ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, ‘ಅತ್ಯಂತ ದುಃಖಕರ ಮತ್ತು ಆತಂಕಕಾರಿ’ ಎಂದು ಹೇಳಿದ್ದಾರೆ.
‘ದೈನಿಕ್ ಜಾಗರಣ್’ ಹಿಂದಿ ಪತ್ರಿಕೆಯ ಜೊತೆಗೆ ನಡೆಸಿದ ಸಂದರ್ಶನದ ವೇಳೆ ಮಾತನಾಡಿರುವ ಅವರು, “ಸಂಸತ್ ಭದ್ರತಾ ಲೋಪ ಪ್ರಕರಣ ಅತ್ಯಂತ ದುಃಖಕರ ಮತ್ತು ಆತಂಕಕಾರಿ. ಲೋಕಸಭಾ ಸ್ಪೀಕರ್ ಈ ಪ್ರಕರಣವನ್ನು ಸಂಪೂರ್ಣ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ‘ದೈನಿಕ್ ಜಾಗರಣ್‘ಗೆ ನೀಡಿದ ಸಂದರ್ಶನದ ವೇಳೆ ಮಾತನಾಡುತ್ತಿದ್ದಾಗ ಸಂಸತ್ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ್ದು, ಘಟನೆ ಬಗ್ಗೆ ಚರ್ಚೆ ಅಥವಾ ಪ್ರತಿರೋಧದ ಬದಲಿಗೆ, ಅದರ ಆಳಕ್ಕೆ ಹೋಗುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
जानें देश के कोने -कोने की ख़ास ख़बरों को एक जगह, पढ़े Jagran Epaper: https://t.co/8mKqlGa6e5#JagranEPaper #EPaper pic.twitter.com/vAvIJG7Cjl
— Dainik Jagran (@JagranNews) December 17, 2023
“ಸಂಸತ್ತಿನಲ್ಲಿ ನಡೆದ ಘಟನೆ ಗಂಭೀರವಾದುದು. ತನಿಖಾ ಸಂಸ್ಥೆಗಳು ಅದರ ಗಂಭೀರತೆಯನ್ನು ಅರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿವೆ. ಘಟನೆಯ ಹಿಂದಿರುವ ಅಂಶ ಮತ್ತು ಉದ್ದೇಶ ಏನಾಗಿತ್ತು ಎಂಬುದನ್ನೂ ಕೂಡ ಆಳವಾಗಿ ನೋಡುವುದು ಅಷ್ಟೇ ಮುಖ್ಯ. ಒಂದೇ ಮನಸ್ಸಿನಿಂದ ಪರಿಹಾರಗಳನ್ನೂ ಕಂಡುಕೊಳ್ಳಬೇಕು. ಪ್ರತಿಯೊಬ್ಬರೂ ಇಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಬದಲು ಸಮಾಧಾನ ಚಿತ್ತದಿಂದ ಆಲೋಚಿಸಬೇಕು” ಎಂದು ತಿಳಿಸಿರುವುದಾಗಿ ‘ದೈನಿಕ್ ಜಾಗರಣ್’ ವರದಿ ಮಾಡಿದೆ.
Parliament Security Breach पर PM Modi Exclusive: ‘संसद में घटी घटना चिंताजनक’ | Dainik Jagran #ParliamentSecurityBreach #PMModi #ExclusiveInterview @narendramodi pic.twitter.com/RGMVig22rx
— Dainik Jagran (@JagranNews) December 17, 2023
ಸಂಸತ್‌ನನಲ್ಲಿ ಬಂದು ಪ್ರಧಾನಿ ಹೇಳಿಕೆ ನೀಡಲಿ: ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ
ಪ್ರಧಾನಿ ದೈನಿಕ್ ಜಾಗರಣ್‌ಗೆ ನೀಡಿರುವ ಹೇಳಿಕೆಯ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ, “ಸದನದಲ್ಲಿ ಹೇಳಿಕೆ ನೀಡುವ ಬದಲು, ಪ್ರಧಾನಿ ಮೋದಿ ಅವರು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವ ಮೂಲಕ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ಮಾತನಾಡುತ್ತಿದ್ದಾರೆ. ಘಟನೆಯ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಮತ್ತು ಅಂತಹ ಘಟನೆ ಮತ್ತೆ ಸಂಭವಿಸುವುದಿಲ್ಲ ಎಂದು ಸಂಸತ್ತಿಗೆ ತಿಳಿಸಬೇಕು. ಘಟನೆ ನಡೆದಿರುವುದು ಸಂಸತ್‌ನ ಒಳಗೆ, ಹೊರಗಡೆ ಅಲ್ಲ. ಹಾಗಾಗಿ, ಮಾಧ್ಯಮಗಳಿಗೆ ನೀಡುವ ಸಂದರ್ಶನದ ವೇಳೆ ಹೇಳಿಕೆ ನೀಡುವ ಬದಲು, ಸಂಸತ್‌ಗೆ ಬಂದು ಪ್ರಧಾನಿ ಹೇಳಿಕೆ ನೀಡಲಿ” ಎಂದು ಪಿಟಿಐಗೆ ನೀಡಿದ ಹೇಳಿಕೆಯ ವೇಳೆ ತಿಳಿಸಿದ್ದಾರೆ.
VIDEO | “Instead of making a statement in the House, PM Modi is speaking about the security breach incident in an interview with a newspaper. A joint parliamentary committee should be formed to probe the incident and Parliament should be told that such an incident will not happen… pic.twitter.com/EATqQHgvFo
— Press Trust of India (@PTI_News) December 17, 2023
ಆರೋಪಿಗಳ ಮೊಬೈಲ್ನ ಬಿಡಿಭಾಗಗಳು ರಾಜಸ್ಥಾನದಲ್ಲಿ ಪತ್ತೆ
ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳ ಮೊಬೈಲ್ನ ಬಿಡಿ ಭಾಗಗಳು ರಾಜಸ್ಥಾನದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ.
ದೆಹಲಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ, ಎಲ್ಲ ಆರೋಪಿಗಳ ಫೋನ್‌ಗಳು ಲಲಿತ್ ಝಾ ಬಳಿ ಇತ್ತು ಎನ್ನಲಾಗಿದೆ. ಬಂಧಿತ ಆರನೇ ಆರೋಪಿ ಮಹೇಶ್ ಕುಮಾವತ್‌ನನ್ನು ಪೊಲೀಸರು ನ್ಯಾಯಾಲಯದಿಂದ ಏಳು ದಿನಗಳ ಕಸ್ಟಡಿಗೆ ಪಡೆದಿದ್ದಾರೆ.
ಆರು ಆರೋಪಿಗಳಾದ ಸಾಗರ್, ಮನೋರಂಜನ್, ನೀಲಂ ಆಜಾದ್, ಅಮೋಲ್ ಶಿಂಧೆ, ಲಲಿತ್ ಝಾ ಮತ್ತು ಮಹೇಶ್ ಅವರನ್ನು ಬಂಧಿಸಲಾಗಿದೆ. ಲಲಿತ್ ಝಾ ಕೆಲವು ದಿನಗಳ ನಂತರ ಸಿಕ್ಕಿಬೀಳುವ ಭಯದಿಂದ ಎಲ್ಲಾ ಫೋನ್‌ಗಳನ್ನು ಸುಟ್ಟು ಹಾಕಿದ್ದಾಗಿ ಒಪ್ಪಿಕೊಂಡಿದ್ದಾರೆ.
ಡಿಸೆಂಬರ್ 13 ರಂದು ಸಂಸತ್ತಿನ ಲೋಕಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಸಾಗರ್ ಹಾಗೂ ಮನೋರಂಜನ್ ಸಂದನದ ಒಳಗೆ ನುಗ್ಗಿದ್ದರು. ಬಳಿಕ ಹೊಗೆ ಬಾಂಬ್ ಸಿಡಿಸಿದ್ದರು.