ಕೆಟ್ಟ ಬಟ್ಟೆ ಧರಿಸುವ ಹುಡುಗಿಯರು ಶೂರ್ಪನಖಿಯಂತೆ ಕಾಣುತ್ತಾರೆ : ಬಿಜೆಪಿ ನಾಯಕ ಕೈಲಾಶ್

Date:

  • ಸ್ಮೃತಿ ಇರಾನಿ ಈಗ ಎಲ್ಲಿದ್ದಾರೆ ಎಂದ ಕಾಂಗ್ರೆಸ್
  • ಇಂದೋರ್‌ನಲ್ಲಿ ಕೈಲಾಶ್ ವಿವಾದಾತ್ಮಕ ಹೇಳಿಕೆ

“ಕೆಟ್ಟ ಬಟ್ಟೆ ಧರಿಸುವ ಯುವತಿಯರು ಶೂರ್ಪನಖಿಯಂತೆ ಕಾಣುತ್ತಾರೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಸ್ತ್ರೀ ವಿರೋಧಿ ಹೇಳಿಕೆ ನೀಡಿದ್ದಾರೆ.

ಸ್ತ್ರೀ ವಿರೋಧಿ ಧೋರಣೆ ತಾಳುವುದು ಮತ್ತು ಭಾರತೀಯ ಮಹಿಳೆಯರನ್ನು ಅಪಮಾನಿಸುವುದು ಬಿಜೆಪಿ ನಾಯಕರಿಗೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕೆಲ ದಿನಗಳ ಹಿಂದೆ ಕೋಲಾರದ ಸಂಸದ ಮುನಿಸ್ವಾಮಿ, ಹಣೆಗೆ ಬೊಟ್ಟು ಇಡದ ಮಹಿಳೆಯನ್ನು ಸಾರ್ವಜನಿಕವಾಗಿ ನಿಂದಿಸಿದ್ದರು.

ಯುವತಿಯರ ಇತ್ತೀಚಿನ ಉಡುಪುಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಕೈಲಾಶ್ ವಿಜಯವರ್ಗಿಯ, “ಈಗಿನ ಕಾಲದ ಹುಡುಗಿಯರು ಕೆಟ್ಟ ಬಟ್ಟೆಗಳನ್ನು ಹಾಕಿಕೊಂಡರೆ, ರಾಮಾಯಣದಲ್ಲಿ ಬರುವ ಶೂರ್ಪನಖಿಯಂತೆ ಕಾಣುತ್ತಾರೆ” ಎಂದು ಹೇಳಿಕೆ ನೀಡಿದ್ದಾರೆ.

ಹನುಮಾನ್ ಮತ್ತು ಮಹಾವೀರ ಜಯಂತಿಯಂದು ಇಂದೋರ್‌ನಲ್ಲಿ ಮಾತನಾಡಿದ ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ನಾನು ರಾತ್ರಿ ಹೊತ್ತು ಹೊರಗೆ ಬಂದಾಗ ಯುವ ಜನತೆ ಕುಡಿಯುವುದನ್ನು ನೋಡುತ್ತೇನೆ. ತಕ್ಷಣಕ್ಕೆ ಅವರ ಕಪಾಳಕ್ಕೆ ಎರಡು ಬಿಡಬೇಕು ಎನಿಸುತ್ತದೆ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ದ್ವೇಷ ಭಾಷಣ | ಎಫ್‌ಐಆರ್ ದಾಖಲಾಗಿ ನಾಲ್ಕು ದಿನ ಕಳೆದರೂ ಪತ್ತೆಯಾಗದ ಕಾಜಲ್ ಹಿಂದೂಸ್ಥಾನಿ

“ಮಹಿಳೆಯನ್ನು ನಾವು ದೇವತೆ ಎಂದು ಭಾವಿಸುತ್ತೇವೆ. ಆದರೆ, ಈಗಿನ ಕಾಲದ ಹುಡುಗಿಯರಲ್ಲಿ ಮಹಿಳೆಯರು ಎನ್ನುವ ಯಾವ ಲಕ್ಷಣವೂ ಇಲ್ಲ. ಕೆಟ್ಟ ಬಟ್ಟೆ ಧರಿಸಿ ಥೇಟ್‌ ಶೂರ್ಪನಖಿಯಂತೆ ಕಾಣುತ್ತಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ದೇವರು ನಿಮಗೆ ಒಳ್ಳೆಯ ದೇಹ ಕೊಟ್ಟಿದ್ದಾನೆ. ಒಳ್ಳೆಯ ಬಟ್ಟೆಗಳನ್ನು ಧರಿಸಿ, ದಯವಿಟ್ಟು ನಿಮ್ಮ ಮಕ್ಕಳಿಗೆ ಚೆನ್ನಾಗಿ ಕಲಿಸಿ. ನನಗಂತೂ ಇದರ ಬಗ್ಗೆ ಚಿಂತೆಯಾಗಿದೆ” ಎಂದಿದ್ದಾರೆ.

ಬಿಜೆಪಿ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್, “ಹುಡುಗಿಯರು ಕೆಟ್ಟದಾಗಿ ಬಟ್ಟೆ ತೊಡುತ್ತಾರೆ ಎನ್ನುವ ಮೂಲಕ ಬಿಜೆಪಿ ನಾಯಕ ಕೈಲಾಶ್‌, ಶೂರ್ಪನಖಿಗೆ ಹೋಲಿಸಿದ್ದಾರೆ. ಇದು ಈ ದೇಶದ ಪ್ರತಿಯೊಬ್ಬ ಮಹಿಳೆಗೂ ಮಾಡಿದ ಅಪಮಾನ” ಎಂದು ಟ್ವೀಟ್ ಮಾಡಿದ್ದಾರೆ.

“ಈಗ ಸ್ಮೃತಿ ಇರಾನಿ ಎಲ್ಲಿದ್ದಾರೆ? ಬಿಜೆಪಿ ನಾಯಕನ ಹೇಳಿಕೆಗೆ ಅವರು ಆಕ್ಷೇಪ ವ್ಯಕ್ತಪಡಿಸುವರೇ ಅಥವಾ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುವ ಅಂಶಗಳಿಗಾಗಿ ಹುಡುಕಾಟ ನಡೆಸುವರೇ” ಎಂದು ವ್ಯಂಗ್ಯವಾಡಿದ್ದಾರೆ.

ಶೂರ್ಪನಖಿ

ರಾಮಾಯಣ ಮಹಾಕಾವ್ಯದಲ್ಲಿ ಬರುವ ಪಾತ್ರವೊಂದರ ಹೆಸರು ಶೂರ್ಪನಖಿ. ಈಕೆ ಲಂಕಾ ರಾಜ ರಾವಣನ ಸಹೋದರಿ. ರಾಮನ ಸಹೋದರ ಲಕ್ಷ್ಮಣನನ್ನು ಮೋಹಿಸಿದ ಕಾರಣಕ್ಕೆ ಶೂರ್ಪನಖಿಯ ಮೂಗನ್ನು ಕುಯ್ಯಲಾಗುತ್ತದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರ ಪರಿಹಾರಕ್ಕಾಗಿ ಕರ್ನಾಟಕಕ್ಕೆ 18,171 ಕೋಟಿ ರೂ. ಬಿಡುಗಡೆಗೆ ಕೇಂದ್ರಕ್ಕೆ ಖರ್ಗೆ ಮನವಿ

ಭೀಕರ ಬರಗಾಲದಿಂದ ತತ್ತರಿಸಿರುವ ಕರ್ನಾಟಕಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್)...

ಶೂದ್ರರು, ದಲಿತರಿಗೆ ಆರ್‌ಎಸ್‌ಎಸ್‌ ಗರ್ಭಗುಡಿಗೆ ಪ್ರವೇಶ ಇಲ್ಲ ಎಂಬುದು ಮತ್ತೆ ಸಾಬೀತು: ಸಿದ್ದರಾಮಯ್ಯ

ಹೊರಬಾಗಿಲಲ್ಲಿ ನಿಂತು 'ಜೀ..ಜೀ..ಹುಜೂರ್' ಎಂದಷ್ಟೇ ಹೇಳಬೇಕು:‌ ಸಿದ್ದರಾಮಯ್ಯ ಗೂಳಿಹಟ್ಟಿ ಶೇಖರ್...

ಪಿಒಕೆ ವಿಷಯದಲ್ಲಿ ನೆಹರು ಮಾಡಿದ್ದು ಐತಿಹಾಸಿಕ ಪ್ರಮಾದ ಎಂದ ಅಮಿತ್ ಶಾ

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ)...

ವಿಧಾನಸಭೆಗೆ ಆಯ್ಕೆಯಾಗಿದ್ದ ಇಬ್ಬರು ಕೇಂದ್ರ ಸಚಿವರು, 8 ಸಂಸದರ ರಾಜೀನಾಮೆ

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು...