ಮೋದಿ ಅವರೇ, ರಾಜ್ಯ ಬಿಜೆಪಿಗೆ ‘ಬಿಎಸ್‌ವೈ & ಸನ್ಸ್ ಪಾರ್ಟಿ’ ಎಂದು ನಾಮಕರಣ ಮಾಡಿ: ಕಾಂಗ್ರೆಸ್‌ ಲೇವಡಿ

Date:

ಪ್ರಧಾನಿ ನರೇಂದ್ರ ಅವರೇ, ವಿಧಾನಸಭಾ ಚುನಾವಣೆಗಾಗಿ ಮೂರು ದಿನಕ್ಕೊಮ್ಮೆ ಕೈಬೀಸಿ ಹೋದರೂ ಕನ್ನಡಿಗರು ಕ್ಯಾರೇ ಅಂದಿಲ್ಲ. ಈಗ ನಿಮ್ಮ ತಗಡು ಚುನಾವಣಾ ಭಾಷಣ ಕೇಳುವರೇ” ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

- Advertisement -

ಎಕ್ಸ್‌ ತಾಣದಲ್ಲಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “ಎಸ್‌ಬಿಐ ಬ್ಯಾಂಕನ್ನೇ ಏಟಿಎಂ ಮಾಡಿಕೊಂಡಿರುವ ತಾವು ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತಾಡುವ ಅರ್ಹತೆ ಹೊಂದಿಲ್ಲ. ದಮ್ಮು ತಾಕತ್ತು ಇದ್ದರೆ ಚುನಾವಣಾ ಬಾಂಡ್ ಬಗ್ಗೆ ಮಾತಾಡಿ” ಎಂದು ಸವಾಲು ಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

“ಹಿಪಾಕ್ರಸಿಗೆ ಮತ್ತೊಂದು ಹೆಸರೇ ಮೋದಿ! ಶಿವಮೊಗ್ಗದಲ್ಲಿ ವೇದಿಕೆ ಮೇಲೆ ಯಡಿಯೂರಪ್ಪರನ್ನು ಕೂರಿಸಿಕೊಂಡು, ಆ ಕಡೆ ಅಭ್ಯರ್ಥಿಯಾಗಿರುವ ದೊಡ್ಡ ಮಗ, ಈ ಕಡೆ ರಾಜ್ಯಾಧ್ಯಕ್ಷನಾದ ಚಿಕ್ಕ ಮಗನನ್ನು ಕೂರಿಸಿಕೊಂಡಿದ್ದ ಮೋದಿ ಅವರೇ ನಿಮ್ಮ ಡೋಂಗಿತನ ಬಯಲಾಗಿದೆ. ನಿಮ್ಮ ಟೆಲಿಪ್ರಾಂಪ್ಟರ್ ನಿಂದ “ಕುಟುಂಬ ರಾಜಕೀಯ“ ಎಂಬ ಪದವನ್ನು ಅಳಿಸಿಬಿಡಿ. ಅಥವಾ ರಾಜ್ಯ ಬಿಜೆಪಿಗೆ “BSY & ಸನ್ಸ್ ಪಾರ್ಟಿ” ಎಂದು ನಾಮಕರಣ ಮಾಡಿಬಿಡಿ” ಎಂದು ಟೀಕಿಸಿದೆ.

“ನರೇಂದ್ರ ಅವರೇ, ನೀವು ಮತ ಕೇಳುತ್ತಿರುವುದು ಯಡಿಯೂರಪ್ಪನವರ ಮಗ ಎನ್ನುವುದು ತಿಳಿದಿದೆಯೇ? ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪನವರ ಮಗ ಎನ್ನುವುದು ತಿಳಿದಿದೆಯೇ? ಇದು ಕುಟುಂಬ ರಾಜಕಾರಣ ಅಲ್ಲವೇ? “ಕುಟುಂಬ ರಾಜಕಾರಣ“ ಎಂದು ಟೀಕಿಸಿ ಈಗ ರಾಜಕೀಯ ಕುಟುಂಬದ ಪರ ಮತ ಕೇಳುವ ಮೋದಿಯದ್ದು ಹಿಪಾಕ್ರಸಿ ಅಲ್ಲದೆ ಇನ್ನೇನು” ಎಂದು ಕುಟುಕಿದೆ.

“ಕಷ್ಟಕ್ಕೆ ಬರಲಿಲ್ಲ, ಚುನಾವಣೆಗೆ ಬಾರದೆ ಇರುವುದಿಲ್ಲ“ ಇದು ಮೋದಿ ಅವರ ಧ್ಯೇಯವಾಕ್ಯ! ಕರ್ನಾಟಕಕ್ಕೆ ಬರ ಪರಿಹಾರ ನೀಡಿ ಎಂದು ಪತ್ರ ಬರೆದಿದ್ದು ಆಯ್ತು, ಮುಖ್ಯಮಂತ್ರಿಗಳು ಭೇಟಿಯಾಗಿ ಮನವಿ ಮಾಡಿದ್ದೂ ಆಯ್ತು, ಆದರೂ ನಯಾಪೈಸೆ ಹಣ ಬಿಡುಗಡೆ ಮಾಡದೆ ಯಾವ ಮುಖವಿಟ್ಟುಕೊಂಡು ಮತ ಕೇಳಲು ಬಂದಿದ್ದೀರಿ? ಕೇಂದ್ರ ಬರ ಅಧ್ಯಯನ ತಂಡ ಮಾಡಿದ ಅಧ್ಯಯನ ವರದಿ ಎಲ್ಲಿ ಹೋಯ್ತು, ಫಲಶೃತಿ ಏನಾಯ್ತು ಮೋದಿಯವರೇ” ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

“ಬರದಿಂದ ಕಂಗಾಲಾಗಿರುವ ಕನ್ನಡಿಗರಿಗೆ ಕೇಂದ್ರ ಸರ್ಕಾರ ನೀಡಿದ ಒಂದೇ ಒಂದು ನೆರವು ನೀಡಿದ ಉದಾಹರಣೆ ಇದ್ದರೆ ಮೋದಿ ಅವರು ಜನತೆಗೆ ತಿಳಿಸಲಿ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದಿನಗಳನ್ನು 100ರಿಂದ 150 ದಿನಗಳಿಗೆ ಏರಿಸುವಂತೆ ನಮ್ಮ ಸರ್ಕಾರ ಮನವಿ ಮಾಡಿದ್ದರೂ ಕೂಲಿ ದಿನಗಳನ್ನು ಏರಿಸಲಿಲ್ಲವೇಕೆ? ಭಾರತದ ಬಡ ಜನರು “ಚುನಾವಣಾ ಬಾಂಡ್” ಖರೀದಿಸಲಿಲ್ಲ ಎನ್ನುವ ಅಸಹನೆಯೇ?” ಎಂದು ವಾಗ್ದಾಳಿ ನಡೆಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಪ್ಕೆ, ಇತರೆ ಸಿಜೆಪಿ ನಾಯಕರ ಬಂಧನಕ್ಕೆ ಸರ್ಕಾರ ಸಂಚು: ಜೈಲಿಗೆ ಹೋಗಲು ಹೆದರಲ್ಲ ಎಂದ ಸೌರವ್ ದಾಸ್

ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೂ...

ರಾಜ್ಯದಲ್ಲಿ ಹೆಚ್ಚುತ್ತಿದೆ ಮಳೆ ಆರ್ಭಟ; 19 ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ವಿವಿಧ ಭಾಗಗಳಲ್ಲಿ ಇಂದು...

ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗೆ ಅವಕಾಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ದೆಹಲಿ ಪೊಲೀಸರು ಅನುಮತಿ...

ದೆಹಲಿ ಪತ್ರಕರ್ತೆಗೆ ಪೊಲೀಸರಿಂದ ಲೈಂಗಿಕ ಕಿರುಕುಳ: ಕರ್ನಾಟಕ ಪತ್ರಕರ್ತೆಯರ ಸಂಘದಿಂದ ಖಂಡನೆ

ದೆಹಲಿಯ ಜಂತ‌ರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...