ʼಈ ದಿನʼ ಸಮೀಕ್ಷೆ | ಮೋದಿಗಿಂತಲೂ ಸಿದ್ದರಾಮಯ್ಯ ರಾಜ್ಯದ ಜನರಿಗೆ ಹೆಚ್ಚು ಇಷ್ಟ!

Date:

ರಾಜಕಾರಣದಲ್ಲಿ ಸದಾ ದ್ವೇಷದ ಕುದುರೆಯೇರಿ ದಿಬ್ಬಣ ಹೊರಡುವ ಮದುಮಗನಂತೆ ಕಾಣುವ ಪ್ರಧಾನಿ ಮೋದಿಗೂ, ಪ್ರಜಾಪ್ರಭುತ್ವವೇ ಮುಖ್ಯವೆಂದು ಭಾವಿಸಿ, ಬಸವಣ್ಣವರ ಸಮಸಮಾಜ ನಿರ್ಮಾಣದ ಆಶಯದೊಂದಿಗೆ ಹೆಜ್ಜೆ ಹಾಕುತ್ತಿರುವ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೂ ಅಜಗಜಾಂತರವಿದೆ.

- Advertisement -

ಹೇಗೆ ಜೀವಪರ ಚಿಂತನೆಯನ್ನು ಜೀವ-ವಿರೋಧಿ ಚಿಂತನೆಗಳನ್ನು ಒಟ್ಟುಗೂಡಿಸಿ ತುಲನೇ ಮಾಡಲು ಸಾಧ್ಯವಿಲ್ಲವೋ ಹಾಗೇ ಮೋದಿ ವ್ಯಕ್ತಿತ್ವ ಮತ್ತು ಸಿದ್ದರಾಮಯ್ಯ ವ್ಯಕ್ತಿತ್ವವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲು ಸಾಧ್ಯವಿಲ್ಲ. ಇಬ್ಬರದೂ ಪ್ರತ್ಯೇಕ ದಡ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಆದರೂ ರಾಜಕಾರಣದಲ್ಲಿ ಮೋದಿ-ಸಿದ್ದರಾಮಯ್ಯ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ರಾಜ್ಯದ ವಿಚಾರಕ್ಕೆ ಬಂದರೆ ಈ ಇಬ್ಬರು ನಾಯಕರನ್ನು ಹೊತ್ತು ಮರೆಸುವ ಅವರದೇ ಆದ ಅಭಿಮಾನಿ ವರ್ಗ ಕರ್ನಾಟಕದಲ್ಲಿದೆ.

ವಿಷಪೂರಿತ ಫಸಲು ಕಟಾವು ಮಾಡಿಕೊಂಡು ಜನರ ಕಷ್ಟ ಕಣ್ಣೀರಿನ ಸಮಾಧಿಗಳ ಮೇಲೆ ಸಿಂಹಾಸನ ಇರಿಸಿ ಗಹಗಹಿಸುವ ಕಟುಕ ರಾಜಕಾರಣದ ಕೃಷಿಕರು ಇತಿಹಾಸದಲ್ಲಿ ಕಂಡುಬರುತ್ತಾರೆ. ಮೋದಿ ಇದ್ಯಾವುದಕ್ಕೂ ಹೊರತಾಗಿಲ್ಲ. ದ್ವೇಷ, ಹಗೆತನ, ನಿಂದನೆ, ಪೂರ್ವಗ್ರಹಗಳನ್ನೇ ಬಿತ್ತಿ ಬೆಳೆದು ತಮ್ಮ ಅಧಿಕಾರ ಗದ್ದುಗೆಯನ್ನು ಗಟ್ಟಿ ಮಾಡಿಕೊಂಡವ ಸಾಲಿನಲ್ಲಿ ಮೋದಿ ಮೊದಲಿಗರಾಗಿ ಗುರುತಿಸಿಕೊಳ್ಳುತ್ತಾರೆ.

ಕೋವಿಡ್‌ನಂತಹ ಕೆಟ್ಟ ದಿನಗಳಲ್ಲಿ ಜನಸಾಮಾನ್ಯರ ಸುಖ ದುಃಖಗಳಿಗೆ ಮೂರು ಕಾಸಿನ ಕಿಮ್ಮತ್ತನ್ನೂ ಕೊಡದ ಪ್ರಧಾನಿ ಮೋದಿ ಅವರನ್ನು ರಾಜ್ಯದಲ್ಲಿ ಈಗಲೂ ಶೇ.40.81ರಷ್ಟು ಜನರು ಇಷ್ಟ ಪಡುತ್ತಾರೆ ಎಂದರೆ ನಂಬಲೇಬೇಕು. ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ದಿನ.ಕಾಮ್‌ ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕರಾರುವಕ್ಕಾದ ಸಮೀಕ್ಷೆಯನ್ನು ರಾಜ್ಯದ ಮುಂದಿಡುವ ಮೂಲಕ ದೇಶದ ಗಮನ ಸೆಳೆದಿದ್ದ ಈ ದಿನ.ಕಾಮ್‌ ಈ ಬಾರಿ ಕೂಡ ಲೋಕಸಭಾ ಚುನಾವಣೆಯ ಸಮೀಕ್ಷೆಯನ್ನು ರಾಜ್ಯದ ಮುಂದಿಟ್ಟಿದೆ. ಈ ಸಮೀಕ್ಷೆಯ ಭಾಗವಾಗಿ ಪ್ರಧಾನಿ ಮೋದಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಬ್ಬರಲ್ಲಿ ಯಾರು ಹೆಚ್ಚು ಇಷ್ಟ ನಿಮಗೆ ಎಂದು ರಾಜ್ಯದ ಮತದಾರರನ್ನು ಕೇಳಿದಾಗ, ಮೋದಿ ಅವರನ್ನು ಶೇ.40.81ರಷ್ಟು ಇಷ್ಟ ಪಡುತ್ತೇವೆ ಎಂದು ರಾಜ್ಯದ ಮತದಾರರು ತಿಳಿಸಿದ್ದಾರೆ.

siddu modi-2

ಮೋದಿಗಿಂತಲೂ ಹೆಚ್ಚು ಸಿದ್ದರಾಮಯ್ಯ ಇಷ್ಟ

ಸಿಎಂ ಸಿದ್ದರಾಮಯ್ಯ ಅವರನ್ನು ಮೋದಿಗಿಂತಲೂ ಶೇ.2ರಷ್ಟು ಹೆಚ್ಚು ಜನ ಇಷ್ಟಪಡುವವರು ರಾಜ್ಯದಲ್ಲಿದ್ದಾರೆ. ಅಂದರೆ ಶೇ.42.27ರಷ್ಟು ರಾಜ್ಯದ ಮತದಾರರಿಗೆ ಸಿದ್ದರಾಮಯ್ಯ ಎಂದರೆ ಬಹಳ ಅಚ್ಚುಮೆಚ್ಚು. ಸಿದ್ದರಾಮಯ್ಯ ಅವರು ಹೇಗೆ ಅವರ ಅಭಿಮಾನಿ ವರ್ಗದಲ್ಲಿ ನೆಲೆಯೂರಿದ್ದಾರೆ ಎಂಬುದು ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ 2022ರಲ್ಲಿ ದಾವಣಗೆರೆಯಲ್ಲಿ ನಡೆದ ‘ಸಿದ್ದರಾಮೋತ್ಸವ’ ಹೊಸ ದಾಖಲೆಯನ್ನೇ ನಿರ್ಮಿಸಿದೆ.

ಯುವ ಸಮೂಹವೇ ಹೆಚ್ಚು

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸುಮಾರು 20 ಲಕ್ಷ ಜನ ಪಾಲ್ಗೊಂಡಿರುವ ಸಾಧ್ಯತೆ ಇತ್ತು ಎಂದು ಆಗ ಪೊಲೀಸ್‌ ಮೂಲಗಳು ತಿಳಿಸಿವೆ. ಮುಖ್ಯವಾಗಿ 18-30 ವರ್ಷದೊಳಗಿನ ಯುವ ಸಮೂಹವೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು ಗಮನಾರ್ಹ. ಸಿದ್ದರಾಮಯ್ಯ ಅವರ ವರ್ಚಸ್ಸು ಕೂಡ ಕಾಂಗ್ರೆಸ್‌ ಅಧಿಕಾರ ಗದ್ದುಗೆ ಏರಲು ಮುಖ್ಯ ಮೆಟ್ಟಿಲಾಯಿತು.

ಮೋದಿ-ಸಿದ್ದರಾಮಯ್ಯ ಇಬ್ಬರೂ ಇಷ್ಟವಿಲ್ಲ ಎಂದು ಹೇಳುವ ಸಂಖ್ಯೆ ರಾಜ್ಯದಲ್ಲಿ ಶೇ.4.17ರಷ್ಟಿದ್ದರೆ, ಈ ಬಗ್ಗೆ ಪ್ರತಿಕ್ರಿಯೆ ಕೊಡದೇ ಇರುವವರ ಸಂಖ್ಯೆ ಶೇ.5.01ರಷ್ಟು.

siddu modi-2

ಮಹಿಳೆಯರು ಕೂಡ ಸಿದ್ದರಾಮಯ್ಯಗೆ ಜೈ

ಸಿದ್ದರಾಮಯ್ಯ ಅವರನ್ನು ಶೇ.45.04ರಷ್ಟು ಮಹಿಳೆಯರು ಇಷ್ಟಪಟ್ಟರೆ, ಮೋದಿ ಅವರನ್ನು ಶೇ.36.65ರಷ್ಟು ಇಷ್ಟ ಪಡುತ್ತಾರೆ. ಇಬ್ಬರೂ ಇಷ್ಟವೆಂದು ಶೇ.8.54ರಷ್ಟು ಹೇಳಿದರೆ, ಶೇ.5.42ರಷ್ಟು ಗೊತ್ತಿಲ್ಲ ಎಂದಿದ್ದಾರೆ. ಇಬ್ಬರೂ ನಾಯಕರು ಇಷ್ಟವಿಲ್ಲ ಎಂದು ಶೇ.3.99 ರಷ್ಟು ಮಹಿಳೆಯರು ಹೇಳಿದ್ದಾರೆ.

ಪುರುಷ ಮತದಾರರ ಅಭಿಪ್ರಾಯವೇನು?

ನರೇಂದ್ರ ಮೋದಿ ಅವರನ್ನು ಶೇ.44.36ರಷ್ಟು ಮತ್ತು ಸಿದ್ದರಾಮಯ್ಯ ಅವರನ್ನು ಶೇ.39.59ರಷ್ಟು ಇಷ್ಟ ಪಡುತ್ತೇವೆ ಎಂದು ಪುರುಷ ಮತದಾರರು ಹೇಳಿದ್ದಾರೆ. ಇಬ್ಬರನ್ನೂ ಇಷ್ಟ ಪಡುವುದಾಗಿ ಶೇ.7.07ರಷ್ಟು, ಗೊತ್ತಿಲ್ಲ ಎಂದು ಶೇ.4.66ರಷ್ಟು ಹಾಗೂ ಇಬ್ಬರೂ ನಾಯಕರು ಇಷ್ಟವಿಲ್ಲ ಎಂದು ಶೇ.4.32ರಷ್ಟು ಪುರುಷ ಮತದಾರರು ಅಭಿಪ್ರಾಯಪಟ್ಟಿದ್ದಾರೆ.

ಯುವ ಮತದಾರರಿಗೆ ಮೋದಿ ಇಷ್ಟ

18-25 ವರ್ಷದೊಳಗಿವ ಯುವ ಮತದಾರರು ಮೋದಿ ಅವರನ್ನು ಹೆಚ್ಚು ಇಷ್ಟ ಪಟ್ಟಿದ್ದಾರೆ. ಶೇ.45.05ರಷ್ಟು ಮೋದಿಯನ್ನು ಇಷ್ಟ ಪಟ್ಟರೆ, ಸಿದ್ದರಾಮಯ್ಯರನ್ನು ಶೇ.38.42ರಷ್ಟು ಯುವ ಮತದಾರರು ಇಷ್ಟಪಟ್ಟಿದ್ದಾರೆ. ಇಬ್ಬರೂ ನಾಯಕರು ಇಷ್ಟವೆಂದು ಶೇ.6.97ರಷ್ಟು, ಇಬ್ಬರೂ ಇಷ್ಟವಿಲ್ಲವೆಂದು ಶೇ.4.38 ಹಾಗೂ ಈ ಬಗ್ಗೆ ಮಾತೇ ಬೇಡ ಎನ್ನುವವರು ಶೇ.5.18ರಷ್ಟು ಯುವ ಮತದಾರರಿದ್ದಾರೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಎಎಪಿ ನಾಯಕ ಸೌರಭ್ ಭಾರದ್ವಾಜ್ ಸೇರಿ ಹಲವು ಮಂದಿ ದೆಹಲಿ ಪೊಲೀಸರ ವಶಕ್ಕೆ

ಚುನಾವಣಾ ಆಯೋಗದ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಜಂತರ್ ಮಂತರ್‌‌ಗೆ ಆಗಮಿಸಿದ್ದ...

ಮುಸ್ಲಿಂ ಮತದಾರರ ಹೆಸರು ಅಳಿಸಲು ಬಿಜೆಪಿ ಜೊತೆ ಜೆಡಿಎಸ್ ಸಂಚು? ಡಿಕೆಶಿ ಹೇಳಿದ್ದೇನು?

ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ...