ರಾಮಮಂದಿರ ನಿರ್ಮಾಣದ ಖರ್ಚು ವೆಚ್ಚಗಳ ತನಿಖೆಯೂ ನಡೆಯಲಿ- ವಿಶ್ವ ಹಿಂದು ಪರಿಷತ್

Date:

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಡಾ ಅನಿಲ್ ಮಿಶ್ರ ತಮ್ಮ ಸ್ಥಾನ ತ್ಯಾಗಕ್ಕೆ ಸುಲಭದಲ್ಲಿ ಸಿದ್ಧರಿರಲಿಲ್ಲ. ಒತ್ತಡ ಹೆಚ್ಚಿದ ಕಾರಣ ರಾಜೀನಾಮೆ ನೀಡಿದ್ದಾರೆ.

- Advertisement -

ರಾಜೀನಾಮೆಯ ಚಿತ್ರನಾಟಕವನ್ನು ಎಂಟು ದಿನಗಳ ಹಿಂದೆ ಹರಿದ್ವಾರದಲ್ಲಿ ಬರೆಯಲಾಗಿತ್ತು. ಇದೇ ಜೂನ್ 18 -19ರಂದು ಹರಿದ್ವಾರದಲ್ಲಿ ವಿಶ್ವಹಿಂದು ಪರಿಷತ್ತಿನ ಸಭೆ ನಡೆಯಿತು. ಅಯೋಧ್ಯೆಯಿಂದ ಚಂಪತ್ ರಾಯ್ ಮತ್ತು ಗೋಪಾಲ ರಾವ್ ಕೂಡ ಈ ಸಭೆಗೆ ತೆರಳಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

ಆರೆಸ್ಸೆಸ್ ಪ್ರಧಾನಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಈ ಇಬ್ಬರಿಂದಲೂ ರಾಮಮಂದಿರ ದೇಣಿಗೆ ಲೂಟಿಯ ವಿವರಗಳನ್ನು ಪಡೆದರು ಎನ್ನಲಾಗಿದೆ. ಸಂಘದ ಹಿರಿಯ ಪದಾಧಿಕಾರಿಗಳು ಈ ಇಬ್ಬರಿಂದ ದೂರ ಕಾಯ್ದುಕೊಂಡಿದ್ದಾರೆ. ಹೆಚ್ಚಿದ ಕಿರಿಕಿರಿ ಮತ್ತು ಒತ್ತಡದ ಕಾರಣ ಇಬ್ಬರೂ ಶುಕ್ರವಾರ ತಮ್ಮ ರಾಜೀನಾಮೆಯನ್ನು ಟ್ರಸ್ಟ್ ಅಧ್ಯಕ್ಷ ಮಹಂತ ನೃತ್ಯಗೋಪಾಲದಾಸ ಅವರಿಗೆ ಸಲ್ಲಿಸಿದ್ದಾರೆ.

ಗುರುವಾರ ರಾತ್ರಿಯಿಡೀ ಚಂಪತ್ ರಾಯ್ ಗೆ ವಿಶ್ವಹಿಂದು ಪರಿಷತ್ ಮುಂದಾಳುಗಳ ಫೋನ್ ಕರೆಗಳು ಬಂದಿವೆ. ರಾಜೀನಾಮೆ ಕೊಟ್ಟು ವಿಷಯವನ್ನು ಶಾಂತಗೊಳಿಸುವುದು ಒಳಿತು ಎಂದು ಈ ಮುಂದಾಳುಗಳು ಸಲಹೆ ನೀಡಿದರೆನ್ನಲಾಗಿದೆ. ಶುಕ್ರವಾರ ಅನಿಲ್ ಮಿಶ್ರ ಅವರನ್ನೂ ಟ್ರಸ್ಟ್ ಅಧ್ಯಕ್ಷರ ಬಳಿ ಕರೆದೊಯ್ದ ಚಂಪತ್ ರಾಯ್ ಇಬ್ಬರ ರಾಜೀನಾಮೆ ಸಲ್ಲಿಸಿದ್ದಾರೆ.

ಕೇವಲ ಟ್ರಸ್ಟ್ ನ ತನಿಖೆ ಮಾತ್ರವಲ್ಲ, ರಾಮಮಂದಿರ ನಿರ್ಮಾಣಕ್ಕೆಂದು ರಚಿಸಲಾದ ಶ್ರೀರಾಮಜನ್ಮಭೂಮಿ ನಿರ್ಮಾಣ ಸಮಿತಿಯ ಖಾತೆಗಳು ಮತ್ತು ಖರ್ಚುಗಳನ್ನೂ ತನಿಖೆಗೆ ಗುರಿಪಡಿಸಬೇಕೆಂದು ವಿಶ್ವಹಿಂದು ಪರಿಷತ್ ಸಭೆಯಲ್ಲಿ ಭಾಗವಹಿಸಿದ್ದ ಸಾಧು ಸಂತರು ಆಗ್ರಹಿಸಿದರು ಎನ್ನಲಾಗಿದೆ.

ರಾಮಮಂದಿರ ದೇಣಿಗೆ ಲೂಟಿಯ ಕುರಿತು ಸಾಧು ಸಂತರ ಆಕ್ರೋಶ ಭುಗಿಲೆದ್ದಿರುವ ಕಾರಣವಾಗಿ ಇದೇ ಜೂನ್ 26ಕ್ಕೆ ಅಯೋಧ್ಯೆಯಲ್ಲಿ ನಡೆಯಬೇಕಿದ್ದ ವಿಶ್ವಹಿಂದು ಪರಿಷತ್ತಿನ ಕೇಂದ್ರೀಯ ಸಮಿತಿಯ ನಾಲ್ಕು ದಿನಗಳ ಸಮಾವೇಶವನ್ನು ಮುಂದಕ್ಕೆ ಹಾಕಲಾಗಿದೆ. ಈ ಸಮಾವೇಶ ಕಾರಸೇವಕಪುರಂ ನಲ್ಲಿ ನಡೆಯುವುದೆಂದು ನಿಗದಿಯಾಗಿತ್ತು. ವಿಶ್ವಹಿಂದು ಪರಿಷತ್ತಿನ ಎಲ್ಲ 44 ಪ್ರಾಂತಗಳ ಪ್ರತಿನಿಧಿಗಳು ಭಾಗವಹಿಸುವವರಿದ್ದರು.

ಆರೋಪ ಕೆಲವು ವ್ಯಕ್ತಿಗಳಿಗೆ ಸೀಮಿತವಾಗಿರುವ ಕಾರಣ ಪೂರ್ತಿ ಟ್ರಸ್ಟನ್ನು ಭಂಗಗೊಳಿಸಿ ಹೊಸ ಟ್ರಸ್ಟನ್ನು ರಚಿಸುವ ಅಗತ್ಯವಿಲ್ಲ ಎಂದು ವಿಶ್ವಹಿಂದು ಪರಿಷತ್ ಅಧ್ಯಕ್ಷ ಆಲೋಕ್ ಕುಮಾರ್ ಹೇಳಿದ್ದಾರೆ. ಮಂದಿರದ ವ್ಯವಸ್ಥೆಗಳಲ್ಲಿ ಸುಧಾರಣೆಯಾಗಬೇಕು. ಎಲ್ಲ ಪ್ರಕ್ರಿಯೆಗಳಲ್ಲಿ ಆಧುನಿಕ ತಂತ್ರಜ್ಞಾನದ ಮತ್ತು ಉಪಕರಣಗಳ ಅಳವಡಿಕೆಯಾಗಬೇಕು, ಶ್ರೀರಾಮನ ಸಂಪತ್ತು ಸುರಕ್ಷಿತವಾಗಿರಬೇಕು, ಭಕ್ತರಿಗೆ ಉತ್ತಮ ಸೌಕರ್ಯಗಳು ದೊರೆಯಬೇಕು. ಮಂದಿರದ ಆಡಳಿತ ಪಾರದರ್ಶಕವಾಗಿರಬೇಕು. ಎಫ್.ಐ.ಆರ್. ನಲ್ಲಿ ಎಂಟು ಮಂದಿ ಆರೋಪಿಗಳ ಜೊತೆಗೆ ಇತರರು ಎಂದೂ ನಮೂದಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KPSC ಹಗರಣ | ಅಮಾನತಿನಲ್ಲಿರುವ ಐಎಎಸ್‌ ಗಂಗ್ವಾರ್‌ಗೆ ಜಾಮೀನು ನಿರಾಕರಣೆ

KPSC (ಕರ್ನಾಟಕ ಲೋಕಸೇವಾ ಆಯೋಗ) ನಡೆಸಿದ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ...

ಏಕಪಕ್ಷೀಯ ನಿರ್ಧಾರ ವಿವಾದದ ಬೆನ್ನಲ್ಲೇ ಸಭೆ: ಸರ್ವಮತದಿಂದ ತೀಮಾರ್ನಗಳ ತಗೆದುಕೊಂಡಿದ್ದು ಎಂದ ಇಸಿಐ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ...

ಮಂಗಳೂರು | ಕಾರಿಡಾರ್‌ ಗೋಡೆ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ, ಓರ್ವ ಗಂಭೀರ

ಮಂಗಳೂರಿನ ಪಾಂಡೇಶ್ವರ ಸಮೀಪದ ಎಮ್ಮೆಕೆರೆ ಕ್ರಾಸ್ ಬಳಿಯ ರಾಮಲಕ್ಷ್ಮೀ ಹಾಲ್ ಸಭಾಭವನದಲ್ಲಿ...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು: ಜನವಾದಿ ಮಹಿಳಾ ಸಂಘಟನೆ ಆಗ್ರಹ

ದೇಶದ ಚುನಾವಣಾ ಪ್ರಜಾಪ್ರಭುತ್ವದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಮುಖ್ಯ ಚುನಾವಣಾ...