ಕತಾರ್ | 8 ಭಾರತೀಯ ನೌಕಾ ಪಡೆಯ ಅಧಿಕಾರಿಗಳಿಗೆ ಮರಣ ದಂಡನೆಯಿಂದ ಮುಕ್ತಿ

Date:

ಗೂಢಚಾರ ಆರೋಪದ ಮೇಲೆ ಕಳೆದ ತಿಂಗಳು ಗಲ್ಲು ಶಿಕ್ಷೆಗೆ ಒಳಗಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ಕತಾರ್ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ಕಡಿತಗೊಳಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

- Advertisement -

ಭಾರತದ ವಿದೇಶಾಂಗ ಇಲಾಖೆ, ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಗಲ್ಲು ಶಿಕ್ಷೆಯನ್ನು ಕಡಿತಗೊಳಿಸಲು ಮನವಿ ಮಾಡಿತ್ತು. ಆದಾಗ್ಯೂ, ಅದಕ್ಕೆ ನ್ಯಾಯಾಲಯ ಏನು ಹೇಳಿದೆ ಎಂದು ಸ್ಪಷ್ಟಪಡಿಸಲಾಗಿಲ್ಲ. ವಿವರವಾದ ತೀರ್ಪಿನ ಬಗ್ಗೆ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಭಾರತ ಸರ್ಕಾರ ಮನವಿ ಸಲ್ಲಿಸಿದ ಕೆಲವು ವಾರಗಳ ನಂತರ ಈ ಬೆಳವಣಿಗೆ ಉಂಟಾಗಿದೆ.

ಭಾರತೀಯ ಅಧಿಕಾರಿಗಳು ಕಾನೂನು ತಂಡದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಹಾಗೆಯೇ ಕುಟುಂಬ ಸದಸ್ಯರು ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ₹40 ಸಾವಿರ ಕೋಟಿ ಲೂಟಿ ಆರೋಪ; ಪ್ರಧಾನಿ ಮೋದಿ ಏನು ಹೇಳುತ್ತಾರೆ?

“ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಕತಾರ್ ನ್ಯಾಯಾಲಯ ಇಂದು ತೀರ್ಪು ನೀಡಿದ್ದನ್ನು ನಾವು ಗಮನಿಸಿದ್ದು, ಮರಣ ದಂಡನೆಯನ್ನು ತಗ್ಗಿಸಲಾಗಿದೆ. ವಿವರವಾದ ತೀರ್ಪಿಗಾಗಿ ಕಾಯುತ್ತಿದ್ದೇವೆ” ಎಂದು ವಿದೇಶಾಂಗ ಇಲಾಖೆಯು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

“ಕುಟುಂಬದ ಸದಸ್ಯರೊಂದಿಗೆ ಕತಾರ್‌ನ ನಮ್ಮ ರಾಯಭಾರಿ ಹಾಗೂ ಇತರ ಅಧಿಕಾರಿಗಳು ಮನವಿ ಸಲ್ಲಿಸುವಾಗ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ಪ್ರಕರಣದ ಆರಂಭದಿಂದಲೂ ನಾವು ಅವರ ಬೆಂಬಲಕ್ಕೆ ನಿಂತಿದ್ದೇವೆ. ಎಲ್ಲ ರೀತಿಯ ಕಾನೂನು ನೆರವು ನೀಡುವುದನ್ನು ವಿಸ್ತರಿಸುವುದನ್ನು ಮುಂದುವರೆಸುತ್ತೇವೆ. ಕತಾರ್ ಅಧಿಕಾರಿಗಳೊಂದಿಗೆ ಪ್ರಕರಣವನ್ನು ಮುಂದುವರಿಸುತ್ತೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕತಾರ್‌ನ ಅಲ್ ದಹ್ರಾದ ಖಾಸಗಿ ಕಂಪನಿಯಲ್ಲಿ ಈ ಅಧಿಕಾರಿಗಳು ಕೆಲಸ ಮಾಡುತ್ತಿದ್ದು,ಕಳೆದ ವರ್ಷದ ಆಗಸ್ಟ್‌ನಲ್ಲಿ ಗೂಢಚಾರಿ ಆರೋಪದ ಮೇಲೆ ಬಂಧಿಸಲಾಗಿತ್ತು. ವಿಚಾರಣೆ ಪೂರ್ಣಗೊಂಡ ನಂತರ ಅಕ್ಟೋಬರ್ 26ರಂದು ಕತಾರ್ ನ್ಯಾಯಾಲಯ ಈ ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ತೀರ್ಪಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದ ಭಾರತ ಸರ್ಕಾರ ಪ್ರಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದರೊಂದಿಗೆ ಕಾನೂನಿನ ಆಯ್ಕೆಗಳನ್ನು ಕೈಗೊಳ್ಳುವುದಾಗಿ ತಿಳಿಸಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

4 ವರ್ಷಗಳಲ್ಲಿ 111 ಸಂಸದರು, ಶಾಸಕರ ಪಕ್ಷಾಂತರ: ಶೇ. 26ರಷ್ಟು ನಾಯಕರನ್ನು ಸೇರಿಸಿಕೊಂಡ ಬಿಜೆಪಿ!

ದೇಶದ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳ ಪಕ್ಷಾಂತರ ಪರ್ವ ತಡೆಯಿಲ್ಲದೆ ಮುಂದುವರಿದಿದೆ. ಅದರಲ್ಲೂ...

ಮಳೆ ಅಬ್ಬರ: ಉತ್ತರ ಪ್ರದೇಶದಲ್ಲಿ 10 ಮಂದಿ ಸಾವು; ಒಡಿಶಾದಲ್ಲಿ ಪ್ರವಾಹ

ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಉತ್ತರ ಪ್ರದೇಶ...

26 ಬಾರಿ ಸೋತರೂ ಕುಗ್ಗದ ಛಲ; 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕ ಹುದ್ದೆ ಪಡೆದ ವೃದ್ಧ

ಸರಿಯಾದ ಪ್ರಯತ್ನ ಮತ್ತು ಛಲವಿದ್ದರೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು...

1,870 ಕೋಟಿ ರೂ. ದೇಣಿಗೆ ದಂಧೆ ಆರೋಪ: ಗುಜರಾತ್‌ನ 3 ರಾಜಕೀಯ ಪಕ್ಷಗಳ ಅಕ್ರಮ ಬಯಲು

ಗುಜರಾತ್‌ನಲ್ಲಿ ನೋಂದಾಯಿತವಾಗಿದ್ದ, ಆದರೆ ಮಾನ್ಯತೆ ಪಡೆಯದ ಮೂರು ರಾಜಕೀಯ ಪಕ್ಷಗಳು ಆದಾಯ...