ಸರ್ಕಾರಿ ಕಾರ್ಯಕ್ರಮಗಳಲ್ಲಿ ತಮಿಳು ನಾಡಗೀತೆಗೆ ಮೊದಲ ಆದ್ಯತೆ: ಸಿಎಂ ವಿಜಯ್

Date:

ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ತಮಿಳು ನಾಡಗೀತೆ ‘ತಮಿಳು ತಾಯ್ ವಾಲ್ತು’ (ತಮಿಳು ತಾಯಿಯ ಪ್ರಾರ್ಥನೆ) ಹಾಡುವುದನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದರು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಗೀತೆಗಳನ್ನು ಹಾಡುವ ಅನುಕ್ರಮದ ಬಗ್ಗೆ ‘ವಂದೇ ಮಾತರಂ’ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ, 1970ರ ದಶಕದ ಸಂಪ್ರದಾಯವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

- Advertisement -

​”ತಮಿಳು ನಮ್ಮ ಭಾವನೆ ಮತ್ತು ಅಸ್ಮಿತೆಯಾಗಿದೆ,” ಎಂದು ವಿಧಾನಸಭೆಯಲ್ಲಿ ಪ್ರತಿಪಾದಿಸಿದ ವಿಜಯ್, ರಾಜ್ಯವು ತನ್ನ ಸ್ವಾಭಿಮಾನವನ್ನು ಬಲಿಕೊಡಲು ಅಥವಾ ತನ್ನದೇ ಭಾಷೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು. “ನಮ್ಮ ಮಾತೃಭಾಷೆ ನಮ್ಮ ತಾಯಿಯಷ್ಟೇ ಪವಿತ್ರವಾದದ್ದು. ತಮಿಳು ಕೇವಲ ಒಂದು ಭಾಷೆಯಲ್ಲ, ಅದೊಂದು ಸಂಸ್ಕೃತಿ, ವಿಚಾರ ಮತ್ತು ಪ್ರೀತಿಯಾಗಿದೆ” ಎಂದು ಅವರು ತಿಳಿಸಿದರು. ಈ ನಿರ್ಣಯದ ಅನ್ವಯ, ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ಆರಂಭದಲ್ಲಿ ‘ತಮಿಳು ತಾಯ್ ವಾಲ್ತು’ ಗೀತೆಯನ್ನು ಮೊದಲು ಹಾಡುವುದು ಕಡ್ಡಾಯವಾಗಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಕೇಂದ್ರ ಗೃಹ ಸಚಿವಾಲಯವು ಕಳೆದ ಜನವರಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆಯೊಂದನ್ನು ನೀಡಿತ್ತು. ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆಗಿಂತ ಮೊದಲು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಕಡ್ಡಾಯವಾಗಿ ಹಾಡುವಂತೆ ನಿರ್ದೇಶಿಸಿತ್ತು. ಈ ಸೂಚನೆಯೇ ಪ್ರಸ್ತುತ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ‘ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯ’ದ ಘಟಿಕೋತ್ಸವದಲ್ಲಿ ‘ವಂದೇ ಮಾತರಂ’ ಮತ್ತು ರಾಷ್ಟ್ರಗೀತೆಯ ನಂತರ ಮೂರನೆಯದಾಗಿ ‘ತಮಿಳು ತಾಯ್ ವಾಲ್ತು’ ಗೀತೆಯನ್ನು ಹಾಡಲಾಗಿತ್ತು. ವಿಪರ್ಯಾಸವೆಂದರೆ, ತಮಿಳು ತಾಯ್ ವಾಲ್ತು ಗೀತೆಯನ್ನು ರಚಿಸಿದ ವಿದ್ವಾಂಸರ ಹೆಸರನ್ನೇ ಈ ವಿಶ್ವವಿದ್ಯಾಲಯಕ್ಕೆ ಇಡಲಾಗಿದೆ. ಈ ಘಟನೆಯು ತಮಿಳುನಾಡಿನಾದ್ಯಂತ ತೀವ್ರ ಟೀಕೆಗೆ ಗುರಿಯಾಗಿತ್ತು. ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರವು ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿತ್ತು.

ಮುಖ್ಯಮಂತ್ರಿ ವಿಜಯ್ ಅವರು ಈಗ ತಮ್ಮ ಸರ್ಕಾರಕ್ಕಿಂತಲೂ ಹಳೆಯದಾದ ಸಂಪ್ರದಾಯವೊಂದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. 1891ರಲ್ಲಿ ಮನೋನ್ಮಣಿಯಂ ಸುಂದರನಾರ್ ಅವರು ಬರೆದ ‘ಮನೋನ್ಮಣಿಯಂ’ ನಾಟಕದ ಮುನ್ನುಡಿಯೇ ಈ ಗೀತೆ. ನವೆಂಬರ್ 23, 1970ರಂದು ಅಂದಿನ ಡಿಎಂಕೆ ಸರ್ಕಾರವು ಸರ್ಕಾರಿ ಹಾಗೂ ನಿರ್ದಿಷ್ಟ ಸಾರ್ವಜನಿಕ ಕಾರ್ಯಕ್ರಮಗಳ ಆರಂಭದಲ್ಲಿ ಈ ಪ್ರಾರ್ಥನಾ ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು. ಕಳೆದ ಹಲವು ತಲೆಮಾರುಗಳಿಂದ ಈ 55 ಸೆಕೆಂಡುಗಳ ಗೀತೆಯು ತಮಿಳುನಾಡಿನ ಸಾಂಸ್ಥಿಕ ಬದುಕಿನ ಅವಿಭಾಜ್ಯ ಅಂಗವಾಗಿ ಬೆರೆತುಹೋಗಿದ್ದು, ಶಾಲಾ ಮಕ್ಕಳು, ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಈ ಗೀತೆ ಕೇಳಿದೊಡನೆ ಎದ್ದು ನಿಲ್ಲುವ ಸಂಸ್ಕೃತಿ ಮೈಗೂಡಿದೆ.

​ಆದರೆ, ಪದ್ಧತಿ ಮತ್ತು ಕಾನೂನಿನ ನಡುವೆ ಕೆಲವೊಮ್ಮೆ ಸಂಘರ್ಷಗಳೂ ನಡೆದಿವೆ. 2018ರಲ್ಲಿ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಚಿ ಕಾಮಕೋಟಿ ಪೀಠದ ವಿಜಯೇಂದ್ರ ಸರಸ್ವತಿ ಅವರು ಈ ಗೀತೆ ಹಾಡುವಾಗ ಎದ್ದು ನಿಲ್ಲದೆ ಕುಳಿತೇ ಇದ್ದದ್ದು ವಿವಾದಕ್ಕೆ ಕಾರಣವಾಗಿತ್ತು. ನಾಮ್ ತಮಿಳರ್ ಕಚ್ಚಿ ಕಾರ್ಯಕರ್ತರು ಇದರ ವಿರುದ್ಧ ರಾಮೇಶ್ವರಂನಲ್ಲಿ ಪ್ರತಿಭಟಿಸಿದ್ದರು. ಬಳಿಕ 2021ರಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು, “‘ತಮಿಳು ತಾಯ್ ವಾಲ್ತು’ ಎಂಬುದು ಪ್ರಾರ್ಥನಾ ಗೀತೆಯೇ ಹೊರತು ರಾಷ್ಟ್ರಗೀತೆಯಲ್ಲ. ಹೀಗಾಗಿ ಅದನ್ನು ಹಾಡುವಾಗ ಎದ್ದು ನಿಲ್ಲಬೇಕೆಂದು ಕಡ್ಡಾಯ ಮಾಡುವ ಯಾವುದೇ ಶಾಸನಬದ್ಧ ನಿಯಮಗಳಿಲ್ಲ” ಎಂದು ತೀರ್ಪು ನೀಡಿದ್ದರು. ಆದರೂ ಗೀತೆಯು ಅತ್ಯುನ್ನತ ಗೌರವಕ್ಕೆ ಅರ್ಹವಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದರು.

​ಹೈಕೋರ್ಟ್ ತೀರ್ಪು ಬಂದ ಕೆಲವೇ ದಿನಗಳಲ್ಲಿ, ಅಂದಿನ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು (ಡಿಸೆಂಬರ್ 12, 2021ರಂದು) ‘ತಮಿಳು ತಾಯ್ ವಾಲ್ತು’ ಅನ್ನು ತಮಿಳುನಾಡಿನ ‘ರಾಜ್ಯ ಗೀತೆ’ ಎಂದು ಅಧಿಕೃತವಾಗಿ ಘೋಷಿಸಿತು. ಅಲ್ಲದೆ, ವಿಕಲಚೇತನರನ್ನು ಹೊರತುಪಡಿಸಿ ಉಳಿದೆಲ್ಲರೂ ಈ ಗೀತೆ ಹಾಡುವಾಗ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಆದೇಶ ಹೊರಡಿಸಿತ್ತು. ಈಗ ವಿಜಯ್ ಮಂಡಿಸಿರುವ ನಿರ್ಣಯವು, ಹಿಂದಿನ ಸರ್ಕಾರಗಳು ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯಕ್ಕೆ ಮತ್ತೊಂದು ರಾಜಕೀಯ ಮತ್ತು ಶಾಸನಾತ್ಮಕ ಬಲವನ್ನು ನೀಡಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...