ಮೋದಿ ಕ್ಷಮೆ ಕೇಳಿದ ಮೆಟಾ; ಬಿಜೆಪಿ ವಿರೋಧಿ ಕಂಟೆಂಟ್‌ಗಳಿಗೆ ಶರವೇಗದ ನಿರ್ಬಂಧ!

Date:

ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್‌ ಪೋಸ್ಟ್ ಕೆಲಕಾಲ ನಿರ್ಬಂಧಗೊಂಡಿದ್ದಕ್ಕೆ ಮೆಟಾದ ಮುಖ್ಯ ಜಾಗತಿಕ ವ್ಯವಹಾರಗಳ ಅಧಿಕಾರಿ ಜೋಯೆಲ್ ಕಪ್ಲಾನ್ ಕ್ಷಮೆಯಾಚಿಸಿದ್ದಾರೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಬಳಿಕ, ‘ಲೋಪವು ತಾಂತ್ರಿಕ ದೋಷದಿಂದ ಸಂಭವಿಸಿದೆ’ ಎಂದು ಕಪ್ಲಾನ್ ಸ್ಪಷ್ಟಪಡಿಸಿದ್ದಾರೆ.

- Advertisement -

ಮೋದಿ ಪೋಸ್ಟ್ ನಿರ್ಬಂಧಗೊಂಡ ಬೆನ್ನಲ್ಲೇ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೆಟಾ ಅಧಿಕಾರಿಗಳಿಗೆ ಇತ್ತೀಚೆಗೆ ಸಮನ್ಸ್ ನೀಡಿತ್ತು. ಈ ಬೆನ್ನಲ್ಲೇ, ಕಪ್ಲಾನ್ ಕ್ಷಮೆಯಾಚಿಸಿದ್ದಾರೆ. ಇದೇ ಅವಧಿಯಲ್ಲಿ ಮೆಟಾ ಸಂಸ್ಥೆಯು ತನ್ನ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಮೋದಿ, ಬಿಜೆಪಿ ವಿರುದ್ಧದ ವಿಷಯಗಳ ಮೇಲಿನ ನಿರ್ಬಂಧಗಳನ್ನು ತೀವ್ರಗೊಳಿಸಿದೆ. ಮೋದಿ ಸರ್ಕಾರವನ್ನು ಟೀಕಿಸುವ ವಿಷಯಗಳನ್ನು ತಡೆಯಲು ಮುಂದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಅಂದಹಾಗೆ, ಭಾರತದಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ ರೀತಿಯ ಸಾಮಾಜಿಕ ಜಾಲತಾಣಗಳು ಕೇವಲ ವೈಯಕ್ತಿಕ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುವ ಸಾಮಾನ್ಯ ತಾಣಗಳಾಗಿ ಉಳಿದಿಲ್ಲ. ಅವು ಇಂದಿನ ಚುನಾವಣಾ ರಾಜಕಾರಣ, ಸರ್ಕಾರದ ನೀತಿಗಳ ಮೇಲಿನ ವಿಮರ್ಶೆ, ವಿದ್ಯಾರ್ಥಿ ಹೋರಾಟಗಳು, ಸ್ವತಂತ್ರ ಪತ್ರಿಕೋದ್ಯಮ ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಅತ್ಯಂತ ಪ್ರಭಾವಶಾಲಿ ಮಾಧ್ಯಮಗಳಾಗಿ ರೂಪಾಂತರಗೊಂಡಿವೆ.

ಇಂತಹ ಸನ್ನಿವೇಶದಲ್ಲಿ, ಸಾರ್ವಜನಿಕ ಚರ್ಚೆಗೆ ಯಾವ ವಿಷಯಗಳು ತಲುಪಬೇಕು ಮತ್ತು ಯಾವ ಧ್ವನಿಗಳು ಮರೆಯಾಗಬೇಕು ಎಂಬುದನ್ನು ಮೆಟಾದಂತಹ ದೈತ್ಯ ಕಂಪನಿಗಳು ತಾಂತ್ರಿಕವಾಗಿ ನಿರ್ಧರಿಸುತ್ತಿವೆ. ಸಿಜೆಪಿ ಪ್ರತಿಭಟನೆ ಮತ್ತು ಅದರ ನಂತರದ ಬೆಳವಣಿಗೆಗಳಲ್ಲಿ ಬಿಜೆಪಿ ವಿರುದ್ಧ ವಿಷಯಗಳನ್ನು ತಡೆಯುವಂತೆ ಮೆಟಾ ಮೇಲೆ ಮೋದಿ ಸರ್ಕಾರ ಒತ್ತಡ ಹೇರುತ್ತಿದೆ. ಅದಕ್ಕಾಗಿ, ಫೇಸ್‌ಬುಕ್‌ನಲ್ಲಿ ಸುಮಾರು 3 ಗಂಟೆಗಳ ಕಾಲ ಮೋದಿ ಅವರ ವಿಡಿಯೋವೊಂದಕ್ಕೆ ನಿರ್ಬಂಧ ಹೇರಿದ್ದನ್ನೇ ಮೋದಿ ಸರ್ಕಾರ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

ಮೋದಿ ಅವರ ವಿಡಿಯೋ ತಾಂತ್ರಿಕ ದೋಷದಿಂದ ನಿರ್ಬಂಧಗೊಂಡಿತ್ತು. ದೋಷವನ್ನು ಸರಿಪಡಿಸಿ ವಿಡಿಯೋವನ್ನು ಮರುಸ್ಥಾಪಿಸಲಾಗಿದೆ ಎಂದು ಮೆಟಾ ಅಂದೇ ಹೇಳಿಕೊಂಡಿತ್ತು. ಆದರೆ, ಕೇಂದ್ರ ಸರ್ಕಾರ ಆ ವಿಷಯವನ್ನು ಅಲ್ಲಿಗೇ ಬಿಡಲಿಲ್ಲ. ಬದಲಾಗಿ, ಸಂಸದೀಯ ಸಮಿತಿ ಮಧ್ಯಪ್ರವೇಶಿಸಿತು. “ಮೆಟಾ ಸಂಸ್ಥೆಯ ಮಾಲೀಕ ಮಾರ್ಕ್‌ ಜುಕರ್‌ಬರ್ಗ್ ಅವರೇ ಖುದ್ದು ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ, ಮೆಟಾಗಿರುವ ‘ಸೇಫ್ ಹಾರ್ಬರ್’ ರಕ್ಷಣಾ ಹಕ್ಕನ್ನು ಹಿಂಪಡೆಯಲಾಗುವುದು” ಎಂದು ಬೆದರಿಕೆವೊಡ್ಡಿತ್ತು.

ಈ ಬೆನ್ನಲ್ಲೇ, ಕಪ್ಲಾನ್ ಕ್ಷಮೆಯಾಚಿಸಿದ್ದಾರೆ. ಇದೇ ಸಮಯದಲ್ಲಿ ಸರ್ಕಾರವನ್ನು ತೀವ್ರವಾಗಿ ವಿಮರ್ಶಿಸುವ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ವಿದ್ಯಾರ್ಥಿ ಪ್ರತಿಭಟನಾಕಾರರು, ರಾಜಕೀಯ ಕಾರ್ಟೂನಿಸ್ಟ್‌ಗಳು  ಹಾಗೂ ಸ್ವತಂತ್ರ ಮಾಧ್ಯಮ ಸಂಸ್ಥೆಗಳ ಪೋಸ್ಟ್‌ಗಳನ್ನು ಯಾವುದೇ ಪೂರ್ವ ಮುನ್ಸೂಚನೆ ಅಥವಾ ಸ್ಪಷ್ಟ ಆಧಾರವಿಲ್ಲದೆ ಮೆಟಾ ನಿರ್ಬಂಧಿಸುತ್ತಿದೆ.

ಈ ಎರಡು ವಿಭಿನ್ನ ನಡೆಗಳು ಮೆಟಾ ತನ್ನ ಸಮುದಾಯ ಮಾನದಂಡಗಳನ್ನು ಎಲ್ಲರ ಮೇಲೆಯೂ ಸಮಾನವಾಗಿ ಅನ್ವಯಿಸುತ್ತಿದೆಯೇ ಎಂಬ ಬಲವಾದ ಸಂಶಯವನ್ನು ಹುಟ್ಟುಹಾಕಿವೆ.

ತಂತ್ರಜ್ಞಾನ ಮತ್ತು ಡಿಜಿಟಲ್ ಹಕ್ಕುಗಳ ಸಂಸ್ಥೆಯಾದ ‘ಸಾಫ್ಟ್‌ವೇರ್ ಫ್ರೀಡಮ್ ಲಾ ಸೆಂಟರ್’ (SFLC.in) ದಾಖಲಿಸಿದ ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರ ಮೇಲೆ ಸರಣಿ ನಿರ್ಬಂಧಗಳು ನಡೆದಿವೆ. ಆಮ್ ಆದ್ಮಿ ಪಾರ್ಟಿ, ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್, ಆಲ್ಟ್ ನ್ಯೂಸ್‌ನ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್, ವಿವಿಧ ರಾಜಕೀಯ ವಕ್ತಾರರು ಹಾಗೂ ಸ್ವತಂತ್ರ ಮಾಧ್ಯಮಗಳ ಕಂಟೆಂಟ್‌ಗಳನ್ನು ಉದ್ದೇಶಪೂರ್ವಕವಾಗಿ ತಡೆಯಲಾಗಿದೆ. ವಿಶೇಷವಾಗಿ, ದೆಹಲಿ ಸೇರಿದಂತೆ ವಿವಿಧೆಡೆ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ವೀಡಿಯೊಗಳು ಮತ್ತು ಮಾಹಿತಿಯನ್ನು ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್‌ನಲ್ಲಿ ‘ಸಂವೇದನಾಶೀಲ ವಿಷಯ’ (sensitive content) ಎಂದು ವರ್ಗೀಕರಿಸಿ ಮರೆಮಾಡುವುದು, ಹಂಚಿಕೊಂಡರೂ ವೀಕ್ಷಿಸಲು ಸಾಧ್ಯವಾಗದಂತೆ ಮಾಡುವುದು ಹಾಗೂ ಅವುಗಳ ತಲುಪುವಿಕೆಯನ್ನು ಹಠಾತ್ತಾಗಿ ಕುಗ್ಗಿಸುವುದು ಕಂಡುಬಂದಿದೆ.

ಇಂಟರ್‌ನೆಟ್‌ ಫ್ರೀಡಮ್ ಫೌಂಡೇಶನ್ (IFF) ಕೂಡ ಇದನ್ನು ‘ಶ್ಯಾಡೋ ಬ್ಯಾನ್ನಿಂಗ್’ ಎಂದು ಕರೆದಿದ್ದು, ಖಾತೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸದೇ ಅಲ್ಗೋರಿದಮ್ ಮಟ್ಟದಲ್ಲೇ ಅದರ ಪ್ರಸಾರವನ್ನು ಕಡಿತಗೊಳಿಸುವ ತಂತ್ರಜ್ಞಾನದ ದುರ್ಬಳಕೆಯನ್ನು ಎತ್ತಿ ತೋರಿಸಿದೆ.

ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಕೂಡ ಈ ಡಿಜಿಟಲ್ ಸೆನ್ಸಾರ್‌ಶಿಪ್‌ ದಾಳಿಗೆ ತುತ್ತಾಗಿವೆ. ‘ಸ್ಕ್ರೋಲ್’ (Scroll.in) ಮಾಧ್ಯಮ ಸಂಸ್ಥೆಯು ಕಾಶ್ಮೀರದ ಪೆಲೆಟ್ ಗನ್ ಸಂತ್ರಸ್ತರ ಸ್ಥಿತಿಗತಿ, ಅಮೃತಸರದ ಮಾಂಸ ನಿಷೇಧ ಹಾಗೂ ವಿದೇಶಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕಟಿಸಿದ ವರದಿಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಇದಕ್ಕೆ ಭಾರತದ ಐಟಿ ನಿಯಮಗಳು ಮತ್ತು ಕಾನೂನುಬದ್ಧ ಅಗತ್ಯತೆಗಳು’ ಕಾರಣವೆಂದು ತಾಂತ್ರಿಕ ಸಂದೇಶ ನೀಡಲಾಗಿತ್ತು. ಅಂತೆಯೇ ‘ದಿ ವೈರ್’ ಸಂಸ್ಥೆಯು ಅರುಣಾಚಲ ಪ್ರದೇಶದ ಗಡಿ ವಿಚಾರಗಳು ಹಾಗೂ ಸೂಕ್ಷ್ಮ ರಾಜಕೀಯ ವಿದ್ಯಮಾನಗಳ ಕುರಿತು ಮಾಡಿದ ವರದಿಗಳು ದೇಶದೊಳಗೆ ಕಾಣಿಸದಂತೆ ‘ಜಿಯೋ-ಬ್ಲಾಕಿಂಗ್’ ಮಾಡಲ್ಪಟ್ಟಿವೆ.

ಇದು ಕೇವಲ ಸಣ್ಣ ಪ್ರಮಾಣದ ರಾಜಕೀಯ ಪೋಸ್ಟ್‌ಗಳ ತೆಗೆದುಹಾಕುವಿಕೆಯಲ್ಲ, ಬದಲಿಗೆ ಸರ್ಕಾರಕ್ಕೆ ಸಮಸ್ಯೆ ಉಂಟುಮಾಡಬಲ್ಲ, ವೈಫಲ್ಯಗಳನ್ನು ಎತ್ತಿತೋರಿಸುವ ಪತ್ರಿಕೋದ್ಯಮ, ಮಾನವ ಹಕ್ಕುಗಳ ಹೋರಾಟ ಹಾಗೂ ಪ್ರಜಾಪ್ರಭುತ್ವದ ಮೂಲಭೂತ ಪ್ರತಿಭಟನಾ ಧ್ವನಿಗಳನ್ನು ಡಿಜಿಟಲ್ ಜಗತ್ತಿನಲ್ಲಿ ಜನರನ್ನು ತಲುಪದಂತೆ ತಡೆಯುವ ವ್ಯವಸ್ಥಿತ ಪ್ರಯತ್ನ ಎಂಬ ಆತಂಕವನ್ನು ಸೃಷ್ಟಿಸಿದೆ.

ಡಿಜಿಟಲ್ ವೇದಿಕೆಗಳು ಮತ್ತು ಸರ್ಕಾರದ ನಡುವಿನ ಈ ಸಂಕೀರ್ಣ ಸಂಬಂಧಕ್ಕೆ ಹೈದರಾಬಾದ್‌ನಲ್ಲಿ ನಡೆದ ಘಟನೆಯನ್ನು ‘ದಿ ವೈರ್’ ಉದಾಹರಣೆಯಾಗಿ ನೀಡಿದೆ. ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ವೀಡಿಯೊಗಳು ಪ್ರಸಾರವಾದವು ಎಂಬ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ಮೆಟಾ ಇಂಡಿಯಾ ಮುಖ್ಯಸ್ಥ ಅರುಣ್ ಶ್ರೀನಿವಾಸ್ ಅವರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಜಾಗತಿಕ ತಂತ್ರಜ್ಞಾನ ಸಂಸ್ಥೆಯೊಂದರ ಭಾರತೀಯ ಮುಖ್ಯಸ್ಥರನ್ನು ವೈಯಕ್ತಿಕವಾಗಿ ಪ್ರಕರಣದಲ್ಲಿ ಹೆಸರಿಸಿದ್ದು ಅತ್ಯಂತ ಕಠಿಣ ಹೆಜ್ಜೆಯಾಗಿತ್ತು. ಇದರ ಬೆನ್ನಲ್ಲೇ ಪ್ರಧಾನಿಯವರ ಪೋಸ್ಟ್ ನಿರ್ಬಂಧಗೊಂಡಾಗ ಮೆಟಾ ಕ್ಷಮೆಯಾಚಿಸಿತು. ಈ ಎರಡು ಘಟನೆಗಳನ್ನು ಒಟ್ಟಿಗೆ ವಿಶ್ಲೇಷಿಸಿದರೆ, ಅಧಿಕಾರದಲ್ಲಿರುವ ಸರ್ಕಾರದ ಒತ್ತಡಕ್ಕೆ ತಂತ್ರಜ್ಞಾನ ಕಂಪನಿಗಳು ಎಷ್ಟು ಬೇಗನೆ ಮಣಿಯುತ್ತವೆ ಮತ್ತು ಸಾಮಾನ್ಯ ನಾಗರಿಕ ಅಥವಾ ವಿಪಕ್ಷದ ನಾಯಕರ ದೂರುಗಳಿಗೆ ಹೇಗೆ ನಿರ್ಲಕ್ಷ್ಯ ವಹಿಸುತ್ತವೆ ಎಂಬುದು ಸ್ಪಷ್ಟವಾಗುತ್ತದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ 2026ರಲ್ಲಿ ಜಾರಿಗೆ ತರಲಾದ ‘ಐಟಿ ತಿದ್ದುಪಡಿ ನಿಯಮ’ಗಳು ಪ್ರಮುಖ ಪಾತ್ರ ವಹಿಸಿವೆ. ಹೊಸ ನಿಯಮಗಳ ಪ್ರಕಾರ, ಸರ್ಕಾರ ಅಥವಾ ನ್ಯಾಯಾಲಯವು ಯಾವುದೇ ವಿಷಯವನ್ನು ‘ಕಾನೂನುಬಾಹಿರ’ ಎಂದು ಸೂಚಿಸಿದರೆ, ಸಾಮಾಜಿಕ ಮಾಧ್ಯಮ ಕಂಪನಿಗಳು ಅದನ್ನು ಕೇವಲ ಮೂರು ಗಂಟೆಗಳ ಕಾಲಾವಧಿಯೊಳಗೆ ತಮ್ಮ ವೇದಿಕೆಯಿಂದ ತೆಗೆದುಹಾಕಬೇಕಾಗುತ್ತದೆ. ಈ ಹಿಂದೆ ಇದ್ದ 36 ಗಂಟೆಗಳ ಕಾಲಾವಧಿಯನ್ನು ಕೇವಲ ಮೂರು ಗಂಟೆಗೆ ಕಡಿತಗೊಳಿಸಿರುವುದರಿಂದ, ಕಂಪನಿಗಳಿಗೆ ಸರ್ಕಾರದ ಆದೇಶದ ಕಾನೂನುಬದ್ಧತೆಯನ್ನು ಪರಿಶೀಲಿಸಲು ಅಥವಾ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಯಾವುದೇ ಕಾಲಾವಕಾಶವೇ ಸಿಗದಂತಾಗಿದೆ. ಒಂದು ವೇಳೆ, ಈ ನಿಯಮವನ್ನು ಪಾಲಿಸದಿದ್ದರೆ, ಕಂಪನಿಗಳು ಬಳಕೆದಾರರ ಪೋಸ್ಟ್‌ಗಳಿಗೆ ಪಡೆಯುವ ‘ಸೇಫ್ ಹಾರ್ಬರ್’ ಅಂದರೆ ಕಾನೂನಾತ್ಮಕ ರಕ್ಷಣೆಯನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ. ಪರಿಣಾಮವಾಗಿ, ಕಾನೂನು ಪ್ರಕ್ರಿಯೆಯ ಅಪಾಯದಿಂದ ಪಾರಾಗಲು ಮೆಟಾದಂತಹ ಸಂಸ್ಥೆಗಳು ಸರ್ಕಾರದ ಆದೇಶಗಳನ್ನು ಪ್ರಶ್ನಿಸದೇ ‘ಮೊದಲು ತೆಗೆದುಹಾಕಿ, ನಂತರ ಪರಿಶೀಲಿಸಿ’ ಎಂಬ ತತ್ವಕ್ಕೆ ಶರಣಾಗುತ್ತಿವೆ.

ಈ ಲೇಖನ ಓದಿದ್ದೀರಾ?: ಬ್ರಿಜ್‌ ಭೂಷಣ್ ಖುಲಾಸೆ | ಬೂಟಿನ ಏಟು ತಿಂದು ಹೋರಾಡಿದ್ದಕ್ಕೆ ಸಿಕ್ಕ ʼಪದಕʼ!

ಮೆಟಾದ ಸ್ವಂತ ಪಾರದರ್ಶಕತೆಯ ವರದಿಗಳ ಪ್ರಕಾರ, 2025ರ ಮೊದಲ ಆರು ತಿಂಗಳಲ್ಲಿ ಭಾರತ ಸರ್ಕಾರದ ಕೋರಿಕೆಯ ಮೇರೆಗೆ 28,000ಕ್ಕೂ ಹೆಚ್ಚು ಕಂಟೆಂಟ್‌ಗಳನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಈ ಎಲ್ಲ ಪೋಸ್ಟ್‌ಗಳು ರಾಜಕೀಯವೇ ಆಗಿರಬೇಕಿಲ್ಲ, ಅವುಗಳಲ್ಲಿ ದ್ವೇಷ ಭಾಷಣ, ಅಪರಾಧ ಅಥವಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳೂ ಇರಬಹುದು. ಆದರೆ, ಸರ್ಕಾರದ ನಿಯಂತ್ರಣಾಧಿಕಾರದ ವ್ಯಾಪ್ತಿ ಎಷ್ಟು ಬೃಹತ್ ಆಗಿದೆ ಎಂಬುದಕ್ಕೆ ಈ ಅಂಕಿಅಂಶವೇ ಸಾಕ್ಷಿ. ಅಲ್ಲದೆ ‘ಸಹಯೋಗ್ ಪೋರ್ಟಲ್’ ಮೂಲಕ ಪೊಲೀಸ್ ಇಲಾಖೆಗಳು ನೇರವಾಗಿ ಕಂಟೆಂಟ್ ಟೇಕ್‌ಡೌನ್‌ ಕೋರಿಕೆಗಳನ್ನು ಕಳುಹಿಸುವ ವ್ಯವಸ್ಥೆಯು ಜಾರಿಯಲ್ಲಿದೆ. ಇದನ್ನು ಎಕ್ಸ್ (X) ಸಂಸ್ಥೆಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಸರ್ಕಾರವು ಇದನ್ನು ತಪ್ಪು ಮಾಹಿತಿ ನಿಯಂತ್ರಣ ಎಂದು ಸಮರ್ಥಿಸಿಕೊಂಡರೂ, ರಾಜಕೀಯ ವಿಮರ್ಶೆಗಳನ್ನು ಹತೋಟಿಯಲ್ಲಿಡಲು ಇದನ್ನು ಬಳಸಲಾಗುತ್ತಿದೆ ಎಂಬ ಆರೋಪ ಬಲವಾಗಿದೆ.

ಆದರೆ, ಮೋದಿ ಸರ್ಕಾರದ ವಿರುದ್ಧದ ಪೋಸ್ಟ್‌ಗಳನ್ನು ನಿಯಂತ್ರಿಸುವ ಮೆಟಾದ ಕಾರ್ಯಾಚರಣೆಗಳು ಪ್ರಜಾಪ್ರಭುತ್ವದ ಆಶಯಕ್ಕೆ ಮಾರಕವಾಗಿದೆ. ಬ್ಲಾಕಿಂಗ್‌ಗಿಂತಲೂ ಹೆಚ್ಚಾಗಿ ಶ್ಯಾಡೋ ಬ್ಯಾನ್ನಿಂಗ್, ಅಲ್ಗೋರಿದಮ್ ತಡೆಗಳು ಹಾಗೂ ಸೂಕ್ಷ್ಮ ವಿಷಯಗಳ ವರ್ಗೀಕರಣದ ಮೂಲಕ ‘ಕಾಣದ ಸೆನ್ಸಾರ್’ಗಳು ಜಾರಿಯಲ್ಲಿವೆ.

ಹಿಂದೊಮ್ಮೆ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳ ಸಂಪಾದಕರು ಸಾರ್ವಜನಿಕ ಚರ್ಚೆಯ ಸರಿ-ತಪ್ಪುಗಳನ್ನು ನಿರ್ಧರಿಸುವ ಗೇಟ್‌ಕೀಪರ್‌ಗಳಾಗಿದ್ದರು. ಆದರೆ, ಇಂದು ಆ ಮಹತ್ವದ ಸ್ಥಾನವನ್ನು ಮೆಟಾ, ಗೂಗಲ್ ಹಾಗೂ ಎಕ್ಸ್ ಸಂಸ್ಥೆಗಳ ಅಲ್ಗೋರಿದಮ್‌ಗಳು ಹಾಗೂ ಸರ್ಕಾರದ ಟೇಕ್‌ಡೌನ್‌ಗಳು ಆಕ್ರಮಿಸಿಕೊಂಡಿವೆ.

ಮೋದಿಯವರ ಒಂದು ಪೋಸ್ಟ್ ಮರೆಯಾದಾಗ ಸಚಿವ ಮಟ್ಟದ ಸಭೆ ಮತ್ತು ಕ್ಷಮೆಯಾಚನೆಯ ಒತ್ತಡಗಳು ಕಂಡುಬರುವ ಈ ವ್ಯವಸ್ಥೆಯಲ್ಲಿ, ತಮ್ಮ ಧ್ವನಿ ಅಡಗಿಸಲ್ಪಟ್ಟಾಗ ಸಾಮಾನ್ಯ ನಾಗರಿಕ, ವಿದ್ಯಾರ್ಥಿ ಅಥವಾ ವಿಪಕ್ಷದ ನಾಯಕ ಯಾರ ಬಳಿ ನ್ಯಾಯ ಕೇಳಬೇಕು ಎಂಬುದು ಅತ್ಯಂತ ಸಂಕೀರ್ಣ ಪ್ರಶ್ನೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಪಾರದರ್ಶಕತೆ ಇಲ್ಲದ ಡಿಜಿಟಲ್ ಕಾರ್ಪೊರೇಟ್ ಅಧಿಕಾರ ಮತ್ತು ರಾಜಕೀಯ ಅಧಿಕಾರ ಒಂದಾದಾಗ, ಅದು ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಂತ ಹಂತವಾಗಿ ಕ್ಷೀಣಿಸುವಂತೆ ಮಾಡುತ್ತದೆ ಎಂಬುದಕ್ಕೆ ಈ ಸರಣಿ ಘಟನೆಗಳು ಸಾಕ್ಷಿಯಾಗಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಹರಾಜು ರದ್ದು, ಲೀಸ್‌ಗೆ ನೀಡಲು ಸಿಎಂ ಭರವಸೆ : ಶ್ರೀಮಂತ ಬಿರಾದರ್

ಬೀದರ್ ಜಿಲ್ಲೆಯ ರೈತರು‌, ಕಾರ್ಮಿಕರ ಜೀವನಾಡಿಯಾಗಿರುವ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ...

‘ದೇವರೇ ಈ ದೇಶವನ್ನು ಕಾಪಾಡಬೇಕು’: ರೈಲು ಪ್ರಯಾಣದ ಗದ್ದಲಕ್ಕೆ ಬೇಸತ್ತ ತೇಜಸ್ವಿ ಸೂರ್ಯ ಪತ್ನಿ

ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ಕಿರಿಕಿರಿ ಅನುಭವಿಸಿರುವುದಾಗಿ ಬಿಜೆಪಿ...

ಬೀದರ್ | ಬರ ಪರಿಸ್ಥಿತಿ : ವಿಶೇಷ ಪ್ಯಾಕೇಜ್ ಘೋಷಿಸಲು ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬೆಳೆ...