ಅದಾನಿ ಗ್ರೂಪ್‌ನ ಹಗರಣಗಳಲ್ಲಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್ ಮತ್ತು ಪತಿ ಧವಲ್ ಬುಚ್ ಭಾಗಿಯಾಗಿರುವ ಹಿಂಡನ್‌ಬರ್ಗ್ ವರದಿಯ ಬಗ್ಗೆ ಮಾಧವಿ ಬುಚ್ ಮತ್ತು ಧವಲ್ ಬುಚ್ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ನನ್ನ ಪತಿಗೆ ಅನಿಲ್ ಅಹುಜಾ ಜೊತೆಗಿನ ಬಾಲ್ಯದ ಸ್ನೇಹದಿಂದಾಗಿ ಐಪಿಇ-ಪ್ಲಸ್ ಫಂಡ್‌ನಲ್ಲಿ ಹೂಡಿಕೆ ಮಾಡಲಾಗಿದೆಯೇ ಹೊರತು ಹಣ ಅದಾನಿಗೆ ಹೋಗಿಲ್ಲ” ಎಂದೂ ಹೇಳಿಕೊಂಡಿದ್ದಾರೆ.
“ಭಾರತದಲ್ಲಿನ ವಿವಿಧ ನಿಯಮಗಳ ಉಲ್ಲಂಘನೆಗಳಿಗಾಗಿ ಹಿಂಡನ್‌ಬರ್ಗ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಶೋಕಾಸ್ ನೋಟಿಸ್‌ಗೆ ಪ್ರತ್ಯುತ್ತರ ನೀಡುವ ಬದಲು, ಅವರು ಸೆಬಿಯ ವಿಶ್ವಾಸಾರ್ಹತೆಯ ಮೇಲೆ ದಾಳಿ ಮಾಡಲು ಮತ್ತು ಸೆಬಿ ಅಧ್ಯಕ್ಷರ ಚಾರಿತ್ರ್ಯಹರಣ ಮಾಡಲು ಯತ್ನಿಸಿರುವುದು ದುರದೃಷ್ಟಕರ” ಎಂದು ಸೆಬಿ ಅಧ್ಯಕ್ಷೆ ಮತ್ತು ಅವರ ಪತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಿಂಡನ್‌ಬರ್ಗ್ ಸ್ಪೋಟಕ ವರದಿ; ಅದಾನಿ ಗ್ರೂಪ್‌ನಿಂದ ಹೇಳಿಕೆ ಬಿಡುಗಡೆ
“ಮಾಧವಿ ಐಐಎಂ ಅಹಮದಾಬಾದ್‌ನ ಹಳೆಯ ವಿದ್ಯಾರ್ಥಿಯಾಗಿದ್ದು, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಲ್ಲಿ ಹೆಚ್ಚಾಗಿ ಐಸಿಐಸಿಐ ಗ್ರೂಪ್‌ನಲ್ಲಿ ಎರಡು ದಶಕಗಳ ಕಾರ್ಪೊರೇಟ್ ವೃತ್ತಿಜೀವನವನ್ನು ಹೊಂದಿದ್ದಾರೆ. ಧವಲ್ ಬುಚ್ ಐಐಟಿ ದೆಹಲಿಯ ಹಳೆಯ ವಿದ್ಯಾರ್ಥಿ ಮತ್ತು ಭಾರತದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ನಲ್ಲಿ 35 ವರ್ಷಗಳ ಕಾರ್ಪೊರೇಟ್ ವೃತ್ತಿಜೀವನವನ್ನು ಹೊಂದಿದ್ದಾರೆ. ನಂತರ ಜಾಗತಿಕವಾಗಿ ಯುನಿಲಿವರ್‌ನಲ್ಲಿ ಅದರ ಹಿರಿಯ ನಿರ್ವಹಣಾ ತಂಡದ ಭಾಗವಾಗಿದ್ದಾರೆ” ಎಂದು ತಿಳಿಸಿರುವ ದಂಪತಿ ತಮ್ಮ ಹೂಡಿಕೆಯ ಬಗ್ಗೆ ಉಲ್ಲೇಖಿಸಿದ್ದಾರೆ.
“ಈ ಸುದೀರ್ಘ ಅವಧಿಯಲ್ಲಿ, ಮಾಧವಿ ಮತ್ತು ಧವಲ್ ತಮ್ಮ ಸಂಬಳ, ಬೋನಸ್ ಮತ್ತು ಸ್ಟಾಕ್ ಆಯ್ಕೆಗಳ ಮೂಲಕ ತಮ್ಮ ಉಳಿತಾಯವನ್ನು ಸಂಗ್ರಹಿಸಿದ್ದಾರೆ. ಹಾಗಿರುವಾಗ ಅವರ ನಿವ್ವಳ ಮೌಲ್ಯ ಮತ್ತು ಮಾಧವಿಯ ಪ್ರಸ್ತುತ ಸರ್ಕಾರಿ ವೇತನವನ್ನು ಹೂಡಿಕೆಯೊಂದಿಗೆ ಹೊಂದಿಸುವ ಪ್ರಚೋದನೆಗಳು ದುರುದ್ದೇಶಪೂರಿತ ಮತ್ತು ಪ್ರೇರಿತವಾಗಿದೆ” ಎಂದು ಆರೋಪಿಸಿದ್ದಾರೆ.
“ಹಿಂಡನ್‌ಬರ್ಗ್ ವರದಿಯಲ್ಲಿ ಉಲ್ಲೇಖಿಸಲಾದ ಹೂಡಿಕೆಯನ್ನು 2015ರಲ್ಲಿ ಸಿಂಗಾಪುರದಲ್ಲಿ ವಾಸಿಸುತ್ತಿದ್ದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಮಾಧವಿ ಸೆಬಿಗೆ ಸೇರುವ ಸುಮಾರು 2 ವರ್ಷಗಳ ಮೊದಲು ಮಾಡಲಾಗಿದೆ” ಎಂದು ಹೇಳಿದ್ದಾರೆ. ಆದರೆ ಹೂಡಿಕೆಯನ್ನು ಅಲ್ಲಗಳೆದಿಲ್ಲ.
Hindenburg has been served a show cause notice for a variety of violations in India. It is unfortunate that instead of replying to the Show Cause Notice, they have chosen to attack the credibility of the SEBI and attempt character assassination of the SEBI Chairperson :… pic.twitter.com/I0rPlMVGCq
— IANS (@ians_india) August 11, 2024