ಸಂಸತ್ತಿನಲ್ಲಿ ಪ್ರಿಯಾಂಕಾ ಉಪಸ್ಥಿತಿ ಕಾಂಗ್ರೆಸ್ ಪಾಲಿಗೆ ದೊಡ್ಡ ಆಸ್ತಿ : ಶಶಿ ತರೂರ್

Date:

ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿಯ ಉಪಸ್ಥಿತಿ ವಿರೋಧ ಪಕ್ಷಗಳ ಆಸನಗಳನ್ನು ಬಲಿಷ್ಠಗೊಳಿಸಲಿದೆ. ವಯನಾಡು ಲೋಕಸಭಾ ಕ್ಷೇತ್ರದ ಜನರು ಸಂಸತ್ತಿನಲ್ಲಿ ತಮ್ಮನ್ನು ಪ್ರತಿನಿಧಿಸುವ ಬಲಿಷ್ಠ ವ್ಯಕ್ತಿಯನ್ನು ಹೊಂದಲಿದ್ದಾರೆ ಎಂದು ಮಂಗಳವಾರ ತಿರುವನಂತಪುರಂ ಸಂಸದ ಶಶಿ ತರೂರ್‌ ತಿಳಿಸಿದ್ದಾರೆ.

ನೆಯ್ಯಟ್ಟಿಕರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಧನ್ಯವಾದ ಅಭಿಯಾನದ ನೇಪಥ್ಯದಲ್ಲಿ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಶಶಿ ತರೂರ್, ಚುನಾವಣಾ ಪ್ರಚಾರಗಳಲ್ಲಿ ಪ್ರಿಯಾಂಕಾ ಗಾಂಧಿ ಪರಿಣಾಮಕಾರಿ ವಾಗ್ಮಿಯಾಗಿದ್ದರು. ಅವರು ಕೇರಳದಿಂದ ಚುನಾವಣಾ ರಾಜಕಾರಣ ಪ್ರವೇಶಿಸಲು ನಿರ್ಧರಿಸಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವದಾರಿ ಗಣಿಗಾರಿಕೆಯ ಹಿಂದೆ ಇರುವುದು ಅಭಿವೃದ್ಧಿಯೋ, ಅಧ್ವಾನವೋ?

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ರಾಹುಲ್ ಗಾಂಧಿ ನಿಶ್ಚಿತವಾಗಿ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಿತ್ತು. ಇದು ಉತ್ತರ ಪ್ರದೇಶ ಹಾಗೂ ಸಾಮಾನ್ಯವಾಗಿ ಉತ್ತರ ಭಾರತಕ್ಕೆ ರವಾನಿಸಿರುವ ಬಹುಮುಖ್ಯ ಸಂಕೇತವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

“ಇದೇ ವೇಳೆ, ನಾನು ವಯನಾಡ್ ಕ್ಷೇತ್ರದ ಜನತೆಯನ್ನು ಕೈಬಿಡುತ್ತಿದ್ದೇನೆ ಎಂದು ಅವರಿಗೆ ಅನ್ನಿಸಬಾರದಿತ್ತು ಹಾಗೂ ತಮ್ಮ ಕ್ಷೇತ್ರವನ್ನು ತಮ್ಮ ಸಹೋದರಿಗೇ ವಹಿಸಿರುವುದು ಉತ್ತಮ ನಿರ್ಧಾರವಾಗಿದೆ. ಹೀಗಾಗಿ ಇದೊಂದು ಅದ್ಭುತ ನಿರ್ಧಾರ ಎಂದು ನನಗನ್ನಿಸುತ್ತಿದೆ” ಎಂದು ಅವರು ಹೇಳಿದ್ದಾರೆ.

ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯು ತೋರಿರುವ ಸಾಧನೆಯನ್ನು ಪರಿಗಣಿಸಿದಾಗ, ಪ್ರಿಯಾಂಕಾ ಗಾಂಧಿ ವಾರಣಾಸಿ ಕ್ಷೇತ್ರದಿಂದಲೂ  ಅದ್ಭುತ ಅಭ್ಯರ್ಥಿಯಾಗಿರುತ್ತಿದ್ದರು ಎಂದೂ ಅವರು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ವಯನಾಡ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲಿರುವ ಸಂಸದ ರಾಹುಲ್ ಗಾಂಧಿಯವರ ಸಹೋದರಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಗೆಲುವಿಗಾಗಿ ಹಾರೈಸುತ್ತ , ರಾಹುಲ್ ಹಾಗೂ ಪ್ರಿಯಾಂಕಾ ಒಟ್ಟಾಗಿ ಸಂಸತ್ ಭವನದೊಳಗೆ ಪ್ರವೇಶಿಸುವುದನ್ನು ನೋಡುವ ಸಂಭ್ರಮದ ಕ್ಷಣಕ್ಕಾಗಿ ದೇಶದ ಕೋಟ್ಯಂತರ ಜನರು ಕಾದು ಕುಳಿತಿದ್ದು , ಎಲ್ಲರ ಆಶೆ – ಆಕಾಂಕ್ಷೆಗಳು ನಿರಾಯಾಸವಾಗಿ ಈಡೇರಲಿ ಎಂದು ಪ್ರಾರ್ಥಿಸುತ್ತಾ 🙏 ಮುಂದೆ…

    ರಾಹುಲ್ – ಪ್ರಿಯಾಂಕಾ ಸಂಸತ್ತಿನ ಒಳಗೂ ಹೊರಗೂ ಮಿಂಚಲಿ ಗುಡುಗಲಿ. ಅನ್ಯಾಯವನ್ನು ಸದೆಬಡಿದು ನ್ಯಾಯವನ್ನೂ ಜಯವನ್ನೂ ದೇಶದ ಜನರಿಗೆ ಧಾರೆಯೆರೆದು ಅಪ್ಪ – ಅಜ್ಜಿಯಂತೆ ಕೀರ್ತಿವಂತರಾಗಲಿ ಎಂಬುದೇ ನನ್ನ ಈ ಹೊತ್ತಿನ ಮನದಾಳದ ಆಶಯ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ ಭಿನ್ನಮತೀಯರಿಗೆ ‘ಮಾನ್ಸೂನ್ ಆಫರ್’ ನೀಡಿದ ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ಬಿಜೆಪಿ ಭಿನ್ನಮತ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ...

ಉತ್ತರಾಖಂಡ | ಅನಾರೋಗ್ಯದಿಂದ ತಮಟೆ ಬಾರಿಸದ ವ್ಯಕ್ತಿ; ದಲಿತ ಕುಟುಂಬಗಳಿಗೆ ಗ್ರಾಮದಿಂದ ಬಹಿಷ್ಕಾರ!

ದಲಿತ ಸಮುದಾಯದ ವ್ಯಕ್ತಿಯೊಬ್ಬರು ಅನಾರೋಗ್ಯದ ಕಾರಣ ದೇವಸ್ಥಾನದಲ್ಲಿ ತಮಟೆ ಬಾರಿಸಲು ಬರದ...

ವಿವಾದಾತ್ಮಕ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾಯಿ ಬಂಧನ

ಪಿಸ್ತೂಲ್‌ ಹಿಡಿದು ರೈತರಿಗೆ ಬೆದರಿಸಿದ ಆರೋಪದ ಮೇಲೆ ವಿವಾದಾತ್ಮಕ ಐಎಎಸ್ ಅಧಿಕಾರಿ...