ತುಮಕೂರು | ವಿಮರ್ಶೆ ಎಂದರೆ ಅಂತಿಮ ತೀರ್ಪಲ್ಲ: ನಾಗಭೂಷಣ ಸ್ವಾಮಿ

Date:

ವಿಮರ್ಶೆ ಎಂದರೆ ಒಂದು ಕೃತಿಯೆಡೆಗಿನ ಅಂತಿಮ ತೀರ್ಪಲ್ಲ ಎಂದು ಲೇಖಕ, ವಿಮರ್ಶಕ ಒ ಎಲ್‌ ನಾಗಭೂಷಣ ಸ್ವಾಮಿ ಅಭಿಪ್ರಾಯಪಟ್ಟರು.

- Advertisement -

ತುಮಕೂರು ವಿಶ್ವವಿದ್ಯಾನಿಲಯ ಮತ್ತು ಅಮೂಲ್ಯ ಪುಸ್ತಕ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೀತಾ ವಸಂತ ಅವರ ʼತೆರೆದಷ್ಟೂ ಅರಿವುʼ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

“ವಿಮರ್ಶಕ ಒಂದು ನಿಲುವನ್ನು ತಾಳಬೇಕು ಮತ್ತು ಈ ನಿಲುವಿನ ಬಗೆಗೂ ವಿಮರ್ಶೆ ಇರಬೇಕು. ಒಂದು ಸಾಹಿತ್ಯ ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಸರಿಯಲ್ಲ. ಅರ್ಥ ಎನ್ನುವುದು ಅನುಭವದ ಸಾವು. ಒಂದು ಸತ್ಯ ಎನ್ನುವುದು ಇದೆಯೇ? ಸತ್ಯ, ಅನುಭವ ಎಂದರೇನು? ಅನುಭವಗಳ ಮೂಲಕ ಅರಳಿ ಬೆಳೆಯುವುದೆಂದರೇನು? ಇತ್ಯಾದಿ ಮಹತ್ವದ ಪ್ರಶ್ನೆಗಳನ್ನು ಹಾಕಿಕೊಳ್ಳುವ ಲೇಖಕಿ, ತಮ್ಮ ಓದನ್ನು ಕುರಿತ ಪ್ರಾಮಾಣಿಕವಾದ ವಿಮರ್ಶೆಯನ್ನು ಈ ಕೃತಿಯಲ್ಲಿ ಮಂಡಿಸಿದ್ದಾರೆ” ಎಂದು ಹೇಳಿದರು.

WhatsApp Image 2026 01 08 at 4.40.37 PM

ಕೃತಿ ಕುರಿತು ಮಾತನಾಡಿದ ರಂಗನಾಥ ಕಂಟನಕುಂಟೆಯವರು, “ಕೃತಿಯ ಒಳಗಿನ ಅನುಭವ, ತಿಳಿವು ಮತ್ತು ದರ್ಶನವನ್ನು ನಾವು ನಮ್ಮದಾಗಿಸಿಕೊಳ್ಳುವುದು ಗೀತಾ ವಸಂತ ಅವರ ವಿಮರ್ಶೆಯ ಮಾದರಿ. ಬೇರೆ ಬೇರೆ ಸಿದ್ಧಾಂತಗಳ ಹೊರಗೆ ನಿಂತು ಕೃತಿಯ ಅನುಭವ ಲೋಕವನ್ನು ಪ್ರವೇಶಿಸಬೇಕು. ಆ ಮೂಲಕ ನಮ್ಮ ಅನುಭವದ ತಿಳಿವಳಿಕೆಯ ಕ್ರಮವನ್ನು ನಾವು ರೂಪಿಸಿಕೊಳ್ಳಬೇಕು ಎಂಬ ಉದ್ದೇಶ ಇವರ ಬರಹಗಳಲ್ಲಿ ಕಾಣುತ್ತಿದೆ. ಇದು ವಿಶೇಷವೂ ಹೌದು, ವಿಮರ್ಶಕರ ಮಿತಿಯೂ ಹೌದು. ಲೇಖಕರು ಸಾಹಿತ್ಯ ಕೃತಿಯ ಅನನ್ಯತೆಯನ್ನು ಮಾನ್ಯ ಮಾಡುವ, ಸಾಹಿತ್ಯ ಕೃತಿಯ ಅನುಭವವನ್ನೇ ಪ್ರಧಾನವಾಗಿ ನೋಡುವ ಪ್ರಯತ್ನ ಮಾಡಿದ್ದಾರೆ. ಕೋಮಲವಾದ ಸೃಜನಶೀಲ ಕೃತಿಗಳನ್ನು ಇಲ್ಲಿನ ಲೇಖಕರು ಅಷ್ಟೇ ಕೋಮಲವಾಗಿ ಎದುರುಗೊಳ್ಳುತ್ತಾರೆ. ಆದರೆ, ವಿಮರ್ಶೆ ಎಂಬುದೇ ಒಂದು ಬಂಡುಕೋರತನ, ಚಕಮಕಿತನ. ಜಾಗತಿಕ ಮಟ್ಟದಲ್ಲಿ, ವಿಮರ್ಶೆಯ ಪ್ರಜಾಸತ್ತಾತ್ಮಕ ಸ್ಪೇಸ್ ಕಳೆದುಹೊಗುತ್ತಿರುವ ಈ ಕಾಲದಲ್ಲಿ ನಮ್ಮ ನಿಲುವು ಏನು ಎಂಬುದು ಮುಖ್ಯ” ಎಂದು ಹೇಳಿದರು.

ಇದನ್ನೂ ಓದಿ: ತುಮಕೂರು | ತೆಂಗಿನಕಾಯಿ ಬೆಳೆಗಾರರಿಗೆ ಸಿಪ್ಪೆ ಸುಲಿಯುವ ಯಂತ್ರ ಒಂದು ವರದಾನ

ಲೇಖಕಿ ಗೀತಾ ವಸಂತ ಮಾತನಾಡುತ್ತಾ, “ಭಿನ್ನ-ಭಿನ್ನ ಆಲೋಚನಾ ಕ್ರಮಗಳ ಹಿನ್ನೆಲೆಯಿಂದ ಬಂದವರ ಅಭಿಪ್ರಾಯಗಳನ್ನು ಪಡೆಯುವ ಮೂಲಕ ಹೊಸ ಅರಿವನ್ನು ಕಾಣುವುದು-ಕಾಣಿಸುವುದು ಆ ಮೂಲಕ ನಮ್ಮನ್ನ ನಾವು ಹಿಗ್ಗಿಸಿಕೊಳ್ಳುವುದು ಸಾಧ್ಯ. ಇದನ್ನು ಇಂದಿನ ಕಾರ್ಯಕ್ರಮ ಆಗುಮಾಡಿದೆ. ಕೋಮಲವಾಗಿರುವುದು ದುರ್ಭಲವಲ್ಲ ಎನ್ನುವುದು ನನ್ನ ಅನುಭವದಲ್ಲಿ ಮೂಡಿದ ಲೋಕದೃಷ್ಟಿ. ಎಲ್ಲವನ್ನೂ ಸಾವಧಾನದಿಂದ, ಸೂಕ್ಷ್ಮತೆಯಿಂದ, ಅಂತಃಕರಣದಿಂದ ಒಳಗೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಸಾಹಿತ್ಯಿಕ ಒಳನೋಟಗಳನ್ನು ಕಾಣಿಸುವ ಪ್ರಯತ್ನ ಈ ಕೃತಿಯಲ್ಲಿದೆ” ಎಂದರು.

ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಮೋಹನ್ ಎಚ್ ಎಸ್, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಪ್ರೊ ನಿತ್ಯಾನಂದ ಬಿ ಶೆಟ್ಟಿ, ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್ ಎಸ್ ಗುಂಡೂರ, ಪ್ರಾಧ್ಯಾಪಕರಾದ ನಾಗಭೂಷಣ ಬಗ್ಗನಡು, ವಿದ್ವಾಂಸ ಎಸ್ ಪಿ ಪದ್ಮಪ್ರಸಾದ್, ಸಾಹಿತಿ ರಂಗಮ್ಮ ಹೊದೆಕಲ್, ಕತೆಗಾರ ಮಿರ್ಜ ಬಷೀರ್, ಗುರುಪ್ರಸಾದ್ ಕಂಟಲಗೆರೆ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಹಾಜರಿದ್ದು ಅರ್ಥಪೂರ್ಣ ಸಂವಾದಕ್ಕೆ ಸಾಕ್ಷಿಯಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಜಿಪಂ – ತಾಪಂ ಮೀಸಲು ಅಂತಿಮ: ಮಹಿಳೆಯರಿಗೆ ಸಿಂಹಪಾಲು

ತುಮಕೂರು ಜಿಲ್ಲೆಯ ಗ್ರಾಮೀಣ ರಾಜಕೀಯದ ಮುಂದಿನ ಚಿತ್ರಣಕ್ಕೆ ಮುನ್ನುಡಿ ಬರೆಯುವಂತೆ ಜಿಲ್ಲಾ...

ತುಮಕೂರು | ಬೆಳೆ ಕಟಾವು ಪ್ರಯೋಗ ಶೇ.100ರಷ್ಟು ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು ಜಿಲ್ಲೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನಡಿ ಹಂಚಿಕೆಯಾಗಿರುವ ಎಲ್ಲಾ 5,120...

ತುಮಕೂರು | ಎಸ್‌ಐಆರ್ ವಿರುದ್ಧ ಅ. 8ರಂದು ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ

 ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ತುಮಕೂರು | ಮಿನಿ ಒಲಂಪಿಕ್ಸ್‌ಗೆ ಮಕ್ಕಳು ಸಜ್ಜು : ಕಯಾಕಿಂಗ್, ಕನೋಯಿಂಗ್, ಶೂಟಿಂಗ್ ತರಬೇತಿ

 ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮಿನಿ ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ಅನುವಾಗುವಂತೆ ಜಿಲ್ಲೆಯ...