ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಮಾ.30(ಸೋಮವಾರ) ಚೆನ್ನೈನ ಕೊಳತ್ತೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ತಮ್ಮ ನಾಮಪತ್ರ ಸಲ್ಲಿಸಿದ ನಂತರ ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಸ್ಟ್ಯಾಲಿನ್, ʼಮತದಾರರು ಕೊಳತ್ತೂರು ಕ್ಷೇತ್ರದಲ್ಲಿ ಸತತ ನಾಲ್ಕನೇ ಗೆಲುವು ಸಾಧಿಸಲಿದ್ದಾರೆʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಟಾಲಿನ್ 2011, 2016 ಮತ್ತು 2021ರ ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.
ಇನ್ನು, ನಾಮಪತ್ರ ಸಲ್ಲಿಸಿದ ಬಳಿಕ, ಸ್ಟಾಲಿನ್ ಅವರು ಪಕ್ಷದ ಮುಖಂಡರನ್ನೊಳಗೊಂಡು ರೋಡ್ ಶೋ ನಡೆಸಿ ಜನರತ್ತ ಕೈ ಬೀಸಿ ಬೆಂಬಲ ಕೋರಿದರು. ಕೊಳತ್ತೂರು ಕ್ಷೇತ್ರಕ್ಕಾಗಿ ತಾವು ನೀಡಿದ ಕೊಡುಗೆಗಳ ಕುರಿತಾದ ಪುಸ್ತಕವನ್ನು ಕೂಡ ಇದೇ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದರು.




