ಪಕ್ಷದ ಮುಖಂಡ ರಾಹುಲ್ ಗಾಂಧಿಯವರ ಹೊಸ ಆ್ಯನಿಮೇಟೆಡ್ ವಿಡಿಯೋ ಬಿಡುಗಡೆಗೊಳಿಸಿರುವ ಕಾಂಗ್ರೆಸ್, ಪ್ರಧಾನಿ ಮೋದಿಯವರಿಗೆ ಪ್ರೀತಿಯ ತಾಕತ್ತಿನ ಪಾಠ ಮಾಡಿದ್ದಾರೆ.
ಸುಮಾರು 1 ನಿಮಿಷ 55 ಸೆಕೆಂಡ್‌ಗಳ ಈ ವಿಡಿಯೋಗೆ ‘ಮೊಹಬ್ಬತ್ ಕಿ ತಾಕತ್ (ಪ್ರೀತಿಯ ಶಕ್ತಿ)’ ಎಂದು ಶೀರ್ಷಿಕೆ ನೀಡಿದೆ.
“ಮೋದಿಯವರೇ, ಬೇಸರವಾಗುತ್ತಿದೆ. ನಮ್ಮ ದೇಶದಲ್ಲಿ ಒಂದು ರೀತಿಯ ಭಯದ ವಾತಾವರಣವನ್ನು ನೀವು ನಿರ್ಮಿಸಿದ್ದೀರಾ. ದ್ವೇಷವನ್ನು ಪ್ರಾರಂಭಿಸಿರುವುದರಿಂದ ಇಲ್ಲಿನ ಗಾಳಿ ಕೂಡ ಭಯಪಡುತ್ತಿದೆ. ಅದಕ್ಕೂ ಗೊತ್ತಿದೆ, ನಿಮಗೆ ಪ್ರೀತಿ ಇಷ್ಟವಿಲ್ಲ” ಎಂದು ರಾಹುಲ್ ಗಾಂಧಿಯವರ ಸಂಭಾಷಣೆಯಿಂದ ವಿಡಿಯೋ ಆರಂಭವಾಗುತ್ತದೆ.
ವಿಡಿಯೋ ಕೊನೆಯಲ್ಲಿ, “ಈ ದೇಶದ ಜನ ಪ್ರೀತಿಯನ್ನಷ್ಟೇ ಇಷ್ಟಪಡುತ್ತಾರೆ. ಅದಕ್ಕೆ ಉದಾಹರಣೆ ಕರ್ನಾಟಕದ ಇತ್ತೀಚಿನ ಫಲಿತಾಂಶ. ದ್ವೇಷದ ಬಜಾರು ಬಂದ್ ಆಗಿ ಅಲ್ಲಿ ಪ್ರೀತಿಯ ಅಂಗಡಿ ಓಪನ್ ಆಗಿದೆ. ಇದು ದೇಶದ ಉದ್ದಗಲಕ್ಕೂ ಮುಂದಿನ ದಿನಗಳಲ್ಲಿ ನಡೆಯಲಿದೆ” ಎಂದು ಪ್ರಧಾನಿ ಮೋದಿಯವರಿಗೆ ರಾಹುಲ್ ಗಾಂಧಿ ಪ್ರೀತಿಯ ಪಾಠ ಮಾಡಿದ್ದಾರೆ.