ಬಾಂಗ್ಲಾ ಚುನಾವಣೆ | ಹಸೀನಾ ಪಕ್ಷ ಕಣ್ಮರೆ: ಬಿಎನ್‌ಪಿ vs ಜಮಾಅತೆ ಹೋರಾಟದಲ್ಲಿ ಗೆಲ್ಲವುದು ಸಹಿಷ್ಣುತೆಯೋ-ಅಸಹನೆಯೋ?

Date:

ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಈ ಬಾರಿಯ ಚುನಾವಣೆಯಲ್ಲಿ ಬಿಎನ್‌ಪಿ ಸ್ಪಷ್ಟ ಬಹುಮತದೊಂದಿಗೆ ಮುನ್ನಡೆ ಸಾಧಿಸುವ ಸಾಧ್ಯತೆಗಳಿವೆ. ಆದಾಗ್ಯೂ, ಕೆಲವು ಸರ್ವೇಗಳಲ್ಲಿ ಜಮಾಅತೆ ನೇತೃತ್ವದ ಮೈತ್ರಿಕೂಟ ಅಧಿಕಾರ ರಚಿಸುವ ನಿರೀಕ್ಷೆಯನ್ನು ಹೇಳುತ್ತಿವೆ.

- Advertisement -

ಬಾಂಗ್ಲಾದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ರಾಜಕೀಯ ಪ್ರಕ್ಷುಬ್ಧತೆ ಮುಂದುವರೆದಿದೆ. 2024ರ ಆಗಸ್ಟ್‌ನಲ್ಲಿ ಭುಗಿಲೆದ್ದ ‘ಜೆನ್‌ ಝಡ್’ ಪ್ರತಿಭಟನೆಯು ಶೇಖ್ ಹಸೀನಾ ಅವರ ಸರ್ಕಾರವನ್ನು ಉರುಳಿಸಿತು. ಹಸೀನಾ ಅವರು ಬಾಂಗ್ಲಾ ತೊರೆದು, ಭಾರತಕ್ಕೆ ಪಲಾಯನ ಮಾಡಿದರು. ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರವೂ ರಚನೆಯಾಯಿತು. ಆದಾಗ್ಯೂ, ಇನ್‌ಕ್ವಿಲಾಬ್ ಮಂಚ್‌ನ ನಾಯಕ ಶರೀಫ್ ಒಸ್ಮಾನ್ ಹಾದಿ ಹತ್ಯೆಯ ಬಳಿಕ ಪ್ರತಿಭಟನೆಗಳು, ಹಿಂಸಾಚಾರಗಳು ಮುಂದುವರೆದಿವೆ. ಉದ್ವಿಗ್ನತೆಯ ನಡುವೆಯೇ ಬಾಂಗ್ಲಾದೇಶ ಚುನಾವಣೆಗೆ ಹೋಗಲು ಸಜ್ಜಾಗುತ್ತಿದೆ. ಫೆಬ್ರವರಿ 12ರಂದು ಮತದಾನ ನಡೆಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಸದ್ಯಕ್ಕೆ, ಯೂನಸ್ ಅವರ ಸರ್ಕಾರವು ಹಸೀನಾ ಅವರ ಆವಾಮಿ ಲೀಗ್ ಪಕ್ಷವನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿದೆ. ಪಕ್ಷದ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಪಕ್ಷ ಮತ್ತು ಪಕ್ಷದ ನಾಯಕರು ಕಣ್ಮರೆಯಾದವರಂತೆ ಇದ್ದಾರೆ. ಆವಾಮಿ ಲೀಗ್ ಅನುಪಸ್ಥಿತಿಯಲ್ಲಿ ಚುನಾವಣೆಯು ದ್ವಿಧ್ರುವೀಯ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಬಾಂಗ್ಲಾದೇಶ ನ್ಯಾಶನಲ್ ಪಾರ್ಟಿ (BNP) ಮತ್ತು ಜಮಾಅತೆ ಇಸ್ಲಾಮಿ ಪಕ್ಷಗಳ ನಡುವೆ ಚುನಾವಣಾ ಹಣಾಹಣಿ ನಡೆಯಲಿದೆ.  

ಭಾರತದಲ್ಲಿ ರಕ್ಷಣೆ ಪಡೆದಿರುವ ಹಸೀನಾ ಅವರು ತಮ್ಮ ಪಕ್ಷವನ್ನು ನಿರ್ಬಂಧಿಸಿ ನಡೆಯುತ್ತಿರುವ ಚುನಾವಣೆಯನ್ನು ಟೀಕಿಸಿದ್ದಾರೆ. ಸ್ಪರ್ಧೆಯಿಂದ ಆವಾಮಿ ಲೀಗ್‌ ಹೊರಗಿರುವ ಕಾರಣ, ಪಕ್ಷ ಲಕ್ಷಾಂತರ ಬೆಂಬಲಿಗರು ಮತದಾನದಿಂದ ದೂರ ಉಳಿಯುವ ಸಾಧ್ಯತೆಯೂ ಇದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ, ಬಾಂಗ್ಲಾ ಸರ್ಕಾರ ಹೇಳುವಂತೆ, ಕೆಲವು ಸಮೀಕ್ಷೆಗಳ ಪ್ರಕಾರ, ಆಮಾಮಿ ಲೀಗ್‌ನ ಬೆಂಬಲಿಗರು ಬಿಎನ್‌ಪಿ ಮತ್ತು ಜಮಾಅತೆ ಇಸ್ಲಾಮಿ ಕಡೆಗೆ ವಾಲಿದ್ದಾರೆ. ಈ ಪಕ್ಷಗಳನ್ನು ಬೆಂಬಲಿಸಲಾರಂಭಿಸಿದ್ದಾರೆ.

ಈ ಹಿಂದೆ, ಬಿಎನ್‌ಪಿ ಮತ್ತು ಜಮಾಅತೆ ಇಸ್ಲಾಮಿ ಮಿತ್ರಪಕ್ಷಗಳಾಗಿದ್ದವು. ಅಮಾಮಿ ಲೀಗ್ ವಿರುದ್ಧ ಜಂಟಿಯಾಗಿ ಸ್ಪರ್ಧಿಸುತ್ತಿದ್ದರು. ಆದರೆ, ಪ್ರಸ್ತುತ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆಗಿಳಿಸಿವೆ. ಮುಖಾಮುಖಿಯಾಗಿ ಹೋರಾಟ ನಡೆಸಲಿವೆ. ಅಮಾಮಿ ಲೀಗ್ ಅನುಪಸ್ಥಿತಿಯಲ್ಲಿ ಎರಡೂ ಪಕ್ಷಗಳಲ್ಲಿ ಒಬ್ಬರು ಅಧಿಕಾರದ ಗದ್ದುತೆ ಏರುವುದು ಖಚಿತವೂ ಆಗಿದೆ.

ಗಮನಾರ್ಹವೆಂದರೆ, ಹಸೀನಾ ಆಳ್ವಿಕೆಯಲ್ಲಿ ಜಮಾಅತೆ ಇಸ್ಲಾಮಿ ಪಕ್ಷವು ತೀವ್ರ ದಮನಕ್ಕೊಳಗಾಗಿತ್ತು. ಬಹುತೇಕ ಕಣ್ಮರೆಯೇ ಆಗಿಬಿಟ್ಟಿದೆ ಎಂಬಂತಿತ್ತು. 1971ರ ಸ್ವಾತಂತ್ರ್ಯ ಸಂಗ್ರಾಮದ ವೇಳೆ, ಪಾಕಿಸ್ತಾನಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಜಮಾಅತೆಯ ಪ್ರಮುಖ ನಾಯಕರಿಗೆ ಶಿಕ್ಷೆ ವಿಧಿಸಲಾಗಿತ್ತು. ಮಾತ್ರವಲ್ಲದೆ, 2013ರಲ್ಲಿ ಪಕ್ಷವನ್ನೂ ನಿಷೇಧಿಸಲಾಗಿತ್ತು.

ಆದರೆ, 2024ರಲ್ಲಿ ‘ಜನ್‌ ಝೀ’ ಯುವಜನರು ನಡೆಸಿದ ಆಂದೋಲನದಲ್ಲಿ ಜಮಾಅತೆಯ ವಿದ್ಯಾರ್ಥಿ ಸಂಘಟನೆ ‘ಬಾಂಗ್ಲಾದೇಶ ಇಸ್ಲಾಮಿ ಛಾತ್ರ ಶಿಬಿರ್’ ಪ್ರಮುಖ ಪಾತ್ರ ವಹಿಸಿತು. ಹಸೀನಾ ಪಲಾಯನ, ಸರ್ಕಾರ ಬದಲಾವಣೆಯ ಬೆಳವಣಿಗೆಗಳ ನಡುವೆಯೇ ಯೂನುಸ್ ಅವರ ಮಧ್ಯಂತರ ಸರ್ಕಾರವು ‘ಜಮಾಅತೆ’ ಮೇಲಿನ ನಿಷೇಧವನ್ನು ತೆರೆದುಹಾಕಿತು. ನಿಷೇಧ ತೆರವುಗೊಂಡ ಕೆಲವೇ ದಿನಗಳಲ್ಲಿ ಪಕ್ಷವು ಮುನ್ನೆಲೆಗೆ ಬಂದಿತು. ತನ್ನ ಇಮೇಜ್‌ ಅನ್ನು ಭದ್ರವಾಗಿ ಕಟ್ಟಿಕೊಂಡಿದೆ. ಭ್ರಷ್ಟಾಚಾರ ವಿರೋಧಿ ಪ್ರತಿಭಟನೆ, ಯುವಜನರ ಬೆಂಬಲ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರಚಾರಗಳೊಂದಿಗೆ ಬಲವಾಗಿ ಹೊರಹೊಮ್ಮಿದೆ. ಡಾ. ಶಫೀಕುರ್ ರಹಮಾನ್ ಅವರು ಪಕ್ಷದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಹಾಲಿ ಚುನಾವಣೆಗಾಗಿ ಜಮಾಅತೆ ಇಸ್ಲಾಮಿಯು ‘ನ್ಯಾಷನಲ್ ಸಿಟಿಜನ್ ಪಾರ್ಟಿ’ (NCP) ಸೇರಿದಂತೆ 11 ಪಕ್ಷಗಳ ಮೈತ್ರಿಕೂಟ ರಚಿಸಿದೆ. ಒಟ್ಟು 350 ಸ್ಥಾನಗಳಲ್ಲಿ ಜಮಾಅತೆ 224ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಪಕ್ಷವು ಅತ್ಯುತ್ತಮ ಪ್ರದರ್ಶನವನ್ನು ನೀಡುವ ನಿರೀಕ್ಷೆಯಲ್ಲಿದೆ. ಕೆಲವು ಸರ್ವೇಗಳ ಪ್ರಕಾರ, ಕನಿಷ್ಠ 105 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ.

ಇನ್ನು, ಪ್ರಮುಖ ಪ್ರತಿಸ್ಪರ್ಧಿ ಬಿಎನ್‌ಪಿ ತಾರಿಕ್ ರಹಮಾನ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ. ರಹಮಾನ್‌ ಅವರು 17 ವರ್ಷಗಳ ಗಡಿಪಾರು ಬಳಿಕ, ಮತ್ತೆ ಬಾಂಗ್ಲಾ ರಾಜಕಾರಣಕ್ಕೆ ಮರಳಿದ್ದಾರೆ. ಪಕ್ಷವು ಹಳೆಯ ಬೆಂಬಲಿಗರು, ತಳಮಟ್ಟದಿಂದ ಕಾರ್ಯಕರ್ತರನ್ನು ಸಜ್ಜುಗೊಳಿಸಿತ್ತಿದೆ. ಬಿಎನ್‌ಪಿ ಕೂಡ 10 ಪಕ್ಷಗಳ ಮೈತ್ರಿಕೂಟ ರಚಿಸಿದೆ. ಬಹುತೇಕ ಸರ್ವೇಗಳು ಹೇಳುವಂತೆ, ಬಿಎನ್‌ಪಿ ಕನಿಷ್ಠ 208 ಸ್ಥಾನಗಳನ್ನು ಗೆಲ್ಲಬಹುದು. ತಾರಿಕ್ ರಹಮಾನ್ ಅವರು ಸೌಹಾರ್ದ ರಾಷ್ಟ್ರ, ಅಲ್ಪಸಂಖ್ಯಾತರ ಸುರಕ್ಷತೆ, ನ್ಯಾಯ ವ್ಯವಸ್ಥೆಯ ಪುನಃಸ್ಥಾಪನೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆಯ ಕುರಿತು ಭರವಸೆಗಳನ್ನು ನೀಡುತ್ತಿದ್ದಾರೆ.

ಈ ಲೇಖನ ಓದಿದ್ದೀರಾ?: ಮೇಡಿಹಾಳ ಗ್ರಾಮದಲ್ಲಿ ಅವೈಜ್ಞಾನಿಕ ಗಣಿಗಾರಿಕೆ: ರೈತರ ಬೆಳೆ-ಮನೆಗಳಿಗೆ ಕಲ್ಲಿನ ಮಳೆ, ಧೂಳಿನ ಪರದೆ

ಅಲ್ಪಸಂಖ್ಯಾತರು, ವಿಶೇಷವಾಗಿ, ಬಾಂಗ್ಲಾ ಜನಸಂಖ್ಯೆಯ ಸುಮಾರು 10%ರಷ್ಟಿರುವ ಹಿಂದುಗಳು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಹಸೀನಾ ಆಳ್ವಿಕೆಯಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಿವೆ ಎಂಬ ಆರೋಪಗಳಿದ್ದವು. ಸರ್ಕಾರದ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಬಿಎನ್‌ಪಿ ಧಾರ್ಮಿಕ ಸಹಿಷ್ಣುತೆ ಮತ್ತು ಸೌಹಾರ್ದ ರಾಷ್ಟ್ರದ ಕುರಿತು ಹೆಚ್ಚು ಮಾತನಾಡುತ್ತಿತ್ತು. ಹೀಗಾಗಿ, ಬಹುತೇಕ ಹಿಂದುಗಳು ಮತ್ತು ಅಲ್ಪಸಂಖ್ಯಾತರು ಬಿಎನ್‌ಪಿಯನ್ನು ಬೆಂಬಲಿಸುತ್ತಿದ್ದಾರೆ.  

ಮತ್ತೊಂದೆಡೆ, ಜಮಾಅತೆ ಇಸ್ಲಾಮಿಯು ಇಸ್ಲಾಮಿಕ್ ಧೋರಣೆಗಳನ್ನು ಪ್ರತಿಪಾದಿಸುತ್ತಿದೆ. ಪರಿಣಾಮ, ಹಿಂದುಗಳು ಸೇರಿದಂತೆ ಅಲ್ಪಸಂಖ್ಯಾತರು ಜಮಾಅತೆ ವಿಚಾರದಲ್ಲಿ ಭಯಭೀತರಾಗಿದ್ದಾರೆ. ಆದರೂ, ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಜಮಾಅತೆ, ಮೊದಲ ಬಾರಿಗೆ ಒಬ್ಬ ಹಿಂದು ಅಭ್ಯರ್ಥಿ ಕೃಷ್ಣ ನಂದಿ ಅವರನ್ನು ಖುಲ್ನಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇನ್ನು, ಶಫೀಕುರ್ ರಹಮಾನ್ ಅವರು ‘ಎಲ್ಲ ಧರ್ಮಗಳಿಗೆ ಸುರಕ್ಷಿತ ರಾಷ್ಟ್ರ ಬಾಂಗ್ಲಾದೇಶ. ಜಮಾಅತೆ ಅಧಿಕಾರಕ್ಕೆ ಬಂದರೆ ಯಾವುದೇ ಹಿಂದು ಬಾಂಗ್ಲಾದೇಶ ತೊರೆಯಬೇಕಾಗಿಲ್ಲ’ ಎಂದು ಭರವಸೆ ನೀಡಿದ್ದಾರೆ. ಬಿಎನ್‌ಪಿಯ ದೀರ್ಘಕಾಲದ ಸಹಬಾಳ್ವೆಯ ಪ್ರತಿಪಾದನೆ ಮತ್ತು ಜಮಾಅತೆಯ ಹೊಸ ಭರವಸೆಗಳು ಹಿಂದು ಮತಗಳ ಒಡಕಿಗೆ ಕಾರಣವಾಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.

ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಈ ಬಾರಿಯ ಚುನಾವಣೆಯಲ್ಲಿ ಬಿಎನ್‌ಪಿ ಸ್ಪಷ್ಟ ಬಹುಮತದೊಂದಿಗೆ ಮುನ್ನಡೆ ಸಾಧಿಸುವ ಸಾಧ್ಯತೆಗಳಿವೆ. ಆದಾಗ್ಯೂ, ಕೆಲವು ಸರ್ವೇಗಳಲ್ಲಿ ಜಮಾಅತೆ ನೇತೃತ್ವದ ಮೈತ್ರಿಕೂಟ ಅಧಿಕಾರ ರಚಿಸುವ ನಿರೀಕ್ಷೆಯನ್ನು ಹೇಳುತ್ತಿವೆ.

ಈ ಚುನಾವಣೆಯ ಫಲಿತಾಂಶವು ಬಾಂಗ್ಲಾದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಬಾಂಗ್ಲಾದೇಶವು ಬಿಎನ್‌ಪಿ ಗೆಲುವಿನೊಂದಿಗೆ ಸಾಂಪ್ರದಾಯಿಕ ಧಾರ್ಮಿಕ ಸಹಿಷ್ಣುತೆಯ ರಾಜಕೀಯಕ್ಕೆ ಮರಳುವುದೋ ಅಥವಾ ಜಮಾಅತೆ ಜಯದೊಂದಿಗೆ ಇಸ್ಲಾಮಿಕ್ ಪ್ರಭಾವ ಹೆಚ್ಚುವುದೋ ಅಥವಾ ಯುವಜನರ ಆಂದೋಲನದ ಪರಿಣಾಮಗಳು ಮುಂದುವರಿಯುವುದೋ ಕಾದು ನೋಡಬೇಕಿದೆ.

WhatsApp Image 2023 06 13 at 1.10.34 PM e1686642227658
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...

ಸಿಜೆಪಿ ಬೆಂಬಲಕ್ಕೆ ನಿಂತ ಪಾಲ್ಘರ್ ವಕೀಲರ ಸಂಘ: ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ಘೋಷಣೆ

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಕೀಲರ ಸಂಘವೊಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ)...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ ಆಶ್ರಮ’

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...