ಕುಮಟಾ: ತಾಲೂಕಿನ ಹೊಳೆಗದ್ದೆ ಟೋಲ್ ಬಳಿಯ ಅಲ್ಫಾ ವೈನ್ ಶಾಪ್‌ನ ಶೆಟರ್ ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ₹2.39 ಲಕ್ಷ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.
ಅಕ್ಟೋಬರ್ 10ರ ರಾತ್ರಿ 10.30ರಿಂದ ಅಕ್ಟೋಬರ್ 11ರ ಬೆಳಿಗ್ಗೆ 9.30ರ ನಡುವಿನ ಅವಧಿಯಲ್ಲಿ ಈ ಕಳವು ನಡೆದಿದೆ. ಕಳ್ಳರು ವೈನ್ ಶಾಪ್‌ನ ಶೆಟರ್ ಮುರಿದು ಒಳನುಗ್ಗಿ, ಒಳಗಿದ್ದ ಕಪಾಟಿನ ಬಾಗಿಲನ್ನೂ ಮುರಿದು ಅದರಲ್ಲಿಟ್ಟಿದ್ದ ₹2,39,000 ನಗದು ಹಣವನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ಆಗಸ್ಟ್ 23ನ್ನು ‘ಕರ್ನಾಟಕ ಕಾಫಿ ಡೇ’ ಎಂದು ಘೋಷಿಸಲು ಪವನ್ ನಾಯ್ಕ್ ಆಗ್ರಹ
ಈ ಸಂಬಂಧ ವೈನ್ ಶಾಪ್‌ನಲ್ಲಿ ವೆಂಡರ್ ಆಗಿ ಕೆಲಸ ಮಾಡುತ್ತಿರುವ ಕುಮಟಾದ ಎಪಿಎಂಸಿ ಸಮೀಪದ ನಿವಾಸಿ ಜುಜೆ ಡುಮಿಂಗ್ ಫರ್ನಾಂಡೀಸ್ (50) ಅವರು ಕುಮಟಾ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಪೊಲೀಸರು ಠಾಣಾ ಗುನ್ನೆ ಸಂಖ್ಯೆ 219/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ 331(4) ಮತ್ತು 305ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.




