ಆಕಾಶ್, ಈಶಾನ್‌ಗೆ ನೋ ಎಂಟ್ರಿ: ಅಳಿಯಂದಿರಿಗೆ ಕೊಕ್, ಸೊಸೆ ದೀಪಿಕಾಗೆ ಬಿಎಸ್‌ಪಿ ಜವಾಬ್ದಾರಿ ನೀಡುತ್ತಾರಾ ಮಾಯಾವತಿ?

Date:

ಬಹುಜನ ಸಮಾಜ ಪಕ್ಷದಲ್ಲಿ (ಬಿಎಸ್‌ಪಿ) ವಂಶಪಾರಂಪರ್ಯ ರಾಜಕಾರಣದ ಸುತ್ತ ಎದ್ದಿದ್ದ ಹೊಸ ವಿವಾದಕ್ಕೆ ಪಕ್ಷದ ಸುಪ್ರೀಮೋ ಮಾಯಾವತಿ ತೆರೆ ಎಳೆದಿದ್ದಾರೆ. ತಮ್ಮ ಇಬ್ಬರು ಸೋದರಸಂಬಂಧಿಗಳಾದ ಆಕಾಶ್ ಆನಂದ್ ಹಾಗೂ ಈಶಾನ್ ಆನಂದ್ ಅವರಿಗೆ ಪಕ್ಷದಲ್ಲಿ ಯಾವುದೇ ಹುದ್ದೆ ನೀಡದಿರಲು ನಿರ್ಧರಿಸಿರುವ ಅವರು, ತಮ್ಮ ಕಿರಿಯ ಸಹೋದರ ಆನಂದ್ ಕುಮಾರ್ ಅವರ ಪುತ್ರಿ (ಸೋದರಸೊಸೆ) ಕುಮಾರಿ ದೀಪಿಕಾ ಆನಂದ್ ಅವರಿಗೆ ಭವಿಷ್ಯದಲ್ಲಿ ಪಕ್ಷದ ಜವಾಬ್ದಾರಿ ವಹಿಸುವ ಸೂಚನೆ ನೀಡಿದ್ದಾರೆ.

- Advertisement -

ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬಹಿರಂಗಪಡಿಸಿರುವ ಸುದೀರ್ಘ ಹೇಳಿಕೆಯಲ್ಲಿ ಮಾಯಾವತಿ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. “ನಾನು ಅವಿವಾಹಿತೆಯಾಗಿರುವುದರಿಂದ, ಭದ್ರತೆ ಮತ್ತು ವೈಯಕ್ತಿಕ ಆರೈಕೆಗಾಗಿ ನನ್ನ ಕಿರಿಯ ಸಹೋದರ ಆನಂದ್ ಕುಮಾರ್ ಅವರನ್ನು ಜೊತೆಯಲ್ಲಿಟ್ಟುಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಅವರ ಕುಟುಂಬದವರು ಇದರ ರಾಜಕೀಯ ಲಾಭ ಪಡೆಯುವುದು ಪಕ್ಷದ ತತ್ವಕ್ಕೆ ವಿರುದ್ಧ. ಆದ್ದರಿಂದ, ಅವರ ಇಬ್ಬರೂ ಗಂಡುಮಕ್ಕಳಿಗೆ ಪಕ್ಷದಲ್ಲಿ ಯಾವುದೇ ಸಣ್ಣ ಅಥವಾ ದೊಡ್ಡ ಹುದ್ದೆ ನೀಡದಿರುವುದು ನನ್ನ ಅಂತಿಮ ತೀರ್ಮಾನ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಇದನ್ನೂ ಓದಿ: ಅಶೋಕ್ ಸಿದ್ಧಾರ್ಥ್ ನಿವೃತ್ತಿ ಬೆನ್ನಲ್ಲೇ ಆಕಾಶ್ ಆನಂದ್‌ನನ್ನು ಪಕ್ಷದಿಂದಲೇ ಹೊರಹಾಕಿದ ಮಾಯಾವತಿ

ಇದೇ ವೇಳೆ, ಲಂಡನ್‌ನಲ್ಲಿ ವಕೀಲಿಕೆಯನ್ನು ಅಭ್ಯಾಸ ಮಾಡುತ್ತಿರುವ 22 ವರ್ಷದ ದೀಪಿಕಾ ಆನಂದ್ ಅವರ ಪ್ರಾಮಾಣಿಕತೆ ಮತ್ತು ಸಾಮರ್ಥ್ಯವನ್ನು ಗಮನಿಸಿ, ಭವಿಷ್ಯದಲ್ಲಿ ಅಗತ್ಯ ಬಿದ್ದಲ್ಲಿ ಆನಂದ್ ಕುಮಾರ್ ಅವರು ತಮ್ಮ ಜವಾಬ್ದಾರಿಗಳಲ್ಲಿ ದೀಪಿಕಾ ಅವರ ನೆರವು ಪಡೆಯಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ದೀಪಿಕಾ ಅವರು ರಾಜಕೀಯಕ್ಕೆ ಬರಲು ಆಸಕ್ತಿ ತೋರದಿದ್ದರೆ, ದಲಿತ ಸಮುದಾಯದ ಇತರ ನಿಷ್ಠಾವಂತ ಕಾರ್ಯಕರ್ತರಿಗೆ ಆ ಜವಾಬ್ದಾರಿ ನೀಡಲಾಗುವುದೇ ಹೊರತು ಸಹೋದರನ ಗಂಡುಮಕ್ಕಳಿಗಲ್ಲ ಎಂದು ಮಾಯಾವತಿ ಖಡಕ್ ಆಗಿ ಸಾರಿದ್ದಾರೆ.

ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಅವರ ‘ಕುಟುಂಬಪಾರಂಪರ್ಯ ವಿರೋಧಿ’ ತತ್ವಕ್ಕೆ ತಾವು ಬದ್ಧರಾಗಿದ್ದು, ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹೊತ್ತಿಗೆ ಪಕ್ಷದಲ್ಲಿ ‘ಜೆನ್-ಜಿ’ (Gen-Z) ಯುವಜನತೆಗೆ ಶೇಕಡಾ 50 ರಷ್ಟು ಪ್ರಾತಿನಿಧ್ಯ ನೀಡಲಾಗುವುದು ಎಂದೂ ಪ್ರಕಟಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಜಯಭೇರಿ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಪಶ್ಚಿಮ...

ಯುಪಿ ಚುನಾವಣೆ | ಮತದಾರರ ಮನಗೆಲ್ಲಲು ಯೋಗಿ ಸಂಪುಟದ ಮೆಗಾ ಪ್ಲ್ಯಾನ್; ಹಸು ಖರೀದಿಗೆ ಸಬ್ಸಿಡಿ, ಉಚಿತ ಕೋಳಿ ಮರಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ (2027ರ ಫೆಬ್ರವರಿ–ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆಯಿದೆ)...

ಬ್ರೆಜಿಲ್‌ ಚುನಾವಣೆ | ಸೋಲುಂಡ ಬೆನ್ನಲ್ಲೇ‌ ಪ್ಲೇವಿಯೋ ಬೊಲ್ಸೊನಾರೊ ಅಮೆರಿಕಗೆ ಪಲಾಯನ!

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ, ಹಾಲಿ ಸೆನೆಟರ್...

ಕಲಬುರಗಿ | ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 18,94,144 ಮತದಾರರು:

ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್ಐಆರ್) ಚುನಾವಣಾ ಆಯೋಗದ...