ಈಗ ಬಿಜೆಪಿಗೆ ಬೇಕಿರೋದು ಲಿಂಗಾಯತ ಶಾಸಕರೇ ಹೊರತು ನಾಯಕರಲ್ಲ

Date:

ಕರ್ನಾಟಕದಲ್ಲಿ ಲಿಂಗಾಯತರು ಅಂದರೆ ಬಿಜೆಪಿ, ಬಿಜೆಪಿ ಎಂದರೆ ಲಿಂಗಾಯತರು ಎನ್ನುವಷ್ಟರ ಮಟ್ಟಿಗೆ ಸಮುದಾಯದ ರಾಜಕಾರಣಿಗಳು ಪಕ್ಷದಲ್ಲಿ ಪ್ರಾಬಲ್ಯವನ್ನು ಸಾಧಿಸಿದರು. ಮೇಲಾಗಿ ಯಡಿಯೂರಪ್ಪ ಪಕ್ಷದಲ್ಲಿ ಇವರ ನಿಯಂತ್ರಣಕ್ಕೆ ಸಿಗದಷ್ಟು ಎತ್ತರಕ್ಕೆ ಬೆಳೆದರು. ಇದು ಬಿ.ಎಲ್. ಸಂತೋಷ ಮತ್ತು ಅವರ ಟೀಮಿಗೆ ಕಸಿವಿಸಿ ಉಂಟು ಮಾಡಿತು

ಕಳೆದ ಮೂರು ಅವಧಿಯಿಂದಲೂ ಲಿಂಗಾಯತ ಸಮುದಾಯದ ಬಹುತೇಕರು ಬಿಜೆಪಿಗೆ ಬೆಂಬಲಿಸುತ್ತಲೆ ಬಂದಿದ್ದಾರೆ. ಫಲವಾಗಿ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆದು ನಿಂತಿದೆ. ಲಿಂಗಾಯತರು ಬಿಜೆಪಿ ತೆಕ್ಕೆಗೆ ಹೋಗಲು ಅನೇಕ ರಾಜಕೀಯ ಕಾರಣಗಳಿವೆ. ಮುಖ್ಯವಾಗಿ ವೀರೇಂದ್ರ ಪಾಟೀಲ್ ನಂತರ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ಸಮುದಾಯದ ಒಬ್ಬನೇ ಒಬ್ಬ ಮಾಸ್ ಲೀಡರ್ ಹೊರ ಹೊಮ್ಮದೆ ಇರುವುದು. ಈಗಲೂ ಸಹ ಚರಿಷ್ಮಾ ವ್ಯಕ್ತಿತ್ವದ ನಾಯಕರಾರು ಪಕ್ಷದಲ್ಲಿಲ್ಲ. ಪರಿಣಾಮವಾಗಿ ಈಕಡೆ ಬಿಜೆಪಿಗರು ಯಡಿಯೂರಪ್ಪನವರನ್ನ ಮುನ್ನೆಲೆಗೆ ತಂದರು. ಲಿಂಗಾಯತರು ಅವರನ್ನು ನಾಯಕರೆಂದು ಒಪ್ಪಿಕೊಂಡು ಬಿಜೆಪಿ ಕಡೆಗೆ ಮುಖ ಮಾಡಿದರು. ಜನಸಂಘಕ್ಕೆ ಲಿಂಗಾಯತರು ಎಂದೂ ಬೆಂಬಲಿಸಿಲ್ಲ. ಆಗವರು ಜನತಾ ಪಕ್ಷ ಮತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು.

ಕರ್ನಾಟಕದಲ್ಲಿ ಲಿಂಗಾಯತರು ಅಂದರೆ ಬಿಜೆಪಿ, ಬಿಜೆಪಿ ಎಂದರೆ ಲಿಂಗಾಯತರು ಎನ್ನುವಷ್ಟರ ಮಟ್ಟಿಗೆ ಸಮುದಾಯದ ರಾಜಕಾರಣಿಗಳು ಪಕ್ಷದಲ್ಲಿ ಪ್ರಾಬಲ್ಯವನ್ನು ಸಾಧಿಸಿದರು. ಮೇಲಾಗಿ ಯಡಿಯೂರಪ್ಪ ಪಕ್ಷದಲ್ಲಿ ಇವರ ನಿಯಂತ್ರಣಕ್ಕೆ ಸಿಗದಷ್ಟು ಎತ್ತರಕ್ಕೆ ಬೆಳೆದರು. ಇದು ಬಿ.ಎಲ್. ಸಂತೋಷ ಮತ್ತು ಅವರ ಟೀಮಿಗೆ ಕಸಿವಿಸಿ ಉಂಟು ಮಾಡಿತು. ಅವರನ್ನು ಅಂಕುಶ ಹಾಕಲು ಪ್ರಯತ್ನಿಸಿದರು. ಅವರು ಬಗ್ಗಲಿಲ್ಲ. ಬಗ್ಗದಿದ್ದಾಗ ಪಕ್ಷದ ದಿಲ್ಲಿ ದೊರೆಗಳ ಕಿವಿ ಊದಿ, ಸೂಕ್ತ ಕಾರಣ ನೀಡದೆ ಕಣ್ಣಿರು ಹಾಕಿಸುತ್ತಲೇ ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ಕೆಳಗಿಳಿಸದರು. ಈಗಲೂ ಸಹ ಅವರಿಗೆ ಇಡಿ, ಐಟಿ, ಸಿಬಿಐ ಗುಮ್ಮ ತೋರಿಸಿ ಅವರು ಬಂಡಾಯ ಏಳದಂತೆ ನೋಡಿಕೊಳ್ಳುತ್ತಿದ್ದದ್ದು ರಹಸ್ಯವೇನಲ್ಲ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದೇಕೆ ಎಂಬ ಪ್ರಶ್ನೆಗೆ ಮೋದಿ – ಶಾ ಬಳಿಯಾದರು ಉತ್ತರವಿದೆಯೇ?

ಈಗ ಮುಂದುವರೆದು ಶೆಟ್ಟರ್ – ಸವದಿಯವರನ್ನು ಟಿಕೆಟ್ ನೀಡದೆ ಪಕ್ಷದಿಂದ ಕಿಕ್ ಔಟ್ ಮಾಡಿದ್ದಾರೆ. ಸೋಮಣ್ಣನವರು ಅನಾಯಾಸವಾಗಿ ಗೆಲ್ಲುವ ಗೋವಿಂದರಾಜನಗರ ಕ್ಷೇತ್ರವನ್ನು ಕಿತ್ತುಕೊಂಡು ಅವರನ್ನು ಎರಡೆರಡು ಕಡೆ ನಿಲ್ಲಿಸಿ, ರಾಜಕೀಯವಾಗಿ ಬಲಿಪಶು ಮಾಡಿದ್ದಾರೆ. ಇವೆಲ್ಲವೂ ಮಾಡುತ್ತಿರುವವರು ಯಾರು ಮತ್ತು ಏಕೆಂದು ಗುಟ್ಟಾಗಿ ಉಳಿದಿಲ್ಲ. ಬಿ. ಎಲ್ ಸಂತೋಷ ಮತ್ತು ಅವರ ಟೀಮಿನ ಕಣ್ಸನ್ನೆ – ಕೈಸನ್ನೆ ಮೂಲಕವೇ ಎಲ್ಲವೂ ನಡೆಯುತ್ತಿದೆ. ಇದಕ್ಕೆ ಎರಡು ಕಾರಣಗಳಿವೆ. ಒಂದು, ಬಿಜೆಪಿ ಲಿಂಗಾಯತರ ಪಕ್ಷವಲ್ಲ, ಇದು ಪ್ರಬಲ ಹಿಂದುತ್ವ ಪಕ್ಷವೆಂದು ಸಾರಲು. ಇನ್ನೊಂದು, ಪ್ರಲ್ಹಾದ ಜೋಶಿ ಅಥವಾ ಬಿ‌. ಎಲ್. ಸಂತೋಷ ಇಬ್ಬರಲ್ಲಿ ಯಾರಾದರೊಬ್ಬರು ಮುಖ್ಯಮಂತ್ರಿ ಹುದ್ದೆಯಲ್ಲಿ ವಿರಾಜಮಾನರಾಗಲು. ಜಗದೀಶ್ ಶೆಟ್ಟರ್ ಅವರನ್ನು ಟಿಕೆಟ್ ನೀಡಲು ನಿರಾಕರಿಸಿದ್ದು ಇದೇ ಕಾರಣಕ್ಕಾಗಿ. ‘ಈ ಸಲ ಬೇಕಿದ್ದರೆ ನಿಮ್ಮ ಸೊಸೆಯನ್ನು ಟಿಕೆಟ್ ನೀಡುತ್ತೇವೆ. ಆದರೆ ನಿಮಗೆ ನೀಡುವುದಿಲ್ಲ. ಚುನಾವಣೆ ರಾಜಕೀಯದಿಂದ ನೀವು ನಿವೃತ್ತಿ ಪಡೆಯಿರಿ ಎಂದು ಹೈಕಮಾಂಡ್ ಶೆಟ್ಟರಿಗೆ ತಾಕೀತು ಮಾಡಲು ಕಾರಣವೇನು? ಶೆಟ್ಟರ್ ವಯಸ್ಸಿನ ಮತ್ತು ಅವರಿಗಿಂತ ಹೆಚ್ಚು ವಯಸ್ಸಿನ ಡಜನ್ ಗಟ್ಟಲೆ ಜನರಿಗೆ ಟಿಕೆಟ್ ನೀಡಿದ್ದಾರೆ. ಅವರೇನು ಸಿ.ಡಿ ಗಿರಾಕಿಯೂ ಅಲ್ಲ. ಭ್ರಷ್ಟರೆಂಬ ಹಣೆಪಟ್ಟಿಯೂ ಅವರಿಗಿಲ್ಲ. ಆದರೂ ಅವರಿಗೆ ಟಿಕೆಟ್ ತಪ್ಪಿಸಿದ್ದಾರೆ. ಕಾರಣ ಸ್ಪಷ್ಟ. ಅವರು ಜೋಶಿ/ಸಂತೋಷ ಮುಖ್ಯಮಂತ್ರಿ ಗಾದಿಗೇರಲು ಅಡ್ಡಿ ಆಗಬಹುದೆಂಬ ಮುನ್ನೆಚ್ಚರಿಕೆ. ಅಷ್ಟೇ, ಮತ್ತೇನೂ ಅಲ್ಲ.

ಇದನ್ನು ಓದಿ ಸತ್ಯ ಎದುರಿಸುವ ತಾಕತ್ತು ಮೋದಿ ಸರ್ಕಾರಕ್ಕೆ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಕಿಡಿ

ಒಂದೆಡೆ, ಸಮುದಾಯದ ಪ್ರಬಲ ನಾಯಕರನ್ನು ನೇಪಥ್ಯಕ್ಕೆ ಸರಿಸಿದೆ.ಇನ್ನೊಂದೆಡೆ, ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಬೇಕೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ಅರ್ಜಿಯನ್ನು ಕನಿಷ್ಠ ಸಂಸತ್ತಿನಲ್ಲಿಟ್ಟು ಚರ್ಚೆಯೂ ನಡಸದೆ, ತಿರಸ್ಕರಿಸಿದೆ. ಈ ಮೂಲಕ ಬಿಜೆಪಿಯೂ ಲಿಂಗಾಯತರ ಅಸ್ಮಿತೆಯನ್ನೇ ಅಳಿಸಿ ಹಾಕಲು ಪಣತೊಟ್ಟು ನಿಂತಂತಿದೆ. ಮತ್ತೊಂದೆಡೆ, ಪಂಚಮಸಾಲಿಗರು ನಮ್ಮನ್ನು 2A ಕೆಟಗರಿಯಲ್ಲಿ ಸೇರಿಸುವಂತೆ ಎರಡು ವರ್ಷ ರಸ್ತೆಯಲ್ಲಿ ನಿಂತು ಹೋರಾಡಿದರು. ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ತಾಯಿ ಮೇಲೆ ಆಣೆ ಇಟ್ಟು ಪಂಚಮಸಾಲಿಗರಿಗೆ ಕಲರ್ ಕಲರ್ ಮಕ್ಮಲ್ ಟೋಪಿಗಳು ಹಾಕಿದ್ದಾರೆ. ಆ ಕಡೆ ಅವರನ್ನು 2A ಅಡಿಯಲ್ಲೂ ‌ಸೇರಿಸಲಿಲ್ಲ. ಈ ಕಡೆ ಹೆಚ್ಚುವರಿಯಾಗಿ ನೀಡಿದ 2 ಪ್ರತಿಶತ ಮೀಸಲಾತಿಯನ್ನೂ ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ. ಅವಸರವಸರವಾಗಿ ಮತಬ್ಯಾಂಕ್ ರಾಜಕಾರಣಕ್ಕಾಗಿ ದುಡಿದುಣ್ಣುವ ರೈತಾಪಿಗಳಾದ ಪಂಚಮಸಾಲಿಗರಿಗೆ ಬೊಮ್ಮಾಯಿ ನೇತೃತ್ವದ ಸರ್ಕಾರ ಹೀಗೆ ಮೋಸ ಮಾಡಬಾರದಿತ್ತು.

ಬಿಜೆಪಿಗೆ ಈಗ ಓಟು ಹಾಕಲು ಲಿಂಗಾಯತರು ಬೇಕು, ಬ್ರಾಹ್ಮಣ ಸಮುದಾಯದ ಪ್ರಲ್ಹಾದ ಜೋಶಿ ಅಥವಾ ಸಂತೋಷನನ್ನು ಸಿಎಂ ಮಾಡಲು ಸಮುದಾಯದ ಜೀ ಹುಜೂರ್ ಎನ್ನುವ ಎಂಎಲ್ಎಗಳೂ ಬೇಕು. ಆದರೆ ಲೀಡರ್ ಗಳು ಬೇಕಾಗಿಲ್ಲ. ಬೇಕಾಗಿದ್ದರೆ, ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪನವರನ್ನು ಹೀನಾಯವಾಗಿ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗೆ ಇಳಿಸುತ್ತಿರಲಿಲ್ಲ. ಶೆಟ್ಟರ್ – ಸವದಿಯವರನ್ನು ಟಿಕೆಟ್ ನೀಡದೆ ಪಕ್ಷದಿಂದ ಕಿಕ್ ಔಟ್ ಮಾಡುತ್ತಿರಲಿಲ್ಲ

ಸಿದ್ದಪ್ಪ ಮೂಲಗೆ
+ posts

ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
ಪತ್ರಕರ್ತರು

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ನಗರ | ಹೈಟೆಕ್‌ ಕ್ರೀಡಾಂಗಣ ನಿರ್ಮಾಣ‌, ₹10 ಕೋಟಿ ಅನುದಾನ: ಡಿಕೆ ಶಿವಕುಮಾರ್

ಆನೇಕಲ್ ಪಟ್ಟಣದಲ್ಲಿ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಭರವಸೆ ವಕೀಲ ಸಂಘದಿಂದ ಬೇಡಿಕೆ,...

ಕಾವೇರಿ ವಿವಾದ | ಮೇಕೆದಾಟುಗಾಗಿ ಪಾದಯಾತ್ರೆ ಮಾಡಿದವರೇ ರೈತರನ್ನು ಬಂಧಿಸಿದ್ದಾರೆ: ಎಚ್‌ಡಿಕೆ ಕಿಡಿ

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಬೆಂಗಳೂರು...

ನೂರರ ನೆನಪು | ದೇವಾನಂದ್ ಎಂಬ ಸಾಹಸಿಗ, ಚಿರಯೌವನಿಗ

ಪ್ರೇಮ, ಪತ್ತೇದಾರಿ, ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿದ, ತನ್ನ ಆಂಗಿಕ ಅಭಿನಯದಿಂದ ಅಪಾರ...