ಬಾಗಲಕೋಟೆ : 2 ಪ್ರಬಲ ಸಮುದಾಯಗಳ ನಿರ್ಧಾರದ ಮೇಲೆ ನಿಂತಿದೆ ಸೋಲು, ಗೆಲುವು

Date:

ಬಾಗಲಕೋಟೆ ಜಿಲ್ಲೆ ಲಿಂಗಾಯತ ಮತ್ತು ಕುರುಬ ಸಮುದಾಯಗಳೆರಡೂ ಪ್ರಬಲವಾಗಿರುವ ಜಿಲ್ಲೆಯಾಗಿದ್ದು, ಈ ಬಾರಿ ಎದುರಾಗಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಜಾತಿ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.

ಲಿಂಗಾಯತರು ಮತ್ತು ಕುರುಬರ ಪ್ರಭಾವ:

ಬಾಗಲಕೋಟೆ ಜಿಲ್ಲೆಯ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ, ಅಂದರೆ, ಬಾಗಲಕೋಟೆ, ಹುನಗುಂದ, ಇಳಕಲ್ಲ, ಜಮಖಂಡಿ ಕ್ಷೇತ್ರಗಳಲ್ಲಿ ಲಿಂಗಾಯತ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ರಾಜಕೀಯ ನಾಯಕತ್ವದಲ್ಲೂ ಪಂಚಮಸಾಲಿ ಮತ್ತು ಇತರ ಲಿಂಗಾಯತ ಒಳಪಂಗಡಗಳ ಪ್ರಭಾವ ಬಹಳ ದೊಡ್ಡಮಟ್ಟದಲ್ಲಿದೆ. ಈ ಸಮುದಾಯಗಳ ಮತಗಳೇ ಸೋಲು ಗೆಲುವನ್ನು ನಿರ್ಧರಿಸುತ್ತದೆ.

ಇನ್ನು,ಬಾದಾಮಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುರುಬ ಸಮುದಾಯ ಅತ್ಯಂತ ಪ್ರಭಾವಿ ಸಮುದಾಯವಾಗಿದೆ. ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧಿಸಿ ಗೆದ್ದ ನಂತರ ಜಿಲ್ಲೆಯಲ್ಲಿ ಈ ಸಮುದಾಯದ ರಾಜಕೀಯ ಪ್ರಭಾವ ಮತ್ತಷ್ಟು ಹೆಚ್ಚಾಗಿದೆ. ಸಿದ್ದರಾಮಯ್ಯನವರ ಪ್ರಭಾವ ಈ ಭಾಗದಲ್ಲಿ ಇರುವುದರಿಂದ ಕುರುಬ ಸಮುದಾಯದ ಮತಗಳು ಕಾಂಗ್ರೆಸ್‌ಗೆ ದೊಡ್ಡ ಬಲ.

ಇದನ್ನೂ ಓದಿ : ದಾವಣಗೆರೆಯಲ್ಲಿ ʼಸಾಹುಕಾರ್ ಕುಟುಂಬʼ ರಾಜಕಾರಣ ಮತ್ತು ಕಾಂಗ್ರೆಸ್‌ ಮುಂದಿರುವ ಸವಾಲುಗಳು

- Advertisement -

ಹಾಗಾಗಿ ಚುನಾವಣೆಯಲ್ಲಿ  ಲಿಂಗಾಯತ, ಕುರುಬ ಮತ್ತು ರೆಡ್ಡಿ ಸಮುದಾಯಗಳ ರಾಜಕೀಯ ಪೈಪೋಟಿ ಜಯದ ಹಾದಿಯನ್ನು ನಿರ್ಧರಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,59,797 ಮತದಾರರಿದ್ದಾರೆ. ಲಿಂಗಾಯತರು ಸುಮಾರು 70,000 – 75,000, ಕುರುಬರು ಸುಮಾರು 40,000 – 45,000, ಪರಿಶಿಷ್ಟ ಜಾತಿ (SC)ಯವರು ಸುಮಾರು 35,000 – 40,000, ಮುಸ್ಲಿಮರು ಸುಮಾರು 30,000 – 32,000, ಪರಿಶಿಷ್ಟ ಪಂಗಡದವರು (ST) ಸುಮಾರು 12,000 – 15,000, ಇತರೆ ಹಿಂದುಳಿದ ವರ್ಗಗಳು (OBC) ಸುಮಾರು 25,000 – 30,000 (ಇದರಲ್ಲಿ ರೆಡ್ಡಿ, ಗಾಣಿಗ, ಪಂಚಮಸಾಲಿ ಮತ್ತು ಇತರ ಉಪಜಾತಿಗಳು ಸೇರಿವೆ).ಮತದಾರರಿದ್ದಾರೆ. ಇವೆಲ್ಲದಕ್ಕಿಂತ ಮಿಗಿಲಾಗಿ ಅಹಿಂದ ಮತಗಳು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಗ್ಯಾರಂಟಿ ಯೋಜನೆಗಳ ಪ್ರಭಾವ:

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತನ್ನ ಪಂಚ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಮತವಾಗಿ ಪರಿವರ್ತಿಸಲು ಯತ್ನಿಸುತ್ತಿದೆ. ಮಹಿಳಾ ಮತದಾರರ ಒಲವು ಯಾರ ಕಡೆಗಿದೆ ಎನ್ನುವುದು ಮುಖ್ಯವಾಗುತ್ತದೆ. ಈ ನಡುವೆ ಬಿಜೆಪಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ತೀವ್ರವಾಗಿ ಟೀಕಿಸುತ್ತಿದೆ. ನಗರ ಕೇಂದ್ರಿತ ಕ್ಷೇತ್ರವಾಗಿರುವ ಬಾಗಲಕೋಟೆಯಲ್ಲಿ ಆಡಳಿತರೂಢ ಕಾಂಗ್ರೆಸ್‌ ಮತ್ತು ವಿಪಕ್ಷ ಬಿಜೆಪಿಯ ತಂತ್ರ, ಕುತಂತ್ರಗಳನ್ನು ಮತದಾರರನ್ನು ಒಲಿಸುವಲ್ಲಿ ಹೇಗೆ ಕೆಲಸ ಮಾಡುತ್ತವೆ ಎನ್ನುವುದು ಮುಖ್ಯವಾಗುತ್ತದೆ.

ಇನ್ನು, ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿನ ಅಧಿಕಾರ ಹಸ್ತಾಂತರ ವಿಷಯ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿದೆ.ಬಿಜೆಪಿಗೆ ಇದು ಚುನಾವಣಾ ಅಸ್ತ್ರವಾಗಿ ಸಿಕ್ಕಿದೆ. ಹಾಗಾಗಿಈ ಚುನಾವಣೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಸರ್ಕಾರದ ಮೇಲಿನ ಹಿಡಿತ ಸಾಬೀತುಪಡಿಸಲು ಮುಖ್ಯವಾದರೆ, ಬಿ.ವೈ. ವಿಜಯೇಂದ್ರ ಅವರಿಗೆ ಬಿಜೆಪಿಯ ನಾಯಕನಾಗಿರಲು/ಮುಂದುವರಿಯಲು ತಾನು ಸಮರ್ಥ ಎಂದು ಹೇಳಿಕೊಳ್ಳಲು ಇದು ಅಗ್ನಿಪರೀಕ್ಷೆಯಾಗಿದೆ.

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ತನ್ನ ಸ್ನೇಹಿತ ಎಂಬ ಕಾರಣಕ್ಕೆ ಪ್ರಚಾರಕ್ಕೆ ಇಳಿದಿದ್ದು, ಒಂದು ವೇಳೆ ಕಾಂಗ್ರೆಸ್‌ನ ಅನುಕಂಪದ ಅಲೆಯನ್ನೂ ಮೀರಿ ಚರಂತಿಮಠ ಗೆದ್ದರೆ, ಪರೋಕ್ಷವಾಗಿ ಯತ್ನಾಳ್‌ ಅವರೇ ವಿಜಯೇಂದ್ರರ ಸ್ಥಾನ ಭದ್ರ ಪಡಿಸಿದಂತಾಗುತ್ತದೆ ಎನ್ನುವುದಂತೂ ಸತ್ಯ.

ಸಾಮಾನ್ಯವಾಗಿ, ಉಪಚುನಾವಣೆಗಳಲ್ಲಿ ಸ್ಥಳೀಯ ಅಭಿವೃದ್ಧಿ, ಅನುಕಂಪ ಮತ್ತು ಸರ್ಕಾರದ ಯೋಜನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಉತ್ತರ ಕರ್ನಾಟಕದ ಭಾಗದಲ್ಲಿ ಲಿಂಗಾಯತ ಮತಗಳು ಚದುರಿದರೆ ಬಿಜೆಪಿಗೆ ಹಿನ್ನಡೆಯಾಗಬಹುದು, ಅದೇ ರೀತಿ ಕುರುಬ ಮತ್ತು ದಲಿತ ಮತಗಳು ಒಗ್ಗಟ್ಟಾದರೆ ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗಲಿದೆ. ಈ ನಡುವೆ, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ (UKP) ಮತ್ತು ಮುಳುಗಡೆ ಸಂತ್ರಸ್ತರ ಸಮಸ್ಯೆ ಮತ್ತು ಪುನರ್ವಸತಿ ವಿಚಾರ ಇಲ್ಲಿನ ದೊಡ್ಡ ರಾಜಕೀಯ ಅಸ್ತ್ರ. ಯಾವ ಪಕ್ಷ ಈ ಸಮಸ್ಯೆಗೆ ಸ್ಪಂದಿಸುತ್ತದೆಯೋ ಅವರಿಗೆ ಜನರ ಬೆಂಬಲ ಸಿಗಬಹುದು. ನೇಕಾರರ ಸಮಸ್ಯೆಗಳು ಮತ್ತು ಸಕ್ಕರೆ ಕಾರ್ಖಾನೆಗಳ ಬಾಕಿ ಹಣ ಪಾವತಿ ವಿಚಾರಗಳು ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ.

ಒಟ್ಟಿನಲ್ಲಿ, ಬಾಗಲಕೋಟೆಯಲ್ಲಿ ಕೇವಲ ಅನುಕಂಪದಿಂದ ಗೆಲ್ಲುವುದು ಕಷ್ಟ ಎಂಬ ವಾತಾವರಣ ಸೃಷ್ಟಿಯಾಗಿದೆ. ಇದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಜಾತಿ ಲೆಕ್ಕಾಚಾರ, ಅಭ್ಯರ್ಥಿಯ ರಾಜಕೀಯ ವರ್ಚಸ್ಸು ಮತ್ತು ಪಕ್ಷ ಸಂಘಟನೆಯೂ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೈಬೀರಿಯಾ ಗುಹೆಯಲ್ಲಿ ಹಿಮಯುಗದ ರಹಸ್ಯ ಬಯಲು: 4 ಲಕ್ಷ ವರ್ಷಗಳ ಹಿಂದಿನ ಅಜ್ಞಾತ ಜೀವಿ ಪತ್ತೆ!

ದಕ್ಷಿಣ ಸೈಬೀರಿಯಾದ ಗುಹೆಗಳಲ್ಲಿ ದೊರೆತ ಸಾಮಾನ್ಯ ಮೂಳೆಯ ತುಣುಕುಗಳು ಇದೀಗ ವಿಕಾಸನದ...

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...