ಅಸ್ಸಾಂನಲ್ಲಿ ದ್ವೇಷದ ರಾಜಕಾರಣದ ನಡುವೆ ಸೌಹಾರ್ದದ ಗಾಳಿ: ಕಾಂಗ್ರೆಸ್‌ ಗೆಲ್ಲಿಸುವರೇ ಗೌರವ್?

Date:

​ಸಾಮಾನ್ಯವಾಗಿ ಅಸ್ಸಾಂ ಚುನಾವಣೆಗಳು ಎಂದರೆ ಅಭ್ಯರ್ಥಿಗಳ ನಡುವಿನ ಕಠೋರ ವಾಗ್ದಾಳಿಗಳು, ನಿಂದನೆಗಳು ಹಾಗೂ ಬೆದರಿಕೆಗಳಿಗೆ ಹೆಸರಾಗಿರುತ್ತವೆ. ಆದರೆ, ಈ ಬಾರಿ ಕೆಲವು ಕ್ಷೇತ್ರಗಳು ಅಚ್ಚರಿ ಎಂಬಂತೆ ಅತ್ಯಂತ ಸೌಜನ್ಯಯುತ ಮತ್ತು ನಾಗರಿಕ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿವೆ

- Advertisement -

2026ರ ಅಸ್ಸಾಂ ವಿಧಾನಸಭಾ ಚುನಾವಣೆಯು ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಈ ಬಾರಿ ತೀವ್ರ ಪೈಪೋಟಿಯ ನಡುವೆ ಕಾಂಗ್ರೆಸ್ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ಮಹತ್ತರ ಹಾಗೂ ಕಠಿಣ ಜವಾಬ್ದಾರಿ ಗೌರವ್ ಗೊಗೊಯ್ ಅವರ ಮೇಲಿದೆ. ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕರಾಗಿರುವ ಮತ್ತು ಇಡೀ ಈಶಾನ್ಯ ಭಾರತದಲ್ಲಿ ಪಕ್ಷದ ಪ್ರಬಲ ಮುಖವಾಗಿರುವ ಗೌರವ್, ಅಸ್ಸಾಂನಲ್ಲಿ ಮಂಕಾಗಿರುವ ಪಕ್ಷಕ್ಕೆ ಹೊಸ ಚೈತನ್ಯ ನೀಡುವರೇ ಎಂಬ ಪ್ರಶ್ನೆ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

2023ರ ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯಲ್ಲಿ ಅವರು ಎರಡು ಬಾರಿ ಪ್ರತಿನಿಧಿಸಿದ್ದ ‘ಕಲಿಯಾಬೋರ್’ ಕ್ಷೇತ್ರವು ಅಸ್ತಿತ್ವ ಕಳೆದುಕೊಂಡಿದೆ. ಹೀಗಾಗಿ ಅವರು ಮಾಜಿ ಮುಖ್ಯಮಂತ್ರಿ ಹಾಗೂ ತಮ್ಮ ತಂದೆ ತರುಣ್ ಗೊಗೊಯ್ ಅವರು ಮೂರು ಬಾರಿ ಪ್ರತಿನಿಧಿಸಿದ್ದ ‘ಜೋರ್ಹತ್’ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

​ಸಾಮಾನ್ಯವಾಗಿ ಅಸ್ಸಾಂ ಚುನಾವಣೆಗಳು ಎಂದರೆ ಅಭ್ಯರ್ಥಿಗಳ ನಡುವಿನ ಕಠೋರ ವಾಗ್ದಾಳಿಗಳು, ನಿಂದನೆಗಳು ಹಾಗೂ ಬೆದರಿಕೆಗಳಿಗೆ ಹೆಸರಾಗಿರುತ್ತವೆ. ಆದರೆ, ಈ ಬಾರಿ ಕೆಲವು ಕ್ಷೇತ್ರಗಳು ಅಚ್ಚರಿ ಎಂಬಂತೆ ಅತ್ಯಂತ ಸೌಜನ್ಯಯುತ ಮತ್ತು ನಾಗರಿಕ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿವೆ. ವಿಶೇಷವಾಗಿ ಅಸ್ಸಾಂನ ‘ಚಹಾ ರಾಜಧಾನಿ’ ಮತ್ತು ಸಾಹಿತ್ಯ-ಬೌದ್ಧಿಕ ದಿಗ್ಗಜರ ತವರೂರಾದ ಜೋರ್ಹತ್, ದಿಸ್ಪುರ್, ನ್ಯೂ ಗುವಾಹಟಿ ಮತ್ತು ವಾಯುವ್ಯ ಅಸ್ಸಾಂನ ತಮುಲ್ಪುರ್ ಕ್ಷೇತ್ರಗಳು ಈ ಉತ್ತಮ ಬೆಳವಣಿಗೆಗೆ ಉದಾಹರಣೆಯಾಗಿವೆ. ಅತ್ಯಧಿಕ ಸಾಕ್ಷರತೆ ಹೊಂದಿರುವ ಜೋರ್ಹತ್ ಭಾಗದ ಜನತೆ ಆಕ್ರಮಣಕಾರಿ ಹಾಗೂ ಕೆಟ್ಟ ಭಾಷೆಯನ್ನು ಸಹಿಸುವುದಿಲ್ಲ, ಇದು ಅವರು ಆಯ್ಕೆ ಮಾಡುವ ನಾಯಕರ ಮೇಲೂ ಪ್ರಭಾವ ಬೀರಿದೆ ಎಂದು ಸ್ಥಳೀಯ ಪರಿಸರ ಕಾರ್ಯಕರ್ತ ಬಿಜು ಶರ್ಮಾ ಅಭಿಪ್ರಾಯಪಡುತ್ತಾರೆ. ಕಿರಿಯ ಅಭ್ಯರ್ಥಿಗಳು ಹಿರಿಯರ ಕಾಲು ಮುಟ್ಟಿ ನಮಸ್ಕರಿಸುವುದು, ಪರಸ್ಪರರ ಭಾಷಣ ಕೌಶಲ್ಯ ಹೊಗಳುವುದು ಮತ್ತು ಮುಖಾಮುಖಿಯಾದಾಗ ಹಸ್ತಲಾಘವ ಮಾಡಿ ಆಲಂಗಿಸುವುದು ಇಲ್ಲಿ ಸಾಮಾನ್ಯವಾಗಿದೆ.

​ಸೌಜನ್ಯದ ರಾಜಕಾರಣಕ್ಕೆ ಜೋರ್ಹತ್ ಕಣವೇ ಅತ್ಯುತ್ತಮ ನಿದರ್ಶನವಾಗಿದೆ. ಇಲ್ಲಿ 67 ವರ್ಷದ ಹಿರಿಯ ಬಿಜೆಪಿ ನಾಯಕ ಹಿತೇಂದ್ರ ನಾಥ್ ಗೋಸ್ವಾಮಿ ಮರು ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ವಿಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಕಾನೂನು ಪದವೀಧರರಾಗಿರುವ ಅವರು, ತಮ್ಮ ಎದುರಾಳಿಯಾಗಿರುವ ನ್ಯೂಯಾರ್ಕ್ ವಿವಿಯಲ್ಲಿ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ 43 ವರ್ಷದ ಗೌರವ್ ಗೊಗೊಯ್ ಅವರ ಭಾಷಣ ಕೌಶಲ್ಯವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. “ನನ್ನ ಕಿರಿಯ ಎದುರಾಳಿ ಅತ್ಯಂತ ಸೊಗಸಾಗಿ ಮಾತನಾಡುತ್ತಾರೆ, ಆದರೆ ಅದರಿಂದಲೇ ಅವರ ಗೆಲುವು ಖಚಿತ ಎಂದು ಹೇಳಲಾಗುವುದಿಲ್ಲ, ರಾಜಕೀಯ ಟೀಕೆಗಳು ಅಗೌರವದಿಂದ ಕೂಡಿರಬೇಕಿಲ್ಲ” ಎಂದಿದ್ದಾರೆ ಗೋಸ್ವಾಮಿ. ಇದಕ್ಕೆ ಅತ್ಯಂತ ವಿನಮ್ರವಾಗಿ ಪ್ರತಿಕ್ರಿಯಿಸಿರುವ ಗೌರವ್, ಹಿರಿಯ ಎದುರಾಳಿಗೆ ಶುಭಕೋರಿ, “ಜೋರ್ಹತ್ ಜನತೆ ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ” ಎಂದು ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

​ಇಂತಹದ್ದೇ ಸೌಹಾರ್ದಯುತ ವಾತಾವರಣ ಇತರ ಕಡೆಗಳಲ್ಲೂ ಕಂಡುಬರುತ್ತಿದೆ. ಜೋರ್ಹತ್‌ನಿಂದ 300 ಕಿ.ಮೀಗೂ ಹೆಚ್ಚು ಪಶ್ಚಿಮಕ್ಕಿರುವ ಗುವಾಹಟಿಯ ದಿಸ್ಪುರ್ ಕ್ಷೇತ್ರದಲ್ಲಿ 57 ವರ್ಷದ ಪಕ್ಷೇತರ ಅಭ್ಯರ್ಥಿ ಜಯಂತ ಕುಮಾರ್ ದಾಸ್, ತಮ್ಮ ಮಾಜಿ ಪಕ್ಷ ಬಿಜೆಪಿಯ ಮೇಲೆ ಅಸಮಾಧಾನ ಹೊಂದಿದ್ದರೂ, ಎದುರಾಳಿ 65 ವರ್ಷದ ಮಾಜಿ ಕಾಂಗ್ರೆಸ್ ಸಂಸದ ಪ್ರದ್ಯುತ್ ಬೊರ್ಡೊಲೊಯ್ ಅವರನ್ನು ‘ಜಂಟಲ್ ಮ್ಯಾನ್’ ಎಂದು ಗೌರವಿಸಿದ್ದಾರೆ. ಇಲ್ಲಿ ಕಾಂಗ್ರೆಸ್‌ನ ಮೀರಾ ಬೋರ್ತಕೂರ್ ಗೋಸ್ವಾಮಿ ಅವರೊಂದಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ನ್ಯೂ ಗುವಾಹಟಿಯಲ್ಲಿ ಕಾಂಗ್ರೆಸ್‌ನ ಶಂತನು ಬೋರಾ ಮತ್ತು ಬಿಜೆಪಿಯ ದಿಪ್ಲು ರಂಜನ್ ಶರ್ಮಾ ಫಲಿತಾಂಶ ಏನೇ ಇದ್ದರೂ ಕ್ಷೇತ್ರದ ಅಭಿವೃದ್ಧಿಗೆ ಒಟ್ಟಾಗಿ ದುಡಿಯುವುದಾಗಿ ಹೇಳಿದ್ದಾರೆ. ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್‌ನ 15 ಕ್ಷೇತ್ರಗಳಲ್ಲೊಂದಾದ ತಮುಲ್ಪುರ್‌ನಲ್ಲಿ ಅಸೆಂಬ್ಲಿ ಸ್ಪೀಕರ್, ಬಿಜೆಪಿಯ ಬಿಸ್ವಜಿತ್ ಡೈಮರಿ ಮತ್ತು ಯುಪಿಪಿಎಲ್ ಅಧ್ಯಕ್ಷ ಹಾಗೂ ರಾಜ್ಯಸಭಾ ಚುನಾಯಿತ ಸದಸ್ಯ ಪ್ರಮೋದ್ ಬೊರೊ ವೈಯಕ್ತಿಕ ದಾಳಿ ಬಿಟ್ಟು ಅಭಿವೃದ್ಧಿಯತ್ತ ಮಾತ್ರ ಗಮನಹರಿಸಿದ್ದಾರೆ.

ಇದನ್ನು ಓದಿದ್ದೀರಾ? IPL | ಒಂದೆಡೆ ಮನರಂಜನೆಯ ಮಹಾಪೂರ, ಮತ್ತೊಂದೆಡೆ ಜೂಜಾಟದ ಕರಾಳ ಘೋರ

​ಈ ಸ್ಥಳೀಯ ಸಕಾರಾತ್ಮಕ ಬೆಳವಣಿಗೆಗಳ ನಡುವೆ, ಇಡೀ ರಾಜ್ಯದ ಚುನಾವಣೆಯ ಹೊಣೆ ಗೌರವ್ ಗೊಗೊಯ್ ಹೆಗಲ ಮೇಲಿದೆ. ಈ ಸಂದರ್ಭದಲ್ಲಿ ದೆಹಲಿ, ಪಂಜಾಬ್ ಮತ್ತು ಕೇರಳದ ಉದಾಹರಣೆ ನೀಡಿರುವ ಗೌರವ್, “ನಾವು ಒಂದೆಡೆ ಮಿತ್ರರಾಗಿದ್ದು, ಮತ್ತೊಂದೆಡೆ ವಿರೋಧಿಗಳಾಗಿರಬಹುದು ಎಂಬುದನ್ನು ಜನ ಅರ್ಥಮಾಡಿಕೊಂಡಿದ್ದಾರೆ” ಎನ್ನುತ್ತಾರೆ. ಹಾಗೆಯೇ ಪಂಜಾಬ್‌ನ ಅಕಾಲಿದಳ ಹಾಗೂ ತಮಿಳುನಾಡಿನ ಎಐಎಡಿಎಂಕೆ ಉದಾಹರಣೆ ನೀಡಿ, ಮೈತ್ರಿ ಪಕ್ಷಗಳ ವಿಚಾರದಲ್ಲಿ ಬಿಜೆಪಿ ‘ಬಳಸಿ ಬಿಸಾಡುವ’ ನೀತಿ ಅನುಸರಿಸುತ್ತಿದೆ ಎಂದು ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಾರೆ.

​ಬಿಜೆಪಿಯ ರಾಜಕೀಯ ಶೈಲಿಯನ್ನು ತೀವ್ರವಾಗಿ ಖಂಡಿಸಿರುವ ಗೌರವ್ ಗೊಗೊಯ್, “ಬಿಜೆಪಿಯು ಕೇವಲ ರಾಜಕಾರಣಿಗಳನ್ನು ಮಾತ್ರವಲ್ಲ, ಕಾರ್ಪೊರೇಟ್ ವಲಯದಿಂದ ಹಿಡಿದು ಸಾಮಾನ್ಯ ಜನರವರೆಗೂ ಪ್ರತಿಯೊಬ್ಬರನ್ನೂ ವಿವಿಧ ಯೋಜನೆಗಳ ಷರತ್ತುಗಳ ಮೂಲಕ ನಿಯಂತ್ರಿಸುತ್ತಿದೆ. ಭಾರತದಲ್ಲಿ ರಷ್ಯಾದ ಮಾದರಿಯ ಆಲಿಗಾರ್ಕಿ (ಕೆಲವೇ ಶ್ರೀಮಂತರ ದಬ್ಬಾಳಿಕೆಯ ಆಡಳಿತ) ವ್ಯವಸ್ಥೆಯನ್ನು ಜಾರಿಗೆ ತರಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಸಂವಿಧಾನದಲ್ಲಿ ಅಳವಡಿಸಲಾದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಕಟ್ಟುಬಿದ್ದಿದೆ. ಸಂಸ್ಥೆಗಳ ಸ್ವಾಯತ್ತತೆ ಮತ್ತು ದೇಶದ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಭರವಸೆಯನ್ನು ಜನರಿಗೆ ನೀಡುವ ಮೂಲಕ ಕಾಂಗ್ರೆಸ್ ಮತ್ತೆ ಎಲ್ಲರ ವಿಶ್ವಾಸ ಗಳಿಸಲಿದೆ” ಎನ್ನುತ್ತಾರೆ.

“​ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಯಾವುದೇ ಆಕರ್ಷಕ ಘೋಷಣೆಗಳಿಲ್ಲದೆ, ಸಮುದಾಯಗಳನ್ನು ಒಗ್ಗೂಡಿಸುವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾಂಗ್ರೆಸ್‌ನ ಬದ್ಧತೆಯನ್ನು ನಿರೂಪಿಸಿದೆ. ನಮಗೆ ಕೇವಲ ಚುನಾವಣೆಗಾಗಿ ಮಾತ್ರವಲ್ಲ, ಎಲ್ಲ ಸಮಯದಲ್ಲೂ ಎಲ್ಲಾ ಸಮುದಾಯಗಳು ಮುಖ್ಯವಾಗಿವೆ. ಆದರೆ ಚುನಾವಣೆಯಲ್ಲಿ ಗೆಲ್ಲಲು ನಿರ್ದಿಷ್ಟ ಗುರಿ ನಿಗದಿಪಡಿಸುವುದು, ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು ಎನ್ನುವ ಬಿಜೆಪಿಯ ತಂತ್ರ ಯಾವುದೇ ಕಾರಣಕ್ಕೂ ಫಲಕೊಡುವುದಿಲ್ಲ” ಎಂದು ಕೇಸರಿ ಪಕ್ಷದ ದುರುದ್ದೇಶವನ್ನು ಗೌರವ್ ಟೀಕಿಸುತ್ತಾರೆ.

​ಅಸ್ಸಾಂನ ಪ್ರಮುಖ ವೋಟ್ ಬ್ಯಾಂಕ್ ಆಗಿರುವ ಆದಿವಾಸಿಗಳು ಮತ್ತು ಚಹಾ ತೋಟದ ಕಾರ್ಮಿಕರತ್ತ ಗೌರವ್ ವಿಶೇಷ ಗಮನಹರಿಸಿದ್ದಾರೆ. “ಈ ಸಮುದಾಯಗಳು ಬಿಜೆಪಿಯತ್ತ ವಾಲುತ್ತಿವೆ ಎಂಬ ತಪ್ಪು ಗ್ರಹಿಕೆಯಿದೆ. ಆದರೆ, ಉದ್ಯಮದಲ್ಲಿನ ಬಿಕ್ಕಟ್ಟು ಮತ್ತು ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಯುವಜನತೆ ತೀವ್ರ ಹತಾಶರಾಗಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿಯು ತನ್ನ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಬಲವಂತವಾಗಿ ಹೇರುವ ಮೂಲಕ ಆದಿವಾಸಿಗಳ ವಿಶಿಷ್ಟ ವೈವಿಧ್ಯತೆಗೆ ಧಕ್ಕೆ ತರುತ್ತಿದೆ. ಸಂಪನ್ಮೂಲಗಳ ಸಮಾನ ವಿತರಣೆಗಾಗಿ ರಾಹುಲ್ ಗಾಂಧಿಯವರು ನೀಡಿರುವ ‘ಜಾತಿ ಗಣತಿ’ಯ ಭರವಸೆಯು ಈ ಸಮುದಾಯದಲ್ಲಿ ಆಶಾಕಿರಣ ಮೂಡಿಸಿದ್ದು, ಇವರೆಲ್ಲರೂ ಕಾಂಗ್ರೆಸ್ ಕೈಹಿಡಿಯಲಿದ್ದಾರೆ” ಎಂದು ಭರವಸೆ ವ್ಯಕ್ತಪಡಿಸುತ್ತಾರೆ.

​ಈ ಸೌಜನ್ಯದ ರಾಜಕಾರಣ ಹಾಗೂ ಗೌರವ್ ಗೊಗೊಯ್ ಅವರ ಪ್ರಬುದ್ಧ ಮತ್ತು ಸ್ಪಷ್ಟ ಸೈದ್ಧಾಂತಿಕ ನಿಲುವುಗಳು, 2026ರ ಅಸ್ಸಾಂ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮರುಜೀವ ನೀಡಿ, ಏಕಾಂಗಿಯಾಗಿ ಪಕ್ಷವನ್ನು ದಡ ಸೇರಿಸುವ ಗುರಿ ತಲುಪಲು ಯಶಸ್ವಿಯಾಗಲಿದೆಯೇ ಎಂಬುದು ಮೇ 4ರಂದ ಪ್ರಕಟವಾಗುವ ಫಲಿತಾಂಶದಲ್ಲಿ ತಿಳಿಯಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುತ್ತಿಗೆಗಳು ಸುತ್ತುವರೆದಿರುವ ಗ್ಯಾನೇಶ್ ರಾಜೀನಾಮೆ ಸನ್ನಿಹಿತವೇ?

ದಿಲ್ಲಿ- ಮುಂಬಯಿಯಲ್ಲಿ‌ ಯುವಜನರು ಮತ್ತು  ಪ್ರತಿಪಕ್ಷಗಳ ಪ್ರತಿಭಟನೆಗಳು ಮುಂದುವರೆದಿವೆ. ಕಾಂಗ್ರೆಸ್ ಮತ್ತಿತರೆ ...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಮಲ್ಲೇಶ್ವರಂನಲ್ಲಿ ಫಾರ್ಮ್-7‌ ದುರ್ಬಳಕೆ ಆರೋಪ; ʼಈ ದಿನʼ ವರದಿ ಆಧರಿಸಿ ಕಾಂಗ್ರೆಸ್ ದೂರು

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

ಕಮಲನಗರ | ಅರ್ಹ ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ: ಕ್ಲಿನಿಕ್ ಸೀಜ್

ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ಪದವಿ ಇಲ್ಲದೆ ಅಕ್ರಮವಾಗಿ...