ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪಿತಾಪುರಂ ಲೋಕಸಭಾ ಕ್ಷೇತ್ರದಲ್ಲಿ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸ್ಪರ್ಧಿಸಿದ್ದಾರೆ. ಪವನ್ ಮತ್ತು ಪಕ್ಷದ ಕಾರ್ಯಕರ್ತರು ಪಿತಾಪುರಂನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಪಿತಾಪುರಂನ ಶ್ರೀಪಾದ ಶ್ರೀವಲ್ಲಭುಲು ಮತ್ತು ಶ್ರೀಪುರುಷುತಿಕಾ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿರುವ ಪವನ್, ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಸಮನ್ವಯ ಸಭೆ ನಡೆಸಿದ್ದು, ಮೂರು ದಿನಗಳ ಕಾಲ ಪಿತಾಪುರಂನಲ್ಲಿ ಉಳಿದುಕೊಂಡು ತಮ್ಮ ಮತ್ತು ಪಕ್ಷದ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಷ್ಟ್ರಪತಿ ಪರಿಗಣನೆಗಾಗಿ ಮಸೂದೆಗಳಿಗೆ ತಡೆ; ಸುಪ್ರೀಂ ಮೊರೆ ಹೋದ ಕೇರಳ ಸರ್ಕಾರ
“ನಮ್ಮ ಮುಖ್ಯಸ್ಥರು ಪಿತಾಪುರಂನಲ್ಲಿ ಪ್ರಧಾನ ಕಚೇರಿ ತೆಗೆದಿದ್ದಾರೆ. ಪಿತಾಪುರಂಅನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯಾದ್ಯಂತ ಚುನಾವಣಾ ಪ್ರಚಾರವನ್ನು ಕೈಗೊಳ್ಳಲಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬೇಕಾದ ಸೂಕ್ತ ವ್ಯವಸ್ಥೆ ಮಾಡುವಂತೆ ನಮಗೆ ನಿರ್ದೇಶಿಸಲಾಗಿದೆ” ಎಂದು ಜೆಎಸ್‌ಪಿ ನಾಯಕರು ತಿಳಿಸಿದ್ದಾರೆ.