50 ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದ ವಿಶ್ವದಲ್ಲಿ 50 ಲಕ್ಷ ಸಾವು; ಭಾರತದಲ್ಲಿ ಲಕ್ಷ ದಾಟಿದ ಮರಣ ಸಂಖ್ಯೆ

Date:

  • ಭಾರತದಲ್ಲಿ 50 ವರ್ಷಗಳಲ್ಲಿ 573 ಹವಾಮಾನ ವಿಪತ್ತುಗಳಿಂದ 1,38,377 ಮಂದಿ ಸಾವು
  • ಆಫ್ರಿಕಾದಲ್ಲಿ 1,839 ದುರಂತ ಪ್ರಕರಣಗಳಿಂದ 7,33,585 ಸಾವಿನ ಪ್ರ ಕರಣ ದಾಖಲಾಗಿದೆ

ಕಳೆದ 50 ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವಿಶ್ವದಾದ್ಯಂತ 20 ಲಕ್ಷ ಜನರು ಸಾವಿಗೀಡಾಗಿದ್ದು, 4.3 ಲಕ್ಷ ಕೋಟಿ ರೂ.ಗೂ ಹೆಚ್ಚು ಆರ್ಥಿಕ ನಷ್ಟ ಉಂಟಾಗಿದೆ ಎಂದು ವಿಶ್ವಸಂಸ್ಥೆಯ ಜಾಗತಿಕ ಹಮಾವಾನ ವಿಭಾಗವೊಂದು ವರದಿ ಮಾಡಿದೆ.

ಕಳೆದ ಐವತ್ತು ವರ್ಷಗಳಲ್ಲಿ ವಿಶ್ವದಾದ್ಯಂತ ವಾಯುಗುಣ, ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಸುಮಾರು 12 ಸಾವಿರ ಪ್ರಕರಣಗಳು ವರದಿಯಾಗಿದೆ. ದುರಂತದ ಕುರಿತ ಮುಂಚಿತ ಎಚ್ಚರಿಕೆ ವ್ಯವಸ್ಥೆಯಲ್ಲಿ ಸುಧಾರಣೆಯಿಂದಾಗಿ ಮನುಷ್ಯರ ಸಾವಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ವಾಯುಗುಣ ಮತ್ತು ಹವಾಮಾನ ಸಂಬಂಧಿತ ವಿಪತ್ತುಗಳ ಆರ್ಥಿಕ ಹಾನಿ ಹೆಚ್ಚಾಗುತ್ತಲೇ ಇದೆ.

ಮಾನವ ನಿರ್ಮಿತ ಹವಾಮಾನ ಬದಲಾವಣೆಯ ಪರಿಣಾಮದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಪದೇ ಪದೇ ಎಚ್ಚರಿಸುತ್ತಿದೆ. ಏರುತ್ತಿರುವ ತಾಪಮಾನವು ಪ್ರವಾಹ, ಚಂಡಮಾರುತ, ಸುಂಟರಗಾಳಿ, ಉಷ್ಣ ಅಲೆ ಮತ್ತು ಬರಗಾಲದ ಸಮಸ್ಯೆಗಳನ್ನು ಹೆಚ್ಚಿಸಿದೆ. ಮುಂಚಿತವಾಗಿ ಎಚ್ಚರಿಸುವ ವ್ಯವಸ್ಥೆಗಳು ಹಲವಾರು ದೇಶಗಳಲ್ಲಿ ಹವಾಮಾನ ಮತ್ತು ಇತರ ಹವಾಮಾನ ಸಂಬಂಧಿ ದುರಂತಗಳಿಂದಾಗುವ ಸಾವಿನ ಸಂಖ್ಯೆಯನ್ನು ತಗ್ಗಿಸಲು ನೆರವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಶ್ವ ಹವಾಮಾನ ಸಂಸ್ಥೆಯ ಸದಸ್ಯ ದೇಶಗಳ ನಡುವೆ 4 ವರ್ಷಗಳಿಗೊಮ್ಮೆ ನಡೆಯುವ ಸಮಾವೇಶದಲ್ಲಿ ಬಿಡುಗಡೆಗೊಂಡಿರುವ ವರದಿಯಲ್ಲಿ, ಹವಾಮಾನ ವೈಪರೀತ್ಯದ ಘಟನೆಗಳಿಗೆ ಎಚ್ಚರಿಕೆಯ ವ್ಯವಸ್ಥೆಗಳನ್ನು ಸುಧಾರಿಸಲು 2017ರ ಗಡುವಿನೊಳಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ.

ಹವಾಮಾನ ವೈಪರೀತ್ಯದಿಂದಾಗಿ 1970 ರಿಂದ 2021ರವರೆಗಿನ ಅವಧಿಯಲ್ಲಿ ಅಮೆರಿಕಕ್ಕೆ 1.7 ಶತಕೋಟಿ ಡಾಲರ್‌ನಷ್ಟು ಆರ್ಥಿಕ ಹಾನಿ ಸಂಭವಿಸಿದೆ. ಈ ಅವಧಿಯಲ್ಲಿ ಉಂಟಾದ ಪ್ರತೀ 10 ಸಾವಿನಲ್ಲಿ 9ರಷ್ಟು ಅಭಿವೃದ್ಧಿಶೀಲ ದೇಶಗಳಲ್ಲಿ ಸಂಭವಿಸಿದೆ. ಜಿಡಿಪಿಗೆ ಸಂಬಂಧಿಸಿದ ಆರ್ಥಿಕ ಪರಿಣಾಮವು ಕೂಡ ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್ಚಿದೆ.

ಈ ಸುದ್ದಿ ಓದಿದ್ದೀರಾ? ವಿಮಾನ ಪತನವಾದರೂ ಪವಾಡದ ರೀತಿಯಲ್ಲಿ ಬದುಕುಳಿದ 11 ತಿಂಗಳ ಶಿಶು, ನಾಲ್ಕು ಮಕ್ಕಳು!

“ಇತ್ತೀಚೆಗೆ ಮಯನ್ಮಾರ್ ಮತ್ತು ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಮೋಚ ಚಂಡಮಾರುತದಿಂದ ಅತ್ಯಂತ ದುರ್ಬಲ ಸಮುದಾಯಗಳು ಸಂಕಷ್ಟಕ್ಕೆ ಒಳಗಾದವು. ದುರ್ಬಲ ಸಮುದಾಯದವರೇ ಹೆಚ್ಚಿನ ತೊಂದರೆ ಹಾಗೂ ಪ್ರಾಣಹಾನಿ ಅನುಭವಿಸಬೇಕಾಯಿತು. ಈ ಹಿಂದೆ ಈ ದೇಶಗಳಲ್ಲಿ ಇದೇ ರೀತಿಯ ಹವಾಮಾನ ವಿಪತ್ತುಗಳಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈಗ ಮುಂಚಿತ ಎಚ್ಚರಿಕೆ ವ್ಯವಸ್ಥೆಯಿಂದಾಗಿ ಸಾವಿನ ಪ್ರಮಾಣ ಇಳಿಕೆಯಾಗುವುದರ ಜೊತೆ ಸಾವಿರಾರು ಜೀವಗಳನ್ನು ಸಹ ಉಳಿಸಿದೆ” ಎಂದು ವಿಶ್ವ ಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪೀಟರ್ ತಾಲಸ್ ತಿಳಿಸಿದ್ದಾರೆ.

ಭಾರತದಲ್ಲಿ 1.38 ಲಕ್ಷ ಸಾವು

ಭಾರತದಲ್ಲಿ 1970 ರಿಂದ 2021ರ ನಡುವೆ 573 ಹವಾಮಾನ ವಿಪತ್ತುಗಳು ಸಂಭವಿಸಿದ್ದು 1,38,377 ಮಂದಿ ಮೃತಪಟ್ಟಿದ್ದಾರೆ. ಭಾರತೀಯ ಹವಾಮಾನ ಇಲಾಖೆಯು ಹೊರಡಿಸಿದ ವಾರ್ಷಿಕ ಹೇಳಿಕೆಯ ಪ್ರಕಾರ 2022 ರಲ್ಲಿನ ಹವಾಮಾನ ವೈಪರೀತ್ಯಗಳಿಂದಾಗಿ ಭಾರತವು 2,227 ಸಾವುನೋವುಗಳನ್ನು ದಾಖಲಿಸಿದೆ.

ಆಫ್ರಿಕಾದಲ್ಲಿ ವಾಯುಗುಣ, ಹಮಾವಾನ ವೈಪರೀತ್ಯ ಕ್ಕೆ ಸಂಬಂಧಿಸಿದ 1,839 ದುರಂತ ಪ್ರ ಕರಣ ಹಾಗೂ 7,33,585 ಸಾವಿನ ಪ್ರ ಕರಣ ದಾಖಲಾಗಿವೆ. ಇದರಲ್ಲಿ 2019ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅಪ್ಪಳಿಸಿದ್ದ ಇಡಾಯ್ ಚಂಡಮಾರುತ ಅತ್ಯಂತ ವಿನಾಶಕಾರಿಯಾಗಿದ್ದು 2.1 ಶತಕೋಟಿ ಡಾಲರ್‌ನಷ್ಟು ಆರ್ಥಿಕ ಹಾನಿ ಉಂಟಾಗಿದೆ.

1970 ಮತ್ತು 2021 ರ ನಡುವೆ, ಏಷ್ಯಾದಲ್ಲಿ ಸಂಭವಿಸಿದ ಸಾವುನೋವುಗಳ ಪ್ರಮಾಣ ವಿಶ್ವದಾದ್ಯಂತ ವರದಿಯಾದ ಎಲ್ಲಾ ಸಾವುಗಳ ಪ್ರಮಾಣಗಳಲ್ಲಿ ಶೇ. 47 ಹೊಂದಿದೆ. ಏಷ್ಯಾದಲ್ಲಿ 3,600ಕ್ಕೂ ಅಧಿಕ ವಿಪತ್ತು ಸಂಭವಿಸಿದ್ದು 9,84,263 ಪ್ರಾಣಹಾನಿ ಮತ್ತು 1.4 ಲಕ್ಷ ಕೋಟಿ ಡಾಲರ್‌ನಷ್ಟು ಆರ್ಥಿಕ ಹಾನಿ ಸಂಭವಿಸಿದೆ. ವರದಿಯಾದ ಸಾವುಗಳಿಗೆ ಉಷ್ಣವಲಯದ ಚಂಡಮಾರುತಗಳು ಪ್ರಮುಖ ಕಾರಣವಾಗಿವೆ. 2008 ರಲ್ಲಿ ಉಷ್ಣವಲಯದ ಚಂಡಮಾರುತ ನರ್ಗಿಸ್ 1,38,366 ಸಾವುಗಳಿಗೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನೈಋತ್ಯ ಪೆಸಿಫಿಕ್‌ನಲ್ಲಿ ಸುಮಾರು 1,500 ವಿಪತ್ತುಗಳಿಂದ 65,951 ಸಾವು ಮತ್ತು 185.8 ಶತಕೋಟಿ ಡಾಲರ್‌ನಷ್ಟು ಆರ್ಥಿಕ ಹಾನಿ ಉಂಟಾಗಿದೆ. ದಕ್ಷಿಣ ಅಮೆರಿಕದಲ್ಲಿ 943 ದುರಂತಗಳಿಂದ 58,484 ಸಾವಿನ ಪ್ರಕರಣ ಮತ್ತು 115 ಶತಕೋಟಿ ಡಾಲರ್‌ನಷ್ಟು ಆರ್ಥಿಕ ಹಾನಿ ಸಂಭವಿಸಿದೆ.

ಉತ್ತರ ಅಮೆರಿಕಾ, ಮಧ್ಯ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶದಲ್ಲಿ ನಡೆದ 2,100 ದುರಂತ ಪ್ರಕರಣಗಳಲ್ಲಿ 77,454 ಸಾವು ಮತ್ತು 2 ಲಕ್ಷ ಕೋಟಿ ಡಾಲರ್‌ನಷ್ಟು ಆರ್ಥಿಕ ನಷ್ಟ ಉಂಟಾದರೆ, ಯೂರೋಪಿನಲ್ಲಿ 1,800 ದುರಂತ ಪ್ರಕರಣ, 1,66,492 ಸಾವು ಮತ್ತು 562 ಶತಕೋಟಿ ಡಾಲರ್‌ನಷ್ಟು ಆರ್ಥಿಕ ಹಾನಿ ಸಂಭವಿಸಿದೆ ಎಂದು ವರದಿ ಹೇಳಿದೆ.

2027ರ ಅಂತ್ಯದ ವೇಳೆಗೆ ಹವಾಮಾನ ವೈಪರೀತ್ಯದ ಮುಂಚಿತ ಎಚ್ಚರಿಕೆ ವ್ಯವಸ್ಥೆ ಭೂಮಿಯ ಮೇಲಿನ ಪ್ರತಿಯೊಬ್ಬರನ್ನೂ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಪರಿಹಾರ ಕ್ರಮಗಳನ್ನು ತೀವ್ರಗೊಳಿಸುವ ಅಧಿಸೂಚನೆಯನ್ನು ವಿಶ್ವ ಹವಾಮಾನ ಸಂಸ್ಥೆಯ ಸದಸ್ಯ ದೇಶಗಳ ಜಾಗತಿಕ ಹಮಾವಾನ ವಿಭಾಗವು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಸೋಮವಾರ(ಮೇ 22) ಪ್ರಾರಂಭವಾದ ಚತುರ್ವಾರ್ಷಿಕ ವಿಶ್ವ ಹವಾಮಾನ ಸಭೆಯಲ್ಲಿ ಬಿಡುಗಡೆ ಮಾಡಿದೆ. ಇದರ ಜೊತೆಗೆ ವಿಶ್ವದಾದ್ಯಂತ ತಾಪಮಾನ ತಗ್ಗಿಸುವ ಕ್ರಮಗಳ ವರದಿಗಳನ್ನು ಒಳಗೊಂಡಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಈವರೆಗೆ ಸ್ಪರ್ಧೆಯೇ ಇಲ್ಲದೆ ಗೆದ್ದಿದ್ದಾರೆ 35 ಅಭ್ಯರ್ಥಿಗಳು 

ಈ ಬಾರಿಯ ಲೋಕಸಭಾ ಚುನವಣೆಯಲ್ಲಿ ಗುಜರಾತ್‌ನ ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್...

ಮುಸ್ಲಿಮರು, ಕಾಂಗ್ರೆಸ್ ಬಗ್ಗೆ ದ್ವೇಷ ಭಾಷಣ: ಮೋದಿ ವಿರುದ್ಧ ಕಠಿಣ ಕ್ರಮಕ್ಕೆ ಸಿಪಿಐಎಂ ಆಗ್ರಹ

ಮುಸ್ಲಿಮರು ಮತ್ತು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮಾಡಿದ ದ್ವೇಷ...

ಮೋದಿ ಟೀಕೆ | ‘ಕಾಂಗ್ರೆಸ್‌ ಪ್ರಣಾಳಿಕೆ ಕುರಿತು ಚರ್ಚಿಸೋಣ ಬನ್ನಿ’; ಮೋದಿ ಭೇಟಿಗೆ ಸಮಯ ಕೇಳಿದ ಖರ್ಗೆ

ಕಾಂಗ್ರೆಸ್‌ ಒಳನುಸುಳುಕೋರರಿಗೆ ದೇಶದ ಸಂಪತ್ತನ್ನು ಹಂಚಬಹುದು ಎಂದು ಪ್ರಧಾನಿ ಮೋದಿ ಹೇಳಿಕೆ...

ಈ ದಿನ ಸಮೀಕ್ಷೆ | ಕಳೆದ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ನಿಜವಾಗಿಯೂ ಅಭಿವೃದ್ಧಿ ಕೆಲಸಗಳು ನಡೆದಿವೆಯೇ?

18-25 ವರ್ಷದೊಳಗಿನವರು ಶೇ.42.86ರಷ್ಟು ಮತದಾರರು ಮೋದಿ ಆಡಳಿತದ ಕೆಲಸಗಳ ಕುರಿತು ಗೊತ್ತಿಲ್ಲ...