ದೇಶದ್ರೋಹಿ ಸಂಘಟನೆ ಎಸ್‌ಡಿಪಿಐ ಹೇಳಿಕೆ ಬಗ್ಗೆ ಕಾನೂನು ಕ್ರಮ: ಸಿಎಂ ಬೊಮ್ಮಾಯಿ

Date:

  • ಮುಸ್ಲಿಂ ಮೀಸಲಾತಿ ರದ್ದು ವಿಚಾರವಾಗಿ ಎಸ್‌ಡಿಪಿಐ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ
  • ʼಭಾರತದ ಅಲ್ಪಸಂಖ್ಯಾತರ ವಿರೋಧಿಗಳಿಂದ ನಾವು ಮೆಚ್ಚುಗೆ ಬಯಸುವುದಿಲ್ಲʼ

“ಎಸ್‌ಡಿಪಿಐ ದೇಶದ್ರೋಹಿ ಸಂಘಟನೆ. ದೇಶದ ವಿರುದ್ಧ ಕೆಲಸ ಮಾಡುವ ಅವರು, ಭಾರತದ ಅಲ್ಪಸಂಖ್ಯಾತರ ವಿರೋಧಿಗಳು. ಅವರಿಂದ ನಾವು ಮೆಚ್ಚುಗೆ ಬಯಸುವುದಿಲ್ಲ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘2ಬಿ’ ಅಡಿ ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿ ರದ್ದುಪಡಿಸಿದ ವಿಚಾರವಾಗಿ ಎಸ್‌ಡಿಪಿಐನವರು ತಮ್ಮ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆ ವಿಚಾರವಾಗಿ, ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಪ್ರತಿಕ್ರಿಯಿಸಿದರು.

“ಎಂದಿಗೂ ನಮ್ಮ ಚಿಂತನೆ ಮತ್ತು ವಿಚಾರಗಳಿಗೆ ವಿರುದ್ಧವಾಗಿರುವ ಎಸ್‌ಡಿಪಿಐನವರಿಗೆ ನಾವು ಸೊಪ್ಪು ಹಾಕುವುದಿಲ್ಲ. ಅವರು ನೀಡಿದ ಹೇಳಿಕೆ ಗಮನಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು” ಎಂದರು.

ಈ ಸುದ್ದಿ ಓದಿದ್ದೀರಾ? ಬಿಜೆಪಿ ಶಾಸಕ ನೆಹರೂ ಓಲೇಕಾರ್ ಅನರ್ಹತೆಗೆ ಸ್ವಪಕ್ಷದ ಕಾರ್ಯಕರ್ತನಿಂದಲೇ ದೂರು

ಏಪ್ರಿಲ್ ಮೊದಲ ವಾರದಲ್ಲಿ ಬಿಜೆಪಿ ಪಟ್ಟಿ

“ಬಿಜೆಪಿ ಪಟ್ಟಿ ಬಹುತೇಕವಾಗಿ ಸಿದ್ಧವಾಗಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ಕಳೆದ  2-3 ದಿನಗಳಿಂದ ನಮ್ಮ ಶಾಸಕರಿಗೆ ಫೋನ್ ಮಾಡಿ ಟಿಕೆಟ್ ಕೊಡುವುದಾಗಿ ಕಾಂಗ್ರೆಸ್‌ನವರು ಹೇಳಿದ್ದಾರೆ. ಕಾಂಗ್ರೆಸ್ ಬಳಿ ಸರಿಯಾದ ಅಭ್ಯರ್ಥಿ ಇಲ್ಲದೆ ಹತಾಶರಾಗಿದ್ದಾರೆ. ಹಾಗಾಗಿ ನಮ್ಮ ಪಕ್ಷದವರಿಗೆ ಫೋನ್ ಮಾಡುತ್ತಿದ್ದಾರೆ. ಇದರಿಂದ ತಿಳಿಯುತ್ತೆ ಕಾಂಗ್ರೆಸ್ ದಿವಾಳಿಯಾಗಿದೆ” ಎಂದು ಕುಟುಕಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಸುಗೂಸು ಮಾರಾಟ | ಕಳೆದ 6 ವರ್ಷದಲ್ಲಿ 250ಕ್ಕೂ ಹೆಚ್ಚು ಮಕ್ಕಳ ಮಾರಾಟ

ರಾಜ್ಯದಲ್ಲಿ ಮತ್ತೆ ನವಜಾತ ಶಿಶುಗಳ ಮಾರಾಟ ಗ್ಯಾಂಗ್‌ ಸಕ್ರಿಯವಾಗಿದ್ದು, ಇತ್ತೀಚೆಗೆ 20...

ಗುತ್ತಿಗೆದಾರ ಅಂಬಿಕಾಪತಿ ಸಾವು | ಕೆಂಪಣ್ಣ ಹೇಳಿಕೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿ: ಯತ್ನಾಳ ಆಗ್ರಹ

ಅಂಬಿಕಾಪತಿ ಸಾವು ಸಹಜವಲ್ಲವೆಂದಿರುವ ಕೆಂಪಣ್ಣ ಅಂಬಿಕಾಪತಿ ಮನೆಯಲ್ಲಿ 40 ಕೋಟಿ...

ಹಾವೇರಿ | ಡಿಕೆಶಿ ಜೈಲಿಗೆ ಹೋಗೋದು ಖಚಿತ: ಈಶ್ವರಪ್ಪ

ಲೋಕಸಭಾ ಚುನಾವಣೆಗೂ ಮುನ್ನ ಅಥವಾ ನಂತರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೈಲಿಗೆ...