ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವಿಪಕ್ಷಗಳ ಒಕ್ಕೂಟ ಇಂಡಿಯಾ ನಾಯಕರು ಆರೋಪಿಸಿದ್ದಾರೆ.
ಕಾಂಗ್ರೆಸ್ ಸಂಸದರಾದ ಶಶಿ ತರೂರ್, ಪವನ್ ಖೇರಾ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಶಿವಸೇನಾ (ಯುಬಿಟಿ) ಬಣದ ನಾಯಕಿ ಪ್ರಿಯಾಂಕಾ ಚತುರ್ವೇದಿ, ಎಎಪಿ ರಾಜ್ಯಸಭೆ ಸದಸ್ಯ ರಾಘವ್ ಛೆಡ್ಡಾ ಸೇರಿದಂತೆ ಇಂಡಿಯಾ ಒಕ್ಕೂಟದ ಹಲವಾರು ವಿರೋಧ ಪಕ್ಷದ ನಾಯಕರು ತಮ್ಮ ಆ್ಯಪಲ್ ಫೋನ್‌ಗಳಿಗೆ ರಾಜ್ಯ ಪ್ರಾಯೋಜಿತ ಸೈಬರ್ ದಾಳಿಕೋರರು ನಿಮ್ಮ ಮೊಬೈಲ್ ಫೋನ್‌ಅನ್ನು ದಾಳಿ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಸಂದೇಶಗಳನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
Received from an Apple ID, [email protected], which I have verified. Authenticity confirmed. Glad to keep underemployed officials busy at the expenses of taxpayers like me! Nothing more important to do?@PMOIndia @INCIndia @kharge @RahulGandhi pic.twitter.com/5zyuoFmaIa
— Shashi Tharoor (@ShashiTharoor) October 31, 2023
ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ನನ್ನ ಆಪಲ್ ಫೋನ್‌ನಿಂದ ಸಂದೇಶ ಸ್ವೀಕರಿಸಲಾಗಿದೆ. ಹ್ಯಾಕ್ ಮಾಡುವ ಉದ್ದೇಶ ದೃಢಪಟ್ಟಿದೆ. ನನ್ನಂತಹ ತೆರಿಗೆದಾರರ ವೆಚ್ಚದಲ್ಲಿ ನಿರುದ್ಯೋಗಿ ಅಧಿಕಾರಿಗಳನ್ನು ಕಾರ್ಯನಿರತವಾಗಿರಿಸಲು ಸಂತೋಷವಾಗಿದೆ! ಮಾಡಲು ಹೆಚ್ಚು ಮುಖ್ಯವಾದುದೇನೂ ಇಲ್ಲವೇ? ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಾಟ್ಸಾಪ್‌ನಲ್ಲಿ ಹೊಸ ಫೀಚರ್ ಪ್ರಕಟ: ಏಕ ಕಾಲದಲ್ಲಿ ಎರಡು ಮೊಬೈಲ್ ನಂಬರ್ ಅಕೌಂಟ್ ಬಳಸುವ ಆಯ್ಕೆ
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, “ನನ್ನ ಫೋನ್ ಮತ್ತು ಇಮೇಲ್‌ಗೆ ಸರ್ಕಾರವು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಆಪಲ್‌ನಿಂದ ಸಂದೇಶ ಮತ್ತು ಇಮೇಲ್ ಸ್ವೀಕರಿಸಿದ್ದೇನೆ. ಬೆದರಿಕೆಯೊಡ್ಡುವ ಅದಾನಿ ಹಾಗೂ ಪಿಎಂಒ ಅವರೆ ನಿಮ್ಮ ಭಯವು ನನಗೆ ನಿಮ್ಮ ಮೇಲೆ ಕರುಣೆಯುಂಟುಮಾಡುತ್ತದೆ” ಎಂದು ಕೇಂದ್ರ ಗೃಹ ಸಚಿವಾಯಕ್ಕೆ ಟ್ಯಾಗ್ ಮಾಡಿದ್ದಾರೆ.
Received text & email from Apple warning me Govt trying to hack into my phone & email. @HMOIndia – get a life. Adani & PMO bullies – your fear makes me pity you. @priyankac19 – you, I , & 3 other INDIAns have got it so far . pic.twitter.com/2dPgv14xC0
— Mahua Moitra (@MahuaMoitra) October 31, 2023
ರಾಜ್ಯಸಭೆ ಸದಸ್ಯೆ, ಪ್ರಿಯಾಂಕಾ ಚತುರ್ವೇದಿ ಸಹ ಎಚ್ಚರಿಕೆ ಸಂದೇಶಗಳ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಕಳೆದ ರಾತ್ರಿ ನಾನು ಎಚ್ಚರಿಕೆ ಸ್ವೀಕರಿಸಿದ್ದೇನೆ. ಇದು ಕೇಂದ್ರ ಸರ್ಕಾರದ ಪ್ರಾಯೋಜಿತ ಕಾರ್ಯವಾಗಿದೆ. ನಾನು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ ಎಂದು ತೋರಿಸುತ್ತದೆ, ಈ ದಾಳಿಗಳು ರಾಜ್ಯ ಪ್ರಾಯೋಜಿತ ಎಂದು ಎಚ್ಚರಿಕೆ ಸ್ಪಷ್ಟವಾಗಿ ಹೇಳುತ್ತದೆ. ವಿರೋಧ ಪಕ್ಷದ ನಾಯಕರಿಗೆ ಮಾತ್ರ ಇಂತಹ ಸಂದೇಶಗಳು ಏಕೆ ಬರುತ್ತಿವೆ? ನಮ್ಮ ಮೇಲೆ ದೊಡ್ಡ ಮಟ್ಟದ ಕಣ್ಗಾವಲು ನಡೆಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
So not just me but also @MahuaMoitra has received this warning from Apple. Will @HMOIndia investigate? https://t.co/aS01YQpRpB
— Priyanka Chaturvedi🇮🇳 (@priyankac19) October 31, 2023
ಸಂದೇಶದಲ್ಲಿರುವುದೇನು?
‘ರಾಜ್ಯ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್‌ಅನ್ನು ಗುರಿಯಾಗಿಸಬಹುದು’ ಎಂದು ಎಚ್ಚರಿಕೆ ನೀಡಲಾಗಿದೆ. ನಿಮ್ಮ ಆ್ಯಪಲ್ ಐಡಿಯೊಂದಿಗೆ ಸಂಯೋಜಿತವಾಗಿರುವ ಐಫೋನ್‌ಅನ್ನು ದೂರದಿಂದಲೇ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ರಾಜ್ಯ ಪ್ರಾಯೋಜಿತ ದಾಳಿಕೋರರಿಂದ ನೀವು ಗುರಿಯಾಗಿದ್ದೀರಿ ಎಂದು ಆ್ಯಪಲ್ ಭಾವಿಸುತ್ತದೆ. ನೀವು ಯಾರು ಅಥವಾ ನೀವು ಏನು ಮಾಡುತ್ತಿದ್ದೀರಿ ಎಂಬ ಕಾರಣದಿಂದ ಈ ದಾಳಿಕೋರರು ನಿಮ್ಮನ್ನು ವೈಯಕ್ತಿಕವಾಗಿ ಗುರಿಪಡಿಸುತ್ತಿರಬಹುದು. ನಿಮ್ಮ ಸಾಧನವು ರಾಜ್ಯ ಪ್ರಾಯೋಜಿತ ದಾಳಿಕೋರರಿಂದ ರಾಜಿ ಮಾಡಿಕೊಂಡರೆ, ಅವರು ನಮ್ಮ ಸೂಕ್ಷ್ಮ ಡೇಟಾ, ಸಂವಹನಗಳು ಅಥವಾ ಕ್ಯಾಮರಾ ಮತ್ತು ಮೈಕ್ರೋಫೋನ್ ಅನ್ನು ದೂರದಿಂದಲೇ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದು ತಪ್ಪು ಎಚ್ಚರಿಕೆ ಆಗಿರುವ ಸಾಧ್ಯತೆಯಿದ್ದರೂ, ದಯವಿಟ್ಟು ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ” ಎಂದು ಸಂದೇಶದಲ್ಲಿ ತಿಳಿಸಲಾಗಿದೆ.