ಕಾಂಗ್ರೆಸ್ ಪಕ್ಷ ಪದವೀಧರರಿಗೆ ಯುವನಿಧಿ ಯೋಜನೆ ನೀಡಿದೆ, ಉದ್ಯೋಗ ಸೃಷ್ಟಿಸಲು ಶ್ರಮಿಸುತ್ತಿದೆ, ಬಿಜೆಪಿ ಪದವೀಧರರಿಗೆ ಹೆಂಡ ಕುಡಿಸಿ ಚಟಗಳಿಗೆ ದಾಸರನ್ನಾಗಿಸುತ್ತಿದೆ ಎಂದು ಕಾಂಗ್ರೆಸ್ ಕುಟುಕಿದೆ.
ಪದವೀಧರ ಮತದಾರರಿಗೆ ಬಿಜೆಪಿ ಹೆಂಡ ಕುಡಿಸಿ ಮತಯಾಚಿಸುತ್ತಿದೆ ಎಂದು ಆರೋಪಿಸಿದ್ದ ಕೆ ಎಸ್ ಈಶ್ವರಪ್ಪ ಹೇಳಿಕೆಯನ್ನು ಉಲ್ಲೇಖಿಸಿ ಎಕ್ಸ್ ತಾಣದಲ್ಲಿ ಕಾಂಗ್ರೆಸ್ ಪೋಸ್ಟ್ ಮಾಡಿದೆ.
“ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿಯವರು ಮತದಾರರಿಗೆ ಗುಂಡು ಪಾರ್ಟಿ ಆಯೋಜಿಸಿ ಓಲೈಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಸ್ವತಃ ಬಿಜೆಪಿ ನಾಯಕ ಈಶ್ವರಪ್ಪ ಆರೋಪಿಸಿದ್ದಾರೆ” ಎಂದಿದೆ.
“ಭಾರತೀಯ ಜನತಾ ಪಾರ್ಟಿಯ ಬದಲಾಗಿ ಭಾರತೀಯ ಹೆಂಡದ ಪಾರ್ಟಿ ಎಂದು ಹೆಸರು ಬದಲಿಸಿಕೊಂಡರೆ ಸೂಕ್ತವಾಗುತ್ತದೆ! ಸಿ ಟಿ ರವಿ ಅವರೂ ಖುಷಿಯಾಗುತ್ತಾರೆ!” ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಪಕ್ಷ ಪದವೀಧರರಿಗೆ ಯುವನಿಧಿ ಯೋಜನೆ ನೀಡಿದೆ, ಉದ್ಯೋಗ ಸೃಷ್ಟಿಸಲು ಶ್ರಮಿಸುತ್ತಿದೆ,
ಬಿಜೆಪಿ ಪದವೀಧರರಿಗೆ ಹೆಂಡ ಕುಡಿಸಿ ಚಟಗಳಿಗೆ ದಾಸರನ್ನಾಗಿಸುತ್ತಿದೆ!ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿಯವರು ಮತದಾರರಿಗೆ ಗುಂಡು ಪಾರ್ಟಿ ಆಯೋಜಿಸಿ ಓಲೈಸಿಕೊಳ್ಳಲು… pic.twitter.com/JAn8hc7VLB
— Karnataka Congress (@INCKarnataka) May 30, 2024
