ಚುನಾವಣಾ ಅಕ್ರಮ| ಮಗಳಿಗೆ ನ್ಯಾಯ ಕೊಡಿಸಲು ಕೋರ್ಟ್ ಮೆಟ್ಟಿಲೇರಲಿರುವ ಅಪ್ಪ

Date:

  • ಆರ್ ಆಶೋಕ್, ತೇಜಸ್ವಿ ಸೂರ್ಯ ಚುನಾವಣಾ ನಿಯಮ ಮೀರಿದ್ದಾರೆ
  • ನಮಗಾಗಿರುವ ಅನ್ಯಾಯದ ವಿರುದ್ದ ಕೋರ್ಟನಲ್ಲಿ ನ್ಯಾಯ ಪಡೆಯುತ್ತೇವೆ

ಮತ ಎಣಿಕೆ ವಿಚಾರದಲ್ಲಾದ ಹೈಡ್ರಾಮ ಪರಿಣಾಮ ಗೆದ್ದು ಸೋತ ಜಯನಗರ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಶಾಸಕತ್ವದ ವಿಚಾರವೀಗ ಕೋರ್ಟ್ ಮೆಟ್ಟಿಲೇರಲಿದೆ.

ಚುನಾವಣಾ ಅಕ್ರಮ ವಿಚಾರವಾಗಿ ಸೌಮ್ಯರೆಡ್ಡಿ ಶಾಸಕತ್ವ ವಿಚಾರವನ್ನು ಕೋರ್ಟ್‌ಗೆ ಒಯ್ದು, ನ್ಯಾಯ ಪಡೆದುಕೊಳ್ಳುವುದಾಗಿ ಅವರ ತಂದೆ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮತ ಎಣಿಕೆ ವಿಚಾರದಲ್ಲಿ ಬಿಜೆಪಿ ಪ್ರಭಾವ ಬೀರಿದೆ. ಇಲ್ಲಿ ಅಕ್ರಮವಾಗಿದೆ. ಹೀಗಾಗಿ ಈ ಅನ್ಯಾಯದ ವಿರುದ್ಧ ಹೋರಾಟ ನಡೆಸಲಾಗುವುದು” ಎಂದು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಚುನಾವಣಾ ಅಧಿಕಾರಿ ಅಸಿಂಧು ಎಂದು ಪರಿಗಣಿಸಿದ್ದ 250 ಮತಗಳನ್ನು ಮರು ಎಣಿಕೆ ವೇಳೆ ಲೆಕ್ಕಕ್ಕೆ ತೆಗೆದುಕೊಳ್ಳಾಗಿದೆ. ಕೆಲವು ಕಾಣದ ಕೈಗಳ ಒತ್ತಡದಿಂದಾಗಿ ಈ ಲೆಕ್ಕಾಚಾರ ನಡೆದಿದೆ. ಒಂದು ಬಾರಿ ಅಸಿಂಧು ಎಂದು ಪರಿಗಣಿಸಿದ ಮತಗಳನ್ನು ಮತ ಎಣಿಕೆ ಪ್ರಕ್ರಿಯೆಯಲ್ಲಿ ಸೇರಿಸುವಂತಿಲ್ಲ. ಇವೆಲ್ಲವನ್ನು ಕೋರ್ಟ್ ಗಮನಕ್ಕೆ ತರಲಾಗುವುದು” ಎಂದು ಅವರು ಹೇಳಿದರು.

“ಮರು ಮತ ಎಣಿಕೆ ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶದ ಕೆಲವು ರಾಜಕಾರಣಿಗಳು ಹಾಗೂ ಮಾಜಿ ಸಚಿವ ಆರ್ ಅಶೋಕ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪ್ರಭಾವವಿದೆ” ಎಂದು ರಾಮಲಿಂಗಾರೆಡ್ಡಿಆರೋಪಿಸಿದರು.

ಈ ಸುದ್ದಿ ಓದಿದ್ದೀರಾ?: ಕಷ್ಟ ಪಟ್ಟಿದ್ದೀವಿ, ಕೂಲಿ ಕೊಡಿ ಎಂದು ನಮ್ಮ ನಾಯಕರನ್ನು ಕೇಳುತ್ತೇವೆ: ಡಿ ಕೆ ಸುರೇಶ್‌

“ಮರು ಮತ ಎಣಿಕೆ ವೇಳೆ ಅಲ್ಲಿದ್ದ ತೇಜಸ್ವಿ ಸೂರ್ಯ ಮತ್ತು ಅಶೋಕ ಅಭ್ಯರ್ಥಿಗಳ ಏಜೆಂಟರೂ ಅಲ್ಲ, ಅಭ್ಯರ್ಥಿಗಳೂ ಅಲ್ಲ. ಇವರಿಗೆ ಹೇಗೆ ಚುನಾವಣಾಧಿಕಾರಿ ಅಲ್ಲಿರಲು ಅವಕಾಶ ನೀಡಿದರು ಎನ್ನುವುದಕ್ಕೆ ಆಯೋಗ ಉತ್ತರ ನೀಡಬೇಕು” ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿ, ಶೀಘ್ರದಲ್ಲೇ ಕಾನೂನು ಸಮರಕ್ಕೆ ಮುಂದಾಗುವುದಾಗಿ ಹೇಳಿದರು.

ಈ ಹಿಂದಿನ ಮತಎಣಿಕೆ ವೇಳೆ, ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಪ್ರಕಟಿಸಿದ್ದ ಮಾಹಿತಿಯಂತೆ ಸೌಮ್ಯ ರೆಡ್ಡಿ ಕೊನೆಯ ಸುತ್ತಿನಲ್ಲಿ ಸುಮಾರು 160 ಮತಗಳಿಂದ ಮುಂದಿದ್ದು ಜಯಶಾಲಿಯಾಗಿದ್ದರು. ಬಳಿಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿ ನಾಯಕರು ಮರುಮತದಾನಕ್ಕೆ ಒತ್ತಾಯ ಅರ್ಜಿ ಸಲ್ಲಿಸಿ, ಅದಕ್ಕೆ ಅವಕಾಶ ಪಡೆದು ಅಲ್ಲಿ 16 ಮತಗಳಿಂದ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲ್ಯಾಣ ಕರ್ನಾಟಕದಲ್ಲಿ ಬೃಹತ್ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಸ್ಥಾಪಿಸಿ : ಸಚಿವ ಈಶ್ವರ ಖಂಡ್ರೆ

ಕಲ್ಯಾಣ ಕರ್ನಾಟಕ ಭಾಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀವ್ರ ಹಿಂದುಳಿದಿದ್ದು, ಈ...

ದೇವದಾರಿ ಉಕ್ಕು ಗಣಿಗಾರಿಕೆ | ಆರು ವರ್ಷಗಳ ಹಿಂದೆ ವಿರೋಧ – ಇಂದು ಒಪ್ಪಿಗೆ; ಇದು ಕೇಂದ್ರ ಸಚಿವ ಎಚ್‌ಡಿಕೆ ವರಸೆ!

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಂಸದರಾಗಿ ಆಯ್ಕೆಯಾಗಿದ್ದು, ಮೋದಿ ನೇತೃತ್ವದ ಎನ್‌ಡಿಎ...

ಪೋಕ್ಸೋ ಪ್ರಕರಣ | ಬಿಎಸ್‌ವೈ ಬಂಧಿಸದಂತೆ ಹೈಕೋರ್ಟ್‌ ಮಧ್ಯಂತರ ಆದೇಶ

ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು...

ಬಿಎಸ್‌ವೈ ಪೋಕ್ಸೊ | ಕಾನೂನು ರಕ್ಷಕರಿಂದಲೇ ಕಾನೂನು ಉಲ್ಲಂಘನೆ: ವಕೀಲ ಎಸ್‌ ಬಾಲನ್ ಆರೋಪ

"ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಗಂಭೀರವಾಗಿರುವ ಪೋಕ್ಸೊ ಪ್ರಕರಣ...