ಶಾಂತಿ-ಅಹಿಂಸೆಯ ನನ್ನ ಮನವಿಯನ್ನು ಅಕ್ರಮವಾಗಿ ಹತ್ತಿಕ್ಕಲಾಗಿದೆ, ಪಾತಕಿಯಂತೆ ಬಿಂಬಿಸಲಾಗುತ್ತಿದೆ: ‘ಸುಪ್ರೀಂ’ ಗೆ ವಾಂಗ್‌ಚುಕ್ ಅರಿಕೆ

Date:

ಯಾವಾಗಲೂ ಹಿಂಸಾಚಾರದ ವಿರುದ್ಧ ಮಾತನಾಡುವ ಮತ್ತು ರಾಷ್ಟ್ರಕ್ಕೆ ಕೊಡುಗೆ ನೀಡಿ 30 ಪ್ರಶಸ್ತಿಗಳನ್ನು ಪಡೆದಿರುವ ತಮ್ಮನ್ನು ಈಗ ಅಪರಾಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಲಡಾಖ್ ಹೋರಾಟಗಾರ, ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರು ಸುಪ್ರೀಂ ಕೋರ್ಟ್‌ಗೆ ತಮ್ಮ ವಕೀಲರ ಮೂಲಕ ತಿಳಿಸಿದ್ದಾರೆ.

- Advertisement -

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಮತ್ತು ಸಂವಿಧಾನದ ಆರನೇ ಅಡಿಯಲ್ಲಿ ಲಡಾಖ್‌ ಅನ್ನು ಸೇರಿಸಬೇಕು ಎಂದು ಒತ್ತಾಯಿಸಿ ಸೋನಮ್ ವಾಂಗ್‌ಚುಕ್ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ, ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸೋನಮ್ ಉಪವಾಸ ನಡೆಸುತ್ತಿದ್ದ ಶಹೀದ್‌ ಪಾರ್ಕ್‌ನ ಹೊರಭಾಗದಲ್ಲಿ ಹಿಂಸಾಚಾರ ನಡೆದಿದ್ದು, ನಾಲ್ವರು ಗುಂಡೇಟಿಗೆ ಬಲಿಯಾಗಿದ್ದಾರೆ. ಇದಾದ ಬಳಿಕ ಹಿಂಸಾಚಾರಕ್ಕೆ ಸೋನಮ್ ಭಾಷಣವೇ ಕಾರಣ ಎಂದು ಆರೋಪಿಸಿ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಇದನ್ನು ಓದಿದ್ದೀರಾ? ಸೋನಮ್ ವಾಂಗ್‌ಚುಕ್ ಜೈಲು ಸೇರಿ 100 ದಿನ: ಲಡಾಖ್ ಜನರಿಗಾಗಿ ಧ್ವನಿಯೆತ್ತಿ ಮೋದಿ ಶತ್ರುವಾದರೆ?

ಇದಾದ ಬಳಿಕ ಸೋನಮ್ ಪತ್ನಿ, ಶಿಕ್ಷಕಿ ಗೀತಾಂಜಲಿ ಆಂಗ್ಮೋ ಈ ಬಂಧನವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆಂಗ್ಮೋ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ವಾಂಗ್‌ಚುಕ್ ಬಂಧನವನ್ನು ಸಮರ್ಥಿಸಲು ಪ್ರಾಸಿಕ್ಯೂಷನ್ ಬಳಸುತ್ತಿರುವ ವೀಡಿಯೊಗಳನ್ನು ಪ್ರತಿವಾದಿಗಳಿಗೆ ಒದಗಿಸಲಾಗಿಲ್ಲ ಎಂದು ಹೇಳಿದರು.

“ಬಂಧನದ ಎಲ್ಲಾ ಆಧಾರಗಳನ್ನು ಒದಗಿಸದಿದ್ದರೆ, ಅದು ಬಂಧನದ ಕ್ರಮವನ್ನು ಉಲ್ಲಂಘಿಸುತ್ತದೆ ಎಂದು ಕಾನೂನು ಹೇಳುತ್ತದೆ. ಸಂವಿಧಾನದ 22 ನೇ ವಿಧಿಯು ಎಲ್ಲಾ ಭಾರತೀಯರನ್ನು ಈ ರೀತಿಯ ಬಂಧನದಿಂದ ರಕ್ಷಿಸುತ್ತದೆ. ಬಂಧನಕ್ಕೆ ತಡೆ ನೀಡಲು ಅವಕಾಶವಿಲ್ಲದ ಕಾನೂನಿನಡಿಯಲ್ಲಿ ಬಂಧನ ಮಾಡಿದಾಗ ಅಧಿಕಾರಿಯು ಸಾಧ್ಯವಾದಷ್ಟು ಬೇಗ ಯಾವ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಆ ವ್ಯಕ್ತಿಗೆ ತಿಳಿಸಬೇಕು. ಬಂಧನ ಆದೇಶ ವಿರುದ್ಧ ವಾದಿಸಲು ಆರಂಭಿಕ ಅವಕಾಶವನ್ನು ನೀಡಬೇಕು ಎಂದು ಸಂವಿಧಾನದ ವಿಧಿ 22 (5) ಹೇಳುತ್ತದೆ” ಎಂದು ಕಪಿಲ್ ಸಿಬಲ್ ವಿವರಿಸಿದ್ದಾರೆ.

“ದಯವಿಟ್ಟು ಬಂಧನ ಆದೇಶವನ್ನು ನೋಡಿ. ನನ್ನ ಬಂಧನದ ವೇಳೆ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಕಾರಣ ನೀಡಲಾಗಿದೆ. ನನ್ನನ್ನು ಬಂಧಿಸದಿದ್ದರೆ, ಅದು ಸಾರ್ವಜನಿಕ ಸುವ್ಯವಸ್ಥೆ, ನಿರ್ವಹಣೆಗೆ ಅಡ್ಡಿಯಾಗುತ್ತದೆ ಮತ್ತು ಭದ್ರತೆಗೆ ಬೆದರಿಕೆಯಾಗುತ್ತದೆ ಎಂದು ವಾದಿಸಲಾಗಿದೆ. ಆದರೆ ನನ್ನ ಚಟುವಟಿಕೆಗಳನ್ನು ಮುಂದುವರಿಸದಂತೆ ತಡೆಯುವುದು ಇದರ ಉದ್ದೇಶ. ನನ್ನನ್ನು ಸೆಪ್ಟೆಂಬರ್ 26ರಂದು ಬಂಧಿಸಲಾಗಿದೆ. ಸೆಪ್ಟೆಂಬರ್ 10ರಂದು ನಾನು ಉಪವಾಸ ಸತ್ಯಾಗ್ರಹ ನಡೆಸಿದೆ. ನನ್ನ ಉಪವಾಸ ಸತ್ಯಾಗ್ರಹದ 15ನೇ ದಿನದಂದು, ಹಿಂಸಾಚಾರದ ಘಟನೆಗಳು ನಡೆದವು. ಅದರಿಂದ ನಾನೂ ತುಂಬಾ ತೊಂದರೆಗೀಡಾದೆ. ನಾನು 24 ರಂದು ನನ್ನ ಉಪವಾಸ ಸತ್ಯಾಗ್ರಹವನ್ನು ಮುರಿದು ಹಿಂಸಾಚಾರವನ್ನು ನಿಲ್ಲಿಸಬೇಕೆಂದು ಭಾಷಣ ಮಾಡಿದ್ದೇನೆ” ಎಂದು ಸಿಬಲ್ ವಾಂಗ್‌ಚುಕ್ ಪರವಾಗಿ ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-2 | ‘ಥ್ರೀ ಇಡಿಯಟ್ಸ್’ ಸಿನಿಮಾದ ಸ್ಪೂರ್ತಿ ಸೋನಮ್ ವಾಂಗ್‌ಚುಕ್‌ ಮೇಲೆ ಕೇಂದ್ರದ ಕೆಂಗಣ್ಣೇಕೆ?

“ನಾನು ಈ ಹಿಂಸಾಚಾರವನ್ನು ಒಪ್ಪಲು ಸಾಧ್ಯವಿಲ್ಲ. ನಾವು ಈ ಹಿಂಸಾಚಾರವನ್ನು ನಿಲ್ಲಿಸಬೇಕು ಎಂದು ನಾನು ಹೇಳಿದೆ. ಈ ಹಿಂಸಾಚಾರವನ್ನು ನಿಲ್ಲಿಸುವಂತೆ ನಾನು ನಿಮಗೆ ಮನವಿ ಮಾಡುತ್ತಿದ್ದೇನೆ. ವಿಡಿಯೋವನ್ನು ನೀವು ನೋಡಬಹುದು. ಚೌರಿ ಚೌರಾ ಘಟನೆಯ ನಂತರ ಹಿಂಸಾಚಾರ ನಡೆದಾಗ ಗಾಂಧೀಜಿಯವರು ಇದೇ ರೀತಿ ಉಪವಾಸ ಮುರಿದಿದ್ದರು ಎಂದು ನೀವು ನೆನಪಿಸಿಕೊಳ್ಳಬಹುದು. ನಾನು ಅಪರಾಧಿ ಎಂದು ತೋರಿಸಲು ಸತ್ಯವನ್ನು ತಿರುಚಲಾಗುತ್ತಿದೆ” ಎಂದು ದೂರಿದರು.

“ವಾಸ್ತವವಾಗಿ, ನನ್ನ ಭಾಷಣವು ನಾನು ಹಿಂಸಾಚಾರವನ್ನು ವಿರೋಧಿಸುತ್ತೇನೆ ಎಂದು ಹೇಳುತ್ತದೆ. ನನ್ನನ್ನು ಬಂಧಿಸದಿದ್ದರೆ, ಹಿಂಸಾಚಾರ ಮುಂದುವರಿಯುತ್ತದೆ ಎಂದು ಭಾವಿಸಲಾಗಿದೆ. ಆದರೆ ಉದ್ದೇಶ ಬೇರೆಯೇ ಆಗಿದೆ” ಎಂದು ಸಿಬಲ್ ಅವರು ಸೋನಮ್ ಪರವಾಗಿ ಹೇಳಿದ್ದು, ವಿಡಿಯೋವನ್ನು ನ್ಯಾಯಾಲಯದಲ್ಲಿ ಕೇಳಿಸಲಾಗಿದೆ.

“ಮುಖ್ಯ ವಿಷಯವೆಂದರೆ ಅವರು ನಾಲ್ಕು ವೀಡಿಯೊಗಳನ್ನು ಉಲ್ಲೇಖಿಸಿದ್ದಾರೆ. ಆದರೆ 24ರಂದು ಮಾಡಿದ ಭಾಷಣದ ವೀಡಿಯೊ ಅವರಿಗೂ ಲಭ್ಯವಿತ್ತು. ಅವರಿಗೆ ಅದರ ಬಗ್ಗೆ ತಿಳಿದಿತ್ತು. ಬಂಧನ ನಿರ್ಧಾರಕ್ಕೆ ಬರುವ ಮೊದಲು ಎಲ್ಲಾ ಸಂಗತಿಗಳನ್ನು ಪರಿಶೀಲಿಸಲು ವೀಡಿಯೊವನ್ನು ಹಸ್ತಾಂತರಿಸುವುದು ಅವರ ಕರ್ತವ್ಯವಲ್ಲವೇ” ಎಂದು ಸಿಬಲ್ ವಾದಿಸಿದ್ದಾರೆ. ಇನ್ನು ಪ್ರಕರಣದ ವಿಚಾರಣೆ ಸೋಮವಾರ ನಡೆಯಲಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅ. 10ರ ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸ್; ಕಠಿಣ ಕ್ರಮದ ಎಚ್ಚರಿಕೆ

ಮುಖ್ಯ ಚುನಾವಣಾ ಆಯುಕ್ತರ (CEC) ಹೊಣೆಗಾರಿಕೆ ಪ್ರಶ್ನಿಸಿ 'ಕಾಕ್ರೋಚ್ ಜನತಾ ಪಾರ್ಟಿ'...

ಪಂಜಾಬ್ ಸಿಎಂ ಕಚೇರಿ ಭ್ರಷ್ಟಾಚಾರದ ಸಿಬಿಐ ತನಿಖೆ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪಗಳ...

ಪಶ್ಚಿಮ ಬಂಗಾಳ ಉಪಚುನಾವಣೆ ವೇಳೆ ಅಕ್ರಮದ ಆರೋಪ; ಮರುಮತದಾನಕ್ಕೆ ವಿಪಕ್ಷಗಳ ಆಗ್ರಹ

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ...