ಮಣಿಪುರ | ಮತ್ತೆ ಭುಗಿಲೆದ್ದ ಹಿಂಸಾಚಾರ: 20ಕ್ಕೂ ಅಧಿಕ ಮನೆಗಳಿಗೆ ಬೆಂಕಿ

Date:

ಕೆಲವು ದಿನಗಳ ಕಾಲ ಕೊಂಚ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ನಾಗಾ ಮತ್ತು ಕುಕಿ ಸಮುದಾಯಗಳ ನಡುವೆ ಮತ್ತೆ ಹಿಂಸಾಚಾರ ಆರಂಭವಾಗಿದ್ದು, 20ಕ್ಕೂ ಅಧಿಕ ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

- Advertisement -

ನೋನಿ ಜಿಲ್ಲೆಯ ಲೀಕೋಟ್ ಕುಕಿ ಗ್ರಾಮದಲ್ಲಿ ಗುರುವಾರ ಮುಂಜಾನೆ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಈ ದಾಳಿಯನ್ನು ಕುಕಿ ಇನ್ಪಿ ಜಿರಿಬಮ್, ತಮೆಂಗ್ಲಾಂಗ್ ಮತ್ತು ನೋನಿ (ಜೆಟಿಎನ್) ಅಪೆಕ್ಸ್ ಬಾಡಿ ಖಂಡಿಸಿವೆ. ಬಂಡಾಯ ಗುಂಪು NSCN-IM ಈ ದಾಳಿ ನಡೆಸಿದೆ ಎಂದು ದೂರಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಇದನ್ನೂ ಓದಿ: ಮಣಿಪುರ | ಆರು ಮಂದಿ ಹತ್ಯೆ; ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ನಾಗಾ ಸಂಘಟನೆ ಆಗ್ರಹ

“ಗ್ರಾಮದ ಸ್ವಯಂಸೇವಕರು ಪರವಾನಗಿ ಪಡೆದ ಸಿಂಗಲ್-ಬ್ಯಾರೆಲ್ ಬಂದೂಕುಗಳನ್ನು ಹಿಡಿದು ಗ್ರಾಮವನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ದಾಳಿಕೋರರು ಮಾರ್ಟರ್ ಶೆಲ್‌ಗಳು ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದ್ದಾರೆ” ಎಂದು ಜೆಟಿಎನ್ ಸಂಘಟನೆ ಹೇಳಿದೆ.

“ದಾಳಿಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದೆ ಗ್ರಾಮದ ಸ್ವಯಂಸೇವಕರು ಹಿಂದೆ ಸರಿಯಬೇಕಾಯಿತು. ಇದಾದ ಬಳಿಕ ಆ ಗುಂಪು ಲೈಕೋಟ್ ಕುಕಿ ಗ್ರಾಮಕ್ಕೆ ಬೆಂಕಿ ಹಚ್ಚಿದೆ. ಇದರಿಂದಾಗಿ ಸಾಕಷ್ಟು ಹಾನಿಯಾಗಿದೆ” ಎಂದು ಸಂಘಟನೆ ಹೇಳಿಕೆಯಲ್ಲಿ ಆರೋಪಿಸಿದೆ. ಹಾಗೆಯೇ ಈ ಘಟನೆ ಬಗ್ಗೆ ತನಿಖೆಗೆ ಆಗ್ರಹಿಸಿದೆ.

2023ರ ಮೇ 3ರಿಂದ ಮಣಿಪುರದಲ್ಲಿ ಬಹುಸಂಖ್ಯಾತ ಮೈತೇಯಿ ಮತ್ತು ಬುಡಕಟ್ಟು ಸಮುದಾಯವಾದ ಕುಕಿ-ಝೋ ನಡುವೆ ಸುದೀರ್ಘವಾದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಬಿಜೆಪಿ ಸರ್ಕಾರ ಈವರೆಗೂ ಈ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುವಲ್ಲಿ ಸಫಲವಾಗಿಲ್ಲ. ಬದಲಾಗಿ ಬಿಜೆಪಿ ರಾಜಕೀಯದಾಟದಲ್ಲೇ ತೊಡಗಿದೆ. ಇವೆಲ್ಲವುದರ ನಡುವೆ 2026ರಲ್ಲಿ ಮಣಿಪುರದಲ್ಲಿ ಹಿಂಸಾಚಾರ ಮತ್ತೊಂದು ಸಮುದಾಯಕ್ಕೆ ಪಸರಿಸಿದೆ. ಬುಡಕಟ್ಟು ಸಮುದಾಯ ನಾಗಾ ಮತ್ತು ಕುಕಿ ನಡುವೆ ಹಿಂಸಾಚಾರ ಆರಂಭವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ...

ಕಾಲಮಾನ | ದೇಹವೇ ನೈತಿಕ ಹೋರಾಟದ ತಾಣವಾದಾಗ…

ಉಪವಾಸ ಸತ್ಯಾಗ್ರಹ ಬಲಪ್ರಯೋಗದ ಬದಲು ಸ್ವಯಂಪ್ರೇರಿತ ವೇದನೆ/ಯಾತನೆಯನ್ನು ಅವಲಂಬಿಸುತ್ತದೆ. ಅದು ಮಣಿಸುವುದಕ್ಕಿಂತಲೂ...

ಭಾಲ್ಕಿ | ಹಬ್ಬಗಳ ಆಚರಣೆಯ ಹಿಂದಿರುವ ವೈಚಾರಿಕ ನೆಲೆ ಅರಿಯಬೇಕು: ಧನಲಕ್ಷ್ಮಿ ಪಾಟೀಲ್

ಹಬ್ಬಗಳು ಕೇವಲ ಸಂಭ್ರಮದ ಆಚರಣೆಗಳಾಗಿರದೆ, ಅವುಗಳ ಹಿಂದಿರುವ ಸಾಮಾಜಿಕ, ಸಾಂಸ್ಕೃತಿಕ ಹಾಗೂ...