ನೆಲೆಗೆ ಬಂದಿದೆ.

ಈ ಬಗ್ಗೆ ಈದಿನ. ಕಾಮ್ ಜತೆ ಮಾತನಾಡಿದ ಕವಯತ್ರಿ, ಲೇಖಕಿ ಡಾ. ಕೆ. ಷರೀಫಾ ಅವರು, “ಸಭಾಪತಿಗಳಿಗೆ ಸಭಾ ಗೌರವ ಎಂಬುದು ಮುಖ್ಯ. ಸಭಾ ಗೌರವ ಬಿಟ್ಟು ಒಬ್ಬ ಕಲಾವಿದೆಯನ್ನೂ ಗೌರವಿಸಿಲ್ಲ. ‘ಏಯ್ ಉಮಾಶ್ರೀ ಕೂತ್ಕೋ’ ಎಂಬ ದುರಹಂಕಾರದ ಭಾಷೆ ಅದು ಗಂಡುಭಾಷೆ, ಊಳಿಗಮಾನ್ಯ ಪದ್ಧತಿಯ ಧ್ವನಿ, ಅದು ಒಂದು ರೀತಿಯ ಹೀಯಾಳಿಕೆಯ ಧ್ವನಿ. ಆ ಧ್ವನಿಯು ಈ ವ್ಯವಸ್ಥೆಯನ್ನು ಧ್ವನಿಸುತ್ತದೆ. ಇಂದಿಗೂ ಈ ವ್ಯವಸ್ಥೆ ಹೆಣ್ಣನ್ನು ಕಾಣುತ್ತಿರುವ ರೀತಿ ಆ ಧ್ವನಿಯಲ್ಲಿತ್ತು” ಎಂದು ಹೇಳಿದ್ದಾರೆ.

shareefa
ಕವಯತ್ರಿ, ಲೇಖಕಿ ಡಾ. ಕೆ. ಷರೀಫಾ

“ಸಿಟಿ ರವಿ ಅಂತವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಳಿ ಅಸಭ್ಯವಾಗಿ ಮಾತನಾಡಿದ್ದಾರೆ. ಈ ವಿಚಾರದಲ್ಲಿ ಕೇಸ್ ಕೂಡಾ ಆಗಿದೆ. ಹೊರಟ್ಟಿ ಬಿಜೆಪಿಗೆ ಹೋದ ತಕ್ಷಣ ಅದೇ ತರ ಸ್ವಭಾವ ಬಂದುಬಿಟ್ಟಿರುವುದೇ? ಹೆಣ್ಣನ್ನು ಅಗೌರವಿಸಿದ್ದು ಒಂದು ಕಡೆ, ಕಲಾವಿದರನ್ನು ಹೀಯಾಳಿಸಿದ್ದು ಮತ್ತೊಂದು ಕಡೆ. ಇನ್ನೊಂದು ಕಡೆ ಸಂವಿಧಾನವನ್ನು ನಿರಾಕರಿಸಿದ್ದಾರೆ. ಇದನ್ನು ನಾನು ಪ್ರತಿಭಟಿಸುತ್ತೇನೆ. ಹೊರಟ್ಟಿ ಅವರು ಉಮಾಶ್ರೀ ಅವರ ಬಳಿ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ.

“ಶತಮಾನಗಳ ದುರಹಂಕಾರವನ್ನು ತಗ್ಗುಬಡಿಯಬೇಕಿದೆ. ಯಾವುದೇ ರಾಜಕಾರಣಿಯಾಗಲಿ, ತಮ್ಮ ಸಂಸದರಿಗೆ, ಸಭಾಪತಿಗಳಿಗೆ, ಸದಸ್ಯರಿಗೆ ಕೊಡಬೇಕಾದ ಗೌರವವನ್ನು ಅವರು ಕೊಡಲೇಬೇಕು. ಕೊಡದಿದ್ದರೆ, ಅದು ಅಪರಾಧವಾಗುತ್ತದೆ. ಮಹಿಳೆಯರ ಬಗ್ಗೆ ಮಾತನಾಡುವಾಗ ಹೆಚ್ಚು ಸೂಕ್ಷ್ಮವಾಗಿ ಮಾತನಾಡಬೇಕು. ಸಮಾನ ಅಧಿಕಾರ ಇರುವ ಮಹಿಳೆ” ಎಂದಿದ್ದಾರೆ.

bhavya
ಭವ್ಯ ನರಸಿಂಹಮೂರ್ತಿ

ಕಾಂಗ್ರೆಸ್ ವಕ್ತಾರೆ, ದಕ್ಷಿಣ ಭಾರತದ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಕಮಿಷನ್ಡ್ ಅಧಿಕಾರಿ ಭವ್ಯ ನರಸಿಂಹಮೂರ್ತಿ, “ವಿಧಾನಪರಿಷತ್‌ನಲ್ಲಿ ಸಭಾಪತಿಗಳಾದ ಹೊರಟ್ಟಿ ಅವರು ಒಬ್ಬ ಸದಸ್ಯರಾದ ಉಮಾಶ್ರೀ ಅವರ ಜತೆ ಮಾತನಾಡಿದ ರೀತಿ ಸರಿಯಲ್ಲ. ವಿಧಾನಪರಿಷತ್ ಎಂಬುದೇ ಹಿರಿಯ ಸದಸ್ಯರುಗಳ ಮನೆ ಎಂದರ್ಥ. ಅಂದರೆ ಅಲ್ಲಿ ಬೇರೆ ಬೇರೆ ಕ್ಷೇತ್ರದ ಹಿರಿಯರು ಇರುತ್ತಾರೆ. ಹೀಗೆ ಉಮಾಶ್ರೀ ಅವರು ಓರ್ವ ಮಹಿಳೆಯಾಗಿ, ಕಲಾವಿದರಾಗಿ ಆ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ಹೊರಟ್ಟಿ ಅವರು ಈ ರೀತಿ ಮಾತನಾಡಿರುವುದು ಬಹಳ ತಪ್ಪು. ಇದು ಅವಹೇಳನಕಾರಿ. ಇದು ಒಬ್ಬರು ಸದಸ್ಯರಿಗೆ ಕೊಡಬೇಕಾದ ಮರ್ಯಾದೆಯಲ್ಲ” ಎಂದು ಹೇಳಿದ್ದಾರೆ.

“ಹಾಗೆಯೇ ಒಬ್ಬರು ಸಭಾಪತಿಗಳಾಗಿ ಕಲಾವಿದರಿಗೆ ಮಾಡುತ್ತಿರುವ ಅವಮಾನವಿದು. ನಮ್ಮ ಚಿತ್ರರಂಗದ ಹಲವು ನಟರುಗಳು ಶಾಸಕರಾಗಿ, ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಅಂಬರೀಷ್ ಸರ್ ಮೊದಲಾದವರ ಬಳಿ ಈ ರೀತಿ ಮಾತನಾಡುವ ಧೈರ್ಯ ಹೊರಟ್ಟಿ ಅವರ ಬಳಿ ಇರುತ್ತಿತ್ತಾ? ಮಹಿಳಾ ಕಲಾವಿದೆ ಬಳಿ ಈ ರೀತಿ ಮಾತನಾಡಿರುವುದು ಸರಿಯೇ? ಮಾತನಾಡುವಾಗ ಸಭ್ಯತೆ ಇರಬೇಕು. ಯಾವುದೇ ರಾಜ್ಯ, ದೇಶವಾಗಲಿ ಕಲಾವಿದರಿಗೆ ಗೌರವ ನೀಡಿಲ್ಲ ಎಂದರೆ ಯೋಚನಾಶಕ್ತಿ ಎಷ್ಟು ಕೆಳಗಿಳಿದಿದೆ ಎಂಬುದು ಅರ್ಥವಾಗುತ್ತದೆ. ಸಭಾಪತಿಗಳು ಈ ರೀತಿ ಮಾತನಾಡಿರುವುದು ನೋವುಂಟು ಮಾಡಿದೆ” ಎಂದು ತಿಳಿಸಿದ್ದಾರೆ.

ಇನ್ನು ನಿರ್ದೇಶಕಿ ಸುಮನಾ ಕಿತ್ತೂರು ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಸುಮನಾ ಅವರು, “ಇತ್ತೀಚೆಗೆ ವಿಧಾನ ಪರಿಷತ್ತಿನ ಸಭೆಯಲ್ಲಿ ಉಮಾಶ್ರೀ ಮೇಡಮ್ ಅವರೊಂದಿಗೆ ಸಭಾಪತಿ ಹೊರಟ್ಟಿ ಅವರು ಬಳಸಿದ ಭಾಷೆ ಶಿಸ್ತಿನ ಹೆಸರಲ್ಲಿನ ಅಹಂಕಾರವಾಗಿತ್ತು. ಸಭಾಧ್ಯಕ್ಷರ ಕುರ್ಚಿ ಎನ್ನುವುದು ವ್ಯಂಗ್ಯಕ್ಕೆ ಅಲ್ಲ. ಗೌರವ, ಸಮತೋಲನ ಮತ್ತು ಸಂವಿಧಾನಾತ್ಮಕ ಶಿಷ್ಟಾಚಾರಕ್ಕೆ ಅನ್ನುವುದನ್ನು ಅವರು ಮರೆತಂತಿತ್ತು. ಮಾತಿಗೆ ಉತ್ತರ ನೀಡದೆ ವ್ಯಕ್ತಿತ್ವವನ್ನು ಗುರಿಯಾಗಿಸುವುದು ಅಧಿಕಾರದ ದುರುಪಯೋಗ. ‘ಇದು ಸ್ಟೇಜ್ ಅಲ್ಲ’ ಎನ್ನುವ ಹೊರಟ್ಟಿ ಮಾತು ಕೇವಲ ವ್ಯಕ್ತಿಗಲ್ಲ, ಕಲೆಯ ಬಗೆಗಿನ ಆಕೆಯ ಅಂತ:ಸತ್ವವನ್ನೇ ಅಡಗಿಸುವ ಧ್ವನಿಯಾಗಿತ್ತು. ಇಂತಹ ಅಸಂವೇದನಾ ಗಂಡಸೇಕೆ ಆ ಸ್ಥಾನ ಅಲಂಕರಿಸಿದ್ದಾರೆ?!” ಎಂದು ಕೇಳಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಮತ ಹಕ್ಕಿಗೇ ಕನ್ನ: ಪರಿಶೋಧನಾ ವರದಿ ಬಿಚ್ಚಿಟ್ಟ ಮತದಾರರ ಕಣ್ಣೀರ ಕಥನ

ಪ್ರಜಾಪ್ರಭುತ್ವದ ಅಡಿಪಾಯವೇ ಮತದಾರ ಮತ್ತು ಮತದಾನ. ಆದರೆ, ಈ ಅಡಿಪಾಯವನ್ನೇ ಕೆಡವುವ...

SIR ಅಕ್ರಮ: ಲೋಕಸಭೆ, ವಿಧಾನಸಭೆಗಳ ವಿಸರ್ಜನೆಗೆ ಖರ್ಗೆ ಒತ್ತಾಯ; ತಕ್ಷಣ ಹೊಸ ಚುನಾವಣೆಗೆ ಆಗ್ರಹ

ಪ್ರಸ್ತುತ ದೇಶಾದ್ಯಂತ ನಡೆದಿರುವ ಹಾಗೂ ಮುಗಿದಿರುವ ಚುನಾವಣೆಗಳ ಸಿಂಧುತ್ವವನ್ನೇ ಪ್ರಶ್ನಿಸಿರುವ ಕಾಂಗ್ರೆಸ್...

ಇನ್‌ಸ್ಟಾಗ್ರಾಮ್ ಚಾಟ್ ವಿವಾಹೇತರ ಸಂಬಂಧಕ್ಕೆ ಪುರಾವೆಯಲ್ಲ: ಅಲಹಾಬಾದ್ ಹೈಕೋರ್ಟ್

ಪತ್ನಿಯು ಮತ್ತೊಬ್ಬ ವ್ಯಕ್ತಿಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಿದ ಸಂಭಾಷಣೆಗಳ ಪ್ರಿಂಟ್‌ಔಟ್‌ಗಳನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು...